ಜೈ ಶ್ರೀರಾಮ್ ಹಾಗೂ ವಂದೇ ಮಾತರಂ ಘೋಷಣೆ ಕೂಗುವುದಿಲ್ಲ ಎಂದ ಅಸಾದುದ್ದೀನ್ ಓವೈಸಿ

0
917
asaduddin

ನಮ್ಮ ಕನ್ನಡಿಗರು ಕೆಲವು ಪದಗಳಿಗೆ ಅಥವಾ ಕೆಲವು ಅಂಶಗಳಿಗೆ ಬಹಳ ಬೆಲೆ ಕೊಡುತ್ತಾರೆ. ಅವುಗಳಿಗೋಸ್ಕರ ಏನು ಬೇಕಾದರೂ ಮಾಡುತ್ತಾರೆ. ಹೌದು. ರಾಷ್ಟ್ರ ಹಾಗೂ ರಾಷ್ಟ್ರಕ್ಕೆ ಗೌರವ ತರುವಂತಹ ವಿಷಯಗಳಿಗೆ ಏನೇ ತೊಂದರೆ ಆದರೂ ಸಹಿಸುವುದಿಲ್ಲ. ಅದೇ ರೀತಿ ನಮ್ಮ ನಾಡಗೀತೆ, ರಾಷ್ಟ್ರಗೀತೆ, ಹಾಗೂ ವಂದೇ ಮಾತರಂ ಗೆ ನಮ್ಮಲ್ಲಿ ಬಹಳಷ್ಟು ಗೌರವ ನೀಡುತ್ತಾರೆ. ಅದರ ವಿಚಾರಕ್ಕೆ ಬಂದರೆ, ಕೆಂಡಾಮಂಡಲರಾಗುತ್ತಾರೆ. ಆದ್ರೆ ವಂದೇ ಮಾತರಂ ಎನ್ನುವ ಸಾಲನ್ನು ಹಾಗೂ ಜೈ ಶ್ರೀರಾಮ್ ಎನ್ನುವ ಪದವನ್ನು ನಾನು ಹೇಳುವುದಿಲ್ಲ ಎಂದು ಒಬ್ಬರು ಹೇಳಿದ್ದಾರೆ. ಹೌದು. ನಾನು ಯಾವುದೇ ಕಾರಣಕ್ಕೂ ವಂದೇ ಮಾತರಂ ಹಾಗೂ ಜೈ ಶ್ರೀರಾಮ್ ಎನ್ನುವ ಪದವನ್ನು ಹೇಳುವುದಿಲ್ಲ ಎಂದು ಹೈದರಾಬಾದ್ ಸಂಸದ ಅಸಾದುದ್ದೀನ್ ಓವೈಸಿ ಹೇಳಿದ್ದಾರೆ.

ಜೈಶ್ರೀರಾಮ್ ಹಾಗೂ ವಂದೇ ಮಾತರಂ ಘೋಷಣೆ ಕೂಗುವುದಿಲ್ಲ

ನಮ್ಮ ಜನರು ಜೈ ಶ್ರೀರಾಮ್ ಹಾಗೂ ವಂದೇ ಮಾತರಂ ಎನ್ನುವ ಪದಕ್ಕೆ ಬಹಳಷ್ಟು ಗೌರವ ನೀಡುತ್ತಾರೆ. ಜೊತೆಗೆ ಜೈ ಶ್ರೀರಾಮ್ ಎನ್ನುವ ಸಾಲನ್ನು ಎಷ್ಟು ಭಕ್ತಿಯಿಂದ ಹೇಳುತ್ತಾರೆ. ಆದ್ರೆ, ಹೈದರಾಬಾದ್ ನ ಸಂಸದರಾದ ಅಸಾದುದ್ದೀನ್ ಓವೈಸಿ ಅವರು ವಂದೇ ಮಾತರಂ ಹಾಗೂ ಜೈ ಶ್ರೀರಾಮ್ ಎನ್ನುವ ಪದವನ್ನು ಹೇಳುವುದಿಲ್ಲ ಏನು ಹೇಳಿದ್ದಾರೆ. ಜೊತೆಗೆ ಅದಕ್ಕೆ ಕಾರಣವನ್ನು ಸಹ ಅವರೇ ತಿಳಿಸಿದ್ದಾರೆ. ಹೌದು. ನಾನು ಈ ಘೋಷಣೆಗಳನ್ನು ಕೂಗುವುದಿಲ್ಲ. ಯಾಕಂದ್ರೆ, ಜೈ ಶ್ರೀರಾಮ್ ಹಾಗೂ ವಂದೇ ಮಾತರಂ ಎನ್ನುವ ಈ ಎರಡು ಘೋಷಣೆಗಳ ಮೂಲಕ, ಭಾರತದಲ್ಲಿರುವ ಭಾರತೀಯ ಮುಸಲ್ಮಾನರಲ್ಲಿ ಭಯ ಹುಟ್ಟಿಸುವಂತಹ ಒಂದು ಷಡ್ಯಂತ್ರವನ್ನು ನಡೆಸಲಾಗಿದ್ದು, ಈಗಾಗಲೇ ಆ ರೀತಿಯ ಒಂದು ಕೆಲಸ ನಡೆದಿದೆ ಎಂದು ಅವರು ಆರೋಪ ಮಾಡಿದ್ದಾರೆ.

ಭಾರತೀಯ ಮುಸ್ಲಿಮರ ಮೇಲೆ ಒತ್ತಡ ಹೇರುತ್ತಿದ್ದಾರೆ

ಇನ್ನು ಈ ಘೋಷಣೆಗಳ ಮೂಲಕ, ಭಾರತೀಯ ಮುಸ್ಲಿಮರ ಮೇಲೆ ಷಡ್ಯಂತರ ನಡೆಸುವುದರ ಜೊತೆಗೆ, ಈ ಎರಡು ಘೋಷಣೆಗಳನ್ನು ಹೇಳಲೇ ಬೇಕು ಎಂದು ಒತ್ತಾಯ ಮಾಡುತ್ತಿದ್ದಾರೆ. ನಿಜಕ್ಕೂ ಇದು ಸರಿಯಲ್ಲ. ಯಾಕಂದ್ರೆ ಜೈ ಶ್ರೀರಾಮ್ ಹಾಗೂ ವಂದೇ ಮಾತರಂ ಎನ್ನುವ ಘೋಷಣೆಗಳನ್ನು ಯಾರು ಬೇಕಾದರೂ ಕೂಗಬಹುದು. ಆದ್ರೆ ಒತ್ತಾಯವಾಗಿ ಅದನ್ನ ಹೇಳಲೇ ಬೇಕು ಎನ್ನುವುದು ತಪ್ಪು. ಯಾಕಂದ್ರೆ, ಜನರಿಗೆ ಇಷ್ಟವಾದರೆ ಹೇಳುತ್ತಾರೆ, ಇಲ್ಲವಾದರೆ ಹೇಳುವುದಿಲ್ಲ. ಅದನ್ನು ಬಿಟ್ಟು, ಈ ರೀತಿ ಒತ್ತಾಯಪೂರ್ವಕವಾಗಿ ಹಿಗ್ಗಾಮುಗ್ಗಾ ಥಳಿಸಿ, ಹೇಳಿಸುವ ಅವಶ್ಯಕತೆ ಇಲ್ಲ ಎಂದು ಹೇಳಿದ್ದಾರೆ.

ಇಂತಹ ಬೆಳವಣಿಗೆ ಅಪಾಯಕಾರಿ ಹಾಗೂ ಆಘಾತಕಾರಿ

ಅಸಾದುದ್ದೀನ್ ಓವೈಸಿ ಅವರು ಮಾತನಾಡುವಾಗ, ಇನ್ನೂ ಕೆಲವು ಹೇಳಿಕೆಗಳನ್ನು ನೀಡಿದ್ದಾರೆ. ಹೌದು. ಈ ರೀತಿಯಲ್ಲಿ ಒಬ್ಬರನ್ನ ಥಳಿಸಿ, ಹಿಂಸಿಸಿ ಆ ಪದವನ್ನ ಹಾಗೂ ಸಾಲನ್ನು ಹೇಳಲೇ ಬಕು ಎನ್ನುವುದು ತಪ್ಪು. ಯಾಕಂದ್ರೆ ಇಂತಹ ಕೆಲವು ಬೆಳವಣಿಗೆಗಳು ಅಪಾಯಕಾರಿ ಹಾಗೂ ಆಘಾತಕಾರಿಯಾಗಲಿದೆ. ಯಾಕಂದ್ರೆ ಇತ್ತೀಚಿನ ದಿನಗಳಲ್ಲಿ ಧಾರ್ಮಿಕ ಘೋಷಣೆಯನ್ನು ಕೂಗದಿರುವ ಹಾಗೂ ಅದನ್ನು ನಿರಾಕರಿಸುತ್ತಿರುವ ಕಾರಣವನ್ನು ಮುಂದಿಟ್ಟುಕೊಂಡು, ಸಮಾಜದಲ್ಲಿ ಮುಸ್ಲಿಮರ ಬಗ್ಗೆ ಜನರಲ್ಲಿ ದ್ವೇಷದ ಭಾವನೆಯನ್ನು ಹುಟ್ಟು ಹಾಕಲಾಗುತ್ತಿದೆ. ಇದರಿಂದ ಮುಂದೆ ಅನಾಹುತಗಳಾಗುವ ಪರಿಸ್ಥಿತಿ ಎದುರಾಗಬಹುದು. ಹಾಗಾಗಿ ಇದನ್ನೆಲ್ಲಾ ಇಲ್ಲಿಗೆ ನಿಲ್ಲಿಸುವುದಾಗಿ ಕೇಳಿದ್ದಾರೆ.

ನಿಜಕ್ಕೂ ಈ ರೀತಿಯ ಬೆಳವಣಿಗೆಗಳಿಂದಾಗಿ ಒಂದಲ್ಲಾ ಒಂದು ಎಡವಟ್ಟು ಆಗೋ ಸಾಧ್ಯತೆ ಬರುತ್ತದೆ. ಯಾಕಂದ್ರೆ ನಾವು ಇಷ್ಟು ಭಕ್ತಿ ಹಾಗೂ ಗೌರವದಿಂದ ಆ ಘೋಷಣೆಗಳನ್ನು ಕೂಗುತ್ತಿವೆ. ಆದ್ರೆ ಅವರು ಕೂಗುತ್ತಿಲ್ಲ. ಆದ್ರೆ ಅವರಿಗೆ ಅದನ್ನ ಹೇಳಲೇ ಬೇಕು ಎಂದು ನಾವು ಸಹ ಒತ್ತಾಯ ಮಾಡಬಾರದು.

LEAVE A REPLY

Please enter your comment!
Please enter your name here