ಖ್ಯಾತ ಪತ್ರಕರ್ತ ರವಿಬೆಳಗೆರೆಗೆ ಮಾತಿನ ಮೂಲಕವೆ ಡಿಚ್ಚಿ ಕೊಟ್ಟ ದುನಿಯಾ ವಿಜಯ್

0
637

ಇತ್ತೀಚಿಗಷ್ಟೆ ರವಿ ಬೆಳಗೆರೆ ನೂತನವಾದ ಯುಟ್ಯೂಬ್ ಚಾನೆಲ್ ಗೆ ಚಾಲನೆ ನೀಡಿದ್ದು, ಇದಕ್ಕೆ ಬೆಳ್ ಬೆಳಿಗ್ಗೆ ರವಿಬೆಳೆಗೆರೆ ಎನ್ನುವ ಶೀರ್ಷಿಕೆಯನ್ನು ಕೊಟ್ಟಿದ್ದರು. ಸಮಾಜದಲ್ಲಿ ನಡೆಯುತ್ತಿರುವ ವಿಷಯಗಳ ಕುರಿತು ಚಾನೆಲ್ ಮೂಲಕ ತಮ್ಮ ವೀಕ್ಷಕರಿಗೆ ತಲುಪಿಸುವ ಕೆಲಸವನ್ನು ಮಾಡುತ್ತಿದ್ದರು. ರಾಜಕೀಯ, ರೌಡಿಸಂ ಮತ್ತು ಇನ್ನಿತರ ಆಸಕ್ತಿಕರವಾದ ಸಂಗತಿಗಳ ಕುರಿತು ವಿಡಿಯೋದಲ್ಲಿ ಮಾತನಾಡುತ್ತಿದ್ದರು. ಆದರೆ ಸ್ವಲ್ಪ ದಿನಗಳ ಹಿಂದೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ದುನಿಯಾ ವಿಜಯ್ ಕುರಿತು ಮಾತನಾಡಿದ ವಿಡಿಯೋ ಅಪ್ಲೋಡ್ ಮಾಡಿದ್ದು, ವೀಡಿಯೊ ಸಿಕ್ಕಾಪಟ್ಟೆ ಟ್ರೆಂಡ್ ಆಗಿತ್ತು. ದರ್ಶನ್ ದಾಂಪತ್ಯದ ಜೀವನದ ಕುರಿತು ಹೆಚ್ಚಾಗಿ ಮಾತನಾಡಿದ್ದಾರೆ. ಜೊತೆಗೆ ಕರಿಚಿರತೆಯ ಬಗ್ಗೆಯು ಟೀಕೆ ಮಾಡಿದ್ದರು.

ವೈಯಕ್ತಿಕ ವಿಚಾರಗಳ ಕುರಿತು ಮಾತನಾಡಿದ ರವಿ ಬೆಳಗೆರೆ

ಬಹಳ ವರ್ಷಗಳ ಹಿಂದೆ ದರ್ಶನ್ ಅವರು ತಮ್ಮ ಹೆಂಡತಿಯಾದ ವಿಜಯಲಕ್ಷ್ಮಿ ಅವರ ಮೇಲೆ ಹಲ್ಲೆ ಮಾಡಿದ್ದರು. ಈ ವಿಷಯಕ್ಕೆ ಸಂಬಂಧ ಪಟ್ಟ ಹಾಗೆ ವಿಜಯಲಕ್ಷ್ಮಿ ಅವರು ದರ್ಶನ್ ಮೇಲೆ ದೂರು ನೀಡಿದ್ದು, ಪೊಲೀಸ್ ಅಧಿಕಾರಿಗಳು ದಾಸನನ್ನು ಬಂಧಿಸಿದ್ದರು. ನಂತರ ದರ್ಶನ್ ಹಾಗೂ ವಿಜಯಲಕ್ಷ್ಮಿ ಅವರ ನಡುವೆ ಉತ್ತಮವಾದ ಬಾಂಧವ್ಯ ಇತ್ತು. ಆದರೆ ಈಗ ಮತ್ತೆ ದರ್ಶನ್ ಕುಡಿದು, ಹೆಂಡತಿಗೆ ಹೊಡೆದಿದ್ದಾರೆ, ಇದನ್ನು ತಪ್ಪಿಸಲು ಹೋದ ಖ್ಯಾತ ಖಳ ನಾಯಕರಾದ ರವಿಶಂಕರ್ ಅವರಿಗು ಸಹ ದರ್ಶನ್ ಗೂಸಾ ಕೊಟ್ಟಿದ್ದಾರೆ ಎಂದು ಪತ್ರಕರ್ತ ರವಿಬೆಳಗೆರೆ ವೀಡಿಯೊ ದಲ್ಲಿ ಹೇಳಿದ್ದರು.

ravi belagere and darshan

ಅನಾವಶ್ಯಕವಾಗಿ ನಟರನ್ನು ಕೆಣಕಿದ ಅಕ್ಷರ ಮಾಂತ್ರಿಕ

ಬರಬಾರದ ವಯಸ್ಸಿನಲ್ಲಿ ದುಡ್ಡು ಬಂದರೆ ಹೀಗೆ ಆಗುವುದು ಇನ್ನು ಅನೇಕ ವೈಯಕ್ತಿಕ ವಿಚಾರಗಳನ್ನು ಪ್ರಸ್ತಾಪಿಸಿ ಮಾತನಾಡಿದ್ದರು. ದರ್ಶನ್ ಕುರಿತು ಮಾತನಾಡುವಾಗ ದುನಿಯಾ ವಿಜಯ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಬ್ಲಾಕ್ ಕೋಬ್ರಾ ಅಲ್ಲ ಇವನು ಕರಿ ಗೊಬ್ಬರ ಎಂದು ಹೇಳುವ ಮೂಲಕ ಅನಾವಶ್ಯಕವಾಗಿ ವಿಜಯ್ ಅವರನ್ನು ಕೆಣಕಿದ್ದಾರೆ. ಎಷ್ಟು ಮಾಡುವೆ ಮಾಡಿಕೊಳ್ಳುತ್ತಿಯಾ ಕೂತುಕೊಳ್ಳಯ್ಯಾ ಸುಮ್ಮನೆ ಎಂದು ನುಡಿದಿದ್ದರು. ಈ ಹಿಂದೆ ಭೀಮಾತೀರದ ಹಂತಕರು ಚಿತ್ರ ಬಿಡುಗಡೆಯಾದಾಗ ನನ್ನ ಪುಸ್ತಕದಿಂದ ಕಥೆಯನ್ನು ಕದ್ದು ಸಿನಿಮಾವನ್ನು ಮಾಡಿದ್ದೀರಾ, ಕಾಪಿ ರೈಟ್ ವಿಷಯದ ಅಂಗವಾಗಿ ಮಾಧ್ಯಮವೊಂದರಲ್ಲಿ ರವಿ ಬೆಳಗೆರೆ ಮಾತನಾಡಿದ್ದರು.

ಮಾತಿನ ಮೂಲಕವೇ ಡಿಚ್ಚಿ ಕೊಟ್ಟ ಕರಿಚಿರತೆ

ಇದೆ ವೇಳೆಯಲ್ಲಿ ದುನಿಯಾ ವಿಜಯ್ ಮಾಧ್ಯಮದ ಜೊತೆ ಮಾತನಾಡಿದ್ದು, ಕಥೆ ಅವರ ಸ್ವತ್ತಲ್ಲ ಎಂದು ಹೇಳಿಕೆ ನೀಡಿದ್ದರು ಇದಕ್ಕೆ ಪೂರಕವಾಗಿ ಡಿ ಬಾಸ್ ಅವರು ಸಹ ಸಾಥ್ ನೀಡಿದ್ದರು. ಇಂದು ರವಿಬೆಳಗೆರೆಗೆ ವಿಜಯ್ ಸರಿಯಾದ ಟಾಂಗ್ ಕೊಟ್ಟಿದ್ದಾರೆ. ಅವಾಚ್ಯ ಶಬ್ದಗಳನ್ನು ಬಳಸಿ ರವಿ ಗೆ ಪ್ರತ್ಯುತ್ತರವನ್ನು ಕೊಟ್ಟಿದ್ದಾರೆ. ಮಾಧ್ಯಮದವರು ಈ ವಿಷಯವನ್ನು ದುನಿಯಾ ವಿಜಯ್ ಗೆ ಕೇಳಿದಾಗ ಯಾವ ವಿಚಾರ ನನಿಗೇನು? ಗೊತ್ತಿಲ್ಲ ಶೋಟಿಂಗ್ ನಲ್ಲಿ ನಾನು ನಿರತನಾಗಿದ್ದೆ, ಏನು ವಿಷಯ? ಹೇಳಿ ಎಂದಾಗ ಆಗ ವರದಿಗಾರ ಎಲ್ಲವನ್ನು ವಿವರಿಸಿದ್ದಾನೆ. ಅವನಿಗೂ ಇಬ್ಬರು ಹೆಂಡತಿಯರು ಇದ್ದಾರೆ, ಮೊದಲು ಅವನ ಜೀವನ ನೆಟ್ಟಗಿದೆಯಾ ಎಂದು ತಿಳಿದಿಕುಕೊಂಡು ಬೇರೆಯವರ ಬಗ್ಗೆ ಮಾತನಾಡಬೇಕು ಎಂದು ಏಕವಚನದಲ್ಲಿ ಟಾಂಗ್ ನೀಡಿದ್ದಾರೆ ದುನಿಯಾ ವಿಜಯ್.

ನನ್ನಿಂದ ಲಾಸ್ಟ್ ವಾರ್ನಿಂಗ್

ಒಂದು ಸಾರಿ ಪುಲ್ವಾಮ ಅಂತಾರೆ, ಮತ್ತೊಂದು ಸಾರಿ ಬೇರೆ ವ್ಯಕ್ತಿಗಳ ವೈಯಕ್ತಿಕವಾದ ವಿಚಾರಗಳ ಕುರಿತು ಮಾತನಾಡುತ್ತಾರೆ ಇನ್ನು ಬದುಕಿದ್ದಾನಾ. ಇದೆ ನಾನು ಕೊಡುವುದು ಲಾಸ್ಟ ವಾರ್ನಿಂಗ್ ಎಂದು ಖಡಕ್ಕಾಗಿಯೆ ರವಿ ಬೆಳೆಗರೆ ಅವರಿಗೆ ಉತ್ತರವನ್ನು ನೀಡಿದ್ದಾರೆ.

LEAVE A REPLY

Please enter your comment!
Please enter your name here