ಎರಡು ಜೀವವನ್ನು ಉಳಿಸಿದ ದಿಟ್ಟ ಪೋರ

0
231

ನಾವು ಮತ್ತು ನಮ್ಮ ಸುತ್ತ ಮುತ್ತಲಿನವರು ಚೆನ್ನಾಗಿರಬೇಕೆನ್ನುವ ಆದರ್ಶವನ್ನು ಜನರು ಪಾಲಿಸಬೇಕಾಗಿದೆ. ಯಾರಾದರು ಕಷ್ಟ ಅಂತ ನಿಮ್ಮ ಮುಂದೆ ಬಂದರೆ, ಅವರಿಗೆ ನಮ್ಮ ಕೈಲಾದ ಸಹಾಯವನ್ನು ಮಾಡಬೇಕೆ ಹೊರತು ದುಃಖದ ಮಾತುಗಳನ್ನಾಡಿ ಅವರ ಮನಸ್ಸಿಗೆ ಘಾಸಿ ಉಂಟು ಮಾಡಬಾರದು. ಈ ಪ್ರಪಂಚದಲ್ಲಿ ಸ್ವಾರ್ಥ ಇರುವ ಮನುಷ್ಯರೆ ಹೆಚ್ಚಿನ ಪ್ರಮಾಣದಲ್ಲಿ ತುಂಬಿಕೊಂಡಿದ್ದಾರೆ. ಕೇವಲ ತಾವು, ತಮ್ಮ ಕುಟುಂಬ ಚೆನ್ನಾಗಿದ್ದರೆ ಸಾಕು ಬೇರೆಯವರ ಜೀವನದ ಕಡೆ ಮೂಸು ನೋಡಲ್ಲ. ಸತ್ತ ಮೇಲೆ ಎಲ್ಲರು ಹೋಗುವುದು ಒಂದೆ ಜಾಗಕ್ಕೆ, ಇರುವವರೆಗು ನಮ್ಮ ಜೀವನವನ್ನು ನಗುತ್ತ ಸಾಗಿಸಬೇಕಾಗಿದೆ. ಸ್ವಾರ್ಥ, ಮತ್ಸರ, ಅಸೂಹೆ ಇವೆಲ್ಲವು ಮನುಷ್ಯನನ್ನು ಕೊಂದು ಹಾಕುತ್ತಿದೆ. ಒಮ್ಮೆ ನಮ್ಮ ಜೀವನವನ್ನು ತಿರುಗಿ ನೋಡಿದರೆ ಅದು ನಿಮಗೆ ತೃಪ್ತಿಯ ಜೀವನ ಎಂದು ಅನಿಸಬೇಕೆ ಹೊರತು ವ್ಯರ್ಥವಾದ ಜೀವನ ಎಂದು ಅನಿಸಬಾರದು. ಒಬ್ಬ ಹುಡುಗ ತನ್ನ ಪ್ರಾಣ ಹೋದರು ಪರವಾಗಿಲ್ಲ ಬೇರೆಯವರ ಪ್ರಾಣವೆ ನನಗೆ ಮುಖ್ಯ ಎಂದು ಅರಿತಿದ್ದಾನೆ. ಮುಂದೆ ಓದಿ.

ನೀರಿಗೆ ಹಾರಿ ತಾಯಿ ಮತ್ತು ಮಕ್ಕಳನ್ನು ಅಪಾಯದಿಂದ ಪಾರು ಮಾಡಿದ್ದಾನೆ

ಅಸ್ಸಾಂ ಊರಿನ ಇನ್ನು ಮೀಸೆ ಬಾರದ ಬಾಲಕ ಉತ್ತಿಮ್ ತತಿ ಅದ್ಭುತವಾದ ಕೆಲಸವನ್ನು ಮಾಡುವುದರ ಮೂಲಕ ಮಾನವೀಯತೆಯನ್ನು ಮೆರೆದಿದ್ದಾನೆ. ಹೌದು, ಇಬ್ಬರ ಪ್ರಾಣವನ್ನು ಈ ಪೋರ ಕಾಪಾಡಿದ್ದಾನೆ. ಅಸ್ಸಾಂನ ಸೋನಿತ್ ಪುರ ಎಂಬ ಪ್ರದೇಶದಲ್ಲಿ ಒಬ್ಬ ಮಹಿಳೆ ತನ್ನ ಮಕ್ಕಳನ್ನು ಕರೆದುಕೊಂಡು ಸಣ್ಣ ನದಿಯನ್ನು ದಾಟುವ ಸಂದರ್ಭದಲ್ಲಿ, ನದಿಯ ನೀರಿನ ಮಟ್ಟ ಹೆಚ್ಚಾಗಿರುವದರಿಂದ ತಾಯಿ ಮತ್ತು ಮಕ್ಕಳಿಗೆ ನದಿ ದಾಟಲು ಯತ್ನಿಸಿದ್ದು, ಅಪಾಯಕ್ಕೆ ಸಿಲುಕಿಕೊಂಡಿದ್ದರು. ಆಗ ಅಲ್ಲೆ ನದಿ ದಂಡೆಯಲ್ಲಿ ಕುಳಿತಿದ್ದ ಉತ್ತಮ್ ಎನ್ನುವ ಬಾಲಕ ಒಂದು ಕ್ಷಣ ಕೂಡ ಯೋಚಿಸದೆ ನೀರಿಗೆ ಹಾರಿ ತಾಯಿ ಮತ್ತು ಮಕ್ಕಳನ್ನು ಅಪಾಯದಿಂದ ಪಾರು ಮಾಡಿ, ಅವರ ಜೀವ ಉಳಿಸಿದ್ದಾನೆ.

ಬಾಲಕನನ್ನು ಜನರು ಹೊಗಳುತ್ತಿದ್ದಾರೆ

ಆದರೆ ಇನ್ನೊಂದು ದುರ್ಗತಿ ಏನೆಂದರೆ ಆ ತಾಯಿಯ ಮತ್ತೊಂದು ಮಗುವು ನೀರಿನಲ್ಲಿ ಮುಳುಗಿ ಸತ್ತು ಹೋಗಿದೆ. ಬಾಲಕನು ಇನ್ನೆರಡು ಜೀವವನ್ನು ಕಾಪಾಡಿದ್ದು, ಸಾಮಾಜಿಕ ಜಾಲ ತಾಣಗಳಲ್ಲಿ ಬಾಲಕನನ್ನು ಜನರು ಹೊಗಳುತ್ತಿದ್ದಾರೆ. ನೀರಿನಲ್ಲಿ ಧುಮುಕಿ ತನ್ನ ಪ್ರಾಣವನ್ನು ಲೆಕ್ಕಿಸದೆ ಬೇರೆಯವರ ಪ್ರಾಣವನ್ನು, ಉಳಿಸಿ ಉತ್ತಮವಾದ ಕೆಲಸವನ್ನು ಮಾಡಿದ್ದಾನೆ. ಸಣ್ಣ ವಯಸ್ಸಿನಲ್ಲೆ ಇವನಿಗೆ ವಿಪರೀತ ಧೈರ್ಯ ಇದೆ ಎಂದರೆ ತಪ್ಪಾಗಲಾರದು. ನಿಜಕ್ಕು ಇವನ ಸಾಹಸ ಮೆಚ್ಚತಕ್ಕಂತಹದು. ಬೇರೆ ಯಾವ ವ್ಯಕ್ತಿಯು ಇವನ ಜಾಗದಲ್ಲಿ ಇದ್ದರೆ ನಮಗೆ ಯಾಕೆ ಬೇಕು ಬೇರೆಯವರ ಉಸ್ಸಾಬರಿ ಎಂದು ಸುಮ್ಮನಾಗುತ್ತಿದ್ದರು. ಆದರೆ ಈ ಬಾಲಕ ಘಟನೆಯನ್ನು ಗಮನಿಸಿ, ಕೂಡಲೆ ಅದಕ್ಕೆ ಸ್ಪಂದಿಸಿ ಸಹಾಯವನ್ನು ಮಾಡಿದ್ದಾನೆ. ಒಂದು ಆಕ್ಸಿಡೆಂಟ್ ಅಥವಾ ಬೇರೆ ಯಾವುದಾದರೂ ಅಪಘಾತ ಕಣ್ಣ ಮುಂದೆ ನಡೆಯುತ್ತಿದ್ದರು, ಅದನ್ನು ಜನ ವೀಡಿಯೊ ಮಾಡುತ್ತಾರೆ ಹೊರತು ಅವರ ನೆರವಿಗೆ ಬರುವುದಿಲ್ಲ. ಮಾನವೀಯತೆಯ ಗುಣ ಇಲ್ಲದಿರುವವರು ಬದುಕಿದ್ದು ಸತ್ತಂತೆಯೆ ಎಂದು ಅನಿಸುತ್ತದೆ.

LEAVE A REPLY

Please enter your comment!
Please enter your name here