ಮನೆಯ ವಿಶೇಷ ಅತಿಥಿ ‘ನಂದು’ ವನ್ನು ಅಭಿಮಾನಿಗಳಿಗೆ ಪರಿಚಯಿಸಿದ ಅಣ್ಣಾಮಲೈ. ಯಾರವರು?

0
917

ಕರ್ನಾಟಕದ ಸಿಂಗಂ ಎಂದೇ ಹೆಸರು ಪಡೆದಿರುವ ಅಣ್ಣಾಮಲೈ ಅಂದ್ರೆ ಯಾರಿಗೆ ಇಷ್ಟ ಇಲ್ಲ ಹೇಳಿ. ಅಣ್ಣಾಮಲೈ ಅಂದ್ರೆ ಪ್ರತಿಯೊಬ್ಬರಿಗೂ ಇಷ್ಟ. ಯಾಕಂದ್ರೆ ತಮ್ಮ ಕೆಲಸದಿಂದ ಎಲ್ಲರ ಮನೆ ಮಾತಾಗಿದ್ದರು. ಹೌದು. ತಮಿಳುನಾಡು ಮೂಲದವರಾದ ಇವರು, ಕನ್ನಡಿಗರಲ್ಲಿ ಮನಸಲ್ಲಿ ಉಳಿದುಕೊಂಡಿದ್ದಾರೆ ಅಂದ್ರೆ ಅಷ್ಟು ಸುಲಭದ ಮಾತಲ್ಲ. ನಿಜಕ್ಕೂ ಇವರನ್ನು ನೋಡಿ, ಕಲಿಯಬೇಕಾದ ಅಂಶಗಳು ಹಲವಿವೆ. ಯಾಕಂದ್ರೆ ಇವರು ಅಷ್ಟು ನಿಷ್ಠಾವಂತ ಅಧಿಕಾರಿಯಾಗಿದ್ದರು. ಆದ್ರೆ ಅವರು ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಿದ್ದು ಬಹಳ ಬೇಸರದ ಸಂಗತಿಯಾಗಿತ್ತು. ಅದಾದ ಬಳಿಕ ಅವರು ರಾಜಕೀಯಕ್ಕೆ ಪ್ರವೇಶಿಸುತ್ತಾರೆ ಅನ್ನೋ ಮಾತುಗಳು ಕೇಳಿಬಂದಿತ್ತು. ಆದ್ರೆ ಅದರ ಬಗ್ಗೆ ಯಾವುದೇ ಮಾಹಿತಿ ಸದ್ಯಕ್ಕೆ ಅವರು ನೀಡಿಲ್ಲ. ಆದ್ರೆ ಈಗ ಅವರು ತಮ್ಮ ಮನೆಯ ವಿಶೇಷ ಅತಿಥಿಯನ್ನು ಎಲ್ಲರಿಗು ತಿಳಿಸಿದ್ದಾರೆ. ಹೌದು. ಅವರ ‘ನಂದು’ ಬಗ್ಗೆ ಪರಿಚಯ ಮಾಡಿಕೊಟ್ಟಿದ್ದಾರೆ.

‘ನಂದು’ ವನ್ನು ಪರಿಚಯಿಸಿದ ಅಣ್ಣಾಮಲೈ

ಅಣ್ಣಾಮಲೈ ಅವರು ರಾಜೀನಾಮೆ ನೀಡಿ, ಹುಟ್ಟೂರಿಗೆ ಹೋದ ನಂತರ ಅವರು ಏನು ಅಂಡುತ್ತಿದ್ದರೆ ಅನ್ನೋ ವಿಷಯ ಗೊತ್ತಾಗಲೇ ಇಲ್ಲ. ಆದ್ರೆ ಒಂದು ಬರಿ ಮಾತ್ರ ಶಬರಿಮಲೆಗೆ ಹೋಗಿರುವ ಸುದ್ದಿ ಕೇಳಿಬಂದಿತ್ತು. ಬಳಿಕ ಯಾವ ಸುದ್ದಿಯು ಇರಲಿಲ್ಲ. ಆದರೆ ಈಗ ಅವರು ಅವರ ‘ನಂದು’ ವನ್ನು ಎಲ್ಲರಿಗು ಪರಿಚಯ ಮಾಡಿಸುತ್ತಿದ್ದಾರೆ. ಹೌದು. ‘ನಂದು’ ಅಂದ್ರೆ ಅವರು ಪ್ರೀತಿಯಿಂದ ಸಾಕಿರುವ ಗೂಳಿ. ಹೌದು. ಅವರ ಮನೆಯಲ್ಲಿ ಬಹಳ ಪ್ರೀತಿಯಿಂದ ಆ ಗೂಳಿಯನ್ನು ಸಾಕಿದ್ದಾರೆ. ಹಾಗಾಗಿ ಆ ಗೂಳಿ ಪರಿಚಯವನ್ನು ಎಲ್ಲರಿಗು ಮಾಡಿಸಿದ್ದಾರೆ.

ಟ್ವಿಟ್ಟರ್ ನಲ್ಲಿ ಗೂಳಿಯ ಪರಿಚಯ ಮಾಡಿಸಿದ್ದಾರೆ

ಅಣ್ಣಾಮಲೈ ಅವರು ತಮ್ಮ ಟ್ವಿಟ್ಟರಿನಲ್ಲಿ ಗೂಳಿ ಫೋಟೋವನ್ನು ಹಾಕಿ ಅದಕ್ಕೆ, “ನನ್ನ ಹೆಸರು ನಂದು. ನಾನು 700 ಕೆಜಿ ಮತ್ತು 6 ಅಡಿ ಇದ್ದೇನೆ. ನಾನು ಉಗ್ರ, ಅಸಹ್ಯ, ಯಾವಾಗಲೂ ಕಾಲು ಕೆರಳಿಕೊಂಡು ಜಗಳಕ್ಕೆ ಹೋಗುತ್ತೇನೆ. ರೈತರ ಹಾಗೂ ನ್ಯಾಯದ ರಕ್ಷಕ. ಅದಕ್ಕಿಂತ ಹೆಚ್ಚಾಗಿ ನಾನು ತಮಿಳು ಹಾಗೂ ಭಾರತೀಯ ಹೆಮ್ಮೆಯಾಗಿ ನಿಲ್ಲುತ್ತೇನೆ. ಹೌದು. ನಾನು ಪ್ರಸಿದ್ಧ ಹಾಗೂ ಎಲ್ಲವನ್ನು ಜಯಿಸುವ ಕಂಗೇಯಂ ಗೂಳಿ. ನೀವು ತಮಿಳು ನಾಡಿಗೆ ಬಂದಾಗ ನನ್ನನ್ನು ನೋಡಲು ಬನ್ನಿ” ಎಂದು ಟ್ವೀಟ್ ಮಾಡಿದ್ದಾರೆ.

ಮೆಚ್ಚುಗೆ ಪಡಿಸಿದ ಅಭಿಮಾನಿಗಳು

ಇನ್ನು ಅಣ್ಣಾಮಲೈ ಅವರು ತಮ್ಮ ಮನೆಯ ಗೂಳಿಯ ಫೋಟೋವನ್ನು ಹಾಕಿ, ಫೋಟೋ ತೆಗೆದು ಟ್ವಿಟ್ಟರ್ ನಲ್ಲಿ ಹಾಕಿದ ನಂತರ, ಅದನ್ನು ಸಾಕಷ್ಟು ಜನರು ನೋಡಿದ್ದಾರೆ. ನೋಡಿದ ಪ್ರತಿಯೊಬ್ಬರೂ ಸಹ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಇನ್ನು ಕೆಲವರು ತಮ್ಮ ಅನಿಸಿಕೆಯನ್ನು ಕಮೆಂಟ್ ಮೂಲಕ ತಿಳಿಸುತ್ತಿದ್ದಾರೆ. ಹೌದು. ಸರ್. ನಿಮ್ಮ ಗೂಳಿ ನೋಡಲು ನಿಜಕ್ಕೂ ಬಹಳ ಖಡಕ್ ಆಗಿದೆ. ನಿಮ್ಮಂತಹ ಒಳ್ಳೆಯ ಮನುಷ್ಯರ ಮಧ್ಯೆ ಆ ಗೂಳಿ ಬೆಳೆದಿರುವುದರಿಂದ ಆ ಗೂಳಿಗೆ ಯಾವುದೇ ಕೆಟ್ಟ ಬುದ್ದಿ ಇರುವುದಿಲ್ಲ ಎಂಬುದು ನಮಗೆ ಗೊತ್ತು ಎಂದು ಕಮೆಂಟ್ ಮಾಡಿದ್ದಾರೆ. ಇದನ್ನು ನೋಡಿದ ಅಣ್ಣಾಮಲೈ ಅವರು ಅವರಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ನಿಜಕ್ಕೂ ಅಣ್ಣಾಮಲೈ ಅವರ ಅಭಿಮಾನಿಗಳು ಅವರನ್ನು ಎಂದಿಗೂ ಬಿಟ್ಟುಕೊಡುವುದಿಲ್ಲ. ಯಾಕಂದ್ರೆ ಅವರು ವ್ಯಕ್ತಿತ್ವ ಆ ರೀತಿ ಇದೆ. ಅವರು ಅಧಿಕಾರದಲ್ಲಿ ಇದ್ದಾಗ ಅವರಿಗೆ ಯಾವ ರೀತಿ ಬೆಲೆ ಇತ್ತೋ, ಈಗಲೂ ಸಹ ಅಭಿಮಾನಿಗಳು ಅದೇ ರೀತಿ ಅವರಿಗೆ ಬೆಲೆಯನ್ನು ನೀಡುತ್ತಿದ್ದಾರೆ. ಮುಂದೆಯೂ ನೀಡುತ್ತಲೇ ಇರುತ್ತಾರೆ.

LEAVE A REPLY

Please enter your comment!
Please enter your name here