ಬಿಗ್ ಬಾಸ್ ಸ್ಪರ್ಧಿಯಾದ ಶೈನ್ ಶೆಟ್ಟಿ ಅವರ ಜೀವನದಲ್ಲಿ ನಡೆದಿತ್ತು ಅಗ್ನಿಪರೀಕ್ಷೆ

0
581

ಈಗಾಗಲೆ ಶೈನ್ ಶೆಟ್ಟಿ ಎನ್ನುವ ಹೆಸರು ನಿಮಗೆ ಚಿರಪರಿಚಿತವಾಗದಿದ್ದರು, ಇವರ ಚಂದು ಎನ್ನುವ ಪಾತ್ರದ ಹೆಸರು ಜನರಿಗೆ ಚಿರಪರಿಚಿತವಾದದ್ದು. ಲಕ್ಷ್ಮಿ ಬಾರಮ್ಮ ಎನ್ನುವ ಧಾರಾವಾಹಿಯಲ್ಲಿ ಶೈನ್ ಶೆಟ್ಟಿ, ಚಂದು ಪಾತ್ರಕ್ಕೆ ಬಣ್ಣ ಹಚ್ಚಿದ್ದರು. ಇವರು ಮಾಡಿದ ಚಂದು ಪಾತ್ರ ಹೆಚ್ಚು ಜನಪ್ರಿಯತೆಯನ್ನು ತಂದು ಕೊಟ್ಟಿತ್ತು. ಈಗ ಇವರು ಬಿಗ್ ಬಾಸ್ ಮನೆಗೆ 7 ನೆ ಸ್ಪರ್ಧಿಯಾಗಿ ಕಾಲಿಟ್ಟಿದ್ದಾರೆ. ವೇದಿಕೆಯಲ್ಲಿ ಕಿಚ್ಚನ ಹತ್ತಿರ ಇವರು ಹಂಚಿಕೊಂಡಿರುವ ವಿಷಯಗಳನ್ನು ಕೇಳುತ್ತಿದ್ದರೆ ನಿಜಕ್ಕು ಅಚ್ಚರಿಯಾಗುತ್ತದೆ. ಸೀರಿಯಲ್ ನಟನಾಗಿದ್ದರು ಸಹ ಅವಕಾಶ ಇಲ್ಲದಿದ್ದಾಗ ಇವರು ಏನು ಮಾಡಿದ್ದರು?. ಮುಂದೆ ಓದಿ

ಶೈನ್ ಶೆಟ್ಟಿ ಗೆ ಹೆಸರು ತಂದು ಕೊಟ್ಟ ಧಾರವಾಹಿ

ಶೈನ್ ಶೆಟ್ಟಿ ಕುಂದಾಪುರದಿಂದ ಬೆಂಗಳೂರಿಗೆ ಬಂದಿದ್ದು ಸಿನಿರಂಗದಲ್ಲಿ ಗುರುತಿಸಿಕೊಳ್ಳಬೇಕೆಂದು. ಬಹಳ ವರ್ಷಗಳ ಕಾಲ ಅವಕಾಶಗಳಿಗಾಗಿ ಪರದಾಡಿದ್ದು, ನಂತರ ಒಂದು ಉತ್ತಮವಾದ ಅವಕಾಶ ಇವರಿಗೆ ಒದಗಿ ಬರುತ್ತದೆ. ಸಿನಿಮಾದಲ್ಲಿ ನಟಿಸಬೇಕೆಂಬ ಛಲದಿಂದ ಇವರು ಬಂದಿದ್ದರು, ಆದರೆ ಸಿನಿಮಾದಲ್ಲಿ ನಟಿಸುವುದಕ್ಕೆ ಅವಕಾಶಗಳು ಸಿಗುವುದಿಲ್ಲ. ಕೊನೆಗೆ ಧಾರಾವಾಹಿಯಲ್ಲಿ ನಟಿಸಬೇಕೆಂದು ಎದುರು ನೋಡುತ್ತಿರುವಾಗ ಲಕ್ಸ್ಮಿ ಬಾರಮ್ಮ ಧಾರವಾಹಿ ಕಡೆಯಿಂದ ನಟಿಸಲು ಅವಕಾಶ ಸಿಗುತ್ತದೆ. ಸುಮಾರು ಎರಡು ವರೆ ವರ್ಷಗಳ ಕಾಲಾವಧಿಯಲ್ಲಿ ಇವರ ಪಾತ್ರವು ಹೆಚ್ಚು ಗಮನವನ್ನು ಸೆಳೆಯುವುದರ ಜೊತೆಗೆ ಜನಪ್ರಿಯತೆಯನ್ನು ಸಹ ಪಡೆದುಕೊಂಡಿತ್ತು.

ಅದೃಷ್ಟ ಕೈ ಕೊಟ್ಟ ಸಂದರ್ಭ

ನಂತರದ ದಿನಗಳಲ್ಲಿ ಇವರಿಗೆ ಸಿನಿಮಾದಲ್ಲಿ ನಟಿಸುವ ಅವಕಾಶ ಸಿಗುತ್ತದೆ. ಆದ್ದರಿಂದ ಲಕ್ಷ್ಮಿ ಬಾರಮ್ಮ ಧಾರಾವಾಹಿಗೆ ವಿದಾಯವನ್ನು ಹೇಳುತ್ತಾರೆ. ಆದರೆ ಇವರ ದುರಾದೃಷ್ಟವಶಾತ್ ಆ ಸಿನಿಮಾ ಶುರುವಾಗುವುದೆ ಇಲ್ಲ. ಆ ಕಡೆ ಧಾರವಾಹಿ ಇಲ್ಲ, ಈ ಕಡೆ ಸಿನಿಮಾನೂ ಇಲ್ಲ, ಶೈನ್ ಶೆಟ್ಟಿ ಗೆ ದಿಕ್ಕು ತೋಚದಂತೆ ಆಗಿತ್ತು. ಧಾರಾವಾಹಿಯ ನಟನಾಗಿದ್ದರು ಸಹ ಯಾವುದೆ ಅಹಂ ಇಲ್ಲದೆ ಬೆಂಗಳೂರಿನ ಬನಶಂಕರಿಯ ರಸ್ತೆಯ ಬಳಿ ಫುಡ್ ಟ್ರಕ್ ಅನ್ನು ಶುರು ಮಾಡುತ್ತಾರೆ.

ಇವರನ್ನು ಎಲ್ಲೋ ನೋಡಿದ ನೆನಪು

ದೋಸೆ, ಎಗ್ ರೈಸ್ ಮಾಡಿ ತಮ್ಮ ಜೀವನವನ್ನು ಸಾಗಿಸುತ್ತಿದ್ದರು. ಗಿರಾಕಿಗಳು ಇವರ ಹೋಟೆಲ್ ಹತ್ತಿರ ಬಂದಾಗ, ಇವರನ್ನು ಎಲ್ಲೋ ನೋಡಿದ ನೆನಪು ಲಕ್ಷ್ಮಿ ಬಾರಮ್ಮ ಧಾರಾವಾಹಿಯಲ್ಲಿ ಬಣ್ಣ ಹಚ್ಚಿರುವ ಕಲಾವಿದನಂತೆ ಕಾಣುತ್ತಾರೆ ಎಂದು ಮಾತನಾಡಿಕೊಳ್ಳುತ್ತಿದ್ದರಂತೆ. ಮಾತುಗಳನ್ನು ಆಲಿಸಿಕೊಡ ಶೈನ್ ಶೆಟ್ಟಿ ಖುಷಿ ಪಟ್ಟಿದ್ದರಂತೆ.

ನಂತರ ಅವರು ಹೊರಡುವ ಸಂದರ್ಭದಲ್ಲಿ ಲಕ್ಷ್ಮಿ ಬಾರಮ್ಮ ಧಾರಾವಾಹಿಯಲ್ಲಿ ನಟಿಸಿರುವದು ನಾನೆ ಎಂದು ಹೇಳಿದ್ದರಂತೆ. ಒಬ್ಬ ಕಲಾವಿದನ ಜೀವನ ಯಾವ ರೀತಿ ಬದಲಾಗುತ್ತದೆ ಎನ್ನುವುದಕ್ಕೆ ಇವರು ಪ್ರತ್ಯಕ್ಷ ಸಾಕ್ಷಿಯಾಗಿದ್ದಾರೆ. ಈ ವಿಷಯವನ್ನು ಇವರು ಬಿಗ್ ಬಾಸ್ ವೇದಿಕೆಯ ಮೇಲೆ ಹಂಚಿಕೊಂಡ ಮೇಲೆ ಜನರಿಗೆ ಇವರ ಹಿಂದೆ ಇದ್ದ ನೋವಿನ ಕಥೆಯ ಕುರಿತು ತಿಳಿದಿದೆ.

LEAVE A REPLY

Please enter your comment!
Please enter your name here