ಜೊತೆ ಜೊತೆಯಲಿ ಧಾರಾವಾಹಿಗಾಗಿ ಅನಿರುದ್ಧ್ ಪಡೆಯುತ್ತಿರುವ ಸಂಭಾವನೆ?

0
917

ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಬೇಕೆಂದರೆ ಕಿರುತೆರೆಯ ಮೂಲಕವೇ ಕಲಾವಿದರು ಲಗ್ಗೆ ಇಡಬೇಕಾಗಿದೆ. ಕೇವಲ ಸಿನಿಮಾಗಳಿಗೆ ಮಾತ್ರ ಸೀಮಿತವಾಗದೆ ಜನರು ಧಾರಾವಾಹಿಗಳನ್ನು ಸಹ ನೋಡಲು ಬಯಸುತ್ತಾರೆ. ಬಹಳ ಇಷ್ಟ ಪಟ್ಟು ಕುಟುಂಬಸ್ಥರ ಜೊತೆ ತಮ್ಮ ನೆಚ್ಚಿನ ಸೀರಿಯಲ್ ಅನ್ನು ವೀಕ್ಷಿಸುತ್ತಾರೆ. ಹೌದು ಸದ್ಯಕ್ಕೆ ಈಗ ಜೊತೆ ಜೊತೆಯಲಿ ಸೀರಿಯಲ್ ಸಿಕ್ಕಾಪಟ್ಟೆ ಜನರ ಗಮನವನ್ನು ಸೆಳೆಯುತ್ತಿದ್ದು, ಬೇರೆ ಧಾರಾವಾಹಿಗಳನ್ನು ಹಿಂದಕ್ಕೆ ಹಾಕಿ ಟಿ ಆರ್ ಪಿ ರೇಟ್ ನಲ್ಲಿ ಅಗ್ರ ಸ್ಥಾನವನ್ನು ಈ ಸೀರಿಯಲ್ ಪಡೆದುಕೊಂಡಿದೆ. ಬಹಳ ವರ್ಷಗಳ ಕೆಳಗೆ ಜೊತೆ ಜೊತೆಯಲಿ ಸೀರಿಯಲ್ ಜಿ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದು, ವಿಭಿನ್ನವಾದ ಪ್ರೇಮ ಕಥೆಗೆ ವೀಕ್ಷಕರು ಮಾರು ಹೋಗಿದ್ದರು. ಹೊಸ ದಾಖಲೆಯನ್ನು ಸಹ ಆ ಧಾರವಾಹಿ ಬರೆದಿತ್ತು. ಮುಂದೆ ಓದಿ

ಆರ್ಯವರ್ಧನ್ ಪಾತ್ರ ಜನರ ಮನಸ್ಸನ್ನು ಗೆಲ್ಲುತ್ತಿದೆ

ಆದರೆ ಈ ಹೊಸ ಧಾರಾವಾಹಿಯಲ್ಲಿ ಅನಿರುದ್ಧ್ ಅವರ ಅಭಿನಯ ವೀಕ್ಷರನ್ನು ಧಾರಾವಾಹಿಯ ಕಡೆಗೆ ಸೆಳೆಯುತ್ತಿದೆ. ಪ್ರತಿ ದಿನ ಸಂಜೆ 8:20 ಕ್ಕೆ ಈ ಧಾರವಾಹಿ ಜಿ ಕನ್ನಡದಲ್ಲಿ ಪ್ರಸಾರವಾಗುತ್ತಿದೆ. ಅನಿರುದ್ದ್ ಅವರು ಖ್ಯಾತ ಕಂಪನಿಯ ಉದ್ಯಮಿಯಾಗಿ ಧಾರಾವಾಹಿಯಲ್ಲಿ ಆರ್ಯವರ್ಧನ್ ಎನ್ನುವ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಮೊದಲನೆ ಬಾರಿಗೆ ಮೇಘಾ ಶೆಟ್ಟಿ ಎನ್ನುವ ಯುವ ಪ್ರತಿಭೆ ಸೀರಿಯಲ್ ನಲ್ಲಿ ನಟಿಸಿದ್ದು, ತನ್ನ ನಟನೆಯಿಂದಾನೆ ಜನರನ್ನು ಆಕರ್ಷಿಸುತ್ತಿದ್ದಾರೆ. ಪ್ರಥಮವಾಗಿ ನಟಿಸಿದ್ದರು ಸಹ ಪರಿಪೂರ್ಣವಾದ ಅಭಿನಯವನ್ನು ನಾವು ಧಾರಾವಾಹಿಯಲ್ಲಿ ನೋಡಬಹುದಾಗಿದೆ.

ದುಬಾರಿ ಸಂಭಾವನೆ

ಟಿ ಆರ್ ಪಿ ವಿಷಯದಲ್ಲಿ ಯಶಸ್ಸು ಸಾಧಿಸಿ ಮುನ್ನುಗ್ಗುತ್ತಿರುವ ಧಾರವಾಹಿ ಇದಾಗಿದ್ದು, ಸೀರಿಯಲ್ ನಲ್ಲಿ ನಟಿಸುವುದಕ್ಕಾಗಿ ಅನಿರುದ್ಧ್ ಅವರ ಸಂಭಾವನೆ ಎಷ್ಟಿರಬಹುದೆಂದು ತಿಳಿದುಕೊಳ್ಳುವ ಕುತೂಹಲ ಜನರಿಗೆ ಇರುತ್ತದೆ. ದಿನಕ್ಕೆ ಇವರು 35,000 ಹಣವು ಸಂಭಾವನೆಯನ್ನಾಗಿ ಪಡೆಯುತ್ತಿದ್ದಾರೆ ಎನ್ನುವ ವಿಚಾರ ಮೂಲಗಳ ಪ್ರಕಾರ ತಿಳಿದು ಬಂದಿದೆ. ಇನ್ನು ಮೇಘಾ ಶೆಟ್ಟಿ ಅವರು ದಿನಕ್ಕೆ 8000 ಹಣವನ್ನು ತೆಗೆದುಕೊಳ್ಳುತ್ತಿದ್ದಾರೆ.

ಮುಂದಿನ ಎಪಿಸೋಡ್ಸ್ ಗಾಗಿ ಕಾತುರದಿಂದ ಜನರು ಕಾಯುತ್ತಿರುತ್ತಾರೆ

ಕೆಲ ಧಾರಾವಾಹಿಗಳನ್ನು ನೋಡುತ್ತಿದ್ದರೆ ವೀಕ್ಷಕರಿಗೆ ಬಹಳ ಬೇಗ ಬೇಸರವಾಗಿ ಬಿಡುತ್ತದೆ. ಕಥೆಯನ್ನು ಎಳೆದು ಎಳೆದು, ಮನೋರಂಜನೆಗೆ ಹೆಚ್ಚಿನ ಪ್ರಮಾಣದ ಆದ್ಯತೆಯನ್ನು ನೀಡದೆ ಬೇರೆಯೆ ಒಂದು ಹಂತಕ್ಕೆ ಕರೆದುಕೊಂಡು ಹೋಗುತ್ತಾರೆ.

ಆದರೆ ಇನ್ನು ಕೆಲ ಧಾರಾವಾಹಿಗಳನ್ನ ನೋಡುತ್ತಿದ್ದರೆ ಇಷ್ಟು ಬೇಗ ಮುಗಿದುಹೋಯ್ತಾ ಎಂದು ಅನಿಸುತ್ತದೆ. ಕ್ಷಣ ಕ್ಷಣಕ್ಕು ಜನರ ಮನಸ್ಸಿನಲ್ಲಿ ಕುತೂಹಲವನ್ನು ಹುಟ್ಟಿಸುತ್ತದೆ. ಮುಂದಿನ ಎಪಿಸೋಡ್ಸ್ ಗಾಗಿ ಕಾತುರದಿಂದ ಜನರು ಕಾಯುತ್ತಿರುತ್ತಾರೆ ಅಂತಹ ಧಾರಾವಾಹಿಗಳು ಮಾತ್ರ ಜನರ ಹೃದಯದಲ್ಲಿ ಶಾಶ್ವತವಾಗಿ ಉಳಿದುಕೊಳ್ಳುತ್ತವೆ.

LEAVE A REPLY

Please enter your comment!
Please enter your name here