ಒಂದು ಚಿತ್ರದಿಂದ ಒಂದಾದ ನಟ ಮತ್ತು ನಿರ್ದೇಶಕ, ಗುರುವಿಗೆ ಫುಲ್ ಮಾರ್ಕ್ಸ್ ಕೊಟ್ಟ ಶಿಷ್ಯ

0
427

ಬಹಳ ವರ್ಷಗಳ ನಂತರ ಮತ್ತೊಮ್ಮೆ ಗುರು ಪ್ರಸಾದ್ ಮತ್ತು ಜಗ್ಗೇಶ್ ಅವರ ಕಾಂಬಿನೇಶನ್ ನಲ್ಲಿ ರಂಗನಾಯಕ ಚಿತ್ರ ಬರುತ್ತಿರುವ ವಿಷಯ ನಿಮಗೆಲ್ಲ ಗೊತ್ತೆ ಇದೆ. ಹೌದು. ಈಗ ರಂಗನಾಯಕ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಇನ್ನು ಟೀಸರ್ ಅದ್ಭುತವಾಗಿ ಮೂಡಿ ಬಂದಿದ್ದು, ಅಭಿಮಾನಿಗಳು ಟೀಸರ್ ಗೆ ಮೆಚ್ಚುಗೆಯನ್ನು ವ್ಯಕ್ತ ಪಡಿಸಿದ್ದಾರೆ. ಟೀಸರ್ ನೋಡಿದ ಧನಂಜಯ್ ಅವರು ಸಹ ಟ್ವೀಟ್ ಮಾಡುವ ಮೂಲಕ ಚಿತ್ರತಂಡಕ್ಕೆ ಶುಭವನ್ನು ಕೋರಿದ್ದಾರೆ. ಧನಂಜಯ್ ಅವರು ಡೈರೆಕ್ಟರ್ಸ್ ಸ್ಪೆಷಲ್ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಲಗ್ಗೆ ಇಟ್ಟಿದ್ದರು. ಈ ಚಿತ್ರವನ್ನು ಗುರುಪ್ರಸಾದ್ ಅವರು ನಿರ್ದೇಶಿಸಿದ್ದರು. ಆದ್ದರಿಂದ ಧನಂಜಯ್ ಅವರು ಗುರುಪ್ರಸಾದ್ ಅವರನ್ನು ತನ್ನ ಗುರು ಎಂದು ಸ್ವೀಕರಿಸಿದ್ದರು.

ಹಳೆ ದ್ವೇಷವನ್ನು ಮರೆತ ಶಿಷ್ಯ

ಡೈರೆಕ್ಟರ್ಸ್ ಸ್ಪೆಷಲ್ ಚಿತ್ರವಾದ ನಂತರ ‘ಎರಡನೇ ಸಲ’ ಸಿನಿಮಾವನ್ನು ಮಾಡಿದ್ದರು. ಆದರೆ ಈ ಚಿತ್ರದ ನಂತರ ಇಬ್ಬರ ನಡುವೆ ಬಿರುಕು ಉಂಟಾಗಿದ್ದು, ನಂತರ ಯಾವ ಚಿತ್ರವನ್ನು ಸಹ ಮಾಡಿರಲಿಲ್ಲ. ಹಳೆ ದ್ವೇಷವನ್ನು ಪಕ್ಕಕ್ಕೆ ಇಟ್ಟು ತಮ್ಮ ಗುರುವಿನ ಸಿನಿಮಾದ ಟೀಸರ್ ಗೆ ಉತ್ತಮವಾಗಿ ಪ್ರತಿಕ್ರಯಿಸಿದ್ದಾರೆ. ರಂಗನಾಯಕನ ಹಿಂದಿರುವ ಸೂತ್ರಧಾರಿ ಮಜವಾಗಿ ಆತ ಕಟ್ಟುವುದರಲ್ಲಿ ಎತ್ತಿದ ಕೈ. ಹೀ ಇಸ್ ಬ್ಯಾಕ್ ಟೀಸರ್ ಬಹಳ ಎಂಜಾಯ್ ಮಾಡಿದೆ. ಈ ಸಿನಿಮಾ ಒಳ್ಳೆಯ ಮನೋರಂಜನೆ ನೀಡಲಿದೆ ಎನ್ನುವ ನಂಬಿಕೆ ನನಗಿದೆ ಎಂದು ಡಾಲಿ ಟ್ವೀಟ್ ಮಾಡಿದ್ದಾರೆ.

ಶೆಟ್ಟರ ಅಭಿಪ್ರಾಯ

ನನ್ನ ಫೇವರಿಟ್ ಡೈರೆಕ್ಟರ್-ಆಕ್ಟರ್ ಕಾಂಬಿನೇಷನ್ನಲ್ಲಿ ಇದೂ ಒಂದು. ಮೊದಲೆರಡು ಸಿನಿಮಾಗಳ ತರ ಗುರು ಸರ್ ಈ ಬಾರಿಯೂ ಜಗ್ಗೇಶ್ ಸರ್ ಅವ್ರಿಂದ ನವರಸಗಳನ್ನ ಹಿಂಡಿ ತೆರೆ ಮೇಲೆ ತಂದು ಎಂಟರ್ಟೈನ್ ಮಾಡ್ತಾರೆ ಅನ್ನೋದ್ರಲ್ಲಿ ಡೌಟೇ ಇಲ್ಲ. ನಿಮ್ಮಿಂದ ರಂಗ ರಂಗೇರ್ಲಿ, ALL THE BEST.” ಎಂದು ನಟ, ನಿರ್ದೇಶಕ ರಿಷಬ್ ಶೆಟ್ಟಿ ಟ್ವೀಟ್ ಮಾಡಿದ್ದಾರೆ.

ಒಂದಾದ ಮಾಂತ್ರಿಕ ಜೋಡಿ

ಇದು ನೋಡಲೇಬೇಕಾದ ಕಾಂಬಿನೇಷನ್ ಜಗ್ಗೇಶ್, ಗುರುಪ್ರಸಾದ್, ಅನೂಪ್ ಸೀಳಿನ್, ವಿಖ್ಯಾತ್ ಆರ್ ಅವರ ಹೊಸ ರೀತಿಯ ಯೋಚನೆ ರಂಗನಾಯಕ ಎಂದು ನಿರ್ದೇಶಕ ಪವನ್ ಪವನ್ ಒಡೆಯರ್ ಅವರು ಟ್ವೀಟ್ ಮಾಡಿದ್ದಾರೆ. ಬಹಳ ವರ್ಷಗಳ ನಂತರ ಈ ಜೋಡಿ ಮತ್ತೆ ಒಂದಾಗಿರುವುದು ಸಿನಿರಸಿಕರ ಪಾಲಿಗೆ ಸಂತಸದ ವಿಷಯವಾಗಿದೆ.

ಎದ್ದೇಳು ಮಂಜುನಾಥ, ಮಠ ಚಿತ್ರಕ್ಕಿಂತ ರಂಗನಾಯಕ ಚಿತ್ರ ಇನ್ನು ಚೆನ್ನಾಗಿ ಮೂಡಿ ಬರಬಹುದೆನ್ನುವುದು ಅಭಿಮಾನಿಗಳ ನಿರೀಕ್ಷೆಯಾಗಿದೆ. ಜಗ್ಗೇಶ್ ಅವರಿಗೆ ಈ ಚಿತ್ರ ಮತ್ತೊಂದು ಬ್ರೇಕ್ ನೀಡಲಿದೆಯಾ ಗೊತ್ತಿಲ್ಲ ಚಿತ್ರ ಬಿಡುಗಡೆಯಾಗುವವರೆಗೂ ನಾವು ಕಾಯಲೇಬೇಕಾಗಿದೆ.

LEAVE A REPLY

Please enter your comment!
Please enter your name here