ಅಂತಿಮವಾಗಿ ಹೊರ ಬಿದ್ದ ಬಿಗ್ ಬಾಸ್ ಸೀಸನ್ 7 ಸ್ಪರ್ದಿಗಳ ಲಿಸ್ಟ್. ಬಿಗ್ ಮ್ಯಾನ್ ಇನ್ ಬಿಗ್ ಹೌಸ್

0
1176

ಬಿಗ್ ಬಾಸ್ ಕಾರ್ಯಕ್ರಮ ಯಾರಿಗೆ ತಾನೆ ಪರಿಚಯವಿಲ್ಲ ಹೇಳಿ, ರಾಜ್ಯದ ಜನತೆಗೆ ಇದು ಚಿರಪರಿಚಿತವಾದ ಜನಪ್ರಿಯವಾದ ಕಾರ್ಯಕ್ರಮವಾಗಿದೆ. ಪ್ರತಿ ಸೀಸನ್ ನಲ್ಲು ಬಿಗ್ ಬಾಸ್ ಶೋ ನಲ್ಲಿ ಜನ ಸಾಮಾನ್ಯರು ಹಾಗು ಸೆಲೆಬ್ರಿಟಿಸ್ ಭಾಗವಹಿಸುತ್ತಿದ್ದರು. ಜನ ಸಾಮಾನ್ಯರನ್ನು ಸಹ ಪ್ರಸಿದ್ದಿ ಮಾಡುವ ಶಕ್ತಿ ಈ ಕಾರ್ಯಕ್ರಮಕ್ಕಿದೆ ಎಂದರೆ ಬಹುಷಃ ತಪ್ಪಾಗಲಾರದು. ಈಗಾಗಲೆ ಬಿಗ್ ಬಾಸ್ ಸೀಸನ್ 7 ಪ್ರೊಮೊ ಹೊರ ಬಿದ್ದಿದ್ದು, ಸುದೀಪ್ ಪ್ರೊಮೊದಲ್ಲಿ ಕಾಣಿಸಿಕೊಂಡಿದ್ದಾರೆ. ಸಣ್ಣ ಮಕ್ಕಳಿಂದ ಹಿಡಿದು ಹಿರಿಯರವರೆಗೂ ಎಲ್ಲರೂ ಬಿಗ್ ಬಾಸ್ ಕಾರ್ಯಕ್ರಮವನ್ನು ತಪ್ಪದೆ ವೀಕ್ಷಿಸುತ್ತಾರೆ. ತಮ್ಮ ನೆಚ್ಚಿನ ಸ್ಪರ್ದಿಗಳಿಗೆ ವೋಟ್ ಮಾಡುವ ಮೂಲಕ ಅವರನ್ನು ಉಳಿಸಿಕೊಳ್ಳುತ್ತಾರೆ.

ಸ್ಪರ್ದಿಗಳ ಲಿಸ್ಟ್ 

ಬಿಗ್ ಬಾಸ್ ಸೀಸನ್ 7ರ ಪಟ್ಟಿ ಈಗ ಹೊರ ಬಿದ್ದಿದೆ. ಸರಿಗಮಪದಲ್ಲಿ ಸ್ಪರ್ಧಿಯಾಗಿದ್ದ ಹನುಮಂತನ ಹೆಸರು ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡುತ್ತಿತ್ತು. ಆದರೆ ಈಗ ಅಧಿಕೃತವಾಗಿ ಹನುಮಂತನ ಹೆಸರು ಖಚಿತವಾಗಿದೆ. ಇನ್ನು ರಾಧಾ ರಮಣ ಧಾರವಾಹಿ ಖ್ಯಾತಿಯ ಶ್ವೇತಾ, ಮಜಾ ಟಾಕೀಸ್ ಕಾರ್ಯಕ್ರಮದ ಹಾಸ್ಯ ಕಲಾವಿದ ಕುರಿ ಪ್ರತಾಪ್, ನಟಿ ನೇಹಾ ಪಾಟೀಲ್, ಕಾಮಿಡಿ ಕಿಲಾಡಿಗಳು ಖ್ಯಾತಿಯ ಶಿವರಾಜ್ ಕೆ ಆರ್ ಪೇಟೆ, ನಟಿ ಅಮೂಲ್ಯ, ಖಾಸಗಿ ವಾಹಿನಿಯ ನಿರ್ಮಾಪಕ ಚಂದನ್ ಶರ್ಮ, ಖ್ಯಾತ ಪತ್ರಕರ್ತ ರವಿ ಬೆಳಗೆರೆ, ಶ್ರೀನಗರ ಕಿಟ್ಟಿ ಇನ್ನು ಮುಂತಾದವರು ಕಾರ್ಯಕ್ರಮದಲ್ಲಿ ಭಾಗವಹಿಸೊ ಸಾಧ್ಯತೆಗಳಿವೆ.

ಬಿಗ್ ಮ್ಯಾನ್ ಇನ್ ಬಿಗ್ ಹೌಸ್

ಪತ್ರಕರ್ತ ಮತ್ತು ಅಕ್ಷರ ಬ್ರಹ್ಮ ಎಂದೆ ಗುರುತಿಸಿಕೊಂಡ ರವಿ ಬೆಳಗೆರೆ ಬಿಗ್ ಬಾಸ್ ಮನೆಗೆ ಬಂದರೆ ಕಾರ್ಯಕ್ರಮದ ರಂಗು ಹೆಚ್ಚಿಸಲಿದೆ. ಈಗಾಗಲೇ ಬೆಲ್ ಬೆಳಿಗ್ಗೆ ರವಿ ಬೆಳಗೆರೆ ಎನ್ನುವ ಯುಟ್ಯೂಬ್ ಚಾನೆಲ್ ಮೂಲಕ ಬೆಳಗೆರೆ ಕಮ್ ಬ್ಯಾಕ್ ಮಾಡಿದ್ದರು. ಇವರು ಮಾತನಾಡುವ ಶೈಲಿ, ಸುದ್ದಿಗಳನ್ನು ಜನರಿಗೆ ತಲುಪಿಸುವ ರೀತಿಗೆ ಜನರು ಫಿದಾ ಆಗಿದ್ದರು. ಇನ್ನು ರವಿ ಬೆಳಗೆರೆ ಅವರು ಆಸಕ್ತಿಕರವಾದ ಸಂಗತಿಗಳನ್ನು ತಮ್ಮ ಯುಟ್ಯೂಬ್ ಚಾನೆಲ್ ನಲ್ಲಿ ಹಂಚಿಕೊಳ್ಳುತ್ತಿದ್ದರು. ರವಿ ಬೆಳಗೆರೆ ಬಿಗ್ ಬಾಸ್ ಮನೆಗೆ ಬಂದರೆ ಮನೋರಂಜನೆ ಕಟ್ಟಿಟ್ಟ ಬುತ್ತಿ ಅಂತಾನೆ ಹೇಳಬಹುದಾಗಿದೆ.

ಬಿಗ್ ಮನೆಯಲ್ಲಿ ಹನುಮಂತ ಹಾಡಿನ ಮೋಡಿ

ಬಿಗ್ ಬಾಸ್ ಕಾರ್ಯಕ್ರಮಕ್ಕೆ ಗಾಯಕ ಹನುಮಂತ ಬರಲಿದ್ದಾರಂತೆ. ಹೌದು ಸರಿಗಮಪ ರಿಯಾಲಿಟಿ ಶೋ ಮುಖಾಂತರ ಹನುಮಂತ ಮನೆ ಮಾತಾಗಿದ್ದರು. ಹನುಮಂತ ತುಂಬ ಸೊಗಸಾಗಿ ಹಾಡುತ್ತಾರೆ. ಹಳ್ಳಿ ಸೊಗಡಿನ ಮಾತನ್ನು ಇವರ ಬಾಯಲ್ಲಿ ಕೇಳುವುದೆ ಒಂದು ಚೆಂದ. ಇನ್ನು ಇವರ ಮುಗ್ದತೆಯನ್ನು ಜನರು ಇಷ್ಟ ಪಡುತ್ತಾರೆ.

ಈಗ ಹನುಮಂತ ಬಿಗ್ ಬಾಸ್ ಸೀಸನ್ 7 ರಲ್ಲಿ ಭಾಗವಹಿಸಲಿದ್ದಾರೆ ಎನ್ನುವ ಮಾಹಿತಿ ಹೊರ ಬಿದ್ದಿದೆ. ಸಂಗೀತ ಕಾರ್ಯಕ್ರಮದಲ್ಲಿ ಹೆಸರು ಗಳಿಸಿದ ನಂತರ ಈಗ ಬಿಗ್ ಬಾಸ್ ಮನೆಗೆ ಲಗ್ಗೆ ಇಡುತ್ತಿದ್ದಾರೆ. ಹನುಮಂತ ಗಾಯನದಿಂದಾನೆ ಬಿಗ್ ಬಾಸ್ ಮನೆಯ ಸದಸ್ಯರನ್ನು ಮತ್ತು ವೀಕ್ಷಕರನ್ನು ರಂಜಿಸಲಿದ್ದಾರೆ ಅಂತಾನೆ ಹೇಳಬಹುದಾಗಿದೆ.

LEAVE A REPLY

Please enter your comment!
Please enter your name here