ಈ ಸಿನಿಮಾ ಮುಗಿದರೂ ನಮ್ಮ ಅಂಬರೀಶಣ್ಣ ಮಾತ್ರ ಇದ್ರಲ್ಲಿ ಇದ್ದಂತಹ ಡೈಲಾಗ್ ಬಿಡ್ತಿರ್ಲಿಲ್ಲ.

0
1099

ಎಲ್ಲರೂ, ಎಲ್ಲರ ಮನಸ್ಸನ್ನ ಗೆಲ್ಲೋಕೆ ಆಗಲ್ಲ. ಕೆಲವರಿಂದ ಮಾತ್ರ ಅದು ಸಾಧ್ಯ. ಅಸಾಧ್ಯವಾದ್ದನ್ನ, ಸಾಧ್ಯವನ್ನಾಗಿ ಮಾಡುವ ನಟ ನಮ್ಮಲ್ಲಿದ್ದಾರೆ. ಇವರೆಂದರೆ ಇಡೀ ಊರಿಗೂರೇ ಹುಚ್ಚೆದ್ದು ಕುಣಿಯುತ್ತೆ. ಯಾಕಂದ್ರೆ ಇವರು ತಮ್ಮ ಸಹಾಯದಿಂದ, ಅಭಿನಯದಿಂದ ಈ ರೀತಿ ಕೆಲವು ಅಂಶಗಳಿಂದ ಕರ್ನಾಟಕವನ್ನೇ ತಮ್ಮತ್ತ ಸೆಳೆದುಕೊಂಡಿದ್ರು. ಅದ್ರಲ್ಲೂ ಇವರು ಹುಟ್ಟಿದ ಊರಿನ ಜನರಿಗೆ ಮಾತ್ರ ಬಹಳಷ್ಟು ಅಚ್ಚು ಮೆಚ್ಚು.
ಇವರನ್ನ ಕಲಿಯುಗ ಕರ್ಣ, ರೆಬಲ್ ಸ್ಟಾರ್ ಈ ರೀತಿ ಹಲವು ಹೆಸರುಗಳಿಂದ ಕರೆಯುತ್ತಾರೆ. ಹೌದು. ಅವರೇ ನಮ್ಮ ಅಂಬರೀಷ್ ಅವ್ರು. ನಮ್ಮ ಅಂಬರೀಶಣ್ಣ ಅಂತ ಅಭಿಮಾನಿಗಳು ಸಾರಿ, ಸಾರಿ ಹೇಳ್ತಾರೆ. ಮಳವಳ್ಳಿ ಹುಚ್ಚೇಗೌಡರ ಮಗ ಅಮರ್ ನಾಥ್ (ಅಂಬರೀಷ್) ಒಬ್ಬ ಅದ್ಬುತ ಕಲಾವಿದ. ಸಿನಿಮಾ ಮಾಡಲೇಬೇಕೆಂದು ಬಂದವರಿಗೆ ನಾಗರಹಾವು ಸಿನಿಮಾ ಕೈ ಹಿಡಿಯಿತು. ಅಲ್ಲಿಂದ ತಮ್ಮ ಜೀವನದ ದಿಕ್ಕನ್ನೇ ಬದಲಾಯಿಸಿಕೊಂಡರು.

ಗೆಲುವು ತಂದು ಕೊಟ್ಟ ಅಂತ
ಅಂಬರೀಷ್ ಅವರ ಸಿನಿಮಾ ಜೀವನದಲ್ಲಿ, ಈ ಸಿನಿಮಾ ಅವರ ಪಾಲಿಗೆ ಮಹತ್ತರವಾದ ಸಿನಿಮಾ. ಯಾಕಂದ್ರೆ ಈ ಸಿನಿಮಾ ಅವರ ಜೀವನದ ದಿಕ್ಕನ್ನೇ ಬದಲಾಯಿಸಿತು. ಹೌದು. 1981ರಲ್ಲಿ ತೆರೆ ಕಂಡ ಅಂತ ಸಿನಿಮಾ ಈಗಲೂ ಅಭಿಮಾನಿಗಳಿಗೆ ಮೈ ಜುಮ್ ಎನಿಸುವಂತೆ ಮಾಡುತ್ತೆ. ಈ ಚಿತ್ರದಲ್ಲಿ ಅಂಬರೀಷ್ ದ್ವಿಪಾತ್ರದಲ್ಲಿ ನಟಿಸಿದ್ದಾರೆ. ಕನ್ವರ್ ಲಾಲ್ ಮತ್ತು ಇನ್ಸ್ಪೆಕ್ಟರ್ ಸುಶೀಲ್ ಕುಮಾರ್ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ.

ಕುತ್ತೆ ಕನ್ವರ್ ನಹೀ, ಕನ್ವರ್ ಲಾಲ್ ಬೋಲೋ
ಅಪ್ಪ ಈ ಡೈಲಾಗ್ ನ ಮರೆತಿರೋರು ಯಾರು ಇಲ್ಲ. ಯಾಕಂದ್ರೆ ಈ ಚಿತ್ರಕ್ಕೆ ಜೀವ ತುಂಬಿದ ಸಾಲೇ ಇದು. ಹೌದು. ಜೈಲಿನಲ್ಲಿ ಇದ್ದಂತಹ ಅಂಬರೀಷ್ ಈ ಡೈಲಾಗ್ ನ್ನ ಆಗಾಗ ಹೇಳ್ತಿರ್ತಾರೆ. ಹೌದು. ಅಂಬರೀಷ್ ಅಪರಾಧಿಯಾಗಿ ಜೈಲಿನಲ್ಲಿ ಇದ್ದಾಗ, ಅಲ್ಲಿರುವ ಬೇರೆ ಕೈದಿಗಳು ಹಾಗೂ ಪೊಲೀಸರು ಅವರನ್ನ ಕನ್ವರ್ ಅಂತ ಏಕವಚನದಲ್ಲಿ ಮಾತಾಡಿಸ್ತಾರೆ. ಆದ್ರೆ ಅವರು ಅದಕ್ಕೆ ಹಿಂದಿರುಗಿ ಹೇಳೋ ಡೈಲಾಗ್, ನಿಜಕ್ಕೂ ಅದ್ಬುತ. ಕುತ್ತೆ ಕನ್ವರ್ ನಹೀ, ಕನ್ವರ್ ಲಾಲ್ ಬೋಲೋ ಅಂತ ಖಡಕ್ ಆಗಿ ಹೇಳೋ ಅವರ ಸ್ಟೈಲ್, ಈಗಲೂ ಅಭಿಮಾನಿಗಳ ಕಣ್ಣ ಮುಂದೆ ಹಾದು ಹೋಗುತ್ತೆ.

ಚಿತ್ರ ಮುಗಿದ ಇದೆ ಡೈಲಾಗ್ ಜಪಿಸುತ್ತಿದ್ದ ಅಂಬರೀಷ್
ಕೆಲವು ನಟ ಅಥವಾ ನಟಿಯರು ಸಿನಿಮಾ ಮುಗಿದ ಮೇಲು ಅದೇ ಗುಂಗಲ್ಲೇ ಇರುತ್ತಾರೆ. ಕೆಲವರಿಗಂತೂ ಪಾತ್ರದಿಂದ ಹೊರಬರಲು ಬಹಳ ಸಮಯ ಬೇಕಾಗುತ್ತೆ. ಇದೆ ರೀತಿಯೇ ನಮ್ಮ ಅಂಬರೀಶಣ್ಣನಿಗೂ ಸಹ ಆಗಿತ್ತು. ಹೌದು. ಈ ಶೂಟಿಂಗ್ ವೇಳೆ ನಮ್ಮ ಅಂಬರೀಶಣ್ಣ ಕೂತರು, ನಿಂತರು ಯಾವಾಗಲು ಕನ್ವರ್ ನಹೀ, ಕನ್ವರ್ ಲಾಲ್ ಬೋಲೋ ಅಂತಿದ್ರು. ಯಾರೊಬ್ಬ ವ್ಯಕ್ತಿ ಅಡ್ಡ ಸಿಕ್ಕಿದ್ರು ಅದನ್ನೇ ಹೇಳ್ತಿದ್ರು. ಯಾಕಂದ್ರೆ ಅವರು ಆ ಪಾತ್ರದಲ್ಲಿ ತೀವ್ರವಾಗಿ ಮುಳುಗಿದ್ರು.

ಮರೆಯಲಾಗದಂತೆ ಖಡಕ್ ಡೈಲಾಗ್
ಜನರು ಈಗಲೂ ಅಂಬರೀಷ್ ಅಂದ ಕೂಡಲೇ ನೆನಪಾಗೋದು ಕುತ್ತೆ ಕನ್ವರ್ ನಹೀ, ಕನ್ವರ್ ಲಾಲ್ ಬೋಲೋ ಅನ್ನೋ ಮಾಸ್ ಡೈಲಾಗ್. ಹೌದು. ನಮ್ಮ್ ಅಂಬರೀಷ್ ಅಣ್ಣನ್ನ ಅಭಿಮಾನಿಗಳು ಗುರುತಿಸೋದೇ, ಈ ಪಂಚ್ ಡೈಲಾಗ್ ಇಂದ. ಒಂದು ಕಾಲಕ್ಕೆ ಎಲ್ಲ ಅಭಿಮಾನಿಗಳ ಬಾಯಲ್ಲೂ ಇದೆ ಬರುತ್ತಿತ್ತು. ಯಾರಾದ್ರೂ ಅವರ ಹೆಸರನ್ನ ಕರೆದರೆ, ಸೇಮ್ ಟು ಸೇಮ್, ಈ ಡೈಲಾಗ್ ಹೊಡಿತಿದ್ರು. ಆ ಕಾಲಕ್ಕೆ ಮಾತ್ರವಲ್ಲ, ಈಗಲೂ ಆ ಡೈಲಾಗ್ ಗೆ ಇರೋ ಬೆಲೆ ಕಡಿಮೆ ಆಗಿಲ್ಲ.

ಪೊಲೀಸ್ ವರ್ಸಸ್ ಖೈದಿ
ಸಿನಿಮಾದಲ್ಲಿ ಅಂಬರೀಷ್ ದ್ವಿಪಾತ್ರದಲ್ಲಿ ನಟಿಸಿರೋದ್ರಿಂದ ಕನ್ವರ್ ಹಾಗೂ ಇನ್ಸ್ಪೆಕ್ಟರ್ ಸುಶೀಲ್ ಕುಮಾರ್ ಪಾತ್ರದಲ್ಲಿ ನಟಿಸಿದ್ದಾರೆ. ಅಣ್ಣ, ತಮ್ಮನಾಗಿ ನಟಿಸಿರೋ ಇವರ ಪಾತ್ರಗಳು ನಿಜಕ್ಕೂ ಅತ್ಯದ್ಭುತ. ಒಂದೇ ಮನೆಯಲ್ಲಿ ಅಣ್ಣ ತಮ್ಮಂದಿರು ಹೇಗೆ ಬೆಳೆಯುತ್ತಾರೆ ಅನ್ನೋದನ್ನ ಈ ಚಿತ್ರದಲ್ಲಿ ಬಹಳಷ್ಟು ಅಮೋಘವಾಗಿ ತೋರಿಸಿದ್ದಾರೆ.

ಎಸ್.ವಿ ರಾಜೇಂದ್ರ ಸಿಂಗ್ ಬಾಬು ಅವರು ನಿರ್ದೇಶಿಸಿದ ಈ ಚಿತ್ರ ನಿಜಕ್ಕೂ ಬಹಳ ಅದ್ಭುತವಾಗಿದೆ. ಅಂಬರೀಷ್ ಅವರಿಂದ ಇಂತ ಒಂದು ಪಾತ್ರ ಮಾಡಿಸಿ, ಜನರು ಈಗಲೂ ಮರೆಯಲಾಗದಂತೆ ಮಾಡಿರೋ ರಾಜೇಂದ್ರ ಸಿಂಗ್ ಬಾಬು ಅವರಿಗೆ ಕೃತಜ್ಞತೆ ಹೇಳಲೇ ಬೇಕು.

LEAVE A REPLY

Please enter your comment!
Please enter your name here