ವಿಶ್ವದ ಅತ್ಯಂತ ಮೆಚ್ಚುಗೆ ಪಡೆದ ವ್ಯಕ್ತಿಗಳ ಪಟ್ಟಿಯಲ್ಲಿ ಮೋದಿ, ಅಮಿತಾಬ್ ಹಾಗೂ ದೀಪಿಕಾ

0
700

ಒಬ್ಬೊಬ್ಬರಿಗೂ ಒಬ್ಬೊಬ್ಬರು ಅಂದ್ರೆ ಇಷ್ಟ. ಹೌದು. ಈಗಿನ ಕಾಲದಲ್ಲಿ ಯಾರಿಗೆ, ಯಾರು ಯಾವ ಕಾರಣಕ್ಕೆ ಇಷ್ಟ ಆಗ್ತಾರೆ ಅಂತ ಗೊತ್ತಾಗಲ್ಲ. ಯಾಕಂದ್ರೆ ನಮ್ಮಲ್ಲಿ ಸಾಕಷ್ಟು ನೆಚ್ಚಿನ ಜನರಿದ್ದಾರೆ. ಹೌದು. ಸಮಾಜ ಸೇವೆ ನಾಯಕರು, ರಾಜಕೀಯ ನಾಯಕರು ಹಾಗು ಸಿನಿಮಾ ಕಲಾವಿದರು ಈ ರೀತಿ ಹತ್ತು ಹಲವು ಕ್ಷೇತ್ರದ ನಾಯಕರನ್ನು ಜನರು ಇಷ್ಟ ಪಡುತ್ತಾರೆ. ಹಾಗಾಗಿ ಈ ರೀತಿ ಜನರು ಯಾರನ್ನು ಹೆಚ್ಚಾಗಿ ಇಷ್ಟ ಪಡುತ್ತಾರೆ ಅಂತ ತಿಳಿದುಕೊಳ್ಳಲು ಒಂದು ಸರ್ವೆಯನ್ನು ಮಾಡುತ್ತಿದ್ದಾರೆ. ಹೌದು. ಪ್ರತಿ ಬಾರಿಯೂ ‘ಯೂ ಗೋವ್ ಸರ್ವೆ’ ನಡೆಸಲಾಗುತ್ತದೆ. ಅದರಲ್ಲಿ ಜಗತ್ತಿನ ನೆಚ್ಚಿನ ವ್ಯಕ್ತಿಗಳನ್ನು ಪಟ್ಟಿ ಮಾಡಲಾಗುತ್ತದೆ. ಅವರಿಗೆ ಜನರು ವೋಟ್ ಮಾಡುತ್ತಾರೆ. ಇದರಿಂದ ಯಾರು ಯಾವ ಸ್ಥಾನದಲ್ಲಿದ್ದಾರೆ ಎಂಬುದು ತಿಳಿಯುತ್ತದೆ.

ಅತ್ಯಂತ ಮೆಚ್ಚುಗೆ ಪಡೆದ ವ್ಯಕ್ತಿಗಳ ಪಟ್ಟಿಯಲ್ಲಿ ಅಮಿತಾಬ್, ದೀಪಿಕಾ

ಪ್ರತಿಬಾರಿಯಂತೆ ಈ ಬಾರಿಯೂ ಸಹ ‘ಯೂ ಗೋವ್ ಸಂಸ್ಥೆ’ ಸರ್ವೆಯನ್ನು ನಡೆಸಿದೆ. ಹೌದು. 2019ರ ಯೂ ಗೋವ್ ಸರ್ವೆಯಲ್ಲಿ ಬಾಲಿವುಡ್ ನಟರು ಟಾಪ್ 20ರ ಪಟ್ಟಿಯಲ್ಲಿ ಸ್ಥಾನ ಪಡೆದು ಸಾಕಷ್ಟು ಜನ ಮಿಂಚುತ್ತಿದ್ದಾರೆ. ಅದರಲ್ಲಿ ಟಾಪ್ 20ರಲ್ಲಿ ಬಿಗ್ ಬಿ ಅಮಿತಾಭ್ ಬಚ್ಚನ್ ಮತ್ತು ನಟಿ ದೀಪಿಕಾ ಪಡುಕೋಣೆ ಮುಂಚೂಣಿಯಲ್ಲಿದ್ದಾರೆ. ಹೌದು. ಟಾಪ್ 20ರ ಲಿಸ್ಟ್ ನಲ್ಲಿ ಬಾಲಿವುಡ್ ಬಿಗ್ ಬಿ 12ನೆ ಸ್ಥಾನದಲ್ಲಿದ್ರೆ, ನಟಿ ದೀಪಿಕಾ ಪಡುಕೋಣೆ 13ನೇ ಸ್ಥಾನದಲ್ಲಿದ್ದಾರೆ. ಇನ್ನು ನಟ ಶಾರುಖ್ ಖಾನ್ ಮತ್ತು ಸಲ್ಮಾನ್ ಖಾನ್ ಕ್ರಮವಾಗಿ 16 ಮತ್ತು 18ನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಇನ್ನು ಮಹಿಳೆಯರ ವಿಭಾಗದಲ್ಲಿ ದೀಪಿಕಾ 13ನೇ ಸ್ಥಾನ ಪಡೆದುಕೊಂಡರೆ, ಪ್ರಿಯಾಂಕಾ ಚೋಪ್ರ 14 ಸ್ಥಾನ ಮತ್ತು ನಟಿ ಐಶ್ವರ್ಯ ರೈ 16ನೇ ಸ್ಥಾನದಲ್ಲಿದ್ದಾರೆ. ಆದ್ರೆ ಈ ಬಾರಿ ಟಾಪ್ 20ರ ಪಟ್ಟಿಯಲ್ಲಿ ಬಾಲಿವುಡ್ ನಟಿ ಸುಷ್ಮಿತಾ ಸೇನ್ ಹೊಸದಾಗಿ ಜಾಗ ಪಡೆದುಕೊಂಡಿದ್ದಾರೆ. ಹೌದು. ಸುಷ್ಮಿತಾ ಸೇನ್ 17ನೇ ಸ್ಥಾನದಲ್ಲಿದ್ದಾರೆ.

ಭಾರತದ ಪ್ರಧಾನಿ ನರೇಂದ್ರ ಮೋದಿ 6ನೇ ಸ್ಥಾನದಲ್ಲಿದ್ದಾರೆ

ಕಳೆದ ಬಾರಿಗಿಂತ ಈ ಬಾರಿ ಪಟ್ಟಿಯಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಹೌದು. ಈ ಬಾರಿ ನಟ ಅಮಿತಾಭ್ ಬಚ್ಚನ್ ಸ್ಥಾನ ಮೂರಕ್ಕೆ ಕುಸಿದಿದೆ. ಇನ್ನು ನಟಿ ಐಶ್ವರ್ಯ ರೈ ಮತ್ತು ಪ್ರಿಯಾಂಕಾ ಚೋಪ್ರ ಸ್ಥಾನ ಕೂಡ ಕಮ್ಮಿ ಆಗಿದೆ. ಆದ್ರೆ ದೀಪಿಕಾ ಕಳೆದ ವರ್ಷದಂತೆ 13ನೇ ಸ್ಥಾನವನ್ನು ಉಳಿಸಿಕೊಂಡಿದ್ದಾರೆ. ಇನ್ನು ಪುರುಷರ ವಿಭಾಗದ ಮೊದಲ ಸ್ಥಾನದಲ್ಲಿ ಮಿಂಚಿದವರನ್ನು ನೋಡುವುದಾದ್ರೆ ಅಮೇರಿಕಾದ ಖ್ಯಾತ ಉದ್ಯಮಿ ಬಿಲ್ ಗೇಟ್ಸ್ ಟಾಪ್ ಒನ್ ನಲ್ಲಿ ಇದ್ದಾರೆ. ಎರಡನೇ ಸ್ಥಾನ ಅಮೆರಿಕಾದ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಪಾಲಾಗಿದೆ. ವಿಶೇಷ ಅಂದ್ರೆ ಭಾರತದ ಪ್ರಧಾನಿ ನರೇಂದ್ರ ಮೋದಿ 6ನೇ ಸ್ಥಾನದಲ್ಲಿದ್ದಾರೆ. ಕಳೆದ ಬಾರಿಗಿಂತ ಈ ಬಾರಿ ಮೋದಿಯ ಸ್ಥಾನ ಏರಿಕೆಯಾಗಿದೆ. ಇನ್ನು ಮಹಿಳೆಯರ ವಿಭಾಗದಲ್ಲಿ ಟಾಪ್ ಒನ್ ಸ್ಛಾನದಲ್ಲಿ ಮಿಚೆಲ್ ಒಬಾಮ ಇದ್ದಾರೆ. ಕಳೆದ ವರ್ಷ ಮೊದಲ ಸ್ಥಾನದಲ್ಲಿದ್ದ ಎಂಜಲೀನಾ ಜೋಲಿಯನ್ನು ಹಿಂದಿಕ್ಕಿ ಈ ಬಾರಿ ಮೊದಲ ಸ್ಥಾನದಲ್ಲಿ ಮಿಂಚುತ್ತಿದ್ದಾರೆ. ಯು ಕೆ ಮೂಲದ ಯೂ ಗೋವ್ ಸಂಸ್ಥೆ ಪ್ರತೀವರ್ಷ ಈ ಸರ್ವೆಯನ್ನು ಮಾಡುತ್ತಾ ಬಂದಿದೆ. ಸಾರ್ವಜನಿಕರ ಅಭಿಪ್ರಾಯದ ಮೇರೆಗೆ ಈ ರ್ಯಾಂಕ್ ಅನ್ನು ನೀಡಲಾಗುತ್ತೆ.

ಈ ರೀತಿ ಸಾರ್ವಜನಿಕರ ಅಭಿಪ್ರಾಯದ ಮೇರೆಗೆ ಈ ಸರ್ವೆಯನ್ನು ಮಾಡಲಾಗುತ್ತದೆ. ಹಾಗಾಗಿ ಈ ಬಾರಿಯ ಸರ್ವೆಯಲ್ಲಿ ಈ ಇಷ್ಟು ಜನ, ಈ ರೀತಿಯ ಸ್ಥಾನಗಳನ್ನು ಪಡೆದುಕೊಂಡಿದ್ದಾರೆ.

LEAVE A REPLY

Please enter your comment!
Please enter your name here