ಮಕ್ಕಳಿಗಾಗಿ ನಿಜವಾದ ಆಟೋ ರೀತಿಯಲ್ಲೇ ಆಟಿಕೆ ತಯಾರಿಸಿಕೊಟ್ಟ ಅಪ್ಪ

0
1197
auto arun

ಮಕ್ಕಳು ಅಂದ್ರೆ ಯಾರಿಗೆ ಇಷ್ಟ ಇರಲ್ಲ ಹೇಳಿ. ಮಕ್ಕಳು ಅಂದ್ರೆ ಪ್ರತಿಯೊಬ್ಬರಿಗೂ ಇಷ್ಟ. ಅದರಲ್ಲೂ, ತಂದೆ ತಾಯಿಗಂತೂ ಮಕ್ಕಳೇ ಜೀವ ಹಾಗೂ ಅವರೇ ಅವರ ಜೀವನ. ತಂದೆ ತಾಯಿ ಮಕ್ಕಳಿಗೋಸ್ಕರ ಏನು ಬೇಕಾದ್ರು ಮಾಡಲು ಸಿದ್ಧ. ಯಾಕಂದ್ರೆ ಅವರಿಗಾಗಿ ತಮ್ಮ ಜೀವವನ್ನೇ ಮುಡಿಪಾಗಿಟ್ಟಿರುತ್ತಾರೆ. ಹಾಗಾಗಿ ಅವರಿಗೋಸ್ಕರ ಎಂಥಹ ಕಷ್ಟದ ಕೆಲಸವನ್ನು ಬೇಕಾದರೂ ಮಾಡುತ್ತಾರೆ. ಜೊತೆಗೆ ಅವರಿಗಿಷ್ಟವಾಗುವುದನ್ನು ಕೊಡಿಸಲು ಪ್ರಯತ್ನಿಸುತ್ತಾರೆ. ಯಾಕಂದ್ರೆ ತಂದೆ ತಾಯಿಯ ನಿರೀಕ್ಷೆ ಮೀರಿ ಮಕ್ಕಳು ಕೇಳಿದಾಗ, ಅದನ್ನು ಅವರಿಗೆ ಕೊಡಿಸಲು ಕಷ್ಟ ಆಗುತ್ತದೆ. ಆಗಂದ ಮಾತ್ರಕ್ಕೆ ಅವರು ಕೊಡಿಸದೆ ಇರುವುದಿಲ್ಲ. ಬದಲಿಗೆ ಅದರ ಸಮನಾಗಿ ಇರುವಂತಹ ಬೇರೆ ಏನನ್ನಾದರೂ ಕೊಡಿಸುತ್ತಾರೆ. ಅದೇ ರೀತಿ ಇಲ್ಲಿ ಇಬ್ಬರು ಮಕ್ಕಳು ತಮ್ಮ ತಂದೆಗೆ ಆಟ ಆಡಲು ಆಟಿಕೆ ಕೇಳಿದ್ದಾರೆ. ಮಕ್ಕಳ ಆಸೆಯೇ ಮುಖ್ಯ ಎಂದು ತಿಳಿದ ಇವರು, ತಮ್ಮ ಮಕ್ಕಳಿಗಾಗಿ ಪುಟ್ಟ ಆಟೋ ಮಾಡಿಕೊಟ್ಟಿದ್ದಾರೆ.

ನಿಜವಾದ ಆಟೋ ರೀತಿಯಲ್ಲೇ ಆಟಿಕೆ ತಯಾರಿಸಿಕೊಟ್ಟ ತಂದೆ

ಇವರ ಹೆಸರು ಅರುಣ್ ಕುಮಾರ್ ಪುರುಷೋತ್ತಮ್. ಇವರು ಮೂಲತಃ ಕೇರಳದವರಾಗಿದ್ದು, ಹೆಲ್ತ್ ಸರ್ವಿಸ್ ನಲ್ಲಿ ಕೆಲಸ ಮಾಡುತ್ತಿದ್ದಾರೆ. ಇವರಿಗೆ ಇಬ್ಬರು ಮುದ್ದಾದ ಮಕ್ಕಳಿದ್ದಾರೆ. ಇವರು ಮಕ್ಕಳು ಚಿಕ್ಕವರಿರುವುದರಿಂದ, ತಮ್ಮ ತಂದೆಗೆ ಆಟ ಆಡಲು ಆಟಿಕೆ ಕೇಳಿದ್ದಾರೆ. ಮಕ್ಕಳು ಆಟಿಕೆ ಕೇಳಿದ ಕೂಡಲೇ, ಪುರುಷೋತ್ತಮ್ ಅಂಗಡಿಗೆ ಹೋಗಿ, ಆಟಿಕೆ ತಂದು ಕೊಟ್ಟಿಲ್ಲ. ಬದಲಿಗೆ ತಾವೇ ಮನೆಯಲ್ಲಿ ಅದನ್ನು ರೆಡಿ ಮಾಡಿದ್ದಾರೆ. ಹೌದು. ಹಲವು ತಿಂಗಳುಗಳ ಕಾಲ ಶ್ರಮ ವಹಿಸಿ, ತಮ್ಮ ಮಕ್ಕಳಿಗಾಗಿ ಪುಟ್ಟ ಆಟೋವೊಂದನ್ನು ತಯಾರಿಸಿದ್ದಾರೆ. ಇದೊಂದು ಆಟಿಕೆಯ ಅಟೋವಾಗಿದ್ದರು, ನೋಡುಗರಿಗೆ ಮಾತ್ರ, ನಿಜವಾದ ಆಟೋ ರೀತಿಯಲ್ಲೇ ಇದೆ.

ಆಟೋಗೆ ಸುಂದರಿ ಎಂದು ನಾಮಕರಣ ಮಾಡಿದ ಅರುಣ್

ಇನ್ನೂ ಮಕ್ಕಳಿಗಾಗಿ ನಿಜವಾದ ಆಟೋ ರೀತಿಯಲ್ಲೇ ಆಟಿಕೆ ತಯಾರಿಸಿಕೊಟ್ಟ ಅರುಣ್, ಆ ಆಟೋಗೆ ಸುಂದರಿ ಆಟೋ ಎಂದು ನಾಮಕರಣ ಮಾಡಿದ್ದಾರೆ. ಹೌದು. ತಮ್ಮ ಮಕ್ಕಳು ಸಂತೋಷದಿಂದ ಆಟ ಆಡುವುದಕ್ಕೆ, ಹಾಗೂ ಆಟೋದಲ್ಲಿ ಕುಳಿತು ಓಡಾಡುವುದಕ್ಕಾಗಿ ಅರುಣ್ ಈ ಆಟೋ ತಯಾರಿಸಿದ್ದು, ಈ ಆಟೋಗೆ ಸುಂದರಿ ಎಂದು ನಾಮಕರಣ ಮಾಡಿದ್ದಾರೆ. ಇನ್ನೂ ಮಕ್ಕಳು ಈ ಆಟೋ ಏರಿ ಸಂತಸದಿಂದ ಆಟ ಆಡುತ್ತಿದ್ದಾರೆ. ಮಕ್ಕಳು ಆಟಿಕೆ ಕೇಳಿದ ಕೂಡಲೇ ಎಲ್ಲರೂ ಅಂಗಡಿಗೆ ಹೋಗಿ ಆಟಿಕೆ ತಂದು ಕೊಡುತ್ತಾರೆ. ಆದರೆ ಅರುಣ್ ತಮ್ಮ ಮಕ್ಕಳು ಆಟಿಕೆ ಕೇಳಿದ ಕೂಡಲೇ, ಬಹಳಷ್ಟು ತಿಂಗಳು ಶ್ರಮ ವಹಿಸಿ, ನಿಜವಾದ ಆಟೋ ರೀತಿಯಲ್ಲೇ ಆಟಿಕೆಯನ್ನು ತಯಾರಿಸಿ ಕೊಟ್ಟು, ಮಕ್ಕಳ ನೆಚ್ಚಿನ ಅಪ್ಪ ಎನಿಸಿಕೊಂಡಿದ್ದಾರೆ.

ನಿಜಕ್ಕೂ ಅರುಣ್ ಅವರ ಬುದ್ಧಿವಂತಿಕೆಗೆ ಮೆಚ್ಚಲೇ ಬೇಕು. ಯಾಕಂದ್ರೆ ಈಗಿನ ಕಾಲದಲ್ಲಿ ಮಕ್ಕಳಿಗೆ ಅಂಗಡಿಯಿಂದ ಆಟಿಕೆಗಳನ್ನು ತಂದುಕೊಡುವುದು, ಅಥವಾ ಹೊರಗಡೆ ಆಟ ಆಡಲು ಕರೆದುಕೊಂಡು ಹೋಗ್ತಾರೆ. ಆದ್ರೆ ಅರುಣ್ ತಮ್ಮ ಮಕ್ಕಳಿಗೆ ನಿಜವಾದ ಆಟೋ ರೀತಿಯಲ್ಲೇ ಆಟಿಕೆ ತಯಾರಿಸಿ ಕೊಟ್ಟಿರೋದಿಕ್ಕೆ ಮೆಚ್ಚುಗೆ ವ್ಯಕ್ತಪಡಿಸಲೇ ಬೇಕು.

LEAVE A REPLY

Please enter your comment!
Please enter your name here