ಸಾವಿರ ಜನರ ಕಣ್ಣಿನ ತಪಾಸಣೆಗೆ ನೆರವಾಗಿ, ಅವರ ಬದುಕಿಗೆ ಬೆಳಕು ನೀಡಿದ ಅಪ್ಪು

0
952
appu kannu

ಮನಸ್ಸಲ್ಲಿ ಒಳ್ಳೆಯ ತನ ಹೊಂದಿ ಸಹಾಯ ಮಾಡಿರುವವರು ನಮ್ಮಲ್ಲಿ ಕಡಿಮೆ ಜನ ಇದ್ದಾರೆ. ಅದರಲ್ಲೂ ನಮ್ಮ ಸ್ಯಾಂಡಲ್ ವುಡ್ ನಲ್ಲಿ ಇಂತಹ ವ್ಯಕ್ತಿಗಳು ಸಿಗುವುದು ಕಡಿಮೆ. ಆದ್ರೆ ನಮ್ಮ ಅಣ್ಣಾವ್ರು ಬಹಳಷ್ಟು ಸಹಾಯವನ್ನು ಮಾಡಿದ್ದಾರೆ. ಆದ್ರೆ ಅವರು ಮಾಡಿರುವ ಎಲ್ಲ ಒಳ್ಳೆಯ ಕೆಲಸಗಳು ಸಹ ಬೆಳಕಿಗೆ ಬಂದಿಲ್ಲ. ಯಾಕಂದ್ರೆ ಒಂದು ಕೈಯಲ್ಲಿ ಮಾಡಿದ ದಾನ, ಇನ್ನೊಂದು ಕೈಗೆ ಗೊತ್ತಾಗಬಾರದು ಎನ್ನುವ ವ್ಯಕ್ತಿ ಇವರು. ಹಾಗಾಗಿ ತಾವು ಮಾಡುತ್ತಿದ್ದ ಸಹಾಯ ಹಾಗು ಒಳ್ಳೆಯ ಕೆಲಸಗಳ ಬಗ್ಗೆ ಎಲ್ಲಿಯೂ ಸಹ ತಿಳಿಸುತ್ತಿರಲಿಲ್ಲ. ಆದ್ರೆ ಅವರು ನಮ್ಮನ್ನು ಅಗಲಿದ ನಂತರ ಆ ಒಳ್ಳೆಯ ಕೆಲಸಗಳನ್ನು ಅವರ ಮಕ್ಕಳು ಮಾಡುತ್ತಿದ್ದಾರೆ. ಹೌದು. ಅಣ್ಣಾವ್ರು ನಡೆಸಿಕೊಂಡು ಬರುತ್ತಿದ್ದ ಉತ್ತಮ ಕಾರ್ಯಗಳನ್ನು, ಈಗ ಅಣ್ಣಾವ್ರ ಮಕ್ಕಳು ನಡೆಸಿಕೊಂಡು ಬರುತ್ತಿದ್ದಾರೆ. ಅದೇ ರೀತಿ ಈಗ ಪುನೀತ್ ರಾಜ್ ಕುಮಾರ್ ಸಾವಿರ ಜನರ ನೇತ್ರ ತಪಾಸಣೆಗೆ ನೆರವಾಗಿದ್ದಾರೆ.

ಸಾವಿರ ಜನರ ನೇತ್ರ ತಪಾಸಣೆಗೆ ನೆರವಾದ ಅಪ್ಪು

ಅಣ್ಣಾವ್ರ ಮಕ್ಕಳು ಅಂದ್ರೆ ನಿಜಕ್ಕೂ ಎಲ್ಲರು ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ಹೌದು. ಅಣ್ಣಾವ್ರಿಗೆ ನೀಡುತ್ತಿದ್ದ ಬೆಲೆಯನ್ನು, ಈಗ ಅವರ ಮಕ್ಕಳಿಗೆ ಎಲ್ಲರು ನೀಡುತ್ತಿದ್ದಾರೆ. ಅದೇ ರೀತಿ ಅವರ ಮಕ್ಕಳು ಸಹ ಜನರ ನಂಬಿಕೆಯನ್ನು ಉಳಿಸಿಕೊಂಡು ಹೋಗುತ್ತಿದ್ದಾರೆ. ಹೌದು. ಅನೇಕ ಉತ್ತಮ ಕಾರ್ಯಗಳನ್ನು ಮಾಡುತ್ತ, ಇತರರಿಗೆ ಸಹಾಯ ಮಾಡುತ್ತಿದ್ದಾರೆ. ಅದೇ ರೀತಿ ಈಗ ಪುನೀತ್ ರಾಜ್ ಕುಮಾರ್ ಅವರು ಸಾವಿರ ಜನರಿಗೆ ಕಣ್ಣಿನ ತಪಾಸಣೆ ಮಾಡಿಸುವುದರ ಮೂಲಕ ಅವರ ಜೀವನಕ್ಕೆ ಬೆಳಕನ್ನು ನೀಡಿದ್ದಾರೆ. ಹೌದು. 1000 ಸಾವಿರ ಮಂದಿಗೆ ಕಣ್ಣಿನ ತಪಾಸಣೆಗೆ ಸ್ಪಾನ್ಸರ್ ಶಿಪ್ ನೀಡುವುದರ ಮೂಲಕ, ಅವರ ನೆರವಿಗೆ ಮುಂದಾಗಿದ್ದಾರೆ.

ಹಲವರ ಬದುಕಿಗೆ ಬೆಳಕು ನೀಡಿದ್ದಾರೆ

ನಮ್ಮಲ್ಲಿ ಅನೇಕ ಜನರು ಕಣ್ಣು ಕಳೆದುಕೊಂಡಿರುವವರು ಇದ್ದಾರೆ. ಹಾಗಾಗಿ ಅಂಥವರಿಗೆ ನೇತ್ರದಾನ ಮಾಡಿ ಎಂದು ಎಲ್ಲರು ಹೇಳುತ್ತಾರೆ. ಅದೇ ರೀತಿ ಈಗ ಹುಬ್ಬಳ್ಳಿಯಲ್ಲಿ ಅನೇಕ ಜನರು ಕಣ್ಣಿನ ಸಮಸ್ಯೆಯಿಂದ ಬಳಲುತ್ತಿದ್ದರು. ಹಾಗಾಗಿ ಅವರಿಗೆ ಸಹಾಯ ಮಾಡುವ ದೃಷ್ಟಿಯಿಂದ, ಅವರ ಸಂಪೂರ್ಣ ಜವಾಬ್ದಾರಿಯನ್ನು ಪುನೀತ್ ರಾಜ್ ಕುಮಾರ್ ತೆಗೆದುಕೊಂಡಿದ್ದಾರೆ. ಹೌದು. ಹುಬ್ಬಳ್ಳಿಯಲ್ಲಿ ಉಚಿತ ಕಣ್ಣಿನ ತಪಾಸಣೆಗಾಗಿ ಒಂದು ಶಿಬಿರವನ್ನು ಏರ್ಪಡಿಸಲಾಗಿತ್ತು. ಇನ್ನು ಆ ಶಿಬಿರದ ಸಂಪೂರ್ಣ ಜವಾಬ್ದಾರಿಯನ್ನು ಅಪ್ಪು ಹೊತ್ತುಕೊಂಡಿದ್ದು, 1000 ಜನರ ಕಣ್ಣಿಗೆ ತಪಾಸಣೆಗೆ ಸ್ಪಾನ್ಸರ್ ಶಿಪ್ ನೀಡಿದ್ದಾರೆ. ಇದರಿಂದ ಅಷ್ಟು ಜನ ತಮ್ಮ ಕಣ್ಣಿನ ತಪಾಸಣೆಯನ್ನು ಮಾಡಿಸಿಕೊಂಡು, ಸಮಸ್ಯೆಗೆ ಪರಿಹಾರ ಕಂಡುಕೊಂಡಿದ್ದಾರೆ.

ಕಷ್ಟದಲ್ಲಿರುವವರ ಸಹಾಯಕ್ಕೆ ನೆರವಾಗುತ್ತಿರುವ ಅಣ್ಣಾವ್ರ ಮಕ್ಕಳು

ಒಂದು ಕಾಲದಲ್ಲಿ ಅಣ್ಣಾವ್ರು ಎಲ್ಲರ ಕಷ್ಟಕ್ಕೆ ಸ್ಪಂದಿಸುತ್ತಿದ್ದರು. ಹೌದು. ಅವರು ಇರುವಷ್ಟು ದಿನ ಇತರರ ಸಹಾಯಕ್ಕಾಗಿ ಶ್ರಮಿಸಿದರು. ಆದರೆ ಅವರನ್ನು ಕಳೆದುಕೊಂಡ ನಂತರ, ಜನರೆಲ್ಲಾ ಆತಂಕಕ್ಕೆ ಒಳಗಾದರು. ಇನ್ಮುಂದೆ ನಮ್ಮ ಸಹಾಯಕ್ಕೆ ಯಾರು ಇರುವುದಿಲ್ಲ ಎಂದು. ಆದ್ರೆ ಅಣ್ಣಾವ್ರ ಮಕ್ಕಳು ಜನರಿಗಿದ್ದ ಆತಂಕವನ್ನು ದೂರ ಮಾಡಿದ್ದಾರೆ, ಹೌದು. ಅಣ್ಣಾವ್ರು ಮಾಡುತ್ತಿದ್ದ ಉತ್ತಮ ಕಾರ್ಯಗಳನ್ನು, ಹಾಗು ನಡೆಸಿಕೊಂಡು ಬರುತ್ತಿದ್ದ ಸಂಪ್ರದಾಯವನ್ನು ಅವರು ಮಕ್ಕಳು ನಡೆಸಿಕೊಂಡು ಬರುವುದರ ಮೂಲಕ, ಕಷ್ಟದಲ್ಲಿರುವ ಜನರ ಸಹಾಯಕ್ಕೆ ನೆರವಾಗುತ್ತಿದ್ದಾರೆ.

ಒಟ್ಟಿನಲ್ಲಿ ಅಣ್ಣಾವ್ರ ಮಕ್ಕಳು ಅವರು ಹಾಕಿಕೊಟ್ಟ ದಾರಿಯಲ್ಲೇ ನಡೆಯುತ್ತಿದ್ದಾರೆ. ಹಾಗಾಗಿ ಈಗ ಅಪ್ಪು ಸಾವಿರ ಜನರಿಗೆ ಕಣ್ಣಿನ ತಪಾಸಣೆ ಮಾಡಿಸುವುದರ ಮೂಲಕ, ಅವರ ಜೀವನಕ್ಕೆ ಬೆಳಕನ್ನು ನೀಡುತ್ತಿದ್ದಾರೆ.

LEAVE A REPLY

Please enter your comment!
Please enter your name here