ತಪ್ಪು ಮಾಡಿದವರು ಯಾರೇ ಆಗಲಿ, ಅವರಿಗೆ ತಕ್ಕ ಶಿಕ್ಷೆ ಕೊಡದೆ ಬಿಡೋದಿಲ್ಲ ನಮ್ಮ ಸಿಗಂ ಅಣ್ಣಾಮಲೈ

0
1064
annamalai

ಕರ್ತ್ಯವೆವೆ ದೇವರು ಅಂತಾ ನಂಬಿ ಸಾಕಷ್ಟು ಜನ ಬದುಕುತಿದ್ದಾರೆ, ಇಂತಹದೇ ಒಂದು ಸಾಲಿನಲ್ಲಿ ಡಿಸಿಪಿ ಆದ ಅಣ್ಣಾಮಲೈ ಅವರ ಹೆಸರು ಕೂಡ ಸೇರ್ಪಡೆ ಆಗುತ್ತದೆ. ಅಣ್ಣಾಮಲೈ ಒಬ್ಬ ಖಡಕ್ ಪೊಲೀಸ್ ಅಧಿಕಾರಿ ಆಗಿ ಗುರುತಿಸಿಕೊಂಡಿದ್ದಾರೆ, ಹಿಂದೆ ಮುಂದೆ ಯೋಚನೆ ಮಾಡದೆ ಸತ್ಯಕ್ಕಾಗಿ ಹೋರಾಡುತ್ತಾರೆ. ಪೊಲೀಸ್ ಆಫೀಸರ್ ಎಂದರೆ ಹೇಗೆ ಇರಬೇಕೆಂದು ಅಣ್ಣಾಮಲೈ ಅವರು ನಿರೂಪಿಸಿದ್ದಾರೆ. ರಾಜ್ಯದ ಜನತೆ ಇವರನ್ನು ಕರ್ನಾಟಕದ ಸಿಂಗಮ್ ಎಂದೇ ಕರೆಯುತ್ತಾರೆ.. ಮೊದಲು ಇವರು ಚಿಕ್ಕಮಂಗಳೂರಿನಲ್ಲಿ ಎಸ್‌ಪಿ ಆಗಿದ್ದರು, ಆನಂತರ ಬೆಂಗಳೂರಿನ ದಕ್ಷಿಣ ವಿಭಾಗದಲ್ಲಿ ಡಿಸಿಪಿ ಆಗಿ ನೇಮಕಗೊಂಡಿದ್ದಾರೆ..

ಅಣ್ಣಾಮಲೈ ಅವರ ಕೈ ಕೆಳಗೆ ಕೆಲಸ ಮಾಡುವ ವ್ಯಕ್ತಿಗಳು ಬಹಳ ಹುಷಾರಿನಿಂದ ಕೆಲಸ ಮಾಡಬೇಕು

ಇವರ ಕೈ ಕೆಳಗೆ ಕೆಲಸ ಮಾಡುವ ವ್ಯಕ್ತಿಗಳು ಬಹಳ ಹುಷಾರಿನಿಂದ ಕಾರ್ಯ ನಿರ್ವಹಿಸಬೇಕು, ಹೌದು ಈಗ ಅಣ್ಣಾಮಲೈ ಅವರು ಇಬ್ಬರು ಪೊಲೀಸ್ ಅಧಿಕಾರಿಗಳನ್ನು ಸಸ್ಪೆಂಡ್ ಮಾಡಿದ್ದಾರೆ. ಸಸ್ಪೆಂಡ್ ಮಾಡಲು ದೃಡವಾದ ಕಾರಣ ಇದ್ದೇ ಇರುತ್ತದೆ, ಏನು ತಪ್ಪು ಮಾಡಿದ್ದಾರೆ ಎಂದು ಆಲೋಚಿಸುತ್ತಿದ್ದೀರಾ? ನಾವು ನಿಮಗೆ ಅದರ ಕುರಿತು ಮಾಹಿತಿ ನೀಡುತ್ತೇವೆ. ಪೊಲೀಸ್ ಕಸ್ಟಡೀ ಅಲ್ಲಿದ್ದ ರಾಜೇಂದ್ರ ಕುಮಾರ್ ಅಲಿಯಾಸ್ ಬೆಂಕಿ ರಾಜು, ಇಂದು ಬೆಳಿಗ್ಗೆ ವಿಕ್ಟೋರಿಯ ಆಸ್ಪತ್ರೆ ಇಂದಾ ಪರಾರಿಯಾಗಿದ್ದ, ಆದರೆ ಮತ್ತೆ ಕುಮಾರ ಸ್ವಾಮಿ ಲೇಔಟ್ ನಾ ಪೊಲೀಸ್ ಅಧಿಕಾರಿಗಳು ನಾಪತ್ತೆ ಆದ ಆರೋಪಿಯನ್ನು ಬಂಧಿಸುವುದರಲ್ಲಿ ಯಶಸ್ವಿ ಆಗಿದ್ದಾರೆ.

ಪೊಲೀಸ್ ಸಿಬ್ಬಂದಿಯರನ್ನು ಅಣ್ಣಾಮಲೈ ಅವರು ಸಸ್ಪೆಂಡ್ ಮಾಡಿದ್ದಾರೆ

ಆಸ್ಪತ್ರೆಯಲ್ಲಿ ಆರೋಪಿಯ ಕಾವಲು ಕಾಯಲೆಂದೆ ಅಣ್ಣಾಮಲೈ ಒಂದು ಪೊಲೀಸ್ ತಂಡವನ್ನು ರಚಿಸಿದ್ದರು,. ಇವರ ನಿರ್ಲ್ಯಕ್ಷದಿಂದಾನೆ ಆರೋಪಿ ತಪ್ಪಿಸಿಕೊಂಡಿದ್ದಾನೆ ಎನ್ನುವುದು ಅಣ್ಣಾಮಲೈ ಅವರ ಅಭಿಪ್ರಾಯ.. ಇಂತಹ ಬೇಜವಾಬ್ದಾರಿ ವ್ಯಕ್ತಿಗಳು ನಮಗೆ ಬೇಡಾ ಅಂತಾ ಇವರನ್ನು ಸಸ್ಪೆಂಡ್ ಮಾಡಲು ಕರೆ ನೀಡಿದ್ದಾರೆ.. ತಪ್ಪಿಸಿಕೊಂಡ ಆರೋಪಿಯನ್ನು ಮತ್ತೆ ಸೆರೆಹಿಡಿಯಲು ಅಣ್ಣಾಮಲೈ ಅವರು 15 ತಂಡಗಳನ್ನಾಗಿ ವಿಭಾಗ ಮಾಡಿ, ಬೆಂಗಳೂರಿನ ಗಲ್ಲಿ ಗಲ್ಲಿಯಲ್ಲೂ ರೌಂಡ್ ಹಾಕಿಸುತ್ತಾರೆ. ಈ ಗುಪ್ತವಾದ ಕಾರ್ಯಾಚರಣೆಯನ್ನು ಬಹಳ ಬೇಗವಾಗಿ ಅಣ್ಣಾಮಲೈ ಅವರು ಮಾಡಿದ್ದಾರೆ, ಆದ್ದರಿಂದ ಕಳೆದು ಹೋದ ವ್ಯಕ್ತಿ ಕೆಲವೇ ಗಂಟೆಗಳಲ್ಲಿ ಸಿಕ್ಕಿ ಹಾಕಿ ಕೊಂಡಿದ್ದಾನೆ.

ಉತ್ತಮವಾದ ಕಾರ್ಯಾಚರಣೆಗೆ ಅಣ್ಣಾಮಲೈ ಅವರಿಗೆ ನಾವು ಕ್ರೆಡಿಟ್ಸ್ ನೀಡಲೇಬೇಕು

ಇದು ವೇಗವಾದ ಒಂದು ಉತ್ತಮವಾದ ಕಾರ್ಯಾಚರಣೆ ಅಂತಾನೆ ಹೇಳಬಹುದು. . ಅಣ್ಣಾಮಲೈ ಅವರು ರಚಿಸಿದ್ದ ತಂಡಗಳಲ್ಲಿ ಈ ಪೊಲೀಸ್ ಪೇದೆಗಳು ಆಸ್ಪತ್ರೆಯಲ್ಲಿ ಆರೋಪಿಯನ್ನು ಎಚ್ಚರದಿಂದ ನೋಡಿಕೊಳ್ಳಲು ವಿಫಲರಾಗಿದ್ದಾರೆ. ಬೆಂಕಿ ರಾಜೇಂದ್ರ ಏನೋ ಮತ್ತೆ ಸಿಕ್ಕಿದ್ದಾನೆ ಬಿಡಿ, ಅಕಸ್ಮಾತ್ ಸಿಕಿಲ್ಲ ಎಂದರೆ ಎಂತಹ ಒಂದು ತಪ್ಪು ನಡೆದು ಹೋಗುತಿತ್ತು. ಇಂತಹ ಒಂದು ತಪ್ಪು ಮತ್ತೆ ನಡೆಯಬಾರದೆಂದೆ ಅಣ್ಣಾಮಲೈ ಅವರು ಸಸ್ಪೆಂಡ್ ಮಾಡುವ ನಿರ್ಧಾರ ತೆಗೆದುಕೊಂಡಿದ್ದಾರೆ. ಈ ಒಂದು ನಿರ್ಣಯದಿಂದ ಯಾವ ಪೊಲೀಸ್ ಅಧಿಕಾರಿಗಳು ಸಹ ಇಂತಹ ಒಂದು ಬೇಜವಾಬ್ದಾರಿಯ ಕೆಲಸವನ್ನು ಮಾಡಲು ಮುಂದಾಗುವುದಿಲ್ಲ, ಅಣ್ಣಾಮಲೈ ಅವರು ತಕ್ಕ ಪಾಠ ಕಲಿಸಿದ್ದಾರೆ.

LEAVE A REPLY

Please enter your comment!
Please enter your name here