ಅನ್ಯಾಯಕ್ಕೊಳಗಾದ ವಿದ್ಯಾರ್ಥಿನಿ ನೆನಪಿಗೋಸ್ಕರ ಅಣ್ಣಾಮಲೈ ಮಾಡುತ್ತಿರುವ ಸಹಾಯವಾದ್ರು ಏನು?

0
910

ನೋಡೋಕೆ ದಕ್ಷ ಅಧಿಕಾರಿ. ಮನಸ್ಸು ನಿರ್ಮಲ. ಕಷ್ಟ ಅಂತ ಬಂದೋರಿಗೆ, ತನ್ನ ಕೈಯಲ್ಲಿ ಆಗೋ ಕೆಲಸ ಮಾಡುವ ವ್ಯಕ್ತಿ. ಇವರನ್ನ ಇಷ್ಟ ಪಡದಿರುವವರೇ ಇಲ್ಲ. ಎಲ್ಲರ ಮನಸ್ಸಲ್ಲೂ ಇವರು ಆಳವಾಗಿ ಇಳಿದಿದ್ದಾರೆ. ಯಾಕಂದ್ರೆ ತನ್ನ ಅಧಿಕಾರದ ಜೊತೆಗೆ, ತಮ್ಮ ಪರಿಶುದ್ಧ ಮನಸ್ಸಿಂದ ಎಲ್ಲರನ್ನ ಗೆದ್ದಿದ್ದಾರೆ. ಇವರಿಗಿರುವ ಅಧಿಕಾರಕ್ಕೆ, ಇವರು ಬೇರೆ ರೀತಿಯೇ ಇರಬೇಕಿತ್ತು. ಆದ್ರೆ ಇವರು ಎಲ್ಲರಂತೆ, ನಾನು ಸಹ ಒಬ್ಬ ಎಂದು ತಿಳಿದಿರುವವರು.

ಹೌದು. ಅಣ್ಣಾಮಲೈ ಅಂದ್ರೆ ಎಂಥವರಿಗೂ ಗೊತ್ತು, ಖಡಕ್ ಪೊಲೀಸ್ ಆಫೀಸರ್ ಅಂತ. ಅಣ್ಣಾಮಲೈ ಅವರು ನಿಜಕ್ಕೂ ಒಬ್ಬ ದಕ್ಷ ಅಧಿಕಾರಿ. ಅವರು ತಮ್ಮ ವೃತ್ತಿಯಲ್ಲಿ ಸಾಕಷ್ಟು ಬದಲಾವಣೆಗಳನ್ನ ತಂದಿದ್ದಾರೆ. ಆದರೆ ಅವರು ಇತ್ತೀಚಿಗೆ, ತೆಗೆದುಕೊಂಡ ನಿರ್ಧಾರ, ಎಲ್ಲರಲ್ಲೂ ಬೇಸರ ತರಿಸಿತ್ತು. ಹೌದು. ಅವರಿಂದ ಇನ್ನೂ ಒಳ್ಳೆಯ ಕೆಲಸಗಳನ್ನ ನಿರೀಕ್ಷಿಸುತ್ತಿದ್ದ ಜನಕ್ಕೆ, ಅವರು ನೀಡಿದ ರಾಜೀನಾಮೆ ಎಲ್ಲರಲ್ಲೂ ಬೇಸರ ತರಿಸಿದೆ. ಅಣ್ಣಾಮಲೈ ಅವರು, ವೃತ್ತಿ ಜೀವನದಲ್ಲಿ ಏನೆಲ್ಲಾ ಒಳ್ಳೆ ಕೆಲಸಗಳನ್ನ ಮಾಡಿದ್ದಾರೆ ಅಂತ ಎಲ್ಲರಿಗೂ ಗೊತ್ತು. ಆದ್ರೆ ಅವರು ತಮ್ಮ ವೈಯಕ್ತಿಕವಾಗಿಯೂ ಹಲವು ನಿರ್ಧಾರ ಹಾಗೂ ಜವಾಬ್ದಾರಿಗಳನ್ನ ತೆಗೆದುಕೊಂಡಿದ್ದಾರೆ.

ಕಾಲೇಜಿಗೆ ಸಹಾಯ ಮಾಡುತ್ತಿರುವ ಅಣ್ಣಾಮಲೈ

ಅಣ್ಣಾಮಲೈ ಅವರು, ಎಷ್ಟೇ ದಕ್ಷ ಅಧಿಕಾರಿಯಾಗಿದ್ದರೂ, ಅವರಿಗಿರುವ ಮಾನವೀಯತೆ ಅಪಾರ. ಅದಕ್ಕೆ ಸಾಕ್ಷಿಯಾಗಿ ಅವರು ಈಗ ಮಾಡುತ್ತಿರುವ ಕೆಲವು ಕೆಲಸಗಳು. ಹೌದು. ನಾಲ್ಕು ವರ್ಷಗಳ ಹಿಂದೆ, ಬೈಂದೂರಿನಲ್ಲಿ ಒಂದು ಹುಡುಗಿಯ ಮೇಲೆ ಪೈಶಾಚಿಕ ಕೃತ್ಯ ನಡೆದಿತ್ತು. ಹೌದು. ಅದೇ ಊರಿನಲ್ಲಿ ಅಕ್ಷತಾ ದೇವಾಡಿಗ ಎನ್ನುವ ಕಾಲೇಜು ವಿದ್ಯಾರ್ಥಿನಿಯಿದ್ದಳು. ಆ ಹುಡುಗಿ ಓದಿನಲ್ಲಿ ಬಹಳ ಮುಂದಿದ್ದಳು. ಆದರೆ ಆಕೆಯ ಮೇಲೆ, ಒಂದು ಪೈಶಾಚಿಕ ಕೃತ್ಯ ನಡೆದು, ಆಕೆ ಅಸುನೀಗಿದ್ದಳು. ಇದಕ್ಕೆ ಅಣ್ಣಾಮಲೈ ಅವರು ಬಹಳಷ್ಟು ಬೇಸರ ವ್ಯಕ್ತಪಡಿಸಿದ್ದರು.

ಅಕ್ಷತಾ ನೆನೆಪಿನ ಸಹಾಯ

ಅಕ್ಷತಾ ಸಾವನ್ನಪ್ಪಿ ಕೆಲವು ದಿನಗಳಾದ ಮೇಲೆ ಎಲ್ಲರೂ ಅದನ್ನ ಮರೆತಿದ್ದರು. ಆದ್ರೆ ಅದೇ ವರ್ಷದಲ್ಲಿ ಕಾಲೇಜಿನಲ್ಲಿ ಒಂದು ಕಾರ್ಯಕ್ರಮ ಏರ್ಪಡಿಸಿದ್ದರು. ಆ ಸಮಯದಲ್ಲಿ, ಅಣ್ಣಾಮಲೈ ಅವರು, ಅತಿಥಿಯಾಗಿ ಆ ಕಾರ್ಯಕ್ರಮಕ್ಕೆ ಹೋಗಿದ್ದರು. ಆ ಸಮಯದಲ್ಲಿ, ಅಲ್ಲಿಗೆ ಅಕ್ಷತಾ ಅವರ ತಂದೆ, ತಾಯಿ ಸಹ ಬಂದಿದ್ದರು. ಆಗ ಅಲ್ಲಿ, ಅಕ್ಷತಾಳನ್ನ ನೆನೆದು ಮಾತನಾಡಿದ ಅವರು, ನಾನು ಅಕ್ಷತಾಳ ಹೆಸರಿನಲ್ಲಿ ಪ್ರತಿವರ್ಷ 10 ಸಾವಿರ ನೀಡುತ್ತೇನೆ. ಅದನ್ನ ಪ್ರತಿ ವರ್ಷ ಈ ಕಾಲೇಜಿನಲ್ಲಿ ಪ್ರಥಮ ಸ್ಥಾನ ಗಳಿಸುವ ವಿದ್ಯಾರ್ಥಿನಿಗೆ ಕೊಡಬೇಕು ಎಂದು ತಿಳಿಸಿದರು.

ವರ್ಗಾವಣೆಯಾದರು ನನ್ನನ್ನ ಸಂಪರ್ಕಿಸಬೇಕು

ಕಾರ್ಯಕ್ರಮದಲ್ಲಿ ಹಣ ನೀಡುವ ಬಗ್ಗೆ ತಿಳಿಸಿದ ಅಣ್ಣಾಮಲೈ ಅವರು, ನಾನು ಈ ಊರಿನಲ್ಲಿ ಇದ್ದಾಗ ಮಾತ್ರವಲ್ಲ, ವರ್ಗಾವಣೆಯಾದರು ನೀವು ನನ್ನನ್ನ ಸಂಪರ್ಕಿಸಬೇಕು. ನಾನು ಎಲ್ಲೇ ಇದ್ದರು ಅದನ್ನ ನೀಡುತ್ತೇನೆ ಎಂದು ಹೇಳಿದ್ದರು. ಆದರೆ ಇಲ್ಲಿಯವರೆಗೂ, ಕಾಲೀಜಿನವರು ಯಾವುದೇ ಕರೆ ಮಾಡಿ ಅವರನ್ನ ಹಣ ಕೇಳಿಲ್ಲ. ಬದಲಿಗೆ ಅವರೇ ಜುಲೈ ತಿಂಗಳಿನಲ್ಲಿ, ಹಣ ಕಳಿಸಿಕೊಡುತ್ತಾರೆ ಎಂದು ಕಾಲೇಜು ಸಿಬ್ಬಂದಿ ಹೆಮ್ಮೆಯಿಂದ ಹೇಳುತ್ತಾರೆ.

ನಿಜಕ್ಕೂ ಇವರ ಈ ಕೆಲಸವನ್ನ ನೋಡಿದಾಗ, ಎಂಥವರಿಗೂ ಖುಷಿಯಾಗುತ್ತದೆ. ಯಾಕಂದ್ರೆ ಎಲ್ಲಿಂದಲೋ ಒಬ್ಬ ಸಾಮಾನ್ಯ ಅಧಿಕಾರಿಯಾಗಿ ಬಂದು, ಇಂಥ ಕೆಲಸಗಳನ್ನ ಮಾಡಿ ಜನರ ಪ್ರೀತಿಗೆ ಪಾತ್ರರಾಗಿದ್ದಾರೆ. ಜೊತೆಗೆ, ಉತ್ತಮ ಸ್ಥಾನಕ್ಕೆ ತಲುಪಿ ದಕ್ಷ ಅಧಿಕಾರಿ ಎನಿಸಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here