ನಾಡಹಬ್ಬಕ್ಕೆ ಕನ್ನಡದಲ್ಲೇ ಶುಭಾಶಯ ತಿಳಿಸಿ ಕನ್ನಡಿಗರಿಂದ ಮೆಚ್ಚುಗೆ ಪಡೆದ ನಟಿ ಅನುಷ್ಕಾ ಶೆಟ್ಟಿ

0
861
anushka and kannada

ಈಗಿನ ಕಾಲದಲ್ಲಿ ನಮ್ಮ ಕನ್ನಡಿಗರು ಕೆಲವು ಕಲಾವಿದರ ಬಗ್ಗೆ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಯಾಕಂದ್ರೆ ನಮ್ಮ ಕನ್ನಡ ನೆಲದಲ್ಲಿ ಹುಟ್ಟಿ, ಕನ್ನಡ ಮಾತನಾಡಲು ಬರುವುದಿಲ್ಲ ಎನ್ನುತ್ತಾರೆ ಎಂದು ಹಲವರ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಆದ್ರೆ ಈಗ ಇದೇ ಸಂದರ್ಭದಲ್ಲಿ ಮತ್ತೊಬ್ಬ ನಟಿ ಮೇಲೆ ಅಪಾರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅವರೇ ಅನುಷ್ಕಾ ಶೆಟ್ಟಿ. ಹೌದು. ಅನುಷ್ಕಾಗೆ ಇರುವ ಕನ್ನಡಾಭಿಮಾನಕ್ಕೆ, ಕನ್ನಡಿಗರು ಮನಸೋತು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನಿನ್ನೆಯಷ್ಟೇ ಕನ್ನಡಿಗರೆಲ್ಲಾ ಸಂಭ್ರಮದಿಂದ ಕನ್ನಡ ರಾಜ್ಯೋತ್ಸವವನ್ನು ಆಚರಿಸಿದ್ದಾರೆ. ಈ ಮಧ್ಯೆ ಅನೇಕ ಕಲಾವಿದರು ಸಹ, ಕನ್ನಡ ರಾಜ್ಯೋತ್ಸವವನ್ನು ಅದ್ದೂರಿಯಾಗಿ ಆಚರಿಸಿದ್ದಾರೆ. ಅವರಲ್ಲಿ ಅನುಷ್ಕಾ ಶೆಟ್ಟಿ ಕೂಡ ಒಬ್ಬರಾಗಿದ್ದಾರೆ. ಹೌದು. ಅನುಷ್ಕಾ, ನಿನ್ನೆ ಕನ್ನಡ ರಾಜ್ಯೋತ್ಸವವನ್ನು ಆಚರಿಸುವುದರ ಮೂಲಕ, ಜೊತೆಗೆ ಕನ್ನಡಿಗರಿಗೆ ಕನ್ನಡದಲ್ಲಿ ಶುಭಾಶಯ ತಿಳಿಸಿ, ಎಲ್ಲರಿಂದ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಕನ್ನಡಿಗರಿಗೆ ಕನ್ನಡ ರಾಜ್ಯೋತ್ಸವದ ಶುಭಾಶಯ ತಿಳಿಸಿದ ಅನುಷ್ಕಾ

ಕರ್ನಾಟಕದಲ್ಲೇ ಹುಟ್ಟಿ ಬೆಳೆದಿದ್ದರೂ ಎಷ್ಟೋ ಜನ ಕನ್ನಡದಲ್ಲಿ ಮಾತನಾಡುವುದಿಲ್ಲ. ಅಲ್ಲದೆ ಅನೇಕ ಕಲಾವಿದರು ಕನ್ನಡ ನಾಡಲ್ಲಿ ಹುಟ್ಟಿದರು, ನಂತರ ಕನ್ನಡವನ್ನು ಮರೆತು, ಪರ ಭಾಷೆಗೆ ದಾಸರಾಗುತ್ತಾರೆ. ಆದ್ರೆ ಅನುಷ್ಕಾ ಮಂಗಳೂರಿನಲ್ಲಿ ಹುಟ್ಟಿ, ನಂತರ, ಪರಭಾಷೆಯ ಸಿನಿಮಾಗಳಲ್ಲಿ ನಟಿಸಿದರು, ಕನ್ನಡವನ್ನು ಮಾತ್ರ ಮರೆತಿಲ್ಲ. ಹೌದು. ನಿನ್ನೆಯ ಕನ್ನಡ ರಾಜ್ಯೋತ್ಸವ ದಿನದಂದು ಅನುಷ್ಕಾ ಎಲ್ಲ ಕನ್ನಡಿಗರಿಗೂ ಕನ್ನಡದಲ್ಲೇ ಶುಭಾಶಯ ತಿಳಿಸಿದ್ದಾರೆ. ಜೊತೆಗೆ ಅವರು ಸಹ ಕನ್ನಡ ರಾಜ್ಯೋತ್ಸವವನ್ನು ಅದ್ದೂರಿಯಾಗಿ ಆಚರಿಸಿದ್ದಾರೆ. ಇನ್ನು ಅವರ ಕನ್ನಡ ಶುಭಾಶಯಕ್ಕೆ ಅಭಿಮಾನಿಗಳೆಲ್ಲಾ ಫಿದಾ ಆಗಿದ್ದಾರೆ. ಜೊತೆಗೆ ಅನುಷ್ಕಾ ಶುಭಾಶಯದ ಜೊತೆಗೆ ಇನ್ನು ಕೆಲವು ಸಾಲುಗಳನ್ನು ಬರೆದಿದ್ದಾರೆ. ಅದನ್ನು ನೋಡಿದ ಕನ್ನಡಿಗರು ಅನುಷ್ಕಾ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಶುಭಾಶಯದ ಜೊತೆಗೆ ಹಿತನುಡಿ ಹೇಳಿದ ಅನುಷ್ಕಾ

ಅನುಷ್ಕಾ ಶುಭಾಶಯದ ಜೊತೆಗೆ ಕೆಲವು ಹಿತನುಡಿಗಳನ್ನು ಹೇಳಿದ್ದಾರೆ. ಹೌದು. ‘ಈ ದಿನ ನಮ್ಮ ಶ್ರೀಮಂತ ಸಂಸ್ಕೃತಿ ಮತ್ತು ಪರಂಪರೆಯನ್ನು ಆಚರಿಸುವಲ್ಲಿ ಹೆಮ್ಮೆ ಪಡೋಣ. ಮತ್ತು ವರ್ಷವಿಡೀ ಪ್ರತಿಯೊಂದು ಕ್ಷಣವನ್ನು ಹೀಗೆ ಮುಂದುವರೆಸೋಣ. ಪ್ರಪಂಚದಾದ್ಯಂತ ಇರುವ ಎಲ್ಲ ಕನ್ನಡಿಗರಿಗೆ ಕನ್ನಡ ರಾಜ್ಯೋತ್ಸವದ ಶುಭಾಶಯಗಳು’ ಎಂದು ಈ ರೀತಿಯಲ್ಲಿ ಬರೆದು, ಶುಭಾಶಯ ತಿಳಿಸಿದ್ದಾರೆ. ಇನ್ನು ಕಳೆದ ಕೆಲವು ದಿನಗಳ ಹಿಂದೆ ಅನುಷ್ಕಾ ಅವರ ತಾಯಿಯ ಹುಟ್ಟುಹಬ್ಬವಿದ್ದಾಗಲೂ, ಅವರಿಗೆ ಕನ್ನಡದಲ್ಲೇ ಶುಭಾಶಯ ತಿಳಿಸಿದ್ದರು. ಈ ರೀತಿ ಪರ ಭಾಷೆಯ ಚಿತ್ರಗಳಲ್ಲಿ ನಟಿಸುತ್ತಿರುವ ಅನುಷ್ಕಾ, ತಮ್ಮ ಮಣ್ಣಿನ ಋಣವನ್ನು ಮರೆತಿಲ್ಲ ಎಂಬುದಕ್ಕೆ ಇದೆ ಸಾಕ್ಷಿಯಾಗಿದೆ.

ಒಟ್ಟಿನಲ್ಲಿ ಅನುಷ್ಕಾ ಶೆಟ್ಟಿ ಇಡೀ ಕನ್ನಡಿಗರ ಮನಸ್ಸಲ್ಲಿ ಆಳವಾಗಿ ಉಳಿದುಕೊಂಡಿದ್ದರೆ. ಯಾಕಂದ್ರೆ ಕನ್ನಡ ಸರಿಯಾಗಿ ಅವರಿಗೆ ಮಾತನಾಡಲ್ಲೂ ಬಂದಿಲ್ಲವಾದರೂ, ಅವರು ಕನ್ನಡದಲ್ಲಿ ಮಾತನಾಡಲು ಹೆಚ್ಚು ಪ್ರಯತ್ನಿಸುತ್ತಿದ್ದಾರೆ, ಜೊತೆಗೆ ಏನೇ ಶುಭಾಶಯ ತಿಳಿಸಬೇಕೆಂದರೂ, ಅದನ್ನು ಕನ್ನಡದಲ್ಲಿ ತಿಳಿಸುತ್ತಿರುವುದರಿಂದ ಎಲ್ಲರು ಅವರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

LEAVE A REPLY

Please enter your comment!
Please enter your name here