ದೇವೇಗೌಡ್ರನ್ನ ಕೈ ಬಿಡ್ತಾ ತುಮಕೂರು ಜನತೆ?

0
903
basavaraj and devegowda

ಕಾಳಗ ಅನ್ನೋದು ಯಾವುದರಲ್ಲಿ ಹೇಗೆ ನಡೆಯುತ್ತೆ ಅಂತ ಗೊತ್ತಿಲ್ಲ. ಆದ್ರೆ ರಾಜಕೀಯದ ಕಾಳಗ ಅಂದ್ರೆ, ಎಲ್ಲರಿಗೂ ಇಷ್ಟ. ಹೌದು. ಯಾವ ಪಕ್ಷ ಗೆಲ್ಲುತ್ತೆ, ಯಾವ ಅಭ್ಯರ್ಥಿ ಕೊರಳಿಗೆ ವಿಜಯಮಾಲೆ ಬೀಳುತ್ತೆ ಅಂತ ಎಲ್ಲರೂ ಕುತೂಹಲದಿಂದ, ಹಾಗೂ ಕಾತುರದಿಂದ ಕಾಯುತ್ತಾರೆ. ಅಂಥವರಿಗೆ ಈ ಬಾರಿಯ ಲೋಕಸಭಾ ಚುನಾವಣೆ ಮತ್ತಷ್ಟು ಕುತೂಹಲ ಕೆರಳುವಂತೆ ಮಾಡಿದೆ. ಯಾಕಂದ್ರೆ, ಈ ಬಾರಿಯ ಚುನಾವಣೆಯಲ್ಲಿ ದೊಡ್ಡ, ದೊಡ್ಡ ಅಭ್ಯರ್ಥಿಗಳೇ ಕಣಕ್ಕಿಳಿದಿದ್ದಾರೆ. ಜೊತೆಗೆ, ದೊಡ್ಡ ದೊಡ್ಡ ಅಭ್ಯರ್ಥಿಗಳನ್ನ ಹಿಂದಿಕ್ಕುವಂತೆ ಮಾಡಿದ್ದಾರೆ, ಹೊಸ ಪ್ರತಿಭೆಗಳು.

ಈ ಬಾರಿ ಚುನಾವಣೆಯಲ್ಲಿ ಕುಟುಂಬ ರಾಜಕಾರಣ ಎದ್ದು ತೋರುತ್ತಿತ್ತು. ಹೌದು. ಜೆಡಿಎಸ್ ನಿಂದ ಎಲ್ಲರೂ ತಮ್ಮ ಕುಟುಂಬದವರೇ ಕಣಕ್ಕಿಳಿದಿದ್ದರು. ರೇವಣ್ಣ ಅವರ ಪುತ್ರ, ಪ್ರಜ್ವಲ್ ರೇವಣ್ಣ ಹಾಸನದಿಂದ ಸ್ಪರ್ಧಿಸಿದರೆ, ಕುಮಾರಸ್ವಾಮಿ ಅವರ ಮಗ, ನಿಖಿಲ್ ಕುಮಾರಸ್ವಾಮಿ ಅವರು ಮಂಡ್ಯದಿಂದ ಸ್ಪರ್ಧಿಸಿದ್ದರು. ಇನ್ನೂ ಮಾಜಿ ಪ್ರಧಾನಿ ದೇವೇಗೌಡ ಅವರು, ತುಮಕೂರಿನಿಂದ ಸ್ಪರ್ಧಿಸಿದ್ದರು. ಒಂದು ಕಾಲದಲ್ಲಿ ಪ್ರಧಾನಿಯಾಗಿ ಅಧಿಕಾರ ಪಡೆದಿದ್ದ ದೇವೇಗೌಡರನ್ನ, ಈ ಬಾರಿಯ ಲೋಕಸಭೆಯ ಚುನಾವಣೆಯಲ್ಲಿ ಜನರು ಕೈ ಬಿಟ್ಟಿದ್ದಾರೆ. ಹೌದು. ದೇವೇಗೌಡರು ಭಾರಿ ಅಂತರದಿಂದ ಹಿನ್ನೆಯಲ್ಲಿದ್ದಾರೆ.

ಭಾರಿ ಮತಗಳಲ್ಲಿ ಹಿನ್ನೆಯಲ್ಲಿರುವ ದೇವೇಗೌಡರು

ಮಾಜಿ ಪ್ರಧಾನಿ ದೇವೇಗೌಡ್ರು ಒಂದು ಕಾಲದಲ್ಲಿ ಮತಗಳನ್ನ ಪಡೆದು, ಪ್ರಧಾನಿಯಾಗಿದ್ದರು. ಆದ್ರೆ 2019ರ ಲೋಕಸಭೆ ಚುನಾವಣೆಯಲ್ಲಿ ಜನರಿಂದ ದೂರಾಗಿದ್ದಾರೆ. ಯಾಕಂದ್ರೆ, ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ, ದೇವೇಗೌಡ್ರು ತುಮಕೂರಿನಲ್ಲಿ ಸ್ಪರ್ಧಿಸಿದ್ದರು. ಎಲ್ಲರ ನಿರೀಕ್ಷೆ, ಅವರು ಗೆಲ್ಲುತ್ತಾರೆ ಅನ್ನೋದಾಗಿತ್ತು. ಆದರೆ ಮತದಾರ ಅವರ ಕೈ ಬಿಟ್ಟಿದ್ದಾನೆ. ಹೌದು. ಇಂದಿನ ಫಲಿತಾಂಶದಲ್ಲಿ ದೇವೇಗೌಡ್ರು ಭಾರಿ ಅಂತರಗಳಿಂದ ಹಿನ್ನೆಡೆ ಪಡೆದಿದ್ದಾರೆ.

ಭಾರಿ ಅಂತರಗಳಿಂದ ಮುನ್ನಡೆ ಪಡೆದಿರುವ ಬಸವರಾಜ್

ಬಿಜೆಪಿ ಅಭ್ಯರ್ಥಿಯಾಗಿರುವ ಬಸವರಾಜ್ ಅವರು, ದೇವೇಗೌಡರಿಗಿಂತ, ಭಾರಿ ಮತಗಳಲ್ಲಿ ಮುನ್ನಡೆ ಪಡೆದಿದ್ದಾರೆ. ಹೌದು. ನಿಜಕ್ಕೂ ಈ ಫಲಿತಾಂಶ ಎಲ್ಲರಲ್ಲೂ ಕುತೂಹಲ ಮೂಡಿಸಿದೆ. ಯಾಕಂದ್ರೆ, ಒಂದು ಕಾಲದಲ್ಲಿ ಪ್ರಧಾನಿಯಾಗಿದ್ದ ದೇವೇಗೌಡರು, ಈಗ ತುಮಕೂರಿನಲ್ಲಿ ನಡೆದ ಚುನಾವಣೆಯಲ್ಲಿ ಹಿಂದುಳಿದಿದ್ದಾರೆ. ಅಲ್ಲದೆ, ದೇವೇಗೌಡರು ದೇವರಲ್ಲಿ ಬಹಳ ನಂಬಿಕೆ ಇಟ್ಟಿದ್ದರಿಂದ, ಚುನಾವಣೆಯಲ್ಲಿ ಹೆಚ್ಚಾಗಿ ಭಾಗವಹಿಸುವದಕ್ಕಿಂತ, ಟೆಂಪಲ್ ರನ್ ಮಾಡುತ್ತಿದ್ದರು. ಆದ್ರೆ ಇತ್ತ ಬಿಜೆಪಿ ಅಭ್ಯರ್ಥಿ ಬಸವರಾಜ್ ಅವರು, ಜನರಿಗೆ ಹತ್ತಿರವಾಗವಲ್ಲಿ ಯಶಸ್ವಿಯಾಗಿದ್ದಾರೆ. ಅದಕ್ಕೆ ಉದಾಹರಣೆ. ಈಗ ಅವರು ಪಡೆದಿರುವ ಮತಗಳಾಗಿದೆ. ಹಾಗೂ ಅವರು ಮುನ್ನಡೆಯಲ್ಲಿರುವುದಾಗಿದೆ.

ದೇವೇಗೌಡರು v/s ಬಸವರಾಜ್

ಸದ್ಯಕ್ಕೆ ಈಗ ತುಮಕೂರಿನಲ್ಲಿ ಭಾರಿ ಗೊಂದಲ ಮೂಡಿದೆ. ಯಾಕಂದ್ರೆ, ದೇವೇಗೌಡರಿಗೆ ಈ ಸೋಲು ನಿಜಕ್ಕೂ ಮುಖಭಂಗವಾಗಲಿದೆ. ಯಾಕಂದ್ರೆ, ಎಲ್ಲರೂ ಹೇಳುವಂತೆ ಕುಟುಂಬ ರಾಜಕಾರಣ ನಡೆಯುವುದಿಲ್ಲ ಅನ್ನೋದು, ಇಲ್ಲಿ ಸಾಭೀತಾಗಲಿದೆ. ಆದರೆ ತುಮಕೂರು ಜಿಲ್ಲೆಯ ಇನ್ನೆರಡು ಕ್ಷೇತ್ರಗಳ ಮತ ಎಣಿಕೆಯಿದೆ. ಸದ್ಯಕ್ಕೆ 28 ಸಾವಿರ ಮತಗಳಲ್ಲಿ ಬಸವರಾಜ್ ಮುಂದಿದ್ದಾರೆ. ಇನ್ನೆರಡು ಕ್ಷೇತ್ರಗಳ ಮತ ಎಣಿಕೆ ಬಾಕಿ ಇದೆ. ಹಾಗಾದ್ರೆ ಆ ಎರಡು ಕ್ಷೇತ್ರಗಳಲ್ಲಿ ಬರುವ ಫಲಿತಾಂಶದಿಂದ, ಈ ಇಬ್ಬರು ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ.

ಒಟ್ಟಿನಲ್ಲಿ ತುಮಕೂರು ಫಲಿತಾಂಶ ಅಲ್ಲಿನ ಜನರಿಗೆ ನಿಜಕ್ಕೂ ಗೊಂದಲ ಹುಟ್ಟಿಸಿದೆ. ಇಲ್ಲಿಯವರೆಗೂ ಬಸವರಾಜ್ ಅವರು ಮುಂದಿದ್ದಾರೆ. ಆದರೆ ಇನ್ನೆರಡು ಕ್ಷೇತ್ರಗಳಲ್ಲಿನ ಮತ ಎಣಿಕೆ ಇನ್ನೂ ನಡೆಯುವುದಿದೆ. ಅದರಲ್ಲಿ ಫಲಿತಾಂಶ ಯಾವ ರೀತಿ ಬರಲಿದೆ ಎಂದು, ಎಲ್ಲರಿಗೂ ಇರುವ ಕುತೂಹಲವಾಗಿದೆ. ಇವೆರಡು ಕ್ಷೇತ್ರಗಳ ಫಲಿತಾಂಶದಿಂದ ಬಸವರಾಜ್ ಹಾಗೂ ದೇವೇಗೌಡರ ಭವಿಷ್ಯ ನಿರ್ಧಾರವಾಗಲಿದೆ.

LEAVE A REPLY

Please enter your comment!
Please enter your name here