ಅಂದು ಬಿಡುಗಡೆಯಾದ ಬಂಗಾರದ ಮನುಷ್ಯ ಚಿತ್ರ ಇಂದಿಗೂ ಪರಿಣಾಮ ಬೀರುತ್ತಿದೆ

0
511

ಮಳೆಯ ಪರಿಣಾಮದಿಂದಾಗಿ ಉತ್ತರ ಕರ್ನಾಟಕದ ಜನರು ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ. ಪ್ರವಾಹ ಆಗೋವಷ್ಟು ಮಳೆ ಉತ್ತರ ಕರ್ನಾಟಕದ ಪ್ರದೇಶಗಳಲ್ಲಿ ಆಗಿರಲಿಲ್ಲ. ಮಹಾರಾಷ್ಟ್ರದಲ್ಲಿ ಜಲಾಶಯಗಳು ತುಂಬಿ ಹರಿಯುತ್ತಿರುವ ಕಾರಣದಿಂದಾಗಿ ನೀರನ್ನು ಬಿಟ್ಟಿದ್ದೆ ಈ ಅವಘಡಕ್ಕೆ ಸಂಭವಿಸಿದೆ ಎಂದು ವರದಿಗಳ ಪ್ರಕಾರ ಹೇಳಲಾಗುತ್ತಿದೆ. ಮನೆಯನ್ನು ಕಳೆದುಕೊಂಡಿರುವವರನ್ನು ಮತ್ತು ಇನ್ನಿತರ ಗ್ರಾಮದ ಜನತೆಯನ್ನು ಸುರಕ್ಷಿತವಾಗಿ ರಕ್ಷಣಾ ಕೇಂದ್ರಗಳಿಗೆ ತಲುಪಿಸುವಂತಹ ಕಾರ್ಯಚರಣೆ ನಡೆಯುತ್ತಿದೆ. ಜನರು ಸಹ ಸ್ವತಃ ತಾವೆ ಅಪಾಯದಿಂದ ಪಾರಾಗುವ ದಾರಿಯನ್ನು ಹುಡುಕುತ್ತಿದ್ದು, ಇನ್ನಿತರಿಗೂ ಸಹ ಸಹಾಯವನ್ನು ಮಾಡುತ್ತಿದ್ದಾರೆ. ಈಗಾಗಲೆ ಸರ್ಕಾರ ಮತ್ತು ಸ್ಟಾರ್ ನಟರು ನಾಗರಿಕರ ಕಷ್ಟಕ್ಕೆ ಸ್ಪಂದಿಸಿದ್ದು, ಆರ್ಥಿಕ ಸಹಾಯವನ್ನು ಮಾಡಿದ್ದಾರೆ.

ವಾಸಿಸುವುದಕ್ಕೆ ಸರಿಯಾದ ಜಾಗವು ಇಲ್ಲದಂತೆ ಆಗಿದೆ

ಪರಿಸ್ಥಿತಿಯನ್ನು ಎದುರಿಸಲು ಜನರಿಂದ ಸಾಧ್ಯವಾಗುತ್ತಿಲ್ಲ. ತಮ್ಮ ವೈಯಕ್ತಿಕ ವಿಚಾರ ಅಥವಾ ಕೆಲಸದ ವಿಷಯದಲ್ಲಿರುವ ಒತ್ತಡವವನ್ನು ಹೇಗೊ ನಿಭಾಯಿಸಬಹುದು. ಪ್ರಕೃತಿಯನ್ನು ತಡೆಯುವ ಶಕ್ತಿ ಯಾರಿಗು ಇಲ್ಲ. ರಸ್ತೆಗಳಲ್ಲಿ ನೀರು ತುಂಬಿ ಹರಿಯುತ್ತಿದ್ದು, ಜನರು ಸರಿಯಾಗಿ ಓಡಾಡುವುದಕ್ಕು ಆಗುತ್ತಿಲ್ಲ. ಶಾಲೆಗೆ ಹೋಗುವ ಮಕ್ಕಳು, ವೃದ್ದರು ಆತಂಕರಾಗಿದ್ದಾರೆ. ಶ್ರೀಮಂತರು ಏನೊ ದೊಡ್ಡ ಬಂಗಲೆಯಲ್ಲಿ ಆರಾಮಾಗಿ ಇರುತ್ತಾರೆ ಆದರೆ ಬಡವರ ಕಥೆ ಬಹಳ ಘೋರ ಎಂದು ಅನಿಸುತ್ತದೆ. ಸಣ್ಣ ಗುಡಿಸಲನ್ನು ಕಟ್ಟಿಸಿಕೊಂಡು ಅಲ್ಲೆ ತಮ್ಮ ಜೀವನವನ್ನು ನಡೆಸುತ್ತಿರುತ್ತಾರೆ. ಈಗ ಮಳೆಯಿಂದಾಗಿ ಅವರು ತಮ್ಮ ಮನೆಯನ್ನು ಕಳೆದುಕೊಂಡಿದ್ದು, ವಾಸಿಸುವುದಕ್ಕೆ ಸರಿಯಾದ ಜಾಗವು ಇಲ್ಲದಂತೆ ಆಗಿದೆ.

ಜನರಲ್ಲಿ ಆತ್ಮವಿಶ್ವಾಸವನ್ನು ತುಂಬುವ ಪ್ರಯತ್ನವನ್ನು ಮಾಡಿದ್ದಾರೆ

ಗದಗದಲ್ಲಿರುವ ತೋಂಟದಾರ್ಯ ಕಲ್ಯಾಣ ಕೇಂದ್ರದಲ್ಲಿ ಪ್ರವಾಹ ಸಂತ್ರಸ್ತರಿಗೆ ಆಶ್ರಯವನ್ನು ನೀಡುತ್ತಿದ್ದಾರೆ. ಉತ್ತಮ ಸಮಾಜ ಸೇವೆಗೆ ಈ ಕೇಂದ್ರ ಸಾಕ್ಷಿಯಾಗಿದೆ ಅಂತಾನೆ ಹೇಳಬಹುದಾಗಿದೆ. ಯಾವುದೆ ಪರಿಸ್ಥಿತಿ ಬಂದರು ಸಹ ಜನರು ಎದೆಗುಂದದೆ ಧೈರ್ಯವಾಗಿರಬೇಕು, ನಕಾರಾತ್ಮಕವಾದ ಯೋಚನೆಗಳನ್ನು ಬಿಟ್ಟು, ಸಕಾರಾತ್ಮಕವಾಗಿ ಯೋಚಿಸಬೇಕು ಆಗಲೆ ಮನುಷ್ಯ ಭಯ ಭೀತಿಗಳಿಂದ ಹೊರ ಬರಲು ಸಾಧ್ಯ. ಜಲ ಪ್ರವಾಹದಿಂದ ಜನರು ಗಾಬರಿಯಾಗಿದ್ದು, ಅವರ ಆತಂಕವನ್ನು ಕಡಿಮೆ ಮಾಡಿ ಆತ್ಮವಿಶ್ವಾಸವನ್ನು ತುಂಬಲು ಒಂದು ಪ್ರಯತ್ನವನ್ನು ಆ ಕೇಂದ್ರದ ಸಂಸ್ಥೆಯವರು ಮಾಡಿದ್ದಾರೆ. ಹೌದು, ಪರಿಹಾರ ಕೇಂದ್ರದಲ್ಲಿರುವ ಸುಮಾರು ಮುನ್ನೂರು ಜನರಿಗೆ ಒಂದು ಸಿನಿಮಾವನ್ನು ತೋರಿಸುತ್ತಿದ್ದಾರೆ. ಮುಂದೆ ಓದಿ.

ಜನರಲ್ಲಿ ಅಡಗಿದ್ದ ಗಾಬರಿ ಮತ್ತು ಭಯದ ಮಟ್ಟವನ್ನು ಚಿತ್ರ ಕಡಿಮೆ ಮಾಡಿದೆ

ಕನ್ನಡದ ಕಣ್ಮಣಿ ಡಾಕ್ಟರ್ ರಾಜ್ ಕುಮಾರ್ ಅವರು ನಟಿಸಿರುವ ಆಗಿನ ಕಾಲದಲ್ಲಿ ಹೆಚ್ಚು ಜನಪ್ರಿಯ ಮತ್ತು ಖ್ಯಾತಿಯನ್ನು ಪಡೆದಿರುವ ಬಂಗಾರದ ಮನುಷ್ಯ ಸಿನಿಮಾವನ್ನು ಪ್ರದರ್ಶಿಸಲಾಗಿದೆ. ಸಿನಿಮಾದಲ್ಲಿ ಮೂಡಿ ಬರುವ ಕೆಲವು ಸನ್ನಿವೇಶಗಳು ಜನರ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ಆಗದು ಎಂದು ಕೈ ಕಟ್ಟಿ ಕುಳಿತರೆ ಸಾಗದು ಕೆಲಸವು ಮುಂದೆ ಹಾಡನ್ನು ಎಷ್ಟು ಬಾರಿ ಕೇಳಿದರು ಕೇಳಬೇಕೆನಿಸುತ್ತದೆ. ಈ ಹಾಡನ್ನು ಕೇಳುತ್ತಿದ್ದರೆ ಕೆಲಸ ಮಾಡುವವರಿಗಂತು ಸ್ಫೂರ್ತಿ ನೀಡುವುದಂತು ಖಚಿತ. ಜನರಲ್ಲಿ ಅಡಗಿದ್ದ ಗಾಬರಿ ಮತ್ತು ಭಯದ ಮಟ್ಟವನ್ನು ಈ ಚಿತ್ರ ಕಡಿಮೆ ಮಾಡಿದೆ. ಧೈರ್ಯವಾಗಿಯೆ ಜನರು ನಿಟ್ಟುಸಿರು ಬಿಟ್ಟಿದ್ದಾರೆ.

ನಿಜ ಜೀವನದಲ್ಲು ಜನರ ಮೇಲೆ ಪರಿಣಾಮ ಉಂಟು ಮಾಡುತ್ತದೆ

ಸಿನಿಮಾ ಕೇವಲ ಮನೋರಂಜನೆಯ ವೇದಿಕೆ ಅಲ್ಲ. ಒಮ್ಮೊಮ್ಮೆ ಚಿತ್ರದ ಸಂಭಾಷಣೆಯಾಗಲಿ ಅಥವಾ ಹಾಡಾಗಲಿ ನಿಜ ಜೀವನದಲ್ಲು ಜನರ ಮೇಲೆ ಪರಿಣಾಮ ಉಂಟು ಮಾಡುತ್ತದೆ. ಒಂದೊಂದು ಸಿನಿಮಾದಲ್ಲಿಯು ನೋಡಿ ಕಲಿಯಬೇಕಾಗುವ ವಿಷಯಗಳು ಬಹಳಷ್ಟು ಇರುತ್ತದೆ. ಆದರೆ ಸಿನಿರಸಿಕರು ಕೇವಲ ಸಿನಿಮಾವನ್ನು ನೋಡಿ ಎಂಜಾಯ್ ಮಾಡುತ್ತಾರೆ. ಕೆಲವು ಜನರು ಮಾತ್ರ ಚಿತ್ರದ ನಿರ್ದೇಶಕರು ಕೊಟ್ಟಿರುವ ಸಂದೇಶವನ್ನು ತಮ್ಮ ನಿಜ ಜೀವನದಲ್ಲಿಯು ಅಳವಡಿಸಿಕೊಳ್ಳುತ್ತಾರೆ. ಸಮಾಜ ಮುಖಿಯ ಚಿತ್ರಗಳು ಹೆಚ್ಚಾಗಿ ತೆರೆ ಕಾಣಬೇಕಾಗಿದೆ.

LEAVE A REPLY

Please enter your comment!
Please enter your name here