ಬಾರದ ಲೋಕಕ್ಕೆ ತೆರಳಿದ ಮಾಜಿ ಕೇಂದ್ರ ಸಚಿವ ಅರುಣ್ ಜೇಟ್ಲಿ

0
588
arun jetli

ಮಾಜಿ ಕೇಂದ್ರ ಸಚಿವರಾಗಿದ್ದ ಅರುಣ್ ಜೇಟ್ಲಿ ಅವರು ಇಂದು ವಿಧಿವಶರಾಗಿದ್ದಾರೆ. ಹೌದು. ಅವರ ಆರೋಗ್ಯದಲ್ಲಿ ಏರುಪೇರಾಗಿದ್ದರಿಂದ ಅವರನ್ನು ಆಗಸ್ಟ್ 9ರಂದು ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ಇಂದು ಅವರು ಚಿಕಿತ್ಸೆ ಫಲಕಾರಿಯಾಗದೆ ಕೊನೆಯಿಸಿರೆಳೆದಿದ್ದಾರೆ. ಹೌದು. ಇವರನ್ನು ಆಸ್ಪತ್ರೆಗೆ ದಾಖಲಿಸಿದ ನಂತರ ಎಲ್ಲ ರೀತಿಯಲ್ಲೂ ಚಿಕಿತ್ಸೆ ನೀಡಿದ್ದರು. ಆದರೂ ಅರುಣ್ ಜೇಟ್ಲಿ ಅವರ ಆರೋಗ್ಯದ ವಿಚಾರವಾಗಿ ವೈದ್ಯರು ಯಾವುದೇ ರೀತಿಯ ಅಧಿಕೃತ ಮಾಹಿತಿ ನೀಡಿರಲಿಲ್ಲ. ಆದ್ರೆ ಈಗ ಅವರು ವಿಧಿವಶರಾಗಿರುವ ವಿಚಾರ ತಿಳಿಸಿದ್ದಾರೆ. ನಿಜಕ್ಕೂ ಬಿಜೆಪಿಗೆ ಇದೊಂದು ನುಂಗಲಾರದ ತುತ್ತಾಗಿದೆ. ಹೌದು. ಬಿಜೆಪಿಯಲ್ಲಿ ಈಗ ಸೂತಕದ ಛಾಯೆ ಆವರಿಸಿದೆ.

ಬಾರದ ಲೋಕಕ್ಕೆ ತೆರಳಿದ ಮಾಜಿ ಸಚಿವ ಅರುಣ್ ಜೇಟ್ಲಿ

ಅರುಣ್ ಜೇಟ್ಲಿ ಅವರಿಗೆ ಆರೋಗ್ಯ ಸರಿಯಿಲ್ಲದ್ದಿದ್ದರಿಂದ ಕಳೆದ ಕೆಲವು ದಿನಗಳಿಂದಲೂ ಚಿಕಿತ್ಸೆ ನೀಡುತ್ತಲೇ ಇದ್ದಾರೆ. ಆದ್ರೆ ಈ ಬಾರಿ ಅವರ ಉಸಿರಾಟದಲ್ಲಿ ಬಹಳ ಏರುಪೇರಾಗಿದ್ದರಿಂದ, ಅವರನ್ನು ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವೈದ್ಯರು ತಮ್ಮ ಕೈಲಾದ ಎಲ್ಲ ರೀತಿಯಲ್ಲೂ ಚಿಕಿತ್ಸೆ ನೀಡುತ್ತಲೇ ಇದ್ದರು. ಆದ್ರೆ ಅಧಿಕೃತವಾಗಿ ಮಾತ್ರ ಯಾವುದೇ ಮಾಹಿತಿ ನೀಡಿರಲಿಲ್ಲ. ಆದ್ರೆ ಈಗ ಅವರಿಗೆ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. ಇನ್ನು ಇವರ ಸಾವು ಬಿಜೆಪಿಗೆ ನುಂಗಲಾರದ ತುತ್ತಾಗಿದ್ದು, ಸೂತಕದ ಛಾಯೆ ಆವರಿಸಿದೆ.

ಟ್ರಬಲ್ ಶೂಟರ್ ಎಂಬ ಖ್ಯಾತಿ ಪಡೆದಿದ್ದರು

ಇನ್ನು ಅರುಣ್ ಜೇಟ್ಲಿ ಅವರು ಪ್ರಧಾನಿ ನರೇಂದ್ರ ಮೋದಿಯವರಿಗೆ ಬಹಳ ಆಪ್ತರು. ಅಲ್ಲದೆ ರಾಜಕೀಯದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದರು. ಎಲ್ಲರು ಇವರನ್ನು ಮೋದಿ ಸರ್ಕಾರದ ಟ್ರಬಲ್ ಶೂಟರ್ ಎಂದು ಕರೆಯುತ್ತಿದ್ದರು. ಯಾಕಂದ್ರೆ ರಾಜಕೀಯದಲ್ಲಿ ತಮ್ಮದೇ ಆದ ನಿಲುವುಗಳನ್ನು ಹೊಂದಿ, ಅವುಗಳನ್ನು ಕಾರ್ಯಗತ ಆಗುವಂತೆ ಮಾಡುತ್ತಿದ್ದರು. ಆದರೆ ಇವರ ಆರೋಗ್ಯದಲ್ಲಿ ಏರುಪೇರಾಗಿದ್ದರಿಂದ ಇವರು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿರಲಿಲ್ಲ. ಯಾಕಂದ್ರೆ ಆ ಸಮಯದಲ್ಲಾಗಲೇ ಚಿಕ್ಕ ಪುಟ್ಟ ಚಿಕಿತ್ಸೆ ಪಡೆಯುತ್ತಿದ್ದರು. ಅಲ್ಲದೆ, 2019ರ ಜನವರಿಯಲ್ಲಿ ಇವರಿಗೆ ಒಂದು ಆಪರೇಷನ್ ಆಗಿತ್ತು. ಹೌದು. ತಮ್ಮ ಎಡಗಾಲಿನಲ್ಲಿ ಆಗಿದ್ದ ಸಾಫ್ಟ್​ ಟಿಶ್ಯು ಕ್ಯಾನ್ಸರ್​ ಗಾಗಿ ಅಮೇರಿಕಾದಲ್ಲಿ ಆಪರೇಷನ್ ಮಾಡಿಸಿಕೊಂಡಿದ್ದರು. ಆಗಿಂದಲೇ ಇವರ ಆರೋಗ್ಯ ಸ್ವಲ್ಪ ಕ್ಷೀಣಿಸುತ್ತಾ ಬಂದಿತ್ತು. ಹಾಗಾಗಿ ಚುನಾವಣೆಯಲ್ಲಿ ಸ್ಪರ್ಧಿಸಿರಲಿಲ್ಲ. ಆದ್ರೆ ಈಗ ಬಾರದ ಲೋಕಕ್ಕೆ ತೆರಳಿದ್ದಾರೆ.

ಆರೋಗ್ಯ ವಿಚಾರಿಸಲು ಆಸ್ಪತ್ರೆಗೆ ಭೇಟಿ ನೀಡುತ್ತಲೇ ಇದ್ದ ಕೇಂದ್ರ ನಾಯಕರು

ಅರುಣ್ ಜೇಟ್ಲಿ ಅವರನ್ನು ಆಸ್ಪತ್ರೆಗೆ ದಾಖಲಿಸಿದ ನಂತರ ಕೇಂದ್ರದ ಎಲ್ಲ ನಾಯಕರು ಬಂದು, ಅವರ ಆರೋಗ್ಯ ವಿಚಾರಿಸುತ್ತಿದ್ದರು. ಹೌದು. ಪ್ರಧಾನಿ ನರೇಂದ್ರ ಮೋದಿ, ರಕ್ಷಣಾ ಸಚಿವ ರಾಜನಾಥ ಸಿಂಗ್, ಲೋಕಸಭಾ ಸ್ಪೀಕರ್ ಓಂ ಬಿರ್ಲಾ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಆರೋಗ್ಯ ಇಲಾಖೆಯ ರಾಜ್ಯ ಸಚಿವೆ ಅಶ್ವಿನಿ ಚೌಬೆ, ಬಿಜೆಪಿ ಕಾರ್ಯಾಧ್ಯಕ್ಷ ಜೆಪಿ ನಡ್ಡಾ, ಜೆಡಿಯು ಅಧ್ಯಕ್ಷ ಶರದ್ ಯಾದವ್ ಏಮ್ಸ್​ ಆಸ್ಪತ್ರೆಗೆ ತೆರಳಿ ಅರುಣ್​ ಜೇಟ್ಲಿ ಅವರ ಆರೋಗ್ಯ ವಿಚಾರಿಸಿದ್ದಾರೆ. ಅಲ್ಲದೆ ಕಳೆದ ವಾರ ಕೇಂದ್ರ ಗೃಹ ಸಚಿವರಾದ ಅಮಿತ್ ಶಾ, ಡಾ. ಹರ್ಷವರ್ಧನ್, ಬಿಜೆಪಿ ನಾಯಕರಾದ ಎಲ್.ಕೆ ಅಡ್ವಾಣಿ ಹಾಗು ಮೇನಕಾ ಗಾಂಧಿ ಅವರು ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದರು.

ನಿಜಕ್ಕೂ ಬಿಜಿಪಿಯಲ್ಲಿ ಸೂತಕದ ವಾತಾವರಣ ಉಂಟಾಗಿದೆ. ಯಾಕಂದ್ರೆ ಕಳೆದ ವಾರಗಳ ಹಿಂದೆ ಸುಷ್ಮಾ ಸ್ವರಾಜ್ ಅವರು ವಿಧಿವಶರಾಗಿದ್ದರು. ಆದ್ರೆ ಈಗ ಅರುಣ್ ಜೇಟ್ಲಿ ಅವರು ಕೊನೆಯುಸಿರೆಳೆದಿದ್ದಾರೆ. ಆದರೆ ಟ್ರಬಲ್ ಶೂಟರ್ ಎಂಬ ಖ್ಯಾತಿ ಪಡೆದಿದ್ದ ಅರುಣ್ ಜೇಟ್ಲಿ ಅವರ ಸಾವು ಮಾತ್ರ ಬಿಜೆಪಿ ಅವರಿಗೆ ನುಂಗಲಾರದ ತುತ್ತಾಗಿದೆ.

LEAVE A REPLY

Please enter your comment!
Please enter your name here