ನನ್ನ ರಾಜಿನಾಮೆಗೆ ಮಹಿಳೆಯೊಬ್ಬರು ನೀಡಿದ ದೂರು ಕಾರಣ ಎಂದು ತಿಳಿಸಿದ ಅಣ್ಣಾಮಲೈ

0
616
annamali rajiname karana

ಕರ್ನಾಟಕದ ಸಿಂಗಂ ಎಂದೇ ಹೆಸರು ಪಡೆದಿರುವ ಅಣ್ಣಾಮಲೈ ಅಂದ್ರೆ ಯಾರಿಗೆ ಇಷ್ಟ ಇಲ್ಲ ಹೇಳಿ. ಅಣ್ಣಾಮಲೈ ಅಂದ್ರೆ ಪ್ರತಿಯೊಬ್ಬರಿಗೂ ಇಷ್ಟ. ಯಾಕಂದ್ರೆ ತಮ್ಮ ಕೆಲಸದಿಂದ ಎಲ್ಲರ ಮನೆ ಮಾತಾಗಿದ್ದಾರೆ. ಹೌದು. ತಮಿಳುನಾಡು ಮೂಲದವರಾದ ಇವರು, ಕನ್ನಡಿಗರಲ್ಲಿ ಮನಸಲ್ಲಿ ಉಳಿದುಕೊಂಡಿದ್ದಾರೆ ಅಂದ್ರೆ ಅಷ್ಟು ಸುಲಭದ ಮಾತಲ್ಲ. ನಿಜಕ್ಕೂ ಇವರನ್ನು ನೋಡಿ, ಕಲಿಯಬೇಕಾದ ಅಂಶಗಳು ಹಲವಿವೆ. ಯಾಕಂದ್ರೆ ಇವರು ಅಷ್ಟು ನಿಷ್ಠಾವಂತ ಅಧಿಕಾರಿಯಾಗಿದ್ದಾರೆ. ಆದ್ರೆ ಇಷ್ಟು ನಿಷ್ಠಾವಂತ ಅಧಿಕಾರಿಯಾಗಿರುವ ಇವರು ಇದ್ದಕ್ಕಿದ್ದಂತೆ ರಾಜೀನಾಮೆ ನೀಡಿದ್ದು, ಎಲ್ಲರಿಗೂ ಆಶ್ಚರ್ಯದ ಜೊತೆಗೆ, ಬೇಸರವೂ ಸಹ ಆಗಿತ್ತು. ಯಾಕಂದ್ರೆ ಇವರು ರಾಜೀನಾಮೆ ಕೊಡಲು ಕಾರಣವಾದ್ರು ಏನು? ಎಂಬುದು ಒಂದು ಕಡೆ ಆದ್ರೆ, ಇಂಥ ಅಧಿಕಾರಿ ತಮ್ಮ ಮೇಲಿನ ಜವಾಬ್ದಾರಿಗಳನ್ನೆಲ್ಲಾ ಇಷ್ಟು ಬೇಗ ಕಳೆದುಕೊಂಡರಲ್ಲ ಎಂದು ಬೇಸರವಾಗಿತ್ತು. ಆದ್ರೆ ಈಗ ಅವರು ತಮ್ಮ ರಾಜೀನಾಮೆ ಬಗ್ಗೆ ಸತ್ಯವನ್ನು ಬಿಚ್ಚಿಟ್ಟಿದ್ದಾರೆ. ಹೌದು. ಅಣ್ಣಾಮಲೈ ಅವರು ರಾಜೀನಾಮೆ ನೀಡಲು ಅವರು ಕಾರಣವನ್ನು ತಿಳಿಸಿದ್ದಾರೆ.

ರಾಜೀನಾಮೆ ನೀಡಲು ಕಾರಣದ ತಿಳಿಸಿದ ಅಣ್ಣಾಮಲೈ

ಎಷ್ಟೋ ಜನರು ನಾವು ಕೂಡ ಅಣ್ಣಾಮಲೈ ಅವರಂತೆ ಆಗಬೇಕು ಅಂತ ಆಸೆ ಪಡುತ್ತಾರೆ. ಯಾಕಂದ್ರೆ ಅವರ ನಿಷ್ಠೆ ಹಾಗು ಅವರ ಮನಸ್ಸು ಆ ರೀತಿ ಇದೆ. ಕಷ್ಟ ಅಂತ ಬಂದವರಿಗೆ ಎಂದಿಗೂ ಅವರು ಸಹಾಯ ಮಾಡದೇ ಕಲಿಸಿಲ್ಲ. ಬದಲಿಗೆ ತಮ್ಮ ಕೈಲಾದ ಸಹಾಯವನ್ನು ಮಾಡುತ್ತಾರೆ. ಅಲ್ಲದೆ, ಅಧಿಕಾರಿದಲ್ಲಿ ಮಾತ್ರ ಇವರು ಸೂಪರ್. ತಮ್ಮ ಬಳಿ ಬರುವ ಕೇಸ್ ಗಳನ್ನೂ ಸಿನಿಮಾ ಸ್ಟೈಲ್ ನಲ್ಲಿ ಹ್ಯಾಂಡಲ್ ಮಾಡ್ತಿದ್ರು. ಹಾಗಾಗಿ ಯುವಕರಂತೂ ಇವರ ಫ್ಯಾನ್ಸ್ ಆಗಿದ್ದರು. ಆದ್ರೆ ಇವರು ಅಧಿಕಾರಕ್ಕೆ ರಾಜೀನಾಮೆ ನೀಡಿದ್ದು, ಯಾರಿಂದಲೂ ಸಹಿಸಲು ಆಗಿರಲಿಲ್ಲ. ಆದ್ರೆ ಅದಕ್ಕೆ ಕಾರಣವನ್ನು ಸಹ ತಿಳಿಸಿರಲಿಲ್ಲ. ಆದ್ರೆ ಈಗ ರಾಜಿನಾಮೆಗೆ ಕರಣ ತಿಳಿಸಿದ್ದರಷ್ಟೇ. ಹೌದು. ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದ ಗ್ರಾಂಡ್ ಫಿನಾಲೆಗೆ ಅತಿಥಿಯಾಗಿ ಬಂದಿದ್ದ ಅಣ್ಣಾಮಲೈ ಅವರು, ರಾಜಿನಾಮೆಗೆ ಕಾರಣ ತಿಳಿಸಿದ್ದಾರೆ.

ನನ್ನ ರಾಜಿನಾಮೆಗೆ ಮಹಿಳೆಯೊಬ್ಬರು ನೀಡಿದ ದೂರು ಕಾರಣ

ಅಣ್ಣಾಮಲೈ ಅವರ ರಾಜಿನಾಮೆಗೆ ಮಹಿಳೆಯೊಬ್ಬರ ದೂರು ಕಾರಣವಂತೆ. ಹೌದು. ಅವರು ಅಧಿಕಾರಕ್ಕೆ ಬಂದಾಗ ಅವರ ಬಳಿ ಒಬ್ಬ ಮಹಿಳೆ ದೂರು ನೀಡಲು ಬಂದಿದ್ದರಂತೆ. ನನ್ನ ಗಂಡ ಪ್ರತಿದಿನ ಕುಡಿದು ಬಂದು ಹೊಡೆಯುತ್ತಾನೆ ಅಂತ. ಹಾಗಾಗಿ ಇವರು ಆಕೆಯ ಗಂಡನನ್ನು ಕರೆಸಿ, ಕಾರಣ ಕೇಳಿದರಂತೆ. ಆಗ ಅವನು ನೀಡಿದ ಕಾರಣ ಅಣ್ಣಾಮಲೈ ಅವರ ಮನಸ್ಸನ್ನು ಚುಚ್ಚಿದೆಯಂತೆ. ಹೌದು. ನಾನು ದುಡಿಯುವುದು ೩೦೦ ರೂಪಾಯಿ, ಅದರಲ್ಲಿ ೨೦೦ ರೂಪಾಯಿ ಕುಡಿಯುತ್ತೇನೆ, ಇನ್ನು ೧೦೦ ರೂಪಾಯಿ ನನ್ನ ಹೆಂಡತಿಗೆ ಕೊಡುತ್ತೇನೆ. ಆದ್ರೆ ಅವಳು ಅದನ್ನ ಸಾಕಾಗುವುದಿಲ್ಲ ಅಂತಾಳೆ. ಅದಕ್ಕೆ ನಾನು ಹೊಡೆಯುತ್ತೇನೆ ಎಂದು ಹೇಳಿದ್ದಾನೆ. ಈ ಮಾತನ್ನು ಕೇಳಿದ ತಕ್ಷಣ ಅಣ್ಣಾಮಲೈ ಅವರಿಗೆ ಏನು ಹೇಳಬೇಕು ಅನ್ನೋದೇ ಗೊತ್ತಾಗುವುದಿಲ್ಲವಂತೆ. ಯಾಕಂದ್ರೆ ಇದರಲ್ಲಿ ತಪ್ಪು ಯಾರದ್ದು ಎಂದೇ ಗೊತ್ತಾಗದೆ, ಆತನಿಗೆ ಬುದ್ದಿ ಹೇಳಿ ಕಳಿಸಿ, ನಂತರ ಯೋಚನೆ ಮಾಡುತ್ತ ಕುಳಿತರಂತೆ.

ಇದರಲ್ಲಿ ತಪ್ಪು ಯಾರದು?

ಇನ್ನು ಆ ವ್ಯಕ್ತಿಗೆ ಬುದ್ದಿ ಹೇಳಿ ಕಳಿಸಿದ ನಂತರ ಅದೇ ವಿಚಾರವಾಗಿ ಯೋಚನೆ ಮಾಡಿದರಂತೆ. ಅವರಿಬ್ಬರಲ್ಲಿ ತಪ್ಪು ಯಾರದ್ದು ಅಂತ ತಿಳಿಯುವುದಿಲ್ಲವಂತೆ. ಹೌದು. ಸಂಬಳ ಕಡಿಮೆ ಬರುತ್ತಿರೋದು ತಪ್ಪಾ?, ಅವನು ಕುಡಿಯೋದು ತಪ್ಪಾ? ಅಥವಾ ಸಂಬಳ ಜಾಸ್ತಿ ಪಡೆಯಲು ಸಲಹೆ ಮಾಡುವುದು ಸರಿಯಾ? ಎಂದೆಲ್ಲ ಯೋಚಿಸುತ್ತಾರೆ. ಆಗ ಅವರಿಗೆ ಜಗತ್ತಿನಲ್ಲಿ ಈ ರೀತಿಯಲ್ಲಿ ಕಷ್ಟ ಪಡುತ್ತಿರುವ ಜನರು ತುಂಬಾ ಇದ್ದಾರೆ. ಹಾಗಾಗಿ ಅವರಿಗೆ ನಾನು ಏನಾದರು ಸಹಾಯ ಮಾಡಬೇಕು ಎಂದು ನಿರ್ಧರಿಸಿದೆ. ಆದ್ರೆ ಅದು ನಾನು ಇದ್ದಂತಹ ವೃತ್ತಿಯಿಂದ ಆಗುವುದಿಲ್ಲ ಎಂದು ತಿಳಿಯಿತು. ಹಾಗಾಗಿ ನಾನು ರಾಜೀನಾಮೆ ನೀಡಿದೆ ಎಂದು ಕಾರ್ಯಕ್ರಮದಲ್ಲಿ ಎಲ್ಲರ ಮುಂದೆ ತಿಳಿಸಿದ್ದಾರೆ.

 

ನಿಜಕ್ಕೂ ಅಣ್ಣಾಮಲೈ ಅಂತಹ ಅಧಿಕಾರಿಯು ರಾಜೀನಾಮೆ ನೀಡಿದ್ದು, ನಿಜಕ್ಕೂ ಎಲ್ಲರಿಗೂ ನೋವಾಗಿತ್ತು. ಆದರೆ ಅವರು ಇಂತಹ ಒಂದು ಕಾರಣದಿಂದ ರಾಜೀನಾಮೆ ನೀಡಿದ್ದಾರೆ ಅನ್ನೋದು ಈಗ ತಿಳಿದಿದೆ. ಒಟ್ಟಿನಲ್ಲಿ ಇವರ ರಾಜಿನಾಮೆಗೆ ಕಾರಣ ನೋಡಿದರೆ, ಸಮಾಜ ಸೇವೆಗಾಗಿ ಇವರು ಸಂಪೂರ್ಣವಾಗಿ ತೊಡಗುವುದು ತಿಳಿಯುತ್ತದೆ.

LEAVE A REPLY

Please enter your comment!
Please enter your name here