ಪ್ರವಾಹವನ್ನು ಲೆಕ್ಕಿಸದೆ ಆಂಬುಲೆನ್ಸ್ ಗೆ ದಾರಿ ತೋರಿಸಲು ಸೇತುವೆ ಮೇಲೆ ಓಡಿದ ಬಾಲಕ

0
539

ಉತ್ತರ ಕರ್ನಾಟಕದಲ್ಲಿ ಉಂಟಾಗಿರುವ ಪ್ರವಾಹದಿಂದಾಗಿ ಅಲ್ಲಿನ ಅಜನರಿಗೆ ದಿಕ್ಕೇ ತೋಚದಂತಾಗಿದೆ. ಹೌದು. ಇರಲು ಮನೆಯಿಲ್ಲದೆ, ತಿನ್ನಲ್ಲು ಅನ್ನವಿಲ್ಲದೆ ಒದ್ದಾಡುತ್ತಿದ್ದಾರೆ. ಈ ಮಧ್ಯೆ ಅವರ ರಕ್ಷಣೆಗೆ ಇಡೀ ಕರ್ನಾಟಕ ಜನತೆಯೇ ನಿಂತಿದೆ. ಆದರೂ ಅವರಿಗೆ ಅವರವರು ಮಾಡುವ ಸಹಾಯವೇ ಅಲ್ಲಿ ಎಲ್ಲಕ್ಕಿಂತ ಹೆಚ್ಚು. ಹೌದು. ಆ ಊರುಗಳಲ್ಲಿ ಈಗ ರಸ್ತೆ ಯಾವುದು? ದಾರಿ ಯಾವುದು? ಅನ್ನೋದು ಯಾರಿಗೂ ಗೊತ್ತಿಲ. ಯಾಕಂದ್ರೆ ಊರೆಲ್ಲ ಸಂಪೂರ್ಣ ನೀರಿನಿಂದ ಆವೃತ್ತವಾಗಿರುವುದರಿಂದ ಎಲ್ಲಿ, ಏನಿದೆ ಅನ್ನೋದೇ ಯಾರಿಗೂ ಗೊತ್ತಾಗುತ್ತಿಲ್ಲ. ಇಂತಹ ಪರಿಸ್ಥಿಯಲ್ಲಿ ಇಲ್ಲಿನ ಬಾಲಕ ಒಂದು ಆಂಬುಲೆನ್ಸ್ ಗೆ ದಾರಿ ತೋರಿದ್ದಾನೆ. ಹೌದು. ಸಂಪೂರ್ಣ ನೀರಿನಿಂದ ತುಂಬಿರುವ ಊರಿನಲ್ಲಿ ರೋಗಿಗಗಳನ್ನು ಕರೆದುಕೊಂಡು ಹೋಗಲು, ಆಂಬುಲೆನ್ಸ್ ಗೆ ದಾರಿ ತಿಳಿದಿಲ್ಲ. ಆದ್ರೆ ಈ ಯುವಕ ಪ್ರವಾಹ ಅನ್ನೋದನ್ನು ಲೆಕ್ಕಿಸದೆ, ಸೇತುವೆಯ ಮೇಲೆ ಓಡುವ ಮೂಲಕ ಆಂಬುಲೆನ್ಸ್ ಗೆ ದಾರಿ ತೋರಿಸಿದ್ದಾನೆ.

ಪ್ರವಾಹವನ್ನು ಲೆಕ್ಕಿಸದೆ ಸೇತುವೆ ಮೇಲೆ ಓಡಿದ ಬಾಲಕ

ರಾಜ್ಯದಲ್ಲಿ ವರುಣನ ಆರ್ಭಟ ಹೆಚ್ಚಾಗಿರೋದ್ರಿಂದ ಎಲ್ಲರು ಕಷ್ಟದಲ್ಲಿ ಜೀವನ ನಡೆಸುತ್ತಿದ್ದಾರೆ. ಈ ಮಧ್ಯೆ ಒಂದು ಕಡೆಯಿಂದ ಮತ್ತೊಂದು ಕಡೆಗೆ ಹೋಗಲು ಬಹಳಷ್ಟು ತೊಂದರೆಯಾಗುತ್ತಿದೆ. ಅಲ್ಲದೆ ರೋಗಿಗಳನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲು ಆಗುತ್ತಿಲ್ಲ. ಯಾಕಂದ್ರೆ ಎಲ್ಲ ಕಡೆ ನೀರು ಇರೋದ್ರಿಂದ ಕಷ್ಟವಾಗುತ್ತಿದೆ. ಇದೇ ಘಟನೆ ಈಗ ರಾಯಚೂರಿನಲ್ಲಿ ನಡೆದಿದೆ. ಹೌದು. ರಾಯಚೂರಿನ ಹಿರೇರಾಯನಕುಂಪೆ ಯಲ್ಲಿ ೬ನೇ ತರಗತಿಯ ಬಾಲಕನೊಬ್ಬ ಪ್ರವಾಹ ಅನ್ನೋದನ್ನು ಲೆಕ್ಕಿಸದೆ ಸೇತುವೆ ಮೇಲೆ ಓಡಿ ಆಂಬುಲೆನ್ಸ್ ಗೆ ದಾರಿ ತೋರಿಸಿದ್ದಾನೆ. ರಾಯಚೂರಿನಲ್ಲಿ ಮಳೆಯಿಂದ ಅನಾಹುತಕ್ಕೊಳಗಾಗಿದ್ದ ಕೆಲವರನ್ನು ಆಸ್ಪತ್ರೆಗೆ ಸಾಗಿಸಬೇಕಿತ್ತು. ಆದ್ರೆ ಎತ್ತ ನೋಡಿದರು ನೀರು ಇದ್ದಿದ್ದರಿಂದ ಆಂಬುಲೆನ್ಸ್ ಚಾಲಕನಾಗಿ ದಾರಿ ತಿಳಿಯಲಿಲ್ಲ. ಆ ಸಮಯಕ್ಕೆ ಈ ಬಾಲಕ ದಾರಿ ತೋರಿಸಿದ್ದಾನೆ.

ಸಾವಿಗೂ ಹೆದರದ ಪೋರ

ಇನ್ನು ಇವನ ಹೆಸರು ವೆಂಕಟೇಶ್. ಈತ ಅದೇ ಊರಿನವನಾಗಿದ್ದರಿಂದ, ಈತನಿಗೆ ಆ ಹಳ್ಳಿಯ ಎಲ್ಲ ರಸ್ತೆಗಳು ತಿಳಿದಿತ್ತು. ಹಾಗಾಗಿ ಈತ ಸಹಾಯ ಮಾಡಿದ್ದಾನೆ. ಹೌದು. ಆಂಬುಲೆನ್ಸ್ ಚಾಲಕ ರಸ್ತೆ ಗೊತ್ತಾಗದೆ ನೀರಿನ ಮಧ್ಯೆ ನಿಂತಿದ್ದನು. ಯಾಕಂದ್ರೆ ಎತ್ತ ನೋಡಿದರು ಪ್ರವಾಹದಂತೆ ನೀರು ಹರಿಯುತ್ತಿತ್ತು. ಯಾವ ಕಡೆ ಹೋದರು ಅಪಾಯ ತಪ್ಪಿದ್ದಲ್ಲ ಎಂದು ಗೊತ್ತಿತ್ತು. ಇಂಥ ಸಂದರ್ಭದಲ್ಲಿ ಇದನ್ನು ವೆಂಕಟೇಶ್ ಗಮನಿಸಿದ್ದಾನೆ. ತಕ್ಷಣವೇ ಚಾಲಕನ ಬಳಿ ಬಂದು, ನಾನು ನಿಮಗೆ ರಸ್ತೆ ತೋರಿಸುತ್ತೇನೆ, ನೀರಿನಲ್ಲಿ ನಾನು ಓಡುತ್ತೇನೆ, ಆಗ ನೀವು ನನ್ನನ್ನು ಹಿಂಬಾಲಿಸಿ ಎಂದು ಹೇಳಿದ್ದಾನೆ. ನೀರು ಪ್ರವಾಹದಂತೆ ಹರಿಯುತ್ತಿದ್ದರೂ, ಅದನ್ನು ಲೆಕ್ಕಿಸದೆ ಸೇತುವೆಯ ಮೇಲೆ ಜೋರಾಗಿ ಓಡಿ, ಆಂಬುಲೆನ್ಸ್ ಅನ್ನು ದಡ ಸೇರುವಂತೆ ಮಾಡಿದ್ದಾನೆ.

ಎಲ್ಲರ ಮೆಚ್ಚುಗೆಗೆ ಪಾತ್ರನಾದ ವೆಂಕಟೇಶ್

ವೆಂಕಟೇಶ್ ಈ ರೀತಿ ಸಾವಿಗೂ ಹೆದರದೆ ಹರಿಯುತ್ತಿರುವ ನೀರಿನ ಸೇತುವೆಯ ಮೇಲೆ ಓಡಿ, ಇತರರ ಜೀವ ಉಳಿಸಲು ಮುಂದಾಗಿದ್ದಾನೆ. ಇನ್ನು ಇವನ ಈ ಸಾಧನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಎಲ್ಲರು ಇವನಿಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಯಾಕಂದ್ರೆ ಪ್ರವಾಹದಂತೆ ಹರಿಯುತ್ತಿರುವ ನೀರನ್ನು ದೂರದಿಂದ ನಿಂತು ನೋಡಲು ಭಯವಾಗುತ್ತದೆ. ಹೀಗಿರುವಾಗ, ಈ ಹುಡುಗ ಸೇತುವೆಯ ಮೇಲೆ ಓಡಿ, ದಾರಿ ತೋರಿಸಿರುವುದು ಆಶ್ಚರ್ಯಕ್ಕೆ ಕಾರಣವಾಗಿದೆ. ಜೊತೆಗೆ ಇವನ ಧೈರ್ಯಕ್ಕೆ ಹಾಗು ಒಳ್ಳೆಯ ಗುಣಕ್ಕೆ ಎಲ್ಲರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಒಟ್ಟಿನಲ್ಲಿ ತನ್ನ ಜೀವವನ್ನು ಲೆಕ್ಕಿಸದೆ ಇತರರ ಜೀವವನ್ನು ಉಳಿಸಲು ಈ ಬಾಲಕ ಮುಂದಾಗಿದ್ದಾನೆ. ಇನ್ನು ಇವನ ಈ ಕಾರ್ಯಕ್ಕೆ ಎಲ್ಲರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಅಭಿನಂದನೆ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here