ಮಂಡ್ಯದಲ್ಲಿ ನಿಖಿಲ್ ಸೋತ ನಂತರ ರೈತರ ಮೇಲೆ ಬರೆ ಎಳೆಯುವ ಕೆಲಸ ಮಾಡುತ್ತಿದ್ದಾರೆ ಎಂದ ಡಿ ಬಾಸ್

0
833

ರಾಜ್ಯದಲ್ಲಿ ಬರಗಾಲ ಹೆಚ್ಚಾಗಿದೆ ಆದ್ದರಿಂದ ರೈತರು ಬೇಸತ್ತು ಹೋಗಿದ್ದಾರೆ. ಬಿಸಲಿನ ಬೇಗೆಗೆ ಜನರು ತತ್ತರಿಸಿ ಹೋಗುತ್ತಿದ್ದಾರೆ. ರೈತರು ಬೆಳೆದ ಬೆಳೆಗಳಿಗೆ ಸರಿಯಾದ ಫಲ ಸಿಗುತ್ತಿಲ್ಲ. ರೈತರಿಗೆ ಈ ಸಮಯದಲ್ಲಿ ನೀರಿನ ಅಗತ್ಯವಿದೆ. ಸುಮಲತಾ ಅಂಬರೀಷ್ ಅವರು ನೂತನ ಸಂಸದೆಯಾದ ನಂತರ ನೇಗಿಲಯೋಗಿಯ ಕಷ್ಟಗಳನ್ನು ಕೇಳಿ ಅದಕ್ಕೆ ಸ್ಪಂದಿಸಿದ್ದರು. ಕೇಂದ್ರ ಸರ್ಕಾರಕ್ಕೆ ನಾಲೆಗಳ ಮೂಲಕ ನೀರು ಹರಿಸುವಂತೆ ಮನವಿ ಮಾಡಿಕೊಂಡಿದ್ದರು. ಕೇಂದ್ರ ಸರ್ಕಾರದ ಸಚಿವರು ಇದರ ಕುರಿತು ಪರಿಶೀಲಿಸಿ ನಂತರ ಸರಿಯಾದ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದರು. ಇದು ಕೇವಲ ಮಂಡ್ಯ ಕ್ಷೇತ್ರದ ಸಮಸ್ಯೆ ಮಾತ್ರ ಅಲ್ಲ, ದೇಶದ ಹಲವಾರು ಬರ ಪೀಡಿತ ಪ್ರದೇಶಗಳಲ್ಲಿ ರೈತರು ನೀರಿಲ್ಲದೆ ಒದ್ದಾಡುತ್ತಿದ್ದಾರೆ.

ನನಗೆ ಜನರು ಜವಾಬ್ದಾರಿಯನ್ನು ಕೊಟ್ಟಿದ್ದಾರೆ

ಇನ್ನು ಮಂಡ್ಯ ಚುನಾವಣೆಯ ಪ್ರಚಾರದ ಸಮಯದಲ್ಲಿ ಡಿ ಬಾಸ್ ಮತ್ತು ಯಶ್ ಸುಮಲತಾ ಅವರ ಬೆಂಬಲಕ್ಕೆ ನಿಂತಿದ್ದರು. ಅನೇಕ ಟೀಕೆ ಪ್ರತಿ ಟೀಕೆಗಳು ನಟರ ವಿರುದ್ಧ ಮತ್ತು ಮುಖ್ಯಮಂತ್ರಿಗಳ ಕುಟುಂಬದ ವಿರುದ್ಧ ಕೇಳಿ ಬಂದಿದ್ದವು. ಚುನಾವಣೆಯಲ್ಲಿ ಸುಮಲತಾ ಗೆದ್ದ ನಂತರ, ರಾಜಕಾರಣದಲ್ಲಿ ಹೇಳಿಕೆ ಪ್ರತಿ ಹೇಳಿಕೆಗಳೆಲ್ಲಾ ಕಾಮನ್ ಅದೇ ಹಳೆ ದ್ವೇಷವನ್ನು ನಾವು ಮುಂದುವರೆಸಬಾರದು. ನಾನು ಅವರ ವಿರುದ್ಧ ಯಾವ ಹೇಳಿಕೆಗಳನ್ನು ನೀಡುವುದಿಲ್ಲ, ನನಗೆ ಜನರು ಜವಾಬ್ದಾರಿಯನ್ನು ಕೊಟ್ಟಿದ್ದಾರೆ. ನಾನು ನನ್ನ ಕೆಲಸವನ್ನು ಮಾಡುತ್ತೇನೆ, ಅವರ ಕೆಲಸವನ್ನು ಅವರು ಮಾಡಲಿ ಎಂದು ಹೇಳಿಕೆ ನೀಡಿದ್ದರು. ಇನ್ನು ಯಶ್ ಚಾಲನೆ ಮಾಡಿದ್ದ ಯಶೋ ಮಾರ್ಗದಿಂದ ಬಹಳ ಜನರ ರೈತರಿಗೆ ಉಪಯೋಗವಾಗಿತ್ತು . ಭರ ಪೀಡಿತ ಪ್ರದೇಶದ ನಗರಗಳಲ್ಲಿ ಯಶೋ ಮಾರ್ಗ ಸಂಸ್ಥೆಯ ದೊಡ್ಡ ನೀರಿನ ಟ್ಯಾಂಕರ್ ಗಳ ಮೂಲಕ ನೀರು ಹರಿಸಿದ್ದರು. ಅಷ್ಟೇ ಅಲ್ಲದೆ ಕೆರೆಯಲ್ಲಿದ್ದ ಹೂಳನ್ನು ತೆಗೆಸಿ ಕೆರೆಗಳಿಗೆ ಮರು ಜೇವ ನೀಡಿದ್ದರು.

ನೀರನ್ನು ಬಿಡದೆ ರೈತರ ತಾಳ್ಮೆಯನ್ನು ಪರೀಕ್ಷೆ ಮಾಡುತ್ತಿದ್ದಾರೆ

ರಾಜ್ಯದ ರೈತ ಸಂಘದ ಮುಖಂಡರು ಇಂದು ಭಾಗಮಂಡಲ ಮತ್ತು ತಲಾಕಾವೇರಿಯಲ್ಲಿ ವಿಶೇಷವಾದ ಪೂಜೆಯನ್ನು ಸಲ್ಲಿಸಿದ್ದಾರೆ. ಮಂಡ್ಯದಲ್ಲಿ ರೈತರು ಬೆಳೆಯುವ ಬೆಳೆಗಳಿಗೆ ಕೆ ಆರ್ ಎಸ್ ಅಣೆಕಟ್ಟಿನಿಂದ ನೀರನ್ನು ಹರಿಸುವಂತೆ ಮನವಿ ಮಾಡಿಕೊಂಡಿದ್ದು, ಇದರಿಂದ ನಮಗೆ ಯಾವುದೆ ರೀತಿಯ ಉಪಯೋಗವಾಗಿಲ್ಲ, ಎಂದು ದರ್ಶನ್, ಅವರಿಗೆ ಪುಟ್ಟಣಯ್ಯ ಎನ್ನುವ ಒಬ್ಬ ರೈತ ಮಾತನಾಡಿದ್ದಾರೆ. ಕಾವೇರಿ ನೀರಿನ ವಿಚಾರದಲ್ಲು ಸರ್ಕಾರ ಸರಿಯಾದ ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದು ಬೇಸರವನ್ನು ವ್ಯಕ್ತ ಪಡಿಸಿದ್ದಾರೆ. ನಾಲೆಗಳಿಗೆ ನೀರನ್ನು ಬಿಡದೆ ರೈತರ ತಾಳ್ಮೆಯನ್ನು ಪರೀಕ್ಷೆ ಮಾಡುತ್ತಿದ್ದಾರೆ. ನೀರನ್ನು ಯಾಕೆ ಇವರು ಬಿಡುತ್ತಿಲ್ಲ ಇದರ ಹಿಂದಿರುವ ಕಾರಣವಾದ್ರು ಏನು? 40 ಸಾವಿರ ರೈತರ ಕುಟುಂಬದವರಿಗೆ ದಿಕ್ಕು ತೋಚದಂತಾಗಿದೆ. ಕಾವೇರಿ ನೀರನ್ನೇ ನಂಬಿ ಕೂತಿರುವ ರೈತರ ಮೇಲೆ ನೂರಾರು ಕೋಟಿ ಮೊತ್ತದಷ್ಟು ಸಾಲವಿದೆ. ಕಷ್ಟವನ್ನು ಅರ್ಥಮಾಡಿಕೊಂಡು, ನಮ್ಮ ಪಾಲಿನ ನೀರನ್ನು ಬಿಡಬೇಕೆಂದು ಹೇಳಿದ್ದಾರೆ.

ರೈತರ ಮೇಲೆ ಬರೆ ಎಳೆಯುವ ಕೆಲಸ ಮಾಡುತ್ತಿದ್ದಾರೆ

ಚುನಾವಣೆಯಲ್ಲಿ ನಿಖಿಲ್ ಸೋತ ನಂತರ ರೈತರ ಕಷ್ಟಕ್ಕೆ ರಾಜ್ಯದ ಮುಖ್ಯಮಂತ್ರಿಗಳು ಸ್ಪಂದಿಸುತ್ತಿಲ್ಲ. ತಮ್ಮ ಮಗ ಸೋತ ಕಾರಣದಿಂದಾಗಿ ಸೇಡನ್ನು ತೀರಿಸಿಕೊಳ್ಳುತ್ತಿದ್ದಾರಾ ಎನ್ನುವುದೇ ಬಹಳ ಜನರ ಪ್ರಶ್ನೆಯಾಗಿದೆ. ಇದೇ ಸಮಯದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಪ್ರತಿಕ್ರಿಯಿಸಿದ್ದಾರೆ. ಮಂಡ್ಯದಲ್ಲಿ ನಿಖಿಲ್ ಸೋತ ನಂತರ ರೈತರ ಮೇಲೆ ಬರೆ ಎಳೆಯುವ ಕೆಲಸ ಮಾಡುತ್ತಿದ್ದಾರೆ.

ಮುಖ್ಯಮಂತ್ರಿಗಳು ಮಂಡ್ಯ ಜನರ ಸಮಸ್ಯೆಯೆಯನ್ನು ಆಲಿಸುವುದು ಬಿಟ್ಟು ಅಮೆರಿಕಾ ಪ್ರವಾಸಕ್ಕೆ ಹೋಗಿದ್ದಾರೆ ಎಂದು ಸಿ ಎಂ ವಿರುದ್ಧ ಅಸಮಧಾನ ವ್ಯಕ್ತ ಪಡಿಸಿದ್ದಾರೆ.

LEAVE A REPLY

Please enter your comment!
Please enter your name here