ಬಿಸಿಲಿನ ಬೇಗೆಯಲ್ಲಿ ತಂಪಾದ ವಾತಾವರಣ ಶ್ರುಷ್ಟಿಸಿದ ಆಟೋ ಚಾಲಕ

0
819
auto driver

ಹಸಿರೇ ಉಸಿರು ಅಂತ ಒಂದು ಮಾತಿದೆ. ಕಾಡನ್ನ  ಸಂರಕ್ಷಿಸದೇ ಹೋದರೆ ಮುಂದಿನ ದಿನಗಳಲ್ಲಿ ಮನುಷ್ಯ ತೊಂದರೆ ಅನುಭವಿಸೋದು ಅಂತು ತಪ್ಪಲ್ಲ. ನಾವು ಪ್ರಕೃತಿಯನ್ನು ಕಾಪಾಡಿದರೆ, ಪ್ರಕೃತಿ ನಮ್ಮನ್ನು ಕಾಪಾಡುತ್ತದೆ. ಬೇಸಿಗೆಯ ಬೇಗೆಗೆ ಜನತೆ ಸುಸ್ತಾಗಿ ಹೋಗಿದ್ದಾರೆ. ಎಲ್ಲಡೆ ತಾಪಮಾನ ಹೆಚ್ಚುತ್ತಿರುವದರಿಂದ ಜನರು ರಸ್ತೆಯಲ್ಲಿ ಓಡಾಡಲಾರದಂತಹ ಪರಿಸ್ಥಿತಿ ಎದುರಾಗಿದೆ. ಸುಡು ಬಿಸಿಲಿನಲ್ಲಿ ಸುಮ್ನೆ ಹೋಗಿ ದಣಿಯುವದಕ್ಕಿಂತ ಮನೆಯಲ್ಲೇ ಇರೋದೆ ವಾಸಿ ಎಂಬುವುದು ಜನರ ಅಭಿಪ್ರಾಯ ಆಗಿದೆ. ಕುಡಿಯುವ ನೀರಿಗಾಗಿ ಕೂಡ ಜನರು ಪರದಾಡುತ್ತಿದ್ದಾರೆ. ಗಿಡ-ಮರಗಳನ್ನು ನಾಶ ಮಾಡಿ ಕಾಮಗಾರಿ ಮಾಡಿದರೆ, ಇಂತಹ ತೊಂದರೆಗಳನ್ನು ಮನುಷ್ಯ ಅನುಭವಿಸಬೇಕಾಗುತ್ತದೆ.

ಹೆಚ್ಚಿನ ಪ್ರಮಾಣದಲ್ಲಿ ಇದು ಪ್ರಯಾಣಿಕರನ್ನು ಆಕರ್ಷಿಸುತ್ತಿದೆ

ಕೋಲ್ಕತ್ತಾದಲ್ಲಿ ಒಬ್ಬ ವ್ಯಕ್ತಿ ಹಸಿರೇ ಉಸಿರು ಅಂತ ಜೀವನವನ್ನು ಸಾಗಿಸುತ್ತಿದ್ದಾನೆ. ಜನರಿಗೆ ಹಸಿರಿನ ಬಗ್ಗೆ ಜಾಗ್ರತಿ ಮೂಡಿಸುವ ಕಾರ್ಯ ಕೂಡ ಇದಾಗಿದೆ ಅಂತಾನೆ ಹೇಳಬಹುದು. ಕೋಲ್ಕತ್ತಾದಲ್ಲಿ ನೆಲೆಸಿರುವ ಒಬ್ಬ ಆಟೋ ಚಾಲಕ ಬಿಜಯ್ ಪಾಲ್,  ಇವನು ಪ್ರತಿ ನಿತ್ಯ ಆಟೋವನ್ನು ಚಲಿಸುತ್ತಾ ಜೀವನವನ್ನು ನಡೆಸುತ್ತಾನೆ. ಇಲ್ಲಿ ಅಚ್ಚರಿಯ ಸಂಗತಿ ಏನೆಂದರೆ ತನ್ನ ಆಟೋ ಮೆಲ್ಭಾಗದಲ್ಲಿ ಹಸಿರು ಹುಲ್ಲು ಮತ್ತು ಗಿಡಗಳ ಸಸಿಗಳನ್ನು ನೆಟ್ಟು ಅಲ್ಲೊಂದು ಸಣ್ಣ ಗಾರ್ಡನ್ ಮಾಡಿಕೊಂಡಿದ್ದಾನೆ. ಹೆಚ್ಚಿನ ಪ್ರಮಾಣದಲ್ಲಿ ಇದು ಪ್ರಯಾಣಿಕರನ್ನು ಆಕರ್ಷಿಸುತ್ತಿದೆ. ಬಹಳ ಕಾಳಜಿ ಇಂದ ವಿಜಯ್ ಪಾಲ್ ಅವರು ತಾವು ಬೆಳೆಸಿದ ಗಾರ್ಡನ್ ಅನ್ನು ನೋಡಿಕೊಳ್ಳುತ್ತಿದ್ದಾರೆ. ಗಿಡಗಳನ್ನು ಪೋಷಣೆ ಮಾಡುತ್ತಾ ಇತರರಿಗೆ ಮಾದರಿ ಆಗಿದ್ದಾರೆ.

auto driver

ಈ ವಾಹನದಲ್ಲಿ ಕೂತರೆ ತಂಪಾದ ಮರದ ಕೆಳಗೆ ಕೂತಂತೆ ಭಾಸವಾಗುತ್ತದೆ

ಬಿಸಿಲಿನಿಂದ ಬೇಸತ್ತ ಜನರು ಈ ಆಟೋದಲ್ಲಿ ಪ್ರಯಾಣಿಸುವುದರ ಮೂಲಕ ಒಂದು ವಿಶಿಷ್ಠವಾದ ಅನುಭವವನ್ನು ಪಡೆದುಕೊಳ್ಳಬಹುದು. ಈ ವಾಹನದಲ್ಲಿ ಕೂತರೆ ತಂಪಾದ ಮರದ ಕೆಳಗೆ ಕೂತಂತೆ ಭಾಸವಾಗುತ್ತದೆ. ಇದೇ ಮೊದಲನೇ ಬಾರಿಗೆ ಒಬ್ಬ ಆಟೋ ಚಾಲಕ ಡಿಫರೆಂಟ್ ಆಗಿ ಯೋಚಿಸಿ ಹಸಿರಿನ ಕಂಪನ್ನು ಜನರಿಗೆ ಹರಡುವಂತೆ ಮಾಡುತ್ತಿದ್ದಾರೆ. ಇವರು ಮಾಡಿದ ಕೆಲಸವನ್ನು ನೋಡಿಯಾದರೂ ಜನರು ಎಚ್ಚೆತ್ತಿಕೊಳ್ಳಬೇಕು. ತಂತ್ರಜ್ಞ್ಯಾನ ಯುಗದಲ್ಲಿ ಯಾರು ಸಹ ಪರಿಸರದ ಒಳಿತಿಗಾಗಿ ಶ್ರಮಿಸುವುದಿಲ್ಲ. ತಾವಾಯ್ತು,  ತಮ್ಮ ಕೆಲಸ ಆಯ್ತು ಅಂತ ಸುಮ್ಮನೆ ತಮ್ಮ ಪಾಡಿಗೆ ತಾವು ಇದ್ದು ಬಿಡುತ್ತಾರೆ. ಜಗತ್ತಿನಲ್ಲಿ ಜೀವಿಸುವ ಪ್ರತಿ ಒಂದು ಜೀವವು ನಮ್ಮಂತೆಯೇ ಎಂದು ಅಂದುಕೊಳ್ಳಬೇಕು. ನಮ್ಮ ಜೀವ ಬೇರೆ ಅಲ್ಲ ಅವುಗಳ ಜೀವ ಬೇರೆ ಅಲ್ಲ. ಎಲ್ಲಾ ಒಂದೇ ಎಂದು ಮನುಷ್ಯ ತೀವ್ರವಾಗಿ ಯೋಚಿಸಬೇಕು.

bijay paal

LEAVE A REPLY

Please enter your comment!
Please enter your name here