ಸಾಹಸ ಸಿಂಹನಿಗೆ ಪೂರಕವಾದ ಖಡ್ಗ ಈಗ ಯಾರ ಹತ್ತಿರವಿದೆ? ಇಲ್ಲಿದೆ ಮಾಹಿತಿ

0
609

ಕನ್ನಡ ಚಿತ್ರರಂಗದಲ್ಲಿ ಸಾಹಸ ಸಿಂಹ ಎಂದೆ ಪ್ರಸಿದ್ದರಾದವರು ಡಾಕ್ಟರ್ ವಿಷ್ಣುವರ್ಧನ್. ವಿಷ್ಣು ಮೂಲತಃ ಮೈಸೂರಿನವರಾಗಿದ್ದು, ಇವರ ಮೊದಲ ಹೆಸರು ಸಂಪತ್ ಕುಮಾರ್. ಖ್ಯಾತ ನಿರ್ದೆಶಕರಾದ ಪುಟ್ಟಣ್ಣ ಕಣಗಲ್ ನಿರ್ದೆಶನದಲ್ಲಿ ಮೂಡಿ ಬಂದ ನಾಗರಹಾವು ಚಿತ್ರದಲ್ಲಿ ಇವರು ನಟನಾಗಿ ಬಣ್ಣ ಹಚ್ಚುತ್ತಾರೆ. ನಾಗರಹಾವು ಚಿತ್ರದ ಮೂಲಕ ವಿಷ್ಣುವರ್ಧನ್ ಅವರು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಾರೆ. ಅಭಿನಯಿಸಿದ ಮೊದಲ ಚಿತ್ರಕ್ಕೆ ಯಶಸ್ಸು ಇವರ ಬೆನ್ನೇರಿದ್ದು, ನಂತರ ಸಾಲು ಸಾಲು ಚಿತ್ರಗಳಲ್ಲಿ ಅಭಿನಯಿಸುವ ಅವಕಾಶಗಳು ಇವರಿಗೆ ಸಿಗುತ್ತದೆ. ಚಂದನವನಕ್ಕೆ ಬಂದ ಮೇಲೆ ಇವರ ಹೆಸರು ಸಂಪತ್ ಕುಮಾರ್ ಇಂದ ವಿಷ್ಣುವರ್ಧನ್ ಗೆ ಬದಲಾಗುತ್ತದೆ.

ವಿಷ್ಣು ಧರಿಸುವ ಖಡಗ ಬಹಳ ಜನಪ್ರಿಯವಾಗಿತ್ತು

ವಿಷ್ಣುವರ್ಧನ್ ಅವರು ನಟಿಸಿರುವ ಬಹುತೇಕ ಎಲ್ಲಾ ಚಿತ್ರಗಳು ಹಿಟ್ ಆಗಿದ್ದು, ಕೆಲವು ಚಿತ್ರಗಳು ಫ್ಲಾಪ್ ಆಗುತ್ತವೆ. ಇವರಿಗೆ ಸಾಹಸ ಸಿಂಹ ವಿಷ್ಣುವರ್ಧನ್ ಎನ್ನುವ ಬಿರುದನ್ನು ನೀಡಿದ್ದರು. ಅಭಿಮಾನಿಗಳು ಇವರನ್ನು ವಿಷ್ಣು ದಾದಾ, ಸಾಹಸ ಸಿಂಹ ಎಂದೆ ಕರೆಯುತ್ತಿದ್ದರು. ಗಂಧದ ಗುಡಿ ಚಿತ್ರದಲ್ಲಿ ಡಾಕ್ಟರ್ ರಾಜ್ ಕುಮಾರ್ ಅವರ ಜೊತೆ ಪರದೆ ಹಂಚಿಕೊಂಡಿದ್ದು, ಖಳ ನಟನ ಪಾತ್ರದಲ್ಲಿ ವಿಷ್ಣು ಕಾಣಿಸಿಕೊಂಡಿದ್ದರು. ದಾದಾ ಎಡಗೈ ನಲ್ಲಿ ಬೆಳ್ಳಿಯ ಖಡಗವನ್ನು ಧರಿಸಿದ್ದು, ಖಡಗವನ್ನು ತಿರುಗಿಸುವ ಶೈಲಿಗೆ ಅಭಿಮಾನಿಗಳು ಮಾರು ಹೋಗಿದ್ದರು. ಚಿತ್ರದಲ್ಲು ಸಹ ವಿಷ್ಣು ಧರಿಸುವ ಖಡಗ ಬಹಳ ಜನಪ್ರಿಯವಾಗಿತ್ತು. ಈ ಖಡಗ ವಿಷ್ಣು ಗೆ ಸಿಕ್ಕಿದಾದ್ರು ಎಲ್ಲಿ?

ಸಿಖ್ ಗುರುವಿನಿಂದ ವಿಷ್ಣುಗೆ ಖಡಗ ಸಿಕ್ಕಿತ್ತು

ಸಹಜವಾಗಿ ವಿಷ್ಣು ಯಾವ ವಸ್ತುಗು ಹೆಚ್ಚಾಗಿ ಮಹತ್ವ ನೀಡುತ್ತಿರಲಿಲ್ಲ, ಆದರೆ ಖಡಗಗೆ ಮಾತ್ರ ಬಹಳ ಪ್ರಾಮುಖ್ಯತೆ ನೀಡುತ್ತಿದ್ದರು. ಗುರುದ್ವಾರದಲ್ಲಿ ಸಿಖ್ ಗುರು ಒಬ್ಬರು ಈ ಖಡಗವನ್ನು ವಿಷ್ಣುವರ್ಧನ್ ಅವರಿಗೆ ತೊಡಸಿದ್ದರು ಎಂದು ಹೇಳಲಾಗುತ್ತಿದೆ. ಅಂದಿನಿಂದ ವಿಷ್ಣು ಖಡಗವನ್ನು ತೆಗೆದೆ ಇರಲಿಲ್ಲ. ದಾದಾ ನಮ್ಮನ್ನು ಆಗಲಿ ಇಷ್ಟು ವರ್ಷವಾದರು, ಇಂದಿಗು ಅಭಿಮಾನಿಗಳು ಸಾಹಸ ಸಿಂಹನನ್ನು ಆರಾಧ ದೈವ್ಯರೆಂದೆ ಭಾವಿಸಿದ್ದಾರೆ. ಈ ದಿನ ವಿಷ್ಣುವರ್ಧನ್ ಅವರು ನಮ್ಮ ಜೊತೆ ಇಲ್ಲವಾದರು ಅವರು ನಟಿಸಿರುವ ಸಿನಿಮಾಗಳು ನಮ್ಮ ಮನದಲ್ಲಿ ಶಾಶ್ವವತವಾಗಿ ನೆಲೆಸಿದೆ.

ಅನೇಕ ವ್ಯಕ್ತಿಗಳ ಹೆಸರು ಕೇಳಿ ಬರುತ್ತಿತ್ತು

ಅಪ್ಪಾಜಿ ಇಹಲೋಕವನ್ನು ತ್ಯಜಿಸುವವರೆಗು ಖಡಗ ಅವರ ಕೈ ನಲ್ಲಿ ಕಂಗೊಳಿಸುತ್ತಿತ್ತು. ದಾದಾ ಮರಣ ಹೊಂದಿದ ನಂತರ ಖಡಗ ಎಲ್ಲಿ ಮಾಯವಾಗಿ ಹೋಯಿತು ಎನ್ನುವ ಪ್ರಶ್ನೆಗಳು ಅನೇಕರಿಗೆ ಕಾಡುತ್ತಿತ್ತು. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್, ಚಾಲೆಂಜಿಂಗ್ ಸ್ಟಾರ್ ದರ್ಶನ್, ವಿಷ್ಣುವರ್ಧನ್ ಅವರ ಅಳಿಯ ಅನಿರುದ್ಧ ಇನ್ನು ಅನೇಕ ಹೆಸರು ಕೇಳಿ ಬರುತ್ತಿತ್ತು. ಖಡಗ ಯಾವ ವ್ಯಕ್ತಿಯ ಕೈಗೆ ಸೇರಿರಬಹುದು ಎನ್ನುವ ಸಂಶಯಗಳು ಎದ್ದಿದ್ದವು. ಹೀಗೆ ಒಂದೊಂದು ದಿನ ಒಬ್ಬೊಬ್ಬರ ಹೆಸರು ಕೇಳಿ ಬರುತ್ತಿತ್ತು. ನಂತರದ ದಿನಗಳಲ್ಲಿ ಖಡಗ ಎಲ್ಲಿದೆ ಎನ್ನುವುದರ ಕುರಿತು ಸ್ಪಷ್ಟತೆ ಸಿಕ್ಕಿದೆ.

ಸಾಹಸ ಸಿಂಹನ ಖಡಗ ಭದ್ರವಾಗಿ ಮನೆಯಲ್ಲೆ ಇದೆ

ಸಾಹಸ ಸಿಂಹನ ಖಡಗ ಅವರ ಮನೆಯಲ್ಲೆ ಜೋಪಾನವಾಗಿದೆ ಬೇರೆ ಯಾವ ವ್ಯಕ್ತಿಯ ಕೈ ಗೆ ಸೇರಿಲ್ಲ. ಖಡಗ ತಮ್ಮ ವಶಕ್ಕೆ ಪಡೆದುಕೊಳ್ಳುವುದಕ್ಕೆ ಹಲಾವಾರು ಪ್ರಯತ್ನಗಳು ನಡೆದಿದ್ದು, ವಿಷ್ಣು ಅವರ ಮಗಳು ಮಾತ್ರ ತಮ್ಮ ತಂದೆಯ ನೆನಪಿಗಾಗಿ ಬೆಳ್ಳಿ ಖಡಗವನ್ನು ತಮ್ಮ ಮನೆಯಲ್ಲೆ ಇಟ್ಟುಕೊಂಡಿದ್ದಾರೆ.

ಕೇವಲ ಖಡಗ ಮಾತ್ರವಲ್ಲ, ಇನ್ನು ವಿಷ್ಣುವರ್ಧನ್ ಅವರು ಬಳಸುವ ಅನೇಕ ವಸ್ತುಗಳನ್ನ ಕಾಪಾಡಿಕೊಂಡು ಬರುತ್ತಿದ್ದಾರೆ. ಅಭಿಮಾನಿಗಳಿಂದ ವಿಷ್ಣು ದೂರವಾಗಿದ್ದರು, ಅವರ ಖಡಗ ಮಾತ್ರ ಯಾರು ಸಹ ವಶ ಪಡಿಸಿಕೊಂಡಿಲ್ಲ. ಚಿತ್ರದಲ್ಲಿ ಸಿಂಹದಂತೆ ಹೆಜ್ಜೆಗಳನ್ನು ಇಡುತ್ತ ಎಡಗೈನಲ್ಲಿ ಖಡಗವನ್ನು ತಿರಿಗಿಸುತ್ತ, ಸಾಹಸ ಸಿಂಹನ ಘರ್ಜನೆಯನ್ನು ನೆನಪಿಸುವ ಅಮೂಲ್ಯವಾದ ವಸ್ತು ಭದ್ರವಾಗಿದೆ. ದಾದಾನ ನೆನಪಿಗಾಗಿ ಮಗಳು ಖಡಗವನ್ನು ಸುರಕ್ಷಿತವಾಗಿ ಕಾಪಾಡಿಕೊಂಡು ಬಂದಿದ್ದಾರೆ.

LEAVE A REPLY

Please enter your comment!
Please enter your name here