ಬೆಂಗಳೂರಲ್ಲಿ ಬೃಹತ್ ಕನ್ನಡಿಗಳು , ಯಾಕೆ ಗೊತ್ತಾ ?

0
427
BBMP mirrors
BBMP mirrors

“ಇಲ್ಲಿ ಮೂತ್ರ ವಿಸರ್ಜನೆ ಮಾಡಿದರೆ 500 ದಂಡ” ,“ಇಲ್ಲಿ ಕಸ ಹಾಕುವಂತಿಲ್ಲ”“ನಗರವನ್ನು ಸ್ವಚ್ಛವಾಗಿ ನೋಡಿಕೊಳ್ಳೋಣ” , ಈ ರೀತಿ ಬರಹಗಳನ್ನ ಬೆಂಗಳೂರಿನ ಜನ ದಿನಕ್ಕೆ ಏನಿಲ್ಲ ಅಂದ್ರು ಆರೇಳು ಸರ್ತಿನಾದ್ರೂ ನೋಡಿರ್ತಾರೆ, ಆದರೂ ಅವು ಕೇವಲ ಎಚ್ಚರಿಕೆ ಬರಹಗಳಾಗೆ ಕಾಣಿಸ್ತಿದ್ವೆ ಹೊರೆತು ಅದರಿಂದ ಏನು ಪ್ರಯೋಜನ ಆಗ್ತಿರ್ಲಿಲ್ಲ, ಜನ ಎಲ್ಲಿ ಏನು ಮಾಡಬಾರದು ಅಂತಾರೋ , ಅಲ್ಲಿ ಅದನ್ನ ಮಾಡೋವರ್ಗು ಸುಮ್ಮನಾಗಲ್ಲ. ಇವೆಲ್ಲ ಸಾಲದು ಅಂತ ದೇವರುಗಳ ಚಿತ್ರವನ್ನು ದೊಡ್ಡದಾಗಿ ಚಿತ್ರಿಸಿದ್ರು ಪ್ರಯೋಜನ ಬರಲಿಲ್ಲ. ಉಪೇಂದ್ರ ಹೇಳೋಹಾಗೆ “ಕಸ ಹಾಕ್ಬೇಡಿ” ಅಂದ್ರೆ ಜನ ಅದನ್ನು “ಕಸ ಹಾಕ್ಲೇಬೇಕು” ಅಂತ ಓದ್ಕೊಂಡು ಅಲ್ಲೇ ಹೋಗಿ ಕಸ ಹಾಕ್ತಾರೆ, “ಇಲ್ಲಿ ಮೂತ್ರ ವಿಸರ್ಜನೆ ಮಾಡಬಾರದು” ಅಂದ್ರೆ ಅಲ್ಲೇ ಹೋಗಿ ಮೂತ್ರ ವಿಸರ್ಜನೆ ಮಾಡ್ತಾರೆ, ಜನಕ್ ಇನ್ ಹೆಂಗಪ್ಪಾ ಬುದ್ಧಿ ಹೇಳೋದು ಅಂತ ಯೋಚಿಸ್ತಿರ್ಬೇಕಾದ್ರೆ BBMP ಅವ್ರ್ಗೆ ಒಳ್ಳೆ ಪ್ಲಾನ್ ಬಂತು ಅನ್ಸತ್ತೆ. ಅದಿಕ್ಕೆ ರಸ್ತೆ,ರಸ್ತೆಗಳಲ್ಲಿ ಕೇವಲ ಎಚ್ಚರಿಕ ಫಲಕಗಳು ಮತ್ತೆ ಬರಹಗಳನ್ನ ಹಾಕೋ ಬದ್ಲು ವಿಚಿತ್ರವಾದ ತಂತ್ರ ರೂಪಿಸಿದ್ದಾರೆ. ಫಲಕಗಳ ಬದಲಿಗೆ ದೊಡ್ಡ ದೊಡ್ಡ ಕನ್ನಡಿಗಳನ್ನ ಅಳವಡಿಸಿದ್ದಾರೆ.

ಮೂತ್ರ ವಿಸರ್ಜನೆ ತಡೆಯಲು ಈ ಕನ್ನಡಿಗಳ ಅಳವಡಿಕೆ

BBMP mirrors to stop public urination
BBMP mirrors to stop public urination

ಸದ್ಯಕ್ಕೆ ಬೆಂಗಳೂರಿನ ಐದು ಸ್ಥಳಗಳಲ್ಲಿ ಈ ಬೃಹತ್ ಕನ್ನಡಿಗಳನ್ನ ಅಳವಡಿಕೆ ಮಾಡಿದ್ದಾರೆ, ಯಾವ ಸಾರ್ವಜನಿಕ ಸ್ಥಳಗಳಲ್ಲಿ ಹೆಚ್ಚಾಗಿ ಮೂತ್ರ ವಿಸರ್ಜನೆಯ ಘಟನೆಗಳು ಬೆಳಕಿಗೆ ಬರುತ್ತಿದ್ದವೊ ಅಲ್ಲೆಲ್ಲ ಈ ದೊಡ್ಡ ಕನ್ನಡಿ ತಲೆ ಎತ್ತಿದ್ದಾವೆ. ಚರ್ಚ್ ಸ್ಟ್ರೀಟ್ , ಕೋರಮಂಗಲದ ಜ್ಯೋತಿ ನಿವಾಸ ಕಾಲೇಜು, ಇಂದಿರಾ ನಗರ, ಕೆ.ಆರ್.ಮಾರ್ಕೆಟ್ ಮತ್ತು indian express ವೃತ್ತಗಳಲ್ಲಿ ಈಗಾಗಲೇ ಈ ಬೃಹತ್ ಕನ್ನಡಿಗಳು ತಮ್ಮ ಕೆಲಸ ಪ್ರಾರಂಭಿಸಿದ್ದಾವೆ.

ಕನ್ನಡಿಯಲ್ಲಿ ನನ್ನೇ ನಾ ಕಂಡೆ!!

ಈ ಬೃಹತ್ ಕನ್ನಡಿಗಳ ಉದ್ದೇಶ ಏನಪ್ಪಾ ? , ಇದ್ರಿಂದ ಸಾರ್ವಜನಿಕ ಸ್ಥಳಗಳಲ್ಲಿ ಮೂತ್ರವಿಸರ್ಜನೆ ಮಾಡೋದು ಕಮ್ಮಿ ಆಗಬಹುದಾ ?, ಅಂತ ನಿಮ್ಮ ಪ್ರಶ್ನೆ ಆಗಿದ್ರೆ , ಹೌದು ಅನ್ನೋದು BBMP ಅವ್ರ ಉತ್ತರ. ಎಲ್ಲಂದ್ರಲ್ಲಿ ನಾಚಿಕೆ ಇಲ್ಲದೆ ಮೂತ್ರ ವಿಸರ್ಜನೆ ಮಾಡೋರು ಗೋಡೆಯಲ್ಲಿ ಅವರನ್ನೇ ನೋಡಿದ್ರೆ ಮುಜುಗರಕ್ಕೆ ಒಳಗಾಗ್ತಾರೆ , ಮತ್ತು ಇದರಿಂದ ಮತ್ತೊಮ್ಮೆ ಅವ್ರು ಹೀಗೆ ಮಾಡೋದಿಲ್ಲ ಅಂತ ಅಂತಾರೆ BBMP special commissioner ರಂದೀಪ್.

BBMP mirrors to stop public urination
BBMP mirrors to stop public urination

ಬೃಹತ್ ಕನ್ನಡಿಯಲ್ಲಿ ಇನ್ನೇನಿದೆ ?

ಈ ಎಂಟು ಬೈ ನಾಲ್ಕು ಅಡಿಯ ಕನ್ನಡಿಯಲ್ಲಿ QR code ಸಹ ಇದ್ದು ಅದನ್ನು scan ಮಾಡಿದರೆ ಹತ್ತಿರದ ಶೌಚಾಲಯದ ದಾರಿ ತೋರಿಸುತ್ತದೆಯಂತೆ. ಅದಷ್ಟೆ ಅಲ್ಲದೆ “ಸಾರ್ವಜನಿಕ ಸ್ಥಳಗಳಲ್ಲಿ ಉಗುಳಬಾರದು” ಮತ್ತು ” ಪ್ಲಾಸ್ಟಿಕ್ ಬಳಕೆ ತಡೆಗಟ್ಟಿ ” ಎಂಬ ಎಚ್ಚರಿಕೆಯ ಬರಹಗಳು ಇವೆಯಂತೆ. “ಕನ್ನಡಿ ಏನೋ ಹಾಕಿದ್ರಿ ಸರಿಯಾಗಿ ಸಾರ್ವಜನಿಕ ಶೌಚಾಲಯಗಳ ವ್ಯವಸ್ಥೆ ಮಾಡ್ರಿ’ ಅಂತೀರಾ. ಅದಕ್ಕೂ ಉತ್ತರ ಇದೆ ಕಣ್ರೆ, ನಗರದ ಸುತ್ತ 250 ನೂತನ ಶೌಚಾಲಗಳ ವ್ಯವಸ್ಥೆ ಕೂಡ ಮಾಡುತ್ತಿದ್ದಾರಂತೆ.

ಸಾರ್ವಜನಿಕ ಸ್ಥಳಗಳಲ್ಲಿ ಮೂತ್ರ ವಿಸರ್ಜನೆ ತಡೆಯೋದಕ್ಕೆ, BBMP ಅವ್ರು ಏನೇನೊ ಸರ್ಕಸ್ ಮಾಡ್ತಿದ್ದಾರೆ, ನಮ್ಮ ಜನ ತಪ್ಪು ಅರಿತು ಸಹಕರಿಸಬೇಕು ಅಷ್ಟೆ.

 

 

 

LEAVE A REPLY

Please enter your comment!
Please enter your name here