ರಾಜಕೀಯ ಅನ್ನೋ ಅಖಾಡದಲ್ಲಿ ತಿಮಿಂಗಿಲದ ಬಾಯಿಗೆ ಸಿಲುಕುತ್ತಿರುವ ನಟಿ ಅಮೂಲ್ಯ

0
371
amulya election

ರಾಜಕೀಯ ಅನ್ನೋದು ಒಂದು ಚದುರಂಗ ಆಟವಿದ್ದಂತೆ ಎಂದು ರಾಜಕೀಯ ನಾಯಕರ ಜೊತೆ, ಇನ್ನಿತರರು ಸಹ ಯಾವಾಗಲು ಹೇಳುತ್ತಲೇ ಇರುತ್ತಾರೆ. ಹೌದು. ರಾಜಕಾರಣ ಅನ್ನೋದು ಚದುರಂಗ ಆಟವಿದ್ದಂತೆ. ಚದುರಂಗ ಆಟದಲ್ಲಿ ಯಾವಾಗ ಯಾವ ಕಾಯನ್ನು ನಡೆಸಬೇಕು ಅನ್ನೋದು ಆಟಗಾರನಿಗೆ ತಿಳಿದಿರಬೇಕು. ಹಾಗೆ ರಾಜಕಾರಣಿಯಾದವನು ಯಾವಾಗ, ಎಲ್ಲಿ ಯಾವ ಅಸ್ತ್ರವನ್ನು ಉಪಯೋಗಿಸಬೇಕು ಅನ್ನೋದು ತಿಳಿದಿರಬೇಕು. ಆಗ ಮಾತ್ರ ರಾಜಕೀಯಯ ನಡೆಸಲು ಆಗುತ್ತದೆ ಎಂದು ಹೇಳುತ್ತಾರೆ. ಹಾಗಾಗಿ ರಾಜಕೀಯದ ಬಗ್ಗೆ ತಿದಿರುವವರು ಮಾತ್ರ ರಾಜಕೀಯಕ್ಕೆ ಪ್ರವೇಶ ಮಾಡಬೇಕು ಅಂತ ಹೇಳುತ್ತಾರೆ. ಆದ್ರೆ ಈಗ ಹೇಗಾಗಿದೆ ಅಂದ್ರೆ ಎಲ್ಲರು ರಾಜಕೀಯಕ್ಕೆ ಬರುತ್ತಿದ್ದಾರೆ. ಹೌದು. ಈಗಾಗಲೇ ರಾಜಕೀಯದಲ್ಲಿ ಸಾಕಷ್ಟು ಜನ ಸಿನಿಮಾ ರಂಗದವರಿದ್ದಾರೆ. ಈಗ ಅದರ ಸಾಲಿಗೆ ಮತ್ತೊಬ್ಬರು ಸೇರುತ್ತಿದ್ದಾರೆ.

ರಾಜಕೀಯಕ್ಕೆ ಪಾದಾರ್ಪಣೆ ಮಾಡಲಿರುವ ನಟಿ ಅಮೂಲ್ಯ

ಒಂದು ಕಾಲದಲ್ಲಿ ಸ್ಕೂಲ್ ಡ್ರೆಸ್ ಧರಿಸಿ ಚೆಲುವಿನ ಚಿತ್ತಾರ ಅನ್ನೋ ಒಂದು ಪ್ರೇಮ ಆಧಾರಿತ ಸಿನಿಮಾ ಮಾಡಿದ ನಟಿ ಅಮೂಲ್ಯ, ಸ್ಯಾಂಡಲ್ ವುಡ್ ನಲ್ಲಿ ಸಿಕ್ಕಾಪಟ್ಟೆ ಹೆಸರು ಪಡೆದರು. ಅಲ್ಲಿಂದ ಅಮೂಲ್ಯ ಸಾಲು ಸಾಲು ಸಿನಿಮಾಗಳಲ್ಲಿ ನಟಿಸಿದರು. ಹೌದು. ತನ್ನ ಚಿಕ್ಕ ವಯಸ್ಸಿನಲ್ಲೇ ಸಿನಿಮಾ ರಂಗಕ್ಕೆ ಕಾಲಿಟ್ಟ ಅಮೂಲ್ಯ, ಮೊದಲು ಬಾಲ ನಟಿಯಾಗಿ ನಟಿಸಿದ್ದರು. ನಂತರ ನಾಯಕಿಯಾಗಿ ಬಣ್ಣ ಹಚ್ಚಿದ್ದರು. ಆದ್ರೆ ಮದುವೆ ಆದ ಬಳಿಕ ಸಿನಿಮಾ ಬಗ್ಗೆ ತಮ್ಮ ಆಸಕ್ತಿಯನ್ನು ಕಡಿಮೆ ಮಾಡಿಕೊಂಡರು. ಈಗಂತೂ ಅವರು ಯಾವ ಸಿನಿಮಾಗಳಲ್ಲೂ ನಟಿಸುತ್ತಿಲ್ಲ. ಬದಲಿಗೆ ತಮ್ಮ ಕುಟುಂಬದ ಜೊತೆ ಆರಾಮಾಗಿ ಜೀವನ ನಡೆಸುತ್ತಿದ್ದಾರೆ. ಆದ್ರೆ ಈಗ ಅವರ ವಿಚಾರವಾಗಿ ಇದ್ದಕ್ಕಿದ್ದಂತೆ ಒಂದು ಸುದ್ದಿ ಹೊರ ಬಿದ್ದಿದೆ. ಹೌದು. ನಟಿ ಅಮೂಲ್ಯ ರಾಜಕೀಯಕ್ಕೆ ಪ್ರವೇಶಿಸುತ್ತಿದ್ದಾರೆ. ಅದು ಶಾಸಕಿಯ ಸ್ಥಾನಕ್ಕೆ.

ಉಪಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ನಿರ್ಧಾರ ಮಾಡಿದ್ದಾರೆ

ಈಗ ರಾಜ್ಯ ರಾಜಕಾರದಲ್ಲಿ ಸಾಕಷ್ಟು ಗೊಂದಲಗಳು ಸೃಷ್ಠಿಯಾಗಿವೆ. ಅದರಂತೆ ಈಗ ಮತ್ತೊಮ್ಮೆ ಉಪಚುನಾವಣೆ ನಡೆಸಬೇಕು ಅನ್ನೋ ಮಾತುಕತೆಗಳು ನಡೆಯುತ್ತಿವೆ. ಹಾಗಾಗಿ ಈಗಿನ ಉಪಚುನಾವಣೆಯಲ್ಲಿ ನಟಿ ಅಮೂಲ್ಯ ಸ್ಪರ್ಧಿಸಲು ನಿರ್ಧಾರ ಮಾಡಿದ್ದಾರಂತೆ. ಸ್ವತಃ ಈ ಬಗ್ಗೆ ನಟಿ ಅಮೂಲ್ಯ ಅವರೇ ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ. ಹೌದು. ನಟಿ ಅಮೂಲ್ಯ ಈ ಬಗ್ಗೆ ಅವರೇ ಹೇಳಿದ್ದಾರೆ. ನಾನು ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಲು ನಿರ್ಧಾರ ಮಾಡಿದ್ದೇನೆ ಎಂದು ತಿಳಿಸಿದ್ದಾರೆ. ಇನ್ನು ಅಮೂಲ್ಯ ಅವರಿಗೆ ಕಾಂಗ್ರೆಸ್ ನ ಎಲ್ಲ ನಾಯಕರು ಬೆನ್ನೆಲುಬಾಗಿ ನಿಲ್ಲುವುದಾಗಿ ತಿಳಿಸಿದ್ದಾರಂತೆ. ಎಲ್ಲಕ್ಕಿಂತ ಹೆಚ್ಚಾಗಿ ಡಿಕೆ ಬ್ರದರ್ಸ್ ಅಮೂಲ್ಯ ಗೆ ಸಂಪೂರ್ಣ ಸಾಥ್ ನೀಡುತ್ತಿದ್ದಾರಂತೆ.

ಮಾಜಿ ಶಾಸಕ ಮುನಿರತ್ನ ವಿರುದ್ಧ ಕಣಕ್ಕಿಳಿಯಲಿರುವ ಅಮೂಲ್ಯ

ಇನ್ನು ನಟಿ ಅಮೂಲ್ಯ ರಾಜಕೀಯಕ್ಕೆ ಪ್ರವೇಶಿಸುತ್ತಾರೆ ಅನ್ನೋ ಮಾತುಗಳೇ ಬಹಳಷ್ಟು ಕುತೂಹಲ ಹುಟ್ಟಿಸಿದೆ. ಆದ್ರೆ ಅವರು ಯಾರ ವಿರುದ್ಧ ನಿಲ್ಲುತ್ತಾರೆ ಅನ್ನೋ ತಿಳಿದುಕೊಳ್ಳುವ ಕಾತುರ ಎಲ್ಲರಿಗು ಇತ್ತು. ಈ ಬಗ್ಗೆ ಅವರೇ ತಿಳಿಸಿದ್ದಾರೆ. ನಟಿ ಅಮೂಲ್ಯ ಆರ್ ಆರ್ ನಗರ ಕ್ಷೇತ್ರದಿಂದ ಸ್ಪರ್ಧಿಸಲು ನಿರ್ಧರಿಸಿದ್ದಾರಂತೆ. ಹೌದು. ಮಾಜಿ ಶಾಸಕ ಮುನಿರತ್ನ ಅವರ ವಿರುದ್ಧ ಸ್ಪರ್ದಿಸಲಿದ್ದಾರೆ. ಈ ಬಗ್ಗೆ ಸ್ವತಃಹ ಅವರೇ ತಿಳಿಸಿದ್ದಾರೆ. ಆರ್ ಆರ್ ನಗರದಲ್ಲಿ ಮೊದಲಿನಿಂದಲೂ ಮುನಿರತ್ನ ಅವರೇ ಗೆಲ್ಲುತ್ತಿದ್ದಾರೆ. ಅಲ್ಲದೆ ಅದು ಅವರ ಭದ್ರಕೋಟೆಯಾಗಿದೆ. ಹೀಗಿರುವಾಗ ಅಮೂಲ್ಯ, ಮುನಿರತ್ನ ವಿರುದ್ಧ ಸ್ಪರ್ಧಿಸಲು ನಿರ್ಧಾರ ಮಾಡಿದ್ದಾರಂತೆ.

ಒಟ್ಟಿನಲ್ಲಿ ಇಷ್ಟು ವರ್ಷ ಸಿನಿಮಾ ಅಂತ ಸಿನಿಮಾ ರಂಗದಲ್ಲಿ ನಟಿಸಿದ್ದ ಅಮೂಲ್ಯ ಈಗ ರಾಜಕೀಯಕ್ಕೆ ಪ್ರವೇಶ ಮಾಡುತ್ತಿದ್ದಾರೆ. ಅದು ಮಾಜಿ ಶಾಸಕ ಮುನಿರತ್ನ ಅವರ ವಿರುದ್ಧ ಸ್ಪರ್ಧಿಸಲು ನಿರ್ಧಾರ ಮಾಡಿದ್ದಾರೆ. ಹಾಗಾದ್ರೆ ಈ ಸ್ಪರ್ಧೆಯಲ್ಲಿ ವಿಜಯ ಮಾಲೆ ಯಾರ ಕೊರಳಿಗೆ ಬೀಳಲಿದೆ ಅನ್ನೋದನ್ನು ಕಾದು ನೋಡಬೇಕಿದೆ.

LEAVE A REPLY

Please enter your comment!
Please enter your name here