ದಯವಿಟ್ಟು ನನ್ನನ್ನು ಕ್ಷಮಿಸಿ ಎಂದು ಬಹಳ ನೋವಿನಿಂದ ನಟ ಅನಿರುದ್ದ್ ಹೇಳಿದ್ದಾದ್ರೂ ಯಾರಿಗೆ?

0
1113

ಕನ್ನಡದ ಕಿರುತೆರೆ ಕಾರ್ಯಕ್ರಮಗಳು ಅಂದ್ರೆ ಜನರಿಗೆ ಬಹಳ ಇಷ್ಟ. ಅದರಲ್ಲೂ ಧಾರಾವಾಹಿಗಳ ಬಗ್ಗೆ ಏನು ಮಾತಾಡುವುದಕ್ಕೆ ಆಗುವುದಿಲ್ಲ. ಯಾಕಂದ್ರೆ ಸಂಜೆ ೬ ಗಂಟೆ ಆಯಿತು ನದ್ರೆ ಸಾಕು ಎಲ್ಲರು ಧಾರಾವಾಹಿಗಳನ್ನು ನೋಡಲು ಕಿವಿ ಮುಂದೆ ಕುಳಿತುಕೊಳ್ಳುತ್ತಾರೆ. ಅದರಲ್ಲೂ ಕೆಲವೊಂದು ಧಾರಾವಾಹಿಗಳಿಗೆ ಸಿಕ್ಕಾಪಟ್ಟೆ ಫಿದಾ ಆಗಿದ್ದಾರೆ. ಅದರಲ್ಲಿ ಜೊತೆ ಜೊತೆಯಲಿ ಧಾರವಾಹಿ ಕೂಡ ಒಂದಾಗಿದೆ. ಹೌದು. ನಟ ಅನಿರುದ್ಧ್ ಅಭಿನಯದ ಈ ಧಾರವಾಹಿ ಎಲ್ಲರ ಮನ ಗೆದ್ದಿದೆ. ಪ್ರಾರಂಭದ ದಿನದಿಂದಲೇ ಒಳ್ಳೆಯ ರೆಸ್ಪಾನ್ಸ್ ಪಡೆದ ಈ ಧಾರವಾಹಿ, ದಿನದಿಂದ ದಿನಕ್ಕೆ ಹೆಚ್ಚು ಜನಪ್ರಿಯತೆ ಪಡೆಯುತ್ತಿದೆ. ಆದ್ರೆ ಈ ಸಮಯದಲ್ಲಿ ನಟ ಅನಿರುದ್ಧ್ ಬೇಸರವಾಗಿ ಅಭಿಮಾನಿಗಳಲ್ಲಿ ಕ್ಷಮೆ ಯಾಚಿಸಿದ್ದಾರೆ.

ಅಭಿಮಾನಿಗಳಲ್ಲಿ ಕ್ಷಮೆ ಕೇಳಿದ ಅನಿರುದ್ಧ್

ನಟ ಅನಿರುದ್ಧ್ ಅವರು ಇತ್ತೀಚಿಗೆ ಧಾರಾವಾಹಿಯಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಯಾಕಂದ್ರೆ ಧಾರವಾಹಿ ದಿನೇದಿನೇ ಹೆಚ್ಚು ಜನಪ್ರಿಯತೆ ಪಡೆಯುತ್ತಿರೋದ್ರಿಂದ, ಅವರು ಅಭಿಮಾನಿಗಳ ಮನಸ್ಸಲ್ಲಿ ಆಳವಾಗಿ ಉಳಿಯಲು ಹೆಚ್ಚು ಪ್ರಯತ್ನಿಸುತ್ತಿದ್ದಾರೆ. ಆದ್ರೆ ಈ ಮಧ್ಯೆ ಅವರು ಕ್ಷಮೆ ಕೇಳಿರುವುದೇ ಆಶ್ಚರ್ಯವಾಗಿದೆ. ಹೌದು. ಅವರು ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ನಟಿಸಲು ಶುರು ಮಾಡಿದಾಗಿನಿಂದ ಅವರಿಗೆ ಸಿಕ್ಕಾಪಟ್ಟೆ ಅಭಿಮಾನಿಗಳಾಗಿದ್ದಾರಂತೆ. ಹಾಗಾಗಿ ಅವರೆಲ್ಲರೂ ಫೇಸ್ ಬುಕ್ ನಲ್ಲಿ ಮೆಸೇಜ್ ಗಳನ್ನು ಕಳಿಸುತ್ತಿದ್ದಾರಂತೆ. ಆದರೆ ಆ ಮೆಸೇಜ್ ಗಳಿಗೆ ಇವರು ಉತ್ತರ ನೀಡಲು ಆಗುತ್ತಿಲ್ಲವಂತೆ. ಯಾಕಂದ್ರೆ ಒಂದೇ ದಿನಕ್ಕೆ ಸಾವಿರಾರು ಮೆಸೇಜ್ ಗಳು ಬರುತ್ತಿರೋದ್ರಿಂದ ಉತ್ತರ ನೀಡಲಾಗದೆ ಅಭಿಮಾನಿಗಳಲ್ಲಿ ಕ್ಷಮೆ ಕೇಳಿದ್ದಾರೆ.

ನನ್ನನ್ನು ದಯವಿಟ್ಟು ಕ್ಷಮಿಸಿ – ಅನಿರುದ್ಧ್

ಎಲ್ಲಾ ನನ್ನ ಪ್ರೀತಿಯ ಸ್ನೇಹಿತರಿಗೆ ನಮಸ್ಕಾರ. ನಿಮ್ಮೆಲ್ಲರ ಪ್ರೀತಿಯಿಂದ ಫೇಸ್ ಬುಕ್ ನಲ್ಲಿ ಒಂದು ಲಕ್ಷ ಸ್ನೇಹಿತರ ಪ್ರೀತಿಯನ್ನು ನಾನು ಪಡೆದಿದ್ದೇನೆ. ನಿಮ್ಮೆಲ್ಲರ ಪ್ರೀತಿಗೆ ನಾ ಸದಾ ಚಿರಋಣಿ. ಇಂದು ಒಂದೇ ದಿನ ಮೂರು ಸಾವಿರಕ್ಕೂ ಹೆಚ್ಚು ಮೆಸೇಜ್ ಗಳು ಬಂದಿವೆ. ಆದರೆ ಅವುಗಳಿಗೆ ಉತ್ತರ ನೀಡಲು ನನ್ನಿಂದ ಆಗುತ್ತಿಲ್ಲ. ಯಾಕಂದ್ರೆ ಎಲ್ಲಾ ಮೆಸೆಜ್ ಓದಲು ಸಮಯ ಸಾಲದು. ದಯಮಾಡಿ ಕ್ಷಮೆ ಇರಲಿ. ಮೆಸೇಜ್ ಗಳ ಮೂಲಕ, ಕಮೆಂಟ್ ಗಳ ಮೂಲಕ ನನಗೆ ಪ್ರೀತಿ ತೋರಿದ ಎಲ್ಲರಿಗೂ ಹಾಗೂ ಜೊತೆ ಜೊತೆಯಲಿ ಧಾರಾವಾಹಿಯನ್ನು ಇಷ್ಟಪಟ್ಟು ನೋಡುವ ಮೂಲಕ ಪ್ರೋತ್ಸಾಹಿಸುತ್ತಿರುವ ಎಲ್ಲಾ ನನ್ನ ತಾಯಂದಿರಿಗೂ, ಸಹೋದರ ಸಹೋದರಿಯರಿಗೂ, ಜೀ ವಾಹಿನಿ ಹಾಗೂ ನನ್ನ ಪ್ರೀತಿಯ ಜೊತೆಜೊತೆಯಲಿ ಸಂಪೂರ್ಣ ತಂಡಕ್ಕೂ ನನ್ನ ಮನಃಪೂರ್ವಕ ಧನ್ಯವಾದಗಳು. ನಿಮ್ಮ ಪ್ರೀತಿ ಸದಾ ಹೀಗೆ ಇರಲಿ. ಸದಾ ನಿಮ್ಮವ, ನಿಮ್ಮ ಅನಿರುದ್ಧ್” ಎಂದು ಬರೆದು ಕ್ಷಮೆಕೇಳಿದ್ದಾರೆ

ಒಟ್ಟಿನಲ್ಲಿ ನಟ ಅನಿರುದ್ಧ್ ಅವರು ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ನಟಿಸಲು ಮುಂದಾದಾಗಿಂದ ಅವರು ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಜೊತೆಗೆ ಅನೇಕ ಅಭಿಮಾನಿಗಳನ್ನು ಪಡೆಯುತ್ತಿದ್ದಾರೆ. ಆದ್ರೆ ಅಭಿಮಾನಿಗಳ ಮೆಸೇಜ್ ಗಳಿಗೆ ಸರಿಯಾಗಿ ಸ್ಪಂದಿಸಲಾಗದೆ ಇಂದು ಕ್ಷಮೆ ಕೇಳಿದ್ದಾರೆ.

LEAVE A REPLY

Please enter your comment!
Please enter your name here