ಸಿನಿಮಾರಂಗಕ್ಕೆ ಎಂಟ್ರಿ ಕೊಡುತ್ತಿರುವ ಅಣ್ಣಾಮಲೈ. ಯಾವ ಸಿನಿಮಾ?

0
294
annamalai movie

ಅಣ್ಣಾಮಲೈ ಅಂದ್ರೆ ಯಾರಿಗೆ ಇಷ್ಟ ಹೇಳಿ. ಅಣ್ಣಾಮಲೈ ಅಂದ್ರೆ ಪ್ರತಿಯೊಬ್ಬರಿಗೂ ಇಷ್ಟ. ಯಾಕಂದ್ರೆ ತಮ್ಮ ಖಡಕ್ ಅಧಿಕಾರದ ಮೂಲಕ ಜನರ ಮನಸ್ಸಿನಲ್ಲಿ ಆಳವಾಗಿ ಉಳಿದಿದ್ದಾರೆ. ಆದರೆ ಅವರು ತಮ್ಮ ಕರ್ತವ್ಯಕ್ಕೆ ರಾಜೀನಾಮೆ ನೀಡಿದ್ದು, ಎಲ್ಲರಿಗು ಬೇಸರದ ಸಂಗತಿಯಾಗಿತ್ತು. ಆದರೂ ಜನರು ಇಂದಿಗೂ ಅವರನ್ನು ಮರೆತಿಲ್ಲ. ಇನ್ನು ಅವರು ರಾಜೀನಾಮೆ ನೀಡಿ ರಾಜಕೀಯಕ್ಕೆ ಎಂಟ್ರಿ ಕೊಡುತ್ತಾರೆ ಅನ್ನೋ ಮಾತುಗಳು ಕೇಳಿಬಂದಿದ್ದು, ಸದ್ಯಕ್ಕೆ ಅವರು ತಮ್ಮ ಹುಟ್ಟೂರಿನಲ್ಲಿ ತಮ್ಮ ಕುಟುಂಬದವರ ಜೊತೆ ಕಾಲ ಕಳೆಯುತ್ತಿದ್ದಾರೆ. ಆದರೆ ಈ ಮಧ್ಯೆ ಮತ್ತೊಂದು ಸುದ್ದಿ ಕೇಳಿಬಂದಿದೆ. ಹೌದು. ಕರ್ನಾಟಕದ ಸಿಂಗಂ ಸಿನಿಮಾರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ.

ಸಿನಿರಂಗಕ್ಕೆ ಲಗ್ಗೆ ಇಡುತ್ತಿರುವ ಕರ್ನಾಟಕದ ಸಿಂಗಂ

ಅಣ್ಣಾಮಲೈ ಅವರು ಪೊಲೀಸ್ ವೃತ್ತಿಗೆ ರಾಜೀನಾಮೆ ನೀಡಿದ ಬಳಿಕ, ರಾಜಕೀಯಕ್ಕೆ ಲಗ್ಗೆ ಇಡುತ್ತಾರೆ ಅನ್ನೋ ಮಾತುಗಳು ಕೇಳಿಬಂದಿದ್ದವು. ಆದ್ರೆ ಅವರು ಈಗ ಸಿನಿಮಾರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಹೌದು. ‘ಅರಬ್ಬಿ’ ಚಿತ್ರದ ಮೂಲಕ ಅಣ್ಣಾಮಲೈ ಚಿತ್ರರಂಗಕ್ಕೆ ಎಂಟ್ರಿ ಕೊಡಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿದೆ. ಅರಬ್ಬಿ ಚಿತ್ರದಲ್ಲಿ ಅಣ್ಣಾಮಲೈ ಅವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಪ್ಯಾರಾ ಈಜುಪಟು ಕೆ.ಎಸ್ ವಿಶ್ವಾಸ್ ಅವರ ಜೀವನಚರಿತ್ರೆ ಇದಾಗಿದ್ದು, ಚಿತ್ರದಲ್ಲಿ ತಮ್ಮ ಪಾತ್ರದಲ್ಲಿ ಸ್ವತಃ ವಿಶ್ವಾಸ್ ಅವರೇ ನಟಿಸಲಿದ್ದಾರೆ. ವಿಶೇಷ ಎಂದರೆ ವಿಶ್ವಾಸ್ ಕೋಚ್ ಆಗಿ ಅಣ್ಣಾಮಲೈ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ.

ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿರುವ ವಿಶ್ವಾಸ್

ಇನ್ನು ವಿಶ್ವಾಸ್ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ್ದು, ಚಿಕ್ಕವರಿದ್ದಾಗ ಮನೆಯಲ್ಲಿ ಹೈಟೆನ್ಷನ್ ವೈರ್ ಮೇಲೆ ಬಿದ್ದು ಎರಡು ತಿಂಗಳು ಕೋಮಾಗೆ ಜಾರಿದರು. ಅಲ್ಲದೆ ವಿದ್ಯುತ್ ಸ್ಪರ್ಶಕ್ಕೆ ತನ್ನ ಎರಡೂ ಕೈಗಳನ್ನು ಕಳೆದುಕೊಂಡರು. ಇನ್ನು ವಿಶ್ವಾಸ್ ಎರಡು ಕೈ ಕಳೆದುಕೊಂಡರೂ ಛಲ ಬಿಡದೆ ಏನಾದರೂ ಸಾಧನೆ ಮಾಡಬೇಕೆಂದು ಪ್ಯಾರಾ ಸ್ವಿಮ್ಮಿಂಗ್ ಕಲಿತರು. ಈಗ ಅತಿ ದೊಡ್ಡ ಸಾಧನೆ ಮಾಡಿದ್ದಾರೆ. ಜೊತೆಗೆ ಅವರ ಜೀವನ ಕಥೆಯೇ ಈಗ ತೆರೆ ಮೇಲೆ ಬರಲು ಸಿದ್ಧವಾಗುತ್ತಿದೆ. ಇನ್ನು ಈ ಸಿನಿಮಾದಲ್ಲಿ ನಾಯಕಿಯಾಗಿ ಕಿರುತೆರೆ ನಟಿ ಚೈತ್ರಾ ರಾವ್ ಕಾಣಿಸಿಕೊಳ್ಳಲಿದ್ದಾರೆ.

ಚಿತ್ರಕ್ಕೆ 1 ರೂ ಸಂಭಾವನೆ ಪಡೆಯುತ್ತಿರುವ ಅಣ್ಣಾಮಲೈ

ಇನ್ನು ಈ ಚಿತ್ರಕ್ಕೆ ಅಣ್ಣಾಮಲೈ ಅವರು ತೆಗೆದುಕೊಳ್ಳುತ್ತಿರುವ ಸಂಭಾವನೆ ಕೇಳಿದ್ರೆ ಎಂಥವರು ಶಾಕ್ ಆಗುತ್ತಾರೆ. ಹೌದು. ಅವರು ಈ ಸಿನಿಮಾಗೆ ಕೇವಲ 1 ರೂಗಳನ್ನು ತೆಗೆದುಕ್ಕೊಳ್ಳುತ್ತಿದ್ದಾರೆ ಅನ್ನೋ ಮಾತುಗಳು ಕೇಳಿಬರುತ್ತಿದ್ದು, ಇದರ ವಿಚಾರವಾಗಿ ಇನ್ನು ಯಾವುದೇ ನಿಖರವಾದ ಮಾಹಿತಿ ಹೊರಬಿದ್ದಿಲ್ಲ. ಸದ್ಯಕ್ಕೆ ಚಿತ್ರದ ಶೂಟಿಂಗ್ ವಿಚಾರವಾಗಿ ಮಾತುಕತೆ ನಡೆಯುತ್ತಿದ್ದು, ಆದಷ್ಟು ಬೇಗ ಚಿತ್ರವನ್ನು ತೆರೆ ಮೇಲೆ ತರುವುದಾಗಿ ಚಿತ್ರತಂಡ ತಿಳಿಸಿದೆ.

ಒಟ್ಟಿನಲ್ಲಿ ಖಡಕ್ ಐಪಿಎಸ್ ಅಧಿಕಾರಿಯಾಗಿದ್ದ ಅಣ್ಣಾಮಲೈ ಅವರು ರಾಜಕೀಯಕ್ಕೆ ಪಾದಾರ್ಪಣೆ ಮಾಡಬೇಕೆಂಬ ಕನಸನ್ನು ಹೊತ್ತಿದ್ದರು. ಆದ್ರೆ ಈಗ ಅವರು ಸಿನಿಮಾರಂಗ ಪ್ರವೇಶಿಸುತ್ತಿರುವುದು ಎಲ್ಲರಲ್ಲೂ ಆಶ್ಚರ್ಯ ಹುಟ್ಟಿಸಿದೆ.

LEAVE A REPLY

Please enter your comment!
Please enter your name here