ಕಿಚ್ಚ ಮತ್ತು ಅನೂಪ್ ಭಂಡಾರಿ ಕಾಂಬಿನೇಶನ್ ನಲ್ಲಿ ಬರುತ್ತಿದೆ ಮತ್ತೊಂದು ಚಿತ್ರ

0
518

ನಿರ್ದೇಶಕ ಅನೂಪ್ ಭಂಡಾರಿ ರಾಜ ರಥ ಚಿತ್ರದ ನಂತರ ಯಾವ ಚಿತ್ರವು ಸಹ ನಿರ್ದೇಶನ ಮಾಡಿಲ್ಲ. ಸ್ವಲ್ಪ ದಿನಗಳ ಕೆಳಗೆ ಭಂಡಾರಿ ಕಿಚ್ಚ ಸುದೀಪ್ ಅವರೊಟ್ಟಿಗೆ ಬಿಗ್ ಬಜೆಟ್ ಸಿನಿಮಾ ಮಾಡುತ್ತೇನೆ ಎಂದು ಅನೌನ್ಸ್ ಮಾಡಿದ್ದರು. ಆ ಚಿತ್ರದ ಹೆಸರೆ ಬಿಲ್ಲ ರಂಗ ಭಾಷ. ಕಿಚ್ಚ ಈ ಸಿನಿಮಾದಲ್ಲಿ ಮೂರು ಶೇಡ್ ನಲ್ಲಿ ಕಾಣಿಸಿಕೊಳ್ಳುತ್ತಾರೆಂದು ಸುದ್ದಿ ಹಬ್ಬಿತ್ತು. ಚಿತ್ರ ಏನೊ ಅನೌನ್ಸ್ ಆಗಿದೆ ಆದರೆ ಸುದೀಪ್ ಸದ್ಯಕ್ಕೆ ಸಾಲು ಸಾಲು ಚಿತ್ರಗಳಲ್ಲಿ ನಿರತರಾಗಿರುವ ಕಾರಣದಿಂದಾಗಿ ಡೇಟ್ ಸಿಗುತ್ತಿಲ್ಲ. ಸದ್ಯದ್ರಲ್ಲೆ ಬಿಲ್ಲ ರಂಗ ಭಾಷ ಚಿತ್ರದ ಚಿತ್ರೀಕರಣ ಶುರುವಾಗುವ ಸಂಭವ ಇದೆ. ಮುಂದೆ ಓದಿ.

ಕಿಚ್ಚ ಮತ್ತು ಭಂಡಾರಿ ಕಾಂಬಿನೇಶನ್ ನಲ್ಲಿ ಮತ್ತೊಂದು ಚಿತ್ರ

ಆದರೆ ಈಗ ಕಿಚ್ಚನ ಕಡೆಯಿಂದ ಭಂಡಾರಿಗೆ ಮತ್ತೊಂದು ಆಫರ್ ಸಿಕ್ಕಿದೆ. ಹೌದು, ಅನೂಪ್ ಮತ್ತೊಂದು ಚಿತ್ರಕ್ಕೆ ತಯಾರಿ ನಡೆಸಿದ್ದಾರೆ. ಬಿಲ್ಲ ರಂಗ ಭಾಷ ಚಿತ್ರ ಸೆಟ್ ಏರುವ ಮುನ್ನ ಈ ಚಿತ್ರ ಶುರುವಾಗಲಿದೆ. ಸೆಪ್ಟೆಂಬರ್ ನಲ್ಲಿ ಚಿತ್ರ ಪ್ರಾರಂಭವಾಗಲಿದ್ದು, ಜಾಕ್ ಮಂಜು ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ. ಇತ್ತೀಚಿಗಷ್ಟೆ ಅನೂಪ್ ಭಂಡಾರಿ ತಮ್ಮ ಸಿನಿಮಾಗೆ ಪುಟ್ಟ ಹುಡುಗಿಯ ಪಾತ್ರ ಅವಶ್ಯಕತೆ ಇರುವುದರಿಂದ ಚಿಕ್ಕ ಮಕ್ಕಳನ್ನು ಆಡಿಷನ್ ಗೆ ಕರೆದಿದ್ದರು. ಆಡಿಷನ್ ಗೆ ಕರೆದಿದ್ದು ಬಿಲ್ಲ ರಂಗ ಭಾಷ ಚಿತ್ರಕ್ಕೆಂದೆ ಬಹಳ ಜನ ಅಂದುಕೊಂಡಿದ್ದರು ಆದರೆ ಇದು ಕಿಚ್ಚ ಮತ್ತು ಭಂಡಾರಿ ಕಾಂಬಿನೇಶನ್ ನಲ್ಲಿ ಬರುತ್ತಿರುವ ಹೊಸ ಚಿತ್ರಕ್ಕೆ.

ಬಂದಾ ನೋಡೊ ಪೈಲ್ವಾನ್

ದಿ ವಿಲ್ಲನ್ ಚಿತ್ರದ ನಂತರ ಕಿಚ್ಚನ ಸಿನೆಮಾಗಳು ಬಿಡುಗಡೆ ಆಗಲೇ ಇಲ್ಲ, ಇದೇ ಇವರ ಕೊನೆ ಸಿನೆಮಾವಾಗಿದ್ದು ಅಭಿಮಾನಿಗಳು ಇವರ ಸಿನೆಮಾವನ್ನು ನೋಡಲು ಕಾತರಿಸುತ್ತಿದ್ದಾರೆ. ಅಭಿನಯ ಚಕ್ರವರ್ತಿಯ ಅಭಿನಯವನ್ನು ನೋಡಲಾರದೇ ಬಹಳ ದಿನಗಳು ಕಳೆದವು ಈಗ ಸುದೀಪ್ ಅವರು ಅಭಿನಯಿಸಿರುವ ಚಿತ್ರದ ಬಿಡುಗಡೆಯ ದಿನಾಂಕ ಫಿಕ್ಸ್ ಆಗಿದೆ. ಹೌದೂ ಸುದೀಪ್ ಅವರು ಅಭಿನಯಿಸಿದ ಬಹು ನಿರೀಕ್ಷೆಯ ಪೈಲ್ವಾನ್ ಚಿತ್ರ ನಿಮ್ಮ ಮುಂದೆ ಬರಲಿದೆ. ಕಿಚ್ಚನ ದೇಹಸಿರಿ ನೋಡಿದ ಅಭಿಮಾನಿಗಳು ಮಾರು ಹೋಗಿದ್ದರು, ಈ ಸಿನೆಮಾಕ್ಕಾಗಿ ಸುದೀಪ್ ಅವರು ಬಹಳ ಕಷ್ಟ ಪಟ್ಟಿದ್ದಾರೆ.

ಪೈಲ್ವಾನ್ ಚಿತ್ರ ಸೆಪ್ಟೆಂಬರ್ 12 ರಂದು ಬಿಡುಗಡೆಯಾಗಲಿದೆ

ಇನ್ನು ಸಾಹೊ ಚಿತ್ರ ಆಗಸ್ಟ್ 15 ಕ್ಕೆ ಬಿಡುಗಡೆ ಆಗಬೇಕಿತ್ತು, ಆದರೆ ಆಗಸ್ಟ್ 30 ಕ್ಕೆ ಚಿತ್ರ ಬಿಡುಗಡೆಯಾಗುವುದು ಬಹುತೇಕ ಖಚಿತವಾಗಿದೆ. ಒಂದೆ ದಿನದಂದು ಎರಡು ಚಿತ್ರಗಳು ಬಿಡುಗಡೆಯಾದರೆ, ಥಿಯೇಟರ್ ನ ಸಮಸ್ಯೆಯಾಗಬಹುದು ಆದ್ದರಿಂದ ಸಾಹೊ ಚಿತ್ರ ರಿಲೀಸ್ ಆದ ನಂತರ ಪೈಲ್ವಾನ್ ಚಿತ್ರ ಸೆಪ್ಟೆಂಬರ್ 12 ರಂದು ಬಿಡುಗಡೆಯಾಗಲಿದೆ ಎಂದು ಪೈಲ್ವಾನ್ ಚಿತ್ರತಂಡದವರು ಹೇಳಿದ್ದಾರೆ.

LEAVE A REPLY

Please enter your comment!
Please enter your name here