ಅಣ್ಣಾವ್ರು ತಿಳಿಸಿರುವ ಮಾರ್ಗದಲ್ಲಿ ಬದುಕುತ್ತಾ, ಪರ ಭಾಷಿಕರಿಕೆ ಕನ್ನಡ ಕಲಿಸುತ್ತಿರುವ ಕನ್ನಡಾಭಿಮಾನಿ.

0
1232

ನಮ್ಮದು ಕನ್ನಡ ನಾಡು. ನಮ್ಮ ಜನ ಕನ್ನಡಕ್ಕೆ ನೀಡುವ ಬೆಲೆಯನ್ನ ಬೇರೆ ಯಾವುದಕ್ಕೂ ನೀಡಲ್ಲ. ಹೌದು. ನಮಗೆ ಕನ್ನಡ ಅಂದ್ರೆ ಪ್ರಾಣ. ಕನ್ನಡವೇ ಜೀವನಾಡಿ ಅಂತ ಬದುಕುತ್ತಿರೋರು ನಾವು. ಇನ್ನೂ ಕೆಲವರಿಗಂತೂ ಕನ್ನಡವೇ ಜೀವ ಹಾಗೂ ದೈವ. ಇವರು ಎಂದಿಗೂ ಬೇರೆ ಭಾಷೆಯನ್ನ ಬಳಸೋಕೆ ಇಷ್ಟ ಪಡಲ್ಲ. ತಮ್ಮೆಲ್ಲಾ ವ್ಯವಹಾರಗಳನ್ನ ಕನ್ನಡದಲ್ಲೇ ವ್ಯವಹರಿಸುತ್ತಾರೆ. ಇವರ ಮುಂದೆ, ಕನ್ನಡದ ಬಗ್ಗೆ ಯಾರಾದ್ರೂ, ಒಂದು ಮಾತನ್ನ ಕೆಟ್ಟದಾಗಿ ಆಡಿದರೂ, ಇವರು ಸುಮ್ಮನಿರುವುದಿಲ್ಲ. ಅದಕ್ಕೆ ತಕ್ಕ ಪಾಠ ಕಲಿಸುತ್ತಾರೆ.

ಇನ್ನೂ ಕನ್ನಡ ಅಂದ ಕೂಡಲೇ ನೆನಪಾಗೋದು ನಮ್ಮ ನಟಸಾರ್ವಭೌಮ ಡಾ. ರಾಜ್ ಕುಮಾರ್ ಅವರು. ಹೌದು. ಕನ್ನಡ ಅಂದ್ರೆ ಏನು ಅನ್ನೋದನ್ನ ಇವರಿಂದ ಕಲಿಬೇಕು. ಯಾಕಂದ್ರೆ ಕನ್ನಡವೇ ಉಸಿರು ಅಂತ ನಂಬಿದವರಿವರು. ಕನ್ನಡ ಭಾಷೆಗೆ ಇವರು ಕೊಡುವ ಬೆಲೆ ನೋಡಿದ್ರೆ, ಎಂಥವರಿಗೂ ಕನ್ನಡ ಕಲಿಯಬೇಕು ಎನಿಸುತ್ತೆ. ಅಲ್ಲದೆ, ಕನ್ನಡ ಬರದೇ ಇರುವ ಎಷ್ಟೋ ಜನಕ್ಕೆ ಇವರು ಕನ್ನಡ ಕಲಿಸಿದ್ದಾರೆ. ಈಗ ಇದೇ ಮಾರ್ಗದರ್ಶನದಲ್ಲಿ ಈ ವ್ಯಕ್ತಿಯೊಬ್ಬರು ಸಹ ಬದುಕುತ್ತಿದ್ದಾರೆ.

ಅಣ್ಣಾವರಂತೆ, ಕನ್ನಡ ಕಲಿಸುತ್ತಿದ್ದಾರೆ ಆಟೋ ಶಂಕರ್

ವೃತ್ತಿಯಲ್ಲಿ ಇವರು ಆಟೋ ಡ್ರೈವರ್. ಇವರ ಹೆಸರು ಶಂಕರ್ ಅಂತ. ಎಲ್ಲರೂ ಇವರನ್ನ ಆಟೋ ಶಂಕರ್ ಅಂತ ಕರೀತಾರೆ. ಇವರಿಗೆ ಕನ್ನಡ ಹಾಗೂ ರಾಜಣ್ಣ ಅಂದ್ರೆ ತುಂಬಾ ಇಷ್ಟ. ಯಾಕಂದ್ರೆ ರಾಜಣ್ಣ ಕನ್ನಡಕ್ಕೆ ಕೊಡುವ ಬೆಲೆ, ಇವರ ಮನಸ್ಸನ್ನ ಸೂರೆಗೊಳ್ಳುವಂತೆ ಮಾಡಿದೆ. ಹಾಗಾಗಿ ಕನ್ನಡ ಭಾಷೆಗೆ ಬಹಳಷ್ಟು ಗೌರವ ನೀಡುತ್ತಾರೆ. ಇವರ ಬಳಿ, ಬೇರೆಯವರು ಬೇರೆ ಭಾಷೆಯಲ್ಲಿ ಮಾತನಾಡಿದರೂ ಸಹ, ಇವರು ಅವರೊಂದಿಗೆ ಕನ್ನಡದಲ್ಲೇ ಮಾತನಾಡುತ್ತಾರೆ. ಇವರಿಗೆ ಸುಮಾರು ಭಾಷೆಗಳು ಗೊತ್ತು. ಆದರೂ ಇವರು ಕನ್ನಡ ಬಿಟ್ಟು ಬೇರೆ ಯಾವ ಭಾಷೆಯನ್ನು ಬಳಸುವುದಿಲ್ಲ. ಅದು ಮನೆಯಲ್ಲಾದರೂ ಸರಿ, ವ್ಯವಹಾರದಲ್ಲಾದರೂ ಸರಿ. ಇವರದ್ದು ಒಂದೇ ಭಾಷೆ. ಅದು ಕನ್ನಡ

ಪ್ಯಾಸೆಂಜರ್ ಗೆ ಕನ್ನಡ ಕಲಿಸಿದ ಕನ್ನಡಿಗ

ಪ್ರತಿದಿನ ಶಂಕರ್ ಆಟೋಗೆ ಮುಂಬೈ ಮೂಲದ ಗೌರಿ ಎನ್ನುವ ಪ್ಯಾಸೆಂಜರ್ ಬರುತ್ತಿದ್ದರು. ಪ್ರತಿದಿನ ಇವರು ಕೆಲಸಕ್ಕೆ ಹೋಗುವಾಗ ಹಾಗೂ ಬರುವಾಗ ಶಂಕರ್, ಆಟೋವನ್ನೇ ಬಳಸುತ್ತಿದ್ದರು. ಗೌರಿ ಅವರಿಗೆ ಹಿಂದಿ ಬಿಟ್ಟರೆ, ಬೇರೆ ಭಾಷೆ ಬರುತ್ತಿರಲಿಲ್ಲ. ಹಾಗಾಗಿ ಶಂಕರ್ ಜೊತೆ ಯಾವಾಗಲೂ ಹಿಂದಿಯಲ್ಲೇ ಮಾತನಾಡುತ್ತಿದ್ದರು. ಆದರೆ ಗೌರಿ, ಶಂಕರ್ ಅವರನ್ನ ಎಷ್ಟೇ ಹಿಂದಿ ಭಾಷೆಯಲ್ಲಿ ಮಾತನಾಡಿಸಿದರೂ, ಶಂಕರ್ ಮಾತ್ರ ಕನ್ನಡದಲ್ಲೇ ಉತ್ತರಿಸುತ್ತಿದ್ದರು. ಗೌರಿ ಅವರು, ಶಂಕರ್ ಗೆ ಹಿಂದಿ ಕಲಿಸೋಕೆ ಅಂತ ಪ್ರಯತ್ನಿಸುತ್ತಿದ್ದರು. ಆದ್ರೆ ಶಂಕರ್ ಹಿಂದಿ ಕಲಿಯದೇ, ಗೌರಿಯವರಿಗೆ ಕನ್ನಡ ಕಲಿಸಲು ಶುರು ಮಾಡಿದರು.

 

 

ಕನ್ನಡ ಕಲಿಸಲು, ಅಣ್ಣಾವ್ರ ಸಿನಿಮಾಗಳ ಬಗ್ಗೆ ಹೇಳ್ತಿದ್ದ ಶಂಕರ್

ಗೌರಿ ಅವರಿಗೆ ಕನ್ನಡ ಕಲಿಸಬೇಕೆಂದುಕೊಂಡ ಶಂಕರ್ ಅವರು ಉಪಯೋಗಿಸಿದ ಮಾರ್ಗ, ರಾಜಣ್ಣನವರ ಸಿನಿಮಾಗಳ ಬಗ್ಗೆ. ಹೌದು. ಶಂಕರ್ ಅವರು, ಗೌರಿಯವರ ಬಳಿ ಯಾವಾಗಲೂ ಕನ್ನಡದ ಬಗ್ಗೆ ಹಾಗೂ ರಾಜಣ್ಣನ ಬಗ್ಗೆ ಹೇಳೋಕೆ ಶುರು ಮಾಡ್ತಾರೆ. ನಮ್ಮ ರಾಜಣ್ಣನ ಸಿನಿಮಾಗಳನ್ನ ನೋಡ್ತಿದ್ರೆ, ಎಂಥವರಿಗೂ ಮೈ ರೋಮಾಂಚವಾಗುತ್ತೆ. ಯಾಕಂದ್ರೆ ಅವರು ಕನ್ನಡ ಭಾಷೆ ಬಗ್ಗೆ, ಅವರ ಸಿನಿಮಾಗಳಲ್ಲಿ ಅಮೋಘವಾಗಿ ತಿಳಿಸಿದ್ದಾರೆ ಅಂತ ಹೇಳೋಕೆ ಶುರು ಮಾಡ್ತಾರೆ. ಆಗ ಗೌರಿಯವರಿಗೆ ಅಣ್ಣಾವ್ರ ಸಿನಿಮಾ ನೋಡಬೇಕು ಅನ್ನೋ ಆಸೆಯಾಗುತ್ತೆ. ಅದರಂತೆ, ಒಂದೊಂದೇ ಸಿನಿಮಾ ನೋಡೋಕೆ ಮುಂದಾಗ್ತಾರೆ. ಆಗ ಶುರು ಮಾಡಿದವರು, ಈಗ ವಾರಕ್ಕೆ 3 ಸಿನಿಮಾಗಳನ್ನಾದ್ರೂ ನೋಡ್ತಾರೆ. ಜೊತೆಗೆ ಈಗ ಕನ್ನಡ ಮಾತಾಡೋದ್ರಲ್ಲಿ, ಶಂಕರ್ ಅವರನ್ನ ಮೀರಿಸುವಷ್ಟು ಚೆನ್ನಾಗಿ ಕಲಿತಿದ್ದಾರೆ.

ಶಂಕರ್ ಅವರ ಈ ಕೆಲಸಕ್ಕೆ ನಿಜಕ್ಕೂ ಮೆಚ್ಚುಗೆ ನೀಡಲೇ ಬೇಕು. ಯಾಕಂದ್ರೆ, ಒಂದು ಅಕ್ಷರವೂ ಕನ್ನಡ ಬಾರದ ಮಹಿಳೆಗೆ, ಸರಾಗವಾಗಿ ಮಾತನಾಡುವಂತೆ ಮಾಡಿದ್ದಾರೆ ಅಂದ್ರೆ, ನಿಜಕ್ಕೂ ಎಂಥವರಿಗೂ ಆಶ್ಚರ್ಯವಾಗುತ್ತೆ. ಇನ್ನೂ ಶಂಕರ್ ಅವರು ಮಾತ್ರ ಅಲ್ಲ, ಅವರ ಮನೆಯವರು ಸಹ ಎಲ್ಲರೂ ಸಂಪೂರ್ಣವಾಗಿ ಕನ್ನಡದಲ್ಲೇ ಮಾತನಾಡುತ್ತಾರೆ. ಇದನ್ನೆಲ್ಲಾ ನೋಡಿದ್ರೆ ಗೊತ್ತಾಗುತ್ತೆ, ಶಂಕರ್ ಅವರಿಗೆ ಕನ್ನಡದ ಮೇಲಿರುವ ಅಭಿಮಾನ ಎಂಥದ್ದು ಅಂತ.

LEAVE A REPLY

Please enter your comment!
Please enter your name here