ಅಭಿಷೇಕ್ ಜೊತೆ ಸಿನಿಮಾ ಮಾಡುವುದಿಲ್ಲ ಎಂದು ತಿಳಿಸಿದ ನಿರ್ದೇಶಕ ನಾಗಶೇಖರ್

0
1078
amar movie

ಒಂದು ಸಿನಿಮಾ ಮಾಡಬೇಕು ಅಂದ್ರೆ ಚಿತ್ರತಂಡ ನಿಜಕ್ಕೂ ಬಹಳ ಶ್ರಮ ಪಟ್ಟಿರುತ್ತೆ. ಯಾಕಂದ್ರೆ ಒಂದು ಸಿನಿಮಾವನ್ನ ತೆರೆ ಮೇಲೆ ತರೋದು ಅಂದ್ರೆ ಅಷ್ಟು ಸುಲಭದ ಮಾತಲ್ಲ. ಆದರೂ ನಿರ್ಮಾಪಕರು ಬಂಡವಾಳ ಹೂಡಿ, ನಿರ್ದೇಶಕರು ಆಕ್ಷನ್ ಕಟ್ ಹೇಳುವುದರ ಮೂಲಕ ಸಿನಿಮಾವನ್ನ ತೆರೆ ಮೇಲೆ ತರುತ್ತಾರೆ. ಒಂದು ಸಿನಿಮಾಗೆ ಜೀವಾಳ ಅಂದ್ರೆ ಅದು ನಿರ್ಮಾಪಕ ಹಾಗೂ ನಿರ್ದೇಶಕ. ಯಾಕಂದ್ರೆ, ನಿರ್ಮಾಪಕ ಬಂಡವಾಳ ಹೂಡಿದ್ರೆ ಮಾತ್ರ, ಸಿನಿಮಾ ಮಾಡೋಕೆ ಆಗುತ್ತೆ. ಇನ್ನೂ ನಿರ್ದೇಶಕ ಆಕ್ಷನ್ ಕಟ್ ಹೇಳಿದ್ರೆ ಮಾತ್ರ, ಸಿನಿಮಾ ತೆರೆ ಮೇಲೆ ಬರುತ್ತದೆ. ಹಾಗಾಗಿ ನಿರ್ಮಾಪಕ ಹಾಗೂ ನಿರ್ದೇಶಕ ಸಿನಿಮಾದ ಜೀವಾಳವಾಗಿರುತ್ತಾರೆ.

ಇನ್ನೂ ಇತ್ತೀಚಿಗೆ ಸ್ಯಾಂಡಲ್ ವುಡ್ ನಲ್ಲಿ ವಿಭಿನ್ನ ಕಥೆಯನ್ನ ಒಳಗೊಂಡಿರುವ ಸಿನಿಮಾಗಳು ತೆರೆ ಮೇಲೆ ಬರುತ್ತಿವೆ. ವಿಭಿನ್ನ ಕಥೆಯನ್ನ ತೆರೆ ಮೇಲೆ ತರುವುದರ ಮೂಲಕ, ನಿರ್ಮಾಪಕ, ನಿರ್ದೇಶಕ ಹಾಗೂ ನಾಯಕ ಒಳ್ಳೆ ರೀತಿಯ ಹೆಸರನ್ನ ಪಡೆಯುತ್ತಿದ್ದಾರೆ. ಇನ್ನೂ ಕಳೆದ ವಾರ ಬಿಡುಗಡೆಯಾದ ಸಿನಿಮಾದಲ್ಲಿ ನಟಿಸಿದ್ದ ನಮ್ಮ ನಾಯಕ, ಸ್ಯಾಂಡಲ್ ವುಡ್ ಗೆ ಮೊದಲ ಬಾರಿ ಎಂಟ್ರಿ ಕೊಟ್ಟವರಾಗಿದ್ದಾರೆ. ಹೌದು. ರೆಬಲ್ ಸ್ಟಾರ್ ಅಂಬರೀಷ್ ಅವರ ಪುತ್ರ ಅಭಿಷೇಕ್ ಅವರ, ಅಮರ್ ಚಿತ್ರ ಕಳೆದ ಶುಕ್ರವಾರ ಬಿಡುಗಡೆಯಾಗಿತ್ತು. ಇದು ಅವರ ಮೊದಲ ಸಿನಿಮಾವಾಗಿದೆ. ಆದ್ರೆ ಮೊದಲ ಸಿನಿಮಾದಲ್ಲಿ ಬಹಳಷ್ಟು ಊಹಾಪೋಹಗಳು ಕೇಳಿಬರುತ್ತಿವೆಯಂತೆ.

ಬೇಸರ ವ್ಯಕ್ತಪಡಿಸುತ್ತಿರುವ ನಿರ್ದೇಶಕ ನಾಗಶೇಖರ್

ಕಳೆದ ವಾರವಷ್ಟೇ ರೆಬಲ್ ಸ್ಟಾರ್ ಅವರ ಪುತ್ರ ಅಭಿಷೇಕ್ ಅವರ ಅಮರ್ ಚಿತ್ರ ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಆದ್ರೆ ಅಮರ್ ಚಿತ್ರದ ನಿರ್ದೇಶಕ ನಾಗಶೇಖರ್ ಬೇಸರ ವ್ಯಕ್ತಪಡಿಸುತ್ತಿದ್ದಾರಂತೆ. ಹೌದು. ಅಮರ್ ಚಿತ್ರಕ್ಕೆ ಹೊಗಳಿಕೆಯ ಜೊತೆಗೆ ತೆಗಳಿಕೆಯೂ ಹೆಚ್ಚಾಗಿ ಕೇಳಿ ಬರುತ್ತಿದೆ. ಇದು ನನ್ನಿಂದ ಸಹಿಸಲು ಆಗುತ್ತಿಲ್ಲ. ಪ್ರೇಕ್ಷಕರಿಗೆ ಸಿನಿಮಾ ನೋಡಬೇಡಿ ಅಂತ, ಹಿಂದೆಯಿಂದ ಯಾರೋ ಕೆಲವರು ಕಿವಿ ಊದುತ್ತಿದ್ದಾರೆ. ಇದರಿಂದ, ನನ್ನ ಮನಸ್ಸಿಗೆ ಬಹಳ ನೋವಾಗುತ್ತಿದೆ ಎಂದು ತಮ್ಮ ಬೇಸರ ವ್ಯಕ್ತಪಡಿಸಿದ್ದಾರೆ.

ನಾನು ಅಭಿಷೇಕ್ ಜೊತೆ ಸಿನಿಮಾ ಮಾಡೋದಿಲ್ಲ ಎಂದ ನಾಗಶೇಖರ್

ಸಿನಿಮಾ ಬಗ್ಗೆ ಕೆಲವರು ಹೇಳುತ್ತಿದ್ದ ಅಪಪ್ರಚಾರ ಕೇಳಿದ ನಾಗಶೇಖರ್ ಅವರು, ಸ್ವಲ್ಪ ಬೇಸರ ವ್ಯಕ್ತಪಡಿಸಿದರು. ಆದರೂ ಸಿನಿಮಾ ಅಂದ್ಮೇಲೆ, ಇವೆಲ್ಲಾ ಸಾಮಾನ್ಯ. ಆದ್ರೆ ಅದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳಬಾರದು ಎಂದು ಹೇಳಿದ್ದರು. ಆದ್ರೆ ಇದ್ದಕ್ಕಿದ್ದಂತೆ ನಾನು, ಅಭಿಷೇಕ್ ಜೊತೆ ಸಿನಿಮಾ ಮಾಡುವುದಿಲ್ಲ ಎಂದು ತಿಳಿಸಿದ್ದಾರೆ. ಈ ಮಾತನ್ನ ಕೇಳಿದ ಕೂಡಲೇ ಎಲ್ಲರೂ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಹೌದು. ನಾನು ಅಭಿಷೇಕ್ ಜೊತೆ ಸಿನಿಮಾ ಮಾಡುವುದಿಲ್ಲ. ಯಾಕಂದ್ರೆ ಅವರು, ಕೇವಲ ನನ್ನ ಜೊತೆಯಲ್ಲೇ ಸಿನಿಮಾ ಮಾಡುತ್ತಿದ್ದರೆ, ಬೇರೆ ಯಾವ ನಿರ್ದೇಶಕರು ಅವರನ್ನ ಸಿನಿಮಾಗೆ ಕರೆಯುವುದಿಲ್ಲ. ಹಾಗಾಗಿ ಅವರು ಬೇರೆ ನಿರ್ದೇಶಕರ ಜೊತೆ ಕೆಲಸ ಮಾಡಲಿ ಎಂದು ನಾಗಶೇಖರ್ ತಿಳಿಸಿದ್ದಾರೆ.

ಸಿನಿಮಾ ಮಾಡುವುದೇ ಇಲ್ಲ ಅಂತಲ್ಲ, ಸದ್ಯಕ್ಕಂತೂ ಮಾಡುವುದಿಲ್ಲ

ತಮ್ಮ ಅಭಿಪ್ರಾಯ ಹಂಚಿಕೊಂಡ ನಾಗಶೇಖರ್ ಅವರು, ಅಭಿಷೇಕ್ ಜೊತೆ ಸಿನಿಮಾ ಮಾಡುವುದಿಲ್ಲ ಎಂದು ತಿಳಿಸಿದ ಕೂಡಲೇ, ಎಲ್ಲರಿಗೂ ಒಂದು ರೀತಿ ಆಶ್ಚರ್ಯವಾಯಿತು. ಆದ್ರೆ ನಂತರ ಅವರು ಮತ್ತೊಂದು ಹೇಳಿಕೆ ನೀಡಿದರು. ಹೌದು. ನಾನು ಅಭಿಷೇಕ್ ಜೊತೆ ಸಿನಿಮಾ ಮಾಡುವದಿಲ್ಲ ಅಂದ್ರೆ, ಯಾವತ್ತೂ ಮಾಡುವುದೇ ಇಲ್ಲ ಅಂತಲ್ಲ. ಸದ್ಯಕ್ಕೆ ಮಾಡುವುದಿಲ್ಲ ಅಷ್ಟೆ. ಅವರು ಬೇರೆ ನಿರ್ದೇಶಕರ ಜೊತೆ, ಕೆಲವು ಸಿನಿಮಾ ಮಾಡಲಿ, ನಂತರ ನಾವು ಒಂದಾಗುತ್ತೇವೆ ಎಂದು ತಿಳಿಸಿದರು. ಆದ್ರೆ ಅವರ ಮಾತಲ್ಲಿ ಒಂದು ರೀತಿಯ ಬೇಸರ ಎದ್ದು ತೋರುತ್ತಲೇ ಇತ್ತು. ಯಾಕಂದ್ರೆ ಅವರು, ಈಗ ಆಗಿರುವ ಅಪಪ್ರಚಾರದ ಬಗ್ಗೆ ಬಹಳಷ್ಟು ಮನನೊಂದಿದ್ದಾರಂತೆ. ಹಾಗಾಗಿ ಈ ರೀತಿಯ ನಿರ್ಧಾವರನ್ನ ತೆಗೆದುಕೊಂಡಿರಬಹುದಾ? ಎಂದು ಚನದನವನದಲ್ಲಿ ಮಾತುಗಳು ಕೇಳಿಬರುತ್ತಿವೆ.

ಇತ್ತ ಅಮರ್ ಚಿತ್ರ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಆದರೆ ಸಿನಿಮಾ ಬಗ್ಗೆ ಕೇಳಿಬರುತ್ತಿರುವ ಕೆಲವು ಮಾತುಗಳು, ಜನರನ್ನ ಸಿನಿಮಾ ನೋಡದಂತೆ ಮಾಡುತ್ತಿವೆಯಂತೆ. ಹಾಗಾಗಿ ಇದರ ಸಲುವಾಗಿ, ನಿರ್ದೇಶಕ ನಾಗಶೇಖರ್ ಇಂತ ನಿರ್ಧಾರವನ್ನ ತೆಗೆದುಕೊಂಡಿದ್ದಾರಂತೆ.

LEAVE A REPLY

Please enter your comment!
Please enter your name here