ನೀವು ಎಂದು ನೋಡಿರದ ಅಚ್ಚರಿ ಉಂಟು ಮಾಡುವಂತಹ ವಿಚಿತ್ರವಾದ ಸರ್ಪ.

0
756

ದೇವರ ಸೃಷ್ಟಿ ಹಾಗೂ ದೇವ ರಹಸ್ಯವನ್ನ ಯಾರಿಂದಲೂ ಅರಿಯಲು ಆಗುವುದಿಲ್ಲ ಅಂತ ನಮ್ಮ ಪುರಾತನ ಕಾಲದಿಂದಲೂ ಕೇಳುತ್ತಲೇ ಬಂದಿದ್ದೇವೆ. ಹೌದು. ನಾವು ಚಿಕ್ಕವರಿದ್ದಾಗಿನಿಂದಲೂ ನಮ್ಮ ಅಜ್ಜ, ಅಜ್ಜಿ ಹೇಳುವ ಕಥೆಗಳನ್ನ ಕೇಳುತ್ತ ನಾವು ಬೆಳೆದಿರುತ್ತೀವಿ. ಸಾಮಾನ್ಯವಾಗಿ ಅವರು ದೇವರ ಬಗ್ಗೆ ಹಾಗೂ ದೆವ್ವಗಳ ಬಗ್ಗೆ ಹೇಳಿರುತ್ತಾರೆ. ದೇವರ ಸೃಷ್ಠಿಯನ್ನ ಯಾರಿಂದಲೂ, ಅರಿಯೋಕೆ ಆಗಲ್ಲ. ಯಾವ ಜೀವಿ ಹೇಗಿರಬೇಕು, ಹೇಗಿದ್ದರೆ ಸರಿಯಾಗಿರುತ್ತೆ ಅನ್ನೋದು ದೈವ ಸೃಷ್ಟಿ. ಅದರಂತೆ, ದೇವರು ಹುಲ್ಲುಕಡ್ಡಿಯಿಂದ ಹಿಡಿದು, ಪ್ರತಿಯೊಂದನ್ನು ಸೃಷ್ಟಿಸುತ್ತಾನೆ ಅಂತ ಹೇಳುತ್ತಲೇ ಇದ್ದರು.

ಹೌದು. ಪ್ರತಿಯೊಂದು ಜೀವಿಯ ಬಣ್ಣ, ಆಕಾರ ಹೇಗಿರಬೇಕು ಅನ್ನೋದು ದೈವ ಸೃಷ್ಟಿ. ಅದರಂತೆ ದೇವರು ಎಲ್ಲವನ್ನೂ ಸೃಷ್ಟಿಸುತ್ತಾನೆ. ಅದರಲ್ಲೂ ನಾವು ಕೆಲವೊಂದು ಸರಿ, ವಿಚಿತ್ರವಾದ ವಿಷಯಗಳನ್ನ ಹಾಗೂ ಪ್ರಾಣಿ, ಪಕ್ಷಿಗಳನ್ನ ನೋಡುತ್ತೀವಿ. ಅದು, ನಮ್ಮ ತರ್ಕಕ್ಕೆ ನಿಲುಕದ್ದಾಗಿರುತ್ತೆ. ಯಾಕಂದ್ರೆ, ನಮ್ಮ ಊಹೆಗೂ ಮೀರಿದ ಅಂಶಗಳು ನಮ್ಮ ಕಣ್ಣ ಮುಂದೆ ಬಂದರೆ, ನಿಜಕ್ಕೂ ಅದು ನಮ್ಮಿಂದ ನಂಬಲು ಆಗುವುದಿಲ್ಲ. ಇದೇ ತರ ವಿಚಿತ್ರದಲ್ಲಿ, ವಿಚಿತ್ರವಾಗಿರೋ ಎಷ್ಟೋ ಪ್ರಾಣಿ, ಪಕ್ಷಿಗಳನ್ನ ನಾವು ನೋಡಿದ್ದೀವಿ. ಅದರಂತೆ ಈಗ ಇಲ್ಲೊಂದು ವಿಚಿತ್ರವಾದ ಸರಿಸೃಪವಿದೆ.

ವಿಚಿತ್ರವಾಗಿರುವ ಹಾವು

ಹಾವುಗಳ ಬಗ್ಗೆ ನಾವು ಸಾಮಾನ್ಯವಾಗಿ ಕೇಳಿದ್ದೀವಿ ಹಾಗೂ ನೋಡಿದ್ದೀವಿ. ಕೆಲವರು ಸಿನಿಮಾದಲ್ಲಿ ನೋಡಿರ್ತಾರೆ, ಇನ್ನೂ ಕೆಲವರು ನೇರವಾಗಿ ನೋಡಿರ್ತಾರೆ. ಆದ್ರೆ ಏನೋ ಗೊತ್ತಿಲ್ಲ. ಹಾವು ಅಂದ್ರೆ, ನಿಜಕ್ಕೂ ಎಲ್ಲರಿಗೂ ಭಯವಾಗುತ್ತೆ. ಅದು ಕಚ್ಚುತ್ತೆ ಅಂತ ಇರಬಹುದು, ಅಥವಾ ಅದರ ದ್ವೇಷ ಇರಬಹುದು. ಆದ್ರೆ ಹಾವಿಗೆ ಜನ ಬಹಳಷ್ಟು ಭಯ ಪಡುತ್ತಾರೆ. ನಾವು ಸಾಮಾನ್ಯವಾಗಿ, ಹಾವುಗಳು ವಿಭಿನ್ನ ರೀತಿಯಲ್ಲಿ ಇರುತ್ತವೆ ಅನ್ನೋದನ್ನ ಕೇಳಿದ್ದೀವಿ ಹಾಗೂ ನೋಡಿದ್ದೀವಿ. ಹೌದು. ಹಾವುಗಳಲ್ಲಿ ಹಲವು ವಿಧಗಳಿವೆ. ಅದರ ಜೊತೆಗೆ ಹಾವಿಗೆ ಇರುವ ತಲೆಗಳ ಬಗ್ಗೆಯೂ ತಿಳಿದುಕೊಂಡಿದ್ದೀವಿ. 1, 2, 5, 7, 9 ಈ ರೀತಿ ಹಾವಿನ ತಲೆಗಳ ಬಗ್ಗೆ ತಿಳಿದುಕೊಂಡಿದ್ದೀವಿ. ಆದ್ರೆ ಈಗ ಇಲ್ಲೊಂದು ಹಾವು ಸಿಕ್ಕಿದೆ. ಈ ಹಾವು ಇವೆಲ್ಲವುಗಳಿಗಿಂತ ಬಹಳ ವಿಚಿತ್ರವಾಗಿದೆ.

3 ಕಣ್ಣಿರುವ ವಿಶೇಷವಾದ ಹಾವು

ಸಾಮಾನ್ಯವಾಗಿ ಹಾವಿಗೆ ಹೆಚ್ಚಿನ ತಲೆಗಳಿರುತ್ತವೆ ಅಂತ ನಾವು ಕೇಳಿದ್ದೀವಿ. ಆದ್ರೆ ಈ ಹಾವಿಗೆ ತಲೆ ಒಂದೇ ಇದೆ. ಆದ್ರೆ ಕಣ್ಣುಗಳು ಮಾತ್ರ ಮೂರಿವೆ. ಹೌದು. ಇದುವರೆಗೂ ಯಾರು 3 ಕಣ್ಣುಗಳಿರುವ ಹಾವನ್ನ ನೋಡಿರಲು ಸಾಧ್ಯವಿಲ್ಲ. ಆದ್ರೆ ಈ ಹಾವು 3 ಕಣ್ಣು ಹೊಂದಿರುವುದು ಬಹಳ ವಿಶೇಷವಾಗಿದೆ. ಹಾಗೂ ಆಶ್ಚರ್ಯಕ್ಕೂ ಕಾರಣವಾಗಿದೆ. ಈ ಹಾವನ್ನ ನೋಡಿದ ಕೂಡಲೇ, ಅರಣ್ಯಾಧಿಕಾರಿಗಳೇ, ಒಂದು ಕ್ಷಣ ಆಶ್ಚರ್ಯ ಪಟ್ಟಿದ್ದಾರೆ. ಹೌದು. ಇದುವರೆಗೂ ಎಂದಿಗೂ ಇಂಥ ಹಾವನ್ನ ನೋಡೇ ಇಲ್ಲ ಅಂತ ಅರಣ್ಯಾಧಿಕಾರಿಗಳು ಆಶ್ಚರ್ಯ ಪಟ್ಟಿದ್ದಾರೆ.

ಕಾರ್ಪೆಟ್ ಪೈತಾನ್ ಜಾತಿಗೆ ಸೇರಿದ `ಮಾಂಟಿ ಪೈತಾನ್’

ಈ ಹಾವು ಆಸ್ಟ್ರೇಲಿಯಾದ ಕ್ಯಾನ್ಬೆರಾ ದಲ್ಲಿ ಕಂಡಿದೆ. ಹೌದು. ಈ ಹಾವನ್ನ ಮೊದಲಿಗೆ ಅರಣ್ಯಾಧಿಕಾರಿಗಳೇ ನೋಡಿದ್ದಾರೆ. ಇದೇ ಮಾರ್ಚ್ ತಿಂಗಳಲ್ಲಿ ಈ ಹಾವು ಅಧಿಕಾರಿಗಳ ಕಣ್ಣಿಗೆ ಬಿದ್ದಿದೆ. ಆಗ ಇದು ಚಿಕ್ಕ ಮರಿಯಾಗಿತ್ತು. ಆದ್ರೆ ಆ ಹಾವು ಮತ್ತೆ ಯಾರ ಕಣ್ಣಿಗೂ ಬಿದ್ದಿರಲಿಲ್ಲ. ಆದ್ರೆ ಈಗ ಈ ಹಾವು ಸತ್ತು ಹೋಗಿದೆ. ಹೌದು. ಇಂದು ಬೆಳಿಗ್ಗೆ ಈ ಹಾವು ಅಧಿಕಾರಗಳ ಕಣ್ಣಿಗೆ ಮತ್ತೆ ಕಂಡಿದೆ. ಹತ್ತಿರ ಹೋಗಿ ನೋಡಿದರೆ, ಆ ಹಾವು ಸತ್ತು ಬಿದ್ದಿತ್ತು. ಅದನ್ನ ನೋಡಿದ ಅಧಿಕಾರಿಗಳು, ಬೇಸರ ವ್ಯಕ್ತಪಡಿಸಿದ್ದಾರೆ. ಯಾಕಂದ್ರೆ, ಮೊದಲಿಗೆ ಆ ಹಾವನ್ನ ನೋಡಿದಾಗ, ವಿಚಿತ್ರವಾದ ಹಾವು ಇದೆ, ಕೆಲವು ಸಂಶೋಧನೆಗಳಿಗೆ ಬೇಕಾಗುತ್ತದೆ ಅಂತ ಎಲ್ಲರೂ ಸಂತಸ ವ್ಯಕ್ತಪಡಿಸಿದ್ರು. ಆದ್ರೆ ಆ ಹಾವು ಇದ್ದಕ್ಕಿದಂತೆ ಕಾಣೆಯಾಗಿತ್ತು. ಈಗ ಆ ಹಾವು ಸತ್ತು ಬಿದ್ದಿರೋದನ್ನ ನೋಡಿದ ಅಧಿಕಾರಿಗಳಿಗೆ, ಒಂದು ರೀತಿ ಬೇಸರವಾಗಿದೆಯಂತೆ.

ನಿಜಕ್ಕೂ ಇಂತ ಹಾವು ಮೊದಲಿಗೆ ಎಲ್ಲಿಯೂ ಇರಲಿಲ್ಲ ಎನ್ನಿಸುತ್ತೆ. ಯಾಕಂದ್ರೆ 3 ಕಣ್ಣುಗಳ ಹಾವು ಇದೆ ಅನ್ನೋದೇ ನಂಬಲಾಗದ ವಿಷಯವಾಗಿದೆ. ಆದ್ರೆ ನಂಬಿಕೆಯನ್ನೇ ಮೀರಿಸುವಂತೆ ಇಲ್ಲಿ 3 ಕಣ್ಣಿನ ಹಾವು ದೊರೆತಿದೆ. ಆದ್ರೆ ಆ ಹಾವು 3 ತಿಂಗಳಲ್ಲೇ, ಸಾವನ್ನಪ್ಪಿರೋದು, ಅಲ್ಲಿನ ಅರಣ್ಯಾಧಿಕಾರಿಗಳಿಗೆ ಬೇಸರದ ವಿಷಯವಾಗಿದೆ.

LEAVE A REPLY

Please enter your comment!
Please enter your name here