ಸರಳತೆಗೆ ಇನ್ನೊಂದು ಹೆಸರೇ ಡಾಕ್ಟರ್ ರಾಜ್

0
1351
raaj kumar

ಬಡತನವಿರಲಿ, ಸಿರಿತನವಿರಲಿ ಮನುಷ್ಯ ನೆಮ್ಮದಿಯಿಂದ ಹಾಗೂ ತೃಪ್ತಿಯಾಗಿ ಜೀವನವನ್ನು ಸಾಗಿಸಬೇಕು. ಮನುಷ್ಯನ ಆಸೆಗೆ ಕೊನೆ ಎಲ್ಲಿದೆ ಹೇಳಿ? ಎಷ್ಟು ಸಿಕ್ಕರು ಇನ್ನು ಏನಾದರು ಬೇಕು ಎಂದು ಸದಾ ಕಾಲ ಹಂಬಲಿಸುತ್ತಾ ಇರುತ್ತಾನೆ. ಸತ್ತು ಹೋದ ಮೇಲೆ ನೀವೇನಾದರು ಹಣವನ್ನು ತೆಗೆದುಕೊಂಡು ಹೋಗುತ್ತೀರಾ ಇಲ್ಲ. ಮಣ್ಣಿನಿಂದ ಹುಟ್ಟಿ ಮಣ್ಣಿಗೆ ಸೇರುವ ದೇಹಕ್ಕೆ ಅಲಂಕಾರ ಹಾಗು ಶೃಂಗಾರ ಯಾಕೆ ಅಲ್ವಾ. ಸರಳತನದ ವ್ಯಕ್ತಿತ್ವದ ಮೂಲಕ ದೊಡ್ಡ ವ್ಯಕ್ತಿಯಾಗುವ ಕನಸು ಕಾಣೋಣ. ಕನ್ನಡ ಸಿನಿರಂಗದಲ್ಲಿ ಡಾಕ್ಟರ್ ರಾಜ್ ಕುಮಾರ್ ಅವರು ಸಾಮಾನ್ಯ ವ್ಯಕ್ತಿ ಅಂತೆ ಬದುಕುತ್ತಿದ್ದರು. ರಾಜ್ ಅವರನ್ನು ರಾಜಕೀಯಕ್ಕೆ ಬರಬೇಕೆಂದು ಅನೇಕರು ಆಹ್ವಾನ ಮಾಡುತ್ತಾರೆ, ಆದರೇ ಕನ್ನಡ ಚಿತ್ರರಂಗದ ಮೇಲೆ ಇರುವ ಅಭಿಮಾನದಿಂದ ರಾಜಕೀಯಕ್ಕೆ ಹೋಗಲು ನಿರಾಕರಿಸುತ್ತಾರೆ.

ಮಧ್ಯಮ ವರ್ಗದ ಜನರು ಉಳಿದುಕೊಳ್ಳುವ ಹೋಟೆಲ್ ಅಲ್ಲಿ ಉಳಿದುಕೊಳ್ಳುತ್ತಾ ಬಂದಿದ್ದಾರೆ

ರಾಜ್ ಕುಮಾರ್ ಅವರ ಒಂದು ಚಿತ್ರದ ಚಿತ್ರೀಕರಣ ನವೆಂಬರ್ ತಿಂಗಳಿನಲ್ಲಿ ಶುರುವಾಗಿತ್ತು. ನವೆಂಬರ್ ತಿಂಗಳಿನಲ್ಲಿ ಎಂದಿನಂತೆ  ಕನ್ನಡ ರಾಜ್ಯೋತ್ಸವದ ಸಡಗರ ಸಂಭ್ರಮ ಜೋರಾಗೆ ಇತ್ತು. ರಾಜ್ ಕುಮಾರ್ ಅವರು ಸಿಕ್ಕರೆ ಸಾಕು ಕಾರ್ಯಕ್ರಮಕ್ಕೆ ಕರೆಯೋಣ ಎಂದು ನಿರ್ಧರಿಸಿದ್ದರು. ರಾಜ್ ಕುಮಾರ್ ಅವರು ಒಂದು ವೇಳೆ ಕಾರ್ಯಕ್ರಮಕ್ಕೆ ಬರಲು ಒಪ್ಪದಿದ್ದರೆ ಚಿತ್ರೀಕರಣಕ್ಕೆ ತಡೆ ಆಗಬಹುದೆನ್ನುವುದು ನಿರ್ಮಾಪಕರ ಚಿಂತೆ. ಬೆಂಗಳೂರಿನಲ್ಲಿ ಸ್ಟಾರ್ ಹೋಟೆಲ್ ಗಳು ತುಂಬಾ ಇವೆ ಉದಾಹರಣೆಗೆ ಹೈಲ್ಯಾಂಡ್ ಮತ್ತು ತಾರಾ ಹೋಟೆಲ್ಸ್, ಆದರೇ ರಾಜ್ ಕುಮಾರ್ ಅವರು ಈ ಹೋಟೆಲ್ ಗಳಲ್ಲಿ ಉಳಿದುಕೊಳ್ಳಲಿಲ್ಲ. ಮೊದಲಿನಿಂದಾನು ರಾಜ್ ಅವರು ಮಧ್ಯಮ ವರ್ಗದ ಜನರು ಉಳಿದುಕೊಳ್ಳುವ ಹೋಟೆಲ್ ಅಲ್ಲಿ ಉಳಿದುಕೊಳ್ಳುತ್ತಾ ಬಂದಿದ್ದಾರೆ.

ಮಾರನೇ ದಿನ ಹೋಟೆಲ್ ಗೆ ಹೋಗಿ ನೋಡಿದಾಗ ರಾಜ್ ಅವರು ಅಲ್ಲಿ ಇರಲಿಲ್ಲ

ಈ ವಿಷಯ ಅಭಿಮಾನಿಗಳಿಗೆ ಗೊತ್ತಿರುವುದರಿಂದ ರಾಜ್ ಅವರನ್ನು ಕಾರ್ಯಕ್ರಮಕ್ಕೆ ಕರೆ ತರಲು ಮುಗಿ ಬೀಳುತ್ತಾರೆ, ಆದ್ದರಿಂದ ಚಿತ್ರದ ನಿರ್ಮಾಪಕರು ರಾಜ್ ಅವರನ್ನು ಪಂಚತಾರಾ ಅಶೋಕ್ ಹೋಟೆಲ್ ಅಲ್ಲಿ ಬಿಟ್ಟು ರೂಮಿನ ವ್ಯವಸ್ಥೆ ಮಾಡಿಕೊಡುತ್ತಾರೆ. ಆದರೆ ನಿರ್ಮಾಪಕರು ಮಾರನೇ ದಿನ ಹೋಟೆಲ್ ಗೆ ಹೋಗಿ ನೋಡಿದಾಗ ರಾಜ್ ಅವರು ಅಲ್ಲಿ ಇರಲಿಲ್ಲ, ನಿರ್ಮಾಪಕರು ಗಾಬರಿ ಆಗುತ್ತಾರೆ. ಇದರ ಕುರಿತು ಹೋಟೆಲ್ ಮಾಲೀಕರಿಗೆ ವಿಚಾರಿಸಿದಾಗ ರಾತ್ರೋ ರಾತ್ರಿ ರಾಜ್ ಅವರು ರೂಮ್ ಖಾಲಿ ಮಾಡಿರುವ ವಿಷಯ ಗೊತ್ತಾಗುತ್ತದೆ. ನನ್ನಿಂದ ಏನಾದರೂ ತಪ್ಪಾಯಿತೆ ಯಾಕೆ ರಾಜ್ ಅವರು ಈ ರೀತಿ ಮಾಡಿದ್ದಾರೆ ಎಂದು ನಿರ್ಮಾಪಕರು ಯೋಚಿಸುತ್ತಾರೆ.

raaj kumar

ನಾನು ನಿರ್ಮಾಪಕರಿಗೆ ಭಾರ ಆಗ ಬಾರದೆಂದು, ಕೂಡಲೇ ರೂಮ್ ಖಾಲಿ ಮಾಡುತ್ತಾರೆ

ನಿರ್ಮಾಪಕರು ಚಿತ್ರ ತಂಡ ಉಳಿದುಕೊಂಡಿದ್ದ ಮೊದಲ ಹೋಟೆಲ್ ಗೆ ಹೋಗಿ ನೋಡಿದರೆ ರಾಜ್ ಅವರು ಅಲ್ಲಿಯೇ ಇದ್ದರು. ಚಿತ್ರೀಕರಣಕ್ಕೆ ಸಿದ್ಧರಾಗಿ ಕೂತಿದ್ದರು. ಇದನ್ನು ಕಂಡ ನಿರ್ಮಾಪಕರಿಗೆ ಸಂತೋಷ ಹಾಗೂ ಆಶ್ಚರ್ಯ ಎರಡು ಒಟ್ಟಿಗೆ ಆಗುತ್ತದೆ. ಯಾಕೆ ಏನಾಯ್ತು ಅಂತಾ ಕೇಳಿದಾಗ ನೀವೆಲ್ಲಾ ಸೇರಿ ನನ್ನನ್ನು ಅಶೋಕ ಹೋಟೆಲ್ ಗೆ ಬಿಟ್ಟು ಹೋಗುತ್ತೀರಿ, ನಾನು ಊಟ ಕೇಳಿದೆ ಹೋಟೆಲ್ ನವರು ನನಗೆ ಊಟ ಕೊಟ್ಟರು. ಊಟ ಆದ ಮೇಲೆ ಬಿಲ್ ತಂದರು, ಬಿಲ್ ಗೆ ಸಹಿ ಮಾಡುತ್ತಾ ಬಿಲ್ ನೋಡಿದರೆ ಒಂದು ಊಟಕ್ಕೆ ಇಷ್ಟೊಂದು ಹಣ ತೆಗೆದುಕೊಳ್ಳುತ್ತಾರಾ? ನಾನು ನಿರ್ಮಾಪಕರಿಗೆ ಭಾರ ಆಗ ಬಾರದೆಂದು, ಕೂಡಲೇ ರೂಮ್ ಖಾಲಿ ಮಾಡಿ ಮೊದಲು ಉಳಿದುಕೊಂಡಿದ್ದ ರೂಮ್ ಗೆ ಬಂದು ಬಿಟ್ಟೆ ಅಂತ, ರಾಜ್ ಕುಮಾರ್ ಅವರು ಉತ್ತರಿಸುತ್ತಾರೆ.

dr raajkumar

ಸರಳತೆಗೆ ಇನ್ನೊಂದು ಹೆಸರೇ ಡಾಕ್ಟರ್ ರಾಜ್ ಕುಮಾರ್

ಡಾಕ್ಟರ್ ರಾಜ್ ಕುಮಾರ್  ಅವರ ಈ ಮಾತುಗಳನ್ನು ಕೇಳಿ ನಿರ್ಮಾಪಕರು ಒಂದು ಕ್ಷಣ ನಿಗ್ಬೆರಗಾಗುತ್ತಾರೆ. ಬಡತನವನ್ನು ಸಹಿಸೋದು ಕಷ್ಟ ಅಂತ ಅನೇಕರು ಹೇಳಿದ್ದಾರೆ. ಆದರೆ ಸಿರಿತನ ಸಹಿಸೋದು ಕಷ್ಟ ಅಂತ ಹೇಳಿರೋದು ಡಾಕ್ಟರ್ ರಾಜ್ ಕುಮಾರ್ ಅವರು ಒಬ್ಬರೇ ಅಂತ ಅನಿಸುತ್ತದೆ. ಸರಳತೆಗೆ ಇನ್ನೊಂದು ಹೆಸರೇ ಡಾಕ್ಟರ್ ರಾಜ್ ಕುಮಾರ್.

LEAVE A REPLY

Please enter your comment!
Please enter your name here