ರಾಜ್ ಕುಮಾರ್ ಅವರನ್ನು ನೆನೆಯುತ್ತ ನವರಸನಾಯಕ ಹೇಳಿದ ಈ ಮಾತುಗಳು ನಿಜಕ್ಕೂ ಅದ್ಬುತ

0
406

ಬಹಳ ವರ್ಷಗಳ ಹಿಂದೆ ಜಗ್ಗೇಶ್ ಮತ್ತು ಗುರು ಪ್ರಸಾದ್ ನಡುವೆ ಬಿರುಕು ಉಂಟಾಗಿತ್ತು. ಆದರೆ ಹಳೆ ದ್ವೇಷವನ್ನು ಮರೆತು ಇಬ್ಬರು ಒಟ್ಟಿಗೆ ಸಿನಿಮಾವನ್ನು ಮಾಡುತ್ತಿದ್ದಾರೆ, ಇದರ ಬಗ್ಗೆ ಜಗ್ಗೇಶ್ ಅವರು ಈಗ ಪ್ರತಿಕ್ರಿಯಿಸಿದ್ದಾರೆ. ನನ್ನ ಮತ್ತು ಗುರು ನಡುವೆ ಬಹಳ ದಿನಗಳ ಹಿಂದೆ ವೈಮನಸ್ಸು ಉಂಟಾಗಿತ್ತು. ಆ ಗ್ಯಾಪ್ ಅನ್ನು ಬಹುಷಃ ನಾವು ತುಂಬುತ್ತೇವೆ ಎಂದು ಅಭಿಮಾನಿಗಳು ಅಂದುಕೊಂಡಿರಲಿಲ್ಲ. ಗುರುಪ್ರಸಾದ್ ಒಂದು ಆನೆ ಇದ್ದ ಹಾಗೆ ದೇವಸ್ಥಾನದಲ್ಲಿ ಬಿಟ್ಟರು ಗಲಾಟೆ ಮಾಡುತ್ತಾರೆ, ಕಾಡಲ್ಲಿ ಬಿಟ್ಟರು ಗಲಾಟೆ ಮಾಡುತ್ತಾರೆ. ಅವರನ್ನು ಸಂಬಾಳಿಸುವುದು ಸ್ವಲ್ಪ ಕಷ್ಟ ಆದರೆ ಸಂಬಾಳಿಸಿದರೆ ಇತಿಹಾಸದಲ್ಲಿ ಉಳಿಯುವಂತಹ ಕೆಲಸವನ್ನು ಮಾಡುತ್ತಾರೆ ಆ ನಂಬಿಕೆ ನನಗೆ ಇದೆ. ನವರಸ ನಾಯಕ ರಾಜ್ ಕುಮಾರ್ ಅವರ ಕೆಲ ಘಟನೆಗಳನ್ನು ನೆನೆಯುತ್ತ ಮಾತನಾಡಿದ್ದಾರೆ. ಮುಂದೆ ಓದಿ

ನನ್ನ 100 ನೇ ಚಿತ್ರ ಗುರುಪ್ರಸಾದ್ ಗೆ ನೀಡಲು ತೀರ್ಮಾನಿಸಿದ್ದೆ

ಯಾವಾಗ ಗುರು ಪ್ರಸಾದ್ ನನ್ನ ಜೊತೆಗೆ ಬಂದಿದ್ದರೋ ಆಗಲೇ ಅವರ ಒಳ್ಳೆತನದ ಬಗ್ಗೆ ನನಗೆ ತಿಳಿದಿತ್ತು. ನನ್ನ ನೂರನೇ ಸಿನಿಮಾ ಎನ್. ಕುಮಾರ್ ಅವರು ಮಾಡಬೇಕಿತ್ತು. ಆದರೆ ಇವರಿಗೆ ಸಿನಿಮಾ ಮಾಡಬೇಕಿದ್ದ ಹುಮ್ಮಸ್ಸು ಮತ್ತು ಉದ್ವೇಗವನ್ನು ನೋಡುತ್ತಿದ್ದೆ. ಏನೋ ಹೊಸ ವಿಷಯಗಳನ್ನು ಇಟ್ಟುಕೊಂಡು ಸಿನಿಮಾ ಮಾಡಲು ಸಿದ್ಧರಾಗಿದ್ದರು. ಆದ್ದರಿಂದ ನನ್ನ 100 ನೇ ಚಿತ್ರ ಗುರುಪ್ರಸಾದ್ ಗೆ ನೀಡಲು ತೀರ್ಮಾನಿಸಿದ್ದೆ. ನೂರನೇ ಚಿತ್ರ ಎಂದ ತಕ್ಷಣ ಯಾವ ನಟನಿಗಾದರು ಭಯ ಇದ್ದೆ ಇರುತ್ತದೆ. ಅದು ಒಂತರಹ ಸೆಂಟಿಮೆಂಟ್. ಇವರು ಆ ಚಿತ್ರಕ್ಕೆ ಮಠ ಅಂತ ಬೇರೆ ಶೀರ್ಷಿಕೆ ನೀಡಿದ್ದರು. ಮಾದ್ಯಮದವರು ಜಗ್ಗೇಶ್ ಅವರ 100 ನೇ ಚಿತ್ರ ಜಗ್ಗೇಶ್ ಅವರು ಮಠ ಸೇರುತ್ತಾರೆ ಎಂದು ಬರೆದಿದ್ದರಂತೆ.

ಅದೇ ರಾಜಕುಮಾರ ಮಾಡಿದ ಚಿತ್ರ ಆವರೇಜ್ ಹಿಟ್ ಆಗಿತ್ತು

ರಾಜ್ ಕುಮಾರ್ ಅವರು ಕಾಮಧೇನು ಚಿತ್ರದಲ್ಲಿ ತಮ್ಮ ಯೋಗಾಸನವನ್ನು ಪ್ರದರ್ಶಿಸಿದ್ದರು. ಈ ಸಿನಿಮಾ ಆವರೇಜ್ ಹಿಟ್ ಆಗಿತ್ತು. ಅದೇ ರಾಜಕುಮಾರ ಬೇರೆ ಸಿನಿಮಾ ಮಾಡಿದರೆ ಹಿಟ್ ಆಗಿತ್ತು ಆದರೆ ಇದು ಆವರೇಜ್ ಹಿಟ್ ಆಗಿದೆ ಎಂದು ಹೇಳುವ ಮಾತುಗಳನ್ನು ಚಾಮುಂಡೇಶ್ವರಿ ಸ್ಟುಡಿಯೋ ದಲ್ಲಿ ಜಗ್ಗೇಶ್ ಕೇಳಿಸಿಕೊಂಡಿದ್ದರಂತೆ. ನಾನು ಕಾಲವನ್ನು ನಂಬುವಂತಹ ವ್ಯಕ್ತಿ. ಕಾಲ ನೆಟ್ಟಗಿದಾಗ ನಾವು ಮುಟ್ಟಿದೆಲ್ಲ ಚಿನ್ನವಾಗುತ್ತದೆ. ಕಾಲ ಹದಗೆಟ್ಟಿರುವ ಸಂದರ್ಭದಲ್ಲಿ ನಾವು ಎಷ್ಟೇ ಪ್ರಯತ್ನ ಪಟ್ಟರು ಸಹ ಅದು ನಮಗೆ ಯಶಸ್ಸು ತಂದುಕೊಡುವುದಿಲ್ಲ ಎಂದು ನವರಸ ನಾಯಕ ಮಾತನಾಡಿದ್ದಾರೆ.

ಗುರು ನನ್ನ ಸಿನಿವೃತ್ತಿಯನ್ನೆ ಹಾಳು ಮಾಡಿಬಿಟ್ಟಿದ್ದ

ನನ್ನ ಸಿನಿವೃತ್ತಿಯ ಪಯಣದಲ್ಲಿ ಅತಿ ಹೆಚ್ಚು ದುಡ್ಡು ಕಲೆಕ್ಟ್ ಮಾಡಿದ ಹೆಗ್ಗಳಿಕೆಗೆ ಮಠ ಚಿತ್ರ ಕಾರಣವಾಗಿತ್ತು. ಆಗಿನ ಕಾಲದಲ್ಲಿ ಸುಮಾರು 1 ಕೋಟಿ 80 ಲಕ್ಷ ಹಣವನ್ನು ಮಠ ಚಿತ್ರ ಬಾಚಿಕೊಂಡಿತ್ತು. ಸಿನಿ ಪ್ರೇಕ್ಷಕರು ಸಹ ಸಿನಿಮಾವನ್ನು ಮೆಚ್ಚಿಕೊಂಡಿದ್ದರು. ಇದೆ ನಂಟಿನೊಂದಿಗೆ ನಾನು ಗುರುಪ್ರಸಾದ್ ಎದ್ದೇಳು ಮಂಜುನಾಥ ಸಿನಿಮಾವನ್ನು ಮಾಡುತ್ತೇವೆ.

ಈ ಚಿತ್ರದಿಂದ ಗುರು ನನ್ನ ಸಿನಿವೃತ್ತಿಯನ್ನೆ ಹಾಳು ಮಾಡಿಬಿಟ್ಟಿದ್ದ. ನಾನು ಯಾವುದೆ ಸಿನಿಮಾವನ್ನು ಮಾಡಿದರು ಸಹ ಎದ್ದೇಳು ಮಂಜುನಾಥ ಸಿನಿಮಾ ತರಹ ಮಾಡಬೇಕೆಂದು ಹೇಳುತ್ತಿದ್ದರು. ಕಾರಣಾಂತರಗಳಿಂದ ನಾವು ದೂರ ಆಗಿದ್ದೆವು. ಎದ್ದೇಳು ಮಂಜುನಾಥ ಚಿತ್ರದ ನಂತರ ನಾನು ಹೆಚ್ಚು ಚಿತ್ರಗಳಲ್ಲಿ ನಟಿಸಿರಲಿಲ್ಲ ಎಂದು ಜಗ್ಗೇಶ್ ಮಾತನಾಡಿದ್ದಾರೆ. ಈಗ ಅದೆ ಕಾಲ ಜಗ್ಗೇಶ್ ಮತ್ತು ಗುರುಪ್ರಸಾದ್ ಅವರನ್ನು ಒಂದು ಮಾಡಿದೆ ಎಂದು ಹೇಳಬಹುದಾಗಿದೆ. ಕಾಲಾಯ ತಸ್ಮೈ ನಮಃ.

LEAVE A REPLY

Please enter your comment!
Please enter your name here