ದೇಹದ ತೂಕ ಇಳಿಸಲು ಚಿಕಿತ್ಸೆ ಪಡೆದು ಅನಾಹುತ ಮಾಡಿಕೊಂಡ ಅನುಷ್ಕಾ ಶೆಟ್ಟಿ. ಏನಾಯ್ತು?

0
847
anushka mathu

ಸಾಕಷ್ಟು ನಟಿಯರು ಚಿತ್ರರಂಗಕ್ಕೆ ಬರುವ ಮೊದಲು ತಮ್ಮ ದೇಹದ ತೂಕದ ಬಗ್ಗೆ ಬಹಳಷ್ಟು ಕಾಳಜಿ ವಹಿಸುತ್ತಾರೆ. ಆದರೆ ಕೆಲವು ಸಿನಿಮಾಗಳಲ್ಲಿ ನಟಿಸಿದ ನಂತರ ತಮ್ಮ ದೇಹದ ತೂಕದ ಬಗ್ಗೆ ಗಮನ ಕೊಡುವದು ಕಡಿಮೆ. ಹಾಗಾಗಿ ಅವರು ತಮ್ಮ ಹೆಚ್ಚಿನ ತೂಕದಿಂದ ಸಿನಿಮಾ ಆಫರ್ ಗಳನ್ನೂ ಕಳೆದುಕೊಳ್ಳುತ್ತಾರೆ. ಹೌದು. ಯಾವುದೇ ಭಾಷೆಯ ನಟಿಯಾಗಲಿ ಸಿನಿಮಾಗೆ ಬಂರುವ ಮುಂಚೆ ಯೋಗ, ಜಿಮ್, ಡಯಟ್ ಎಂದು ದೇಹದ ತೂಕವನ್ನು ತೀರಾ ಕಡಿಮೆ ಮಾಡಿಕೊಂಡಿರುತ್ತಾರೆ. ಆದರೆ ನಂತರ ಆ ವಿಚಾರದಲ್ಲಿ ಗಮನ ಕಡಿಮೆ ಮಾಡಿಕೊಳ್ಳುತ್ತಾರೆ. ಈ ರೀತಿ ಅನೇಕ ನಟಿಯರು ಹೆಚ್ಚು ತೂಕವನ್ನು ಹೊಂದಿ, ಹಲವು ಸಿನಿಮಾದ ಆಫರ್ ಗಳನ್ನೇ ಕಳೆದುಕೊಂಡಿದ್ದಾರೆ. ನಂತರ ತೂಕ ಕಡಿಮೆ ಮಾಡಿಕೊಳ್ಳಲು ಸರ್ಜರಿ, ಆಪರೇಷನ್ ಅಂತ ಮೊರೆ ಹೋಗುತ್ತಾರೆ. ಈ ರೀತಿ ಚಿಕಿತ್ಸೆ ಮೊರೆ ಹೋಗಿ, ಈಗ ಕಷ್ಟ ಅನುಭವಿಸುತ್ತಿರುವುದು ಬೇರೆ ಯಾರು ಅಲ್ಲ. ನಟಿ ಅನುಷ್ಕಾ ಶೆಟ್ಟಿ.

ದೇಹದ ತೂಕ ಇಳಿಸಲು ಚಿಕಿತ್ಸೆ ಪಡೆದ ಅನುಷ್ಕಾ ಶೆಟ್ಟಿ

ಕರಾವಳಿ ಬೆಡಗಿಯಾಗಿರುವ ಅನುಷ್ಕಾ ಶೆಟ್ಟಿ ಕನ್ನಡತಿಯಾಗಿದ್ದರೂ ಅವರು ಹೆಚ್ಚಾಗಿ ಗುರುತಿಸಿಕೊಂಡಿದ್ದು ಟಾಲಿವುಡ್ ನಲ್ಲಿ. ಹೌದು. ಟಾಲಿವುಡ್ ನಲ್ಲಿ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿರುವ ಅನುಷ್ಕಾ ಅವರು ಅದ್ಭುತ ಸಿನಿಮಾಗಳನ್ನು ನೀಡಿದ್ದಾರೆ. ಆದರೆ ಅನುಷ್ಕಾ ಸಿನಿಮಾ ರಂಗಕ್ಕೆ ಕಾಲಿಟ್ಟಾಗ ಅವರ ದೇಹದ ತೂಕ ಅವರಿಗೆ ಸರಿ ಹೊಂದಿತ್ತು. ಹಾಗಾಗಿ ಅವರು ಆಗ ಅನೇಕ ಸಿನಿಮಾಗಳಲ್ಲಿ ಒಂದೇ ರೀತಿ ಕಂಡಿದ್ದರು. ಆದರೆ ನಂತರದ ಸಿನಿಮಾಗಳಲ್ಲಿ ದೇಹದ ತೂಕ ಹೆಚ್ಚಿರಬೇಕು, ಹಾಗೆ ಕಡಿಮೆ ಇರಬೇಕು ಎಂಬ ವಿಚಾರದ ಬಗ್ಗೆ ಗಮನ ನೀಡಿದ ಅನುಷ್ಕಾ ತೂಕದ ಬಗ್ಗೆ ಬಹಳ ಯೋಚಿಸುತ್ತಾರೆ. ಅದೇ ರೀತಿ ಅನುಷ್ಕಾ ಸಿನಿಮಾ ಒಂದಕ್ಕಾಗಿ ದೇಹದ ತೂಕವನ್ನು ಹೆಚ್ಚಿಸಿಕೊಂಡಿದ್ದರು. ಆದರೆ ಮತ್ತೆ ಆ ತೂಕವನ್ನು ಅವರಿಂದ ಇಳಿಸಲು ಆಗಲಿಲ್ಲ. ಹಾಗಾಗಿ ಅವರು ಅನೇಕ ಆಫರ್ ಗಳನ್ನೂ ಕಳೆದುಕೊಂಡರು. ಆದ್ರೆ ಈಗ ಸಣ್ಣ ಆಗುವುದಕ್ಕಾಗಿ ವಿದೇಶಕ್ಕೆ ತೆರಳಿ ಚಿಕಿತ್ಸೆ ಪಡೆದಿದ್ದಾರೆ.

ವಿದೇಶಕ್ಕೆ ತೆರಳಿ ಚಿಕಿತ್ಸೆ ಪಡೆದ ಅನುಷ್ಕಾ

ಅನುಷ್ಕಾ ದೇಹದ ತೂಕ ಇಳಿಸಿಕೊಳ್ಳಲು ಸಾಕಷ್ಟು ಶ್ರಮಪಟ್ಟಿದ್ದರು. ಆದರೆ ಯಾವುದೂ ಫಲ ನೀಡಿರಲಿಲ್ಲ. ಕಡೆಗೆ ‘ಬಾಹುಬಲಿ’ ಸಿನಿಮಾಗಾಗಿ ಹೇಳುಕೊಳ್ಳುವಷ್ಟು ಅಲ್ಲವಾದರೂ, ತಕ್ಕಮಟ್ಟಿಗೆ ತೆಳ್ಳಗಾಗಿದ್ದರು. ನಂತರ ‘ಭಾಗಮತಿ’ ಸಿನಿಮಾದಲ್ಲೂ ಅವರು ಕೊಂಚ ದಪ್ಪವಾಗಿಯೇ ಕಾಣುತ್ತಿದ್ದರು. ಇದಾದ ನಂತರ ಅವರಿಗೆ ಯಾವುದೇ ಸಿನಿಮಾದಲ್ಲಿ ನಾಯಕಿಯಾಗುವ ಅವಕಾಶ ಸಿಗಲೇ ಇಲ್ಲ. ಇದರಿಂದಾಗಿ ನಟಿ ಅನುಷ್ಕಾ ಶೆಟ್ಟಿ ವಿದೇಶಕ್ಕೆ ತೆರಳಿ ದೇಹದ ತೂಕ ಇಳಿಸಿಕೊಳ್ಳುವ ಚಿಕಿತ್ಸೆ ಪಡೆದು ನಂತರ ಭಾರತಕ್ಕೆ ಮರಳಿದ್ದರು. ಅವರು ಭಾರತಕ್ಕೆ ಮರಳುವ ಮುನ್ನವೇ ಅವರಿಗೆ ಹಾಲಿವುಡ್​ ಅಂದರೆ ಇಂಗ್ಲಿಷ್​ ಸಿನಿಮಾದಲ್ಲಿ ಅಭಿನಯಿಸಲು ಅವಕಾಶವೊಂದು ಅರಸಿ ಬಂದಿತ್ತು. ಆ ಸಿನಿಮಾಗಾಗಿ ಫೋಟೋಶೂಟ್​ ಸಹ ಮಾಡಿಸಲಾಗಿತ್ತು. ಆದರೆ ಈಗ ಬಂದಿರುವ ಹೊಸ ಸುದ್ದಿ ಪ್ರಕಾರ ಅನುಷ್ಕಾ ಮಾತನಾಡದ ಸ್ಥಿತಿ ತಲುಪಿದ್ದಾರಂತೆ.

ಮಾತು ಕಳೆದುಕೊಂಡ ನಟಿ

ಅನುಷ್ಕಾ ಚಿಕಿತ್ಸೆ ಪಡೆದ ನಂತರ ಈಗ ಹಾಲಿವುಡ್ ನಲ್ಲಿ ನಟಿಸಲು ಸಜ್ಜಾಗುತ್ತಿದ್ದಾರೆ. ಆದ್ರೆ ಈಗ ಮಾತು ಕಳೆದುಕೊಳ್ಳುವಂತಹ ಪರಿಸ್ಥಿತಿ ಎದುರಾಗಿದೆ. ಅಂದ್ರೆ ಅವರು ಮಾತು ಕಳೆದುಕೊಂಡಿರುವುದು ಕೇವಲ ಸಿನಿಮಾದಲ್ಲಿ ಮಾತ್ರ. ಹೌದು. ಅನುಷ್ಕಾ ಈಗ ನಟಿಸಲಾಯಿರುವ ಸಿನಿಮಾದಲ್ಲಿ ಅವರು ಮಾತು ಬಾರದ ಪಾತ್ರಕ್ಕೆ ನಟಿಸುತ್ತಿದ್ದಾರೆ. ಹಾಗಾಗಿ ಅವರು ದೇಹದ ತೂಕವನ್ನು ಇಳಿಸಿಕೊಳ್ಳಲು ಬೇಕಾಗಿತ್ತು. ಒಂದು ವೇಳೆ ದೇಹದ ತೂಕ ಇಳಿಸಿಕೊಳ್ಳದೆ ಹೋಗಿದ್ದರೆ, ಹೊಸ ಸಿನಿಮಾದಲ್ಲಿ ಮಾತು ಬಾರದ ಪಾತ್ರ ಅವರಿಗೆ ಸಿಗುತ್ತಿರಲಿಲ್ಲ. ಐದು ಭಾಷೆಗಳಲ್ಲಿ ನಿರ್ಮಾಣಗೊಳ್ಳುತ್ತಿರುವ ಚಿತ್ರದಲ್ಲಿ ಅನುಷ್ಕಾ ನಾಯಕಿಯಾಗಿ ಅಭಿನಯಿಸಲಿದ್ದಾರೆ.

ಒಟ್ಟಿನಲ್ಲಿ ಅನುಷ್ಕಾ ಅವರು ದೇಹದ ತೂಕ ಹೆಚ್ಚಿದೆ ಎಂದು ಬಹಳಷ್ಟು ಒದ್ದಾಡುತ್ತಿದ್ದರು. ಆದ್ರೆ ಈಗ ಅವರು ವಿದೇಶಕ್ಕೆ ಹೋಗಿ, ಚಿಕಿತ್ಸೆ ಪಡೆದು, ಮರಳಿದ ನಂತರ ಅವರು ಹಾಲಿವುಡ್ ಗೆ ಹಾರುತ್ತಿದ್ದಾರೆ.

 

LEAVE A REPLY

Please enter your comment!
Please enter your name here