ಕೇವಲ ನಟನೆಯಲ್ಲದೆ ಕೃಷಿಯಲ್ಲೂ ತೊಡಗಿಸಿಕೊಂಡಿರುವ ಕಿಶೋರ್

0
588

ಅನೇಕ ಹೊಸ ಕಲಾವಿದರಿಗೆ ಕನ್ನಡ ಚಿತ್ರರಂಗ ಅವಕಾಶ ನೀಡಿದೆ, ಈಗಲು ನೀಡುತ್ತಾ ಬರುತ್ತಿದೆ. ಆದರೆ ಸ್ವಲ್ಪ ಜನ ಕಲಾವಿದರು ಮಾತ್ರ ನಟಿಸುವುದಲ್ಲದೆ ಬೇರೆ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುತ್ತಾರೆ. ಮಾಡುವ ಕೆಲಸವನ್ನು ಮಾತ್ರ ಅಚ್ಚು ಕಟ್ಟಾಗಿ ಮಾಡುತ್ತಾರೆ. ಕಾಯಕವೇ ಕೈಲಾಸ ಎನ್ನುವ ತತ್ವವನ್ನು ಪಾಲಿಸುತ್ತಾ ಬರುತ್ತಿದ್ದಾರೆ. ಈಗ ಇಂತಹದೆ ಒಂದು ಕಾರ್ಯಕ್ಕೆ ಒಬ್ಬ ಕಲಾವಿದ ಕೈ ಹಾಕಿದ್ದಾರೆ. ಖ್ಯಾತ ಖಳ ನಟರಾದ ಕಿಶೋರ್ ಕುಮಾರ್ ಅವರು ಕೇವಲ ಸ್ವಲ್ಪ ಕನ್ನಡ ಚಿತ್ರಗಳಲ್ಲಿ ನಟಿಸಿದ್ದರು, ಹೆಚ್ಚು ಜನಪ್ರಿಯತೆಯನ್ನು ಪಡೆದುಕೊಂಡಿದ್ದಾರೆ. ಸ್ಯಾಂಡಲ್ ವುಡ್ ನಲ್ಲಿ ಅವಕಾಶ ಜಾಸ್ತಿ ಸಿಗದೆ ಇರುವ ಕಾರಣದಿಂದಾಗಿ ಬೇರೆ ಭಾಷೆಯ ಚಿತ್ರರಂಗಕ್ಕೆ ಹಾರುತ್ತಾರೆ.

ಕನ್ನಡ ಭಾಷೆವಲ್ಲದೆ, ತೆಲುಗು ತಮಿಳು ಭಾಷೆಯಲ್ಲು ನಟಿಸಿದ್ದಾರೆ 

ದುನಿಯಾ ಚಿತ್ರದಲ್ಲಿ ಇವರು ಪೊಲೀಸ್ ಪಾತ್ರವನ್ನು ಮಾಡಿದ್ದರೆ, ಇಂತಿ ನಿನ್ನ ಪ್ರೀತಿಯ ಚಿತ್ರದಲ್ಲಿ ಪೋಷಕ ನಟನ ಪಾತ್ರಕ್ಕೆ ಬಣ್ಣ ಹಚ್ಚಿದ್ದರು. ಉಳಿದವರು ಕಂಡಂತೆ ಚಿತ್ರದಲ್ಲಿ ಮುನ್ನ ಎನ್ನುವ ಪಾತ್ರವನ್ನು ಮಾಡಿದ್ದರು, ಇದು ಇವರಿಗೆ ಹೆಸರು ತಂದು ಕೊಟ್ಟ ಪಾತ್ರವಾಗಿತ್ತು. ಅಟ್ಟಹಾಸ ಸಿನಿಮಾದಲ್ಲಿ ವೀರಪ್ಪನ್ ಪಾತ್ರ ಎಲ್ಲರ ಗಮನ ಸೆಳೆದಿತ್ತು. ಹೀಗೆ ಹತ್ತು ಹಲವಾರು ಕನ್ನಡ ಚಿತ್ರಗಳಲ್ಲಿ ನಟಿಸುತ್ತಾ ಬಂದಿದ್ದಾರೆ. ಕೇವಲ ಕನ್ನಡ ಭಾಷೆಯಲ್ಲದೆ, ತೆಲುಗು ತಮಿಳು ಭಾಷೆಯಲ್ಲು ನಟಿಸಿ ಸೈ ಎನಿಸಿಕೊಂಡಿದ್ದಾರೆ. ನಟನೆಯಲ್ಲದೆ ಕೃಷಿಯ ಕಡೆಗೂ ಸಹ ಇವರು ಗಮನ ಹರಿಸಿದ್ದಾರೆ. ಹೌದು, ನಿಮಗೆಲ್ಲ ಇದು ಆಶ್ಚರ್ಯ ಪಡುವ ವಿಷಯವಾಗಿರಬಹುದು, ನಟನೆ ಬಿಟ್ಟು ಕೃಷಿ ಕೆಲಸ ಮಾಡುತ್ತಿದ್ದಾರಾ ಎಂದು. ಮುಂದೆ ಓದಿ

ಪ್ರಕೃತಿಯ ಭಾಗವಾಗಿಯೇ ಬೆಳೆಗಳನ್ನು ಬೆಳೆಯುತ್ತಾರೆ

ಕೃಷಿ ಇವರಿಗೆ ಅಚಾನಕ್ಕಾಗಿ ಬಂದ ಆಸಕ್ತಿ ಅಲ್ಲ. ಪಿಯುಸಿ ಮುಗಿದ ತಕ್ಷಣ ಚನ್ನಪಟ್ಟಣದ ಸುತ್ತ ಮುತ್ತ ಜಾಗಕ್ಕೆ ಭೇಟಿ ಕೊಟ್ಟು ಕೃಷಿಯ ಕುರಿತು, ಬೆಳೆಗಳ ಕುರಿತು, ಮಣ್ಣಿನ ಕುರಿತು ಹೆಚ್ಚಾಗಿ ತಿಳಿದುಕೊಂಡಿದ್ದರು. ಚಿಕ್ಕ ವಯಸ್ಸಿನಲ್ಲಿ ತಿಳಿದುಕೊಂಡ ಮಾಹಿತಿ ಈಗ ಇವರಿಗೆ ಉಪಯುಕ್ತವಾಗಿದೆ. ಇವರು ಕೃಷಿಯ ಯಾವುದೇ ನಿಯಮವನ್ನು ಪಾಲಿಸುವುದಿಲ್ಲ. ಇವರು ನಡೆಸುವ ಕೃಷಿಯನ್ನು ಸಾಮಾನ್ಯ ಕೃಷಿ ಎಂದು ಕರೆಯುತ್ತಾರೆ. ಪ್ರಕೃತಿಯ ಭಾಗವಾಗಿಯೇ ಬೆಳೆಗಳನ್ನು ಬೆಳೆಯುತ್ತಾರೆ. ಕೃಷಿಯ ಬಗ್ಗೆ ಆಸಕ್ತಿ ಇಟ್ಟುಕೊಂಡಿರುವ ಯುವಕರಿಗೂ ಸಹ ತಮ್ಮ ಭೂಮಿಯಲ್ಲಿ ಬೆಳೆಗಳನ್ನು ಬೆಳೆಯುವ ತರಬೇತಿಯನ್ನು ನೀಡುತ್ತಾರೆ. ಮನುಷ್ಯನು ಪರಿಸರದ ಜೊತೆಗಿರುವ ನಂಟನ್ನು ಕಳೆದುಕೊಳ್ಳಬಾರದು, ಮನುಷ್ಯ ಕೂಡ ಒಂದು ಪ್ರಾಣಿ ಎನ್ನುವ ವಿಚಾರವನ್ನು ಮರೆಯಬಾರದು ಎನ್ನುವುದು ಕಿಶೋರ್ ಅವರ ಅಭಿಪ್ರಾಯ.

ದೇಶಿಯ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದಾರೆ

ಪರಿಸರದ ಜೊತೆಗೆ ನಾವು ಬೆರೆಯಬೇಕೆನ್ನುವ ಆಲೋಚನೆ ಇವರನ್ನು ನಗರದಿಂದ ಗ್ರಾಮದವರೆಗೂ ಕರೆದುಕೊಂಡು ಬಂದಿದೆ. ಕಿಶೋರ್ ಅವರ ಸರಳ ಕೃಷಿಯಲ್ಲಿ ತಮ್ಮ ಧರ್ಮ ಪತ್ಮಿಯ ಪಾತ್ರವು ಇದೆ, ಕಿಶೋರ್ ಅವರಿಗಿಂತ ಇವರೇ ಹೆಚ್ಚು ಕೃಷಿಯ ಅಧ್ಯಯನವನ್ನು ನಡೆಸಿದ್ದಾರೆ. ಕೃಷಿಯ ವಿಚಾರದಲ್ಲಿ ಹೆಂಡತಿ ಸಹ ಬೆಂಬಲವನ್ನು ನೀಡಿದ್ದಾರೆ.

ದೇಶಿಯ ಪ್ರಾಡಕ್ಟ್ಸ್ ಮಾರಾಟ ಮಾಡುವುದನ್ನು ಕಿಶೋರ್ ಶುರು ಮಾಡಿದ್ದಾರೆ. ಜನ ಸಾಮಾನ್ಯರಿಗೆ ಮಾದರಿಯಾಗುವ ಹಾಗೆ ಇವರು ಬದುಕುತ್ತಿದ್ದಾರೆ. ಶ್ರೀಮಂತರಾದವರು ಮಾತ್ರ ಒಳ್ಳೆಯ ಜೀವನವನ್ನು ನಡೆಸಬಹುದು ಎನ್ನುವ ಮಾತನ್ನು ಇವರು ಹುಸಿ ಮಾಡಿ ಸರಳತೆಯಲ್ಲು ಶ್ರೀಮಂತಿಕೆ ಇದೆ ಎಂದು ನಿರೂಪಿಸಿದ್ದಾರೆ.

LEAVE A REPLY

Please enter your comment!
Please enter your name here