ಇಷ್ಟು ಚಿಕ್ಕ ವಯಸ್ಸಿಗೆ ‘ಅರ್ಜುನ್ ಇಟಗಿ’ ಮಾಡಿರುವ ಸಹಾಯ ನಿಜಕ್ಕೂ ಗ್ರೇಟ್

0
350
arjun itagi

ಸಹಾಯ ಮಾಡುವುದಕ್ಕೆ ವಯಸ್ಸಿನ ಅಂತರವಿಲ್ಲ. ಹೌದು. ಸಹಾಯವನ್ನು ಯಾರು ಬೇಕಾದ್ರು ಮಾಡಬಹುದು. ಇಂತಹ ವಯಸ್ಸಿನವರು ಮಾತ್ರ ಸಹಾಯ ಮಾಡಬೇಕು ಎಂದೇನಿಲ್ಲ.ಅದರಲ್ಲೂ ಚಿಕ್ಕ ವಯಸ್ಸಿನ ಹುಡುಗರಿಂದ ಏನು ಸಹಾಯವಾಗುದಿಲ್ಲ. ಯಾಕಂದ್ರೆ ಅವರೇ ಸಣ್ಣ ಹುಡುಗರು. ಅವ್ರು ವಿದ್ಯಾಭ್ಯಾಸಕ್ಕಾಗಿ ಮಾತ್ರ ಇರುವುದು ಎಂದು ಕೆಲವರು ತಿಳಿದಿರುತ್ತಾರೆ. ಆದ್ರೆ ಆ ರೀತಿ ಮಾತನಾಡುವವರ ಬಾಯನ್ನು ಅರ್ಜುನ್ ಇಟಗಿ ಮುಚ್ಚಿಸಿದ್ದಾರೆ. ಹೌದು. ಚಿಕ್ಕ ವಯಸ್ಸಿಗೆ ಅವರು ಮಾಡುತ್ತಿರುವ ಸಹಾಯ ಎಲ್ಲರಿಂದ ಮೆಚ್ಚುಗೆ ಪಡೆದಿದೆ. ಜೊತೆಗೆ, ಅವರ ಈ ಗುಣಕ್ಕೆ ಎಲ್ಲರು ಅವರನ್ನು ಕೊಂಡಾಡುತ್ತಿದ್ದಾರೆ.

ಬಡಮಕ್ಕಳ ವಿದ್ಯಾಭ್ಯಾಸಕ್ಕೆ ಸಹಾಯ ಮಾಡುತ್ತಿರುವ ಅರ್ಜುನ್ ಇಟಗಿ

ಅರ್ಜುನ್ ಇಟಗಿ ಹೆಸರನ್ನು ಸಾಮಾನ್ಯವಾಗಿ ಎಲ್ಲರು ಕೇಳಿರುತ್ತಾರೆ. ಹೌದು. ಕನ್ನಡ ಕೋಗಿಲೆ ಕಾರ್ಯಕ್ರಮದಲ್ಲಿ ಭಾಗವಹಿಸಿ, ತನ್ನ ಹಾಡುಗಾರಿಕೆ ಮೂಲಕ ಎಲ್ಲರ ಮನ ಗೆದ್ದಿದ್ದಾರೆ. ಇನ್ನು ಇವರು ಮೂಲತಃ ಕೊಪ್ಪಳದವರಾಗಿದ್ದು, ಬಡಕುಟುಂಬವೊಂದರಲ್ಲಿ ಜನಿಸುತ್ತಾರೆ. ಇನ್ನು ಇವರು ಕನ್ನಡ ಕೋಗಿಲೆಗೆ ಬಂದ ನಂತರ, ಇವರ ಕುಟುಂಬದ ಪರಿಸ್ಥಿತಿ ಸುಧಾರಿಸುತ್ತೆ. ಹಾಗಾಗಿ ಅರ್ಜುನ್ ಇಟಗಿಗೆ ಬಡಮಕ್ಕಳ ಮೇಲೆ ಒಂದು ರೀತಿಯ ಅನುಕಂಪ. ಹಾಗಾಗಿ ಅವ್ರಿಗೆ ಏನಾದ್ರು ಸಹಾಯ ಮಾಡಬೇಕು ಅನ್ನೋದು ಅವರ ಆಸೆಯಾಗಿತ್ತಂತೆ. ಅದಕ್ಕಾಗಿ, ತಾನು ಹಾಡು ಹೇಳಿ ಸಂಪಾದಿಸುತ್ತಿರುವ ಹಣದಲ್ಲಿ ಬಡಮಕ್ಕಳ ವಿದ್ಯಾಭ್ಯಾಸಕ್ಕೆ ಸಹಾಯ ಮಾಡುತ್ತಿದ್ದಾರೆ.

ಶಾಲೆಗೆ ಬೇಕಾದ ಸೌಲಭ್ಯ ಒದಗಿಸುತ್ತಿದ್ದಾರೆ.

ಮಕ್ಕಳ ದಿನಾಚರಣೆಯ ಅಂಗವಾಗಿ ಯಲಬುರ್ಗಾ ತಾಲೂಕು ಹೊಸಳ್ಳಿ ಗ್ರಾಮದ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಇನ್ನು ಆ ಕಾರ್ಯಕ್ರಮಕ್ಕೆ ಭೇಟಿ ನೀಡಿದ ಅರ್ಜುನ್ ಇಟಗಿ, ತಮ್ಮಿಂದ ಆಗುವ ಸಹಾಯವನ್ನುಮಾಡಿದ್ದಾರೆ. ಹೌದು. ಅಲ್ಲಿರುವ ಬಡಮಕ್ಕಳ ವಿದ್ಯಾಭ್ಯಾಸಕ್ಕೆ ಹಾಗು ವಸತಿಗೆ ಬೇಕಾದ ಸಹಾಯವನ್ನು ಮಾಡಿದ್ದಾರೆ. ಜೊತೆಗೆ, ಇನ್ನು ಕೆಲವು ವಿದ್ಯಾರ್ಥಿಗಳಿಗೆ ಪುಸ್ತಕದ ಸಹಾಯವನ್ನು ಸಹ ಮಾಡಿದ್ದಾರೆ. ಇನ್ನು ಈ ಬಗ್ಗೆ ಅರ್ಜುನ್ ತಮ್ಮ ಅನಿಸಿಕೆಯನ್ನು ಸಹ ಹಂಚಿಕೊಂಡಿದ್ದಾರೆ. ನಾನು ಬಡವನಾಗಿರುವುದರಿಂದ ನನಗೆ ಬಡತನದ ಬಗ್ಗೆ ತಿಳಿದಿದೆ. ಹಾಗಾಗಿ ಈ ಸಹಾಯವನ್ನು ಮಾಡುತ್ತಿದ್ದೇನೆ ಎಂದು ಹೇಳಿದ್ದಾರೆ.

ನಿಜಕ್ಕೂ ಅರ್ಜುನ್ ಇಟಗಿಯ ಈ ಕೆಲಸಕ್ಕೆ ಎಲ್ಲರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಯಾಕಂದ್ರೆ ಕೋಟಿ ರೂಪಾಯಿ ಇರುವವರು ಸಹಾಯ ಮಾಡಲು ಹಿಂದೆ ಮುಂದೆ ನೋಡುತ್ತಾರೆ. ಹೀಗಿರುವಾಗ ಚಿಕ್ಕ ವಯಸ್ಸಿಗೆ ಇಷ್ಟೊಂದು ಸಹಾಯ ಮಾಡಿರುವ ಅರ್ಜುನ್ ಬಗ್ಗೆ ಜನರು ಕೊಂಡಾಡುತ್ತಿದ್ದಾರೆ.

LEAVE A REPLY

Please enter your comment!
Please enter your name here