ವರಮಹಾಲಕ್ಷ್ಮಿ ಹಬ್ಬದ ದಿನದಂದು ಮೂರು ಸಿನಿಮಾಗಳು ಬಿಡುಗಡೆ ಆಗಲಿವೆ, ಯಾವ ಸಿನೆಮಾಕ್ಕೆ ಜೈ ಎನ್ನುತ್ತಾರೆ ಪ್ರೇಕ್ಷಕ ಮಹಾಪ್ರಭುಗಳು?

0
1568
ಸುದೀಪ್, ಮುರಳಿ, ಶಿವಣ್ಣ

ಹಬ್ಬ ಬಂದರೆ ಸಾಕು ಸಿನಿರಸಿಕರಿಗೆ ಏನೋ ಒಂಥರಹ ಆನಂದ, ಹಬ್ಬದ ಪ್ರಯುಕ್ತ ಬಿಡುಗಡೆ ಆಗುವ ಚಿತ್ರಗಳನ್ನು ನೋಡಬೇಕೆಂದು ಕಾತುರದಿಂದ ಕಾಯುತ್ತಿರುತ್ತಾರೆ. ಹಬ್ಬದ ದಿನ ರಜಾ ಸಿಗುವುದರಿಂದ ಕುಟುಂಬ ಸಮೇತ ಸಿನೆಮಾ ನೋಡಲೆಂದೆ ಜನ ಚಿತ್ರಮಂದಿರಕ್ಕೆ ಬರುತ್ತಾರೆ. ಯಾವ ಹಬ್ಬದ ಬಗ್ಗೆ ನಾವು ಮಾತನಾಡುತ್ತಿದ್ದೇವೆ ಅಂತಾ ಆಲೋಚಿಸುತ್ತಿದ್ದೀರಾ? ಇನ್ನೇನು ವರಮಹಾಲಾಕ್ಷ್ಮಿ ಹಬ್ಬಕ್ಕೆ ಬಹಳ ದಿನ ಉಳಿದಿಲ್ಲ, ಆದ್ದರಿಂದ ಚಿತ್ರದ ನಿರ್ಮಾಪಕರು ಸಿನೆಮಾ ಬಿಡುಗಡೆ ಮಾಡಲು ಸಿದ್ದರಾಗಿದ್ದಾರೆ. ವರಮಹಲಕ್ಷ್ಮಿ ಹಬ್ಬದ ದಿನದಂದು ಯಾವೆಲ್ಲಾ ಚಿತ್ರಗಳು ಬಿಡುಗಡೆ ಆಗಲಿವೆ? ಮುಂದೆ ಓದಿ

ಮೂರು ಸ್ಟಾರ್ ನಟರ ಸಿನಿಮಾಗಳು ಒಂದೇ ದಿನ ಬಿಡುಗಡೆ ಆಗಲಿವೆ

ಮೂರು ಸಿನೆಮಾಗಳು ಬಿಡುಗಡೆ ಆಗಲಿವೆ, ಮೂರು ಚಿತ್ರಗಳು ಸ್ಟಾರ್ ನಟರ ಸಿನೆಮಾವಾಗಿದ್ದು ಅಭಿಮಾನಿಗಳು ಹೆಚ್ಚಿನ ಮಟ್ಟದಲ್ಲಿ ಚಿತ್ರಗಳ ಬಗ್ಗೆ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಸೆಂಚುರಿ ಸ್ಟಾರ್ ಶಿವಣ್ಣ ಅಭಿನಯದ ಆನಂದ್, ಎಲ್ಲರ ಗಮನ ಸೆಳೆದ ಕಿಚ್ಚ ಸುದೀಪ್ ನಟಿಸಿರುವ ಪೈಲ್ವಾನ್, ರೋರಿಂಗ್ ಸ್ಟಾರ್ ಶ್ರೀ ಮುರಳಿ ಅಭಿನಯಿಸಿರುವ ಭರಾಟೆ ಈ ಎಲ್ಲಾ ಚಲನಚಿತ್ರಗಳು ಒಂದೇ ದಿನ ಬಿಡುಗಡೆ ಆಗಲು ರೆಡೀ ಆಗಿವೆ. ಯಾವ ಸಿನೆಮಾಗೆ ಪ್ರೇಕ್ಷಕ ಮಹಾಪ್ರಭುಗಳು ಜೈ ಎನ್ನಲಿದ್ದಾರೆ ಎನ್ನುವುದು ಚಿತ್ರ ಬಿಡುಗಡೆ ಆದ ನಂತರ ನಮ್ಮಗೆ ಗೊತ್ತಾಗಲಿದೆ, ಅಲ್ಲಿಯವರೆಗೂ ನಾವು ಕಾಯಲೇಬೇಕು.

ಮತ್ತೊಮ್ಮೆ ಆನಂದ್ ಆಗಿ ತೆರೆಮೇಲೆ ಬರಲಿರುವ ಶಿವಣ್ಣ

ಶಿವರಾಜ್ ಕುಮಾರ್ ಅವರು ಆನಂದ್ ಅನ್ನೋ ಚಿತ್ರದ ಮೂಲಕ ಸಿನಿರಂಗಕ್ಕೆ ಪಾದಾರ್ಪಣೆ ಮಾಡಿದ್ದರು, ಕಾಲೇಜ್ ಯುವಕನ ಪಾತ್ರಕ್ಕೆ ಬಣ್ಣ ಹಚ್ಚಿದರು, ಸಿನೆಮಾದಲ್ಲಿ ಶಿವಣ್ಣ ನಿಭಾಯಿಸಿದ ಪಾತ್ರದ ಹೆಸರು ಆನಂದ್. ಆನಂದ್ ಸಿನೆಮಾ ಭರ್ಜರಿ ಪ್ರದರ್ಶನ ಕಾಣುತ್ತದೆ, ಶಿವಣ್ಣನ ನಟನೆಗೆ ಪ್ರೇಕ್ಷಕರು ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ಇಲ್ಲಿಂದ ಶುರುವಾಗುತ್ತದೆ ಜೋಗಿಯ ಸಿನಿರಂಗದ ಪಯಣ. ಆದರೆ ಈಗ ಶಿವಣ್ಣ ಮತ್ತೆ ಆನಂದ್ ಅನ್ನೋ ಶೀರ್ಷಿಕೆಯನ್ನು ಇಟ್ಟುಕೊಂಡು ಸಿನೆಮಾ ಮಾಡಲು ಮುಂದಾಗಿದ್ದಾರೆ. ದ್ವಾರಕೀಶ್ ಅವರ ಪ್ರೊಡಕ್ಷನ್ ಅಲ್ಲಿ ಸಿನೆಮಾ ತಯಾರಾಗಲಿದೆ, ಪಿ ವಾಸು ಅವರು ಚಿತ್ರವನ್ನು ನಿರ್ದೇಶಿಸಲಿದ್ದಾರೆ. ರಚಿತ ರಾಮ್ ನಾಯಕಿ ನಟಿಯಾಗಿ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಹಿಂದೆ ಶಿವಲಿಂಗ ಚಿತ್ರಕ್ಕೆ ಪಿ ವಾಸು ಅವರು ನಿರ್ದೇಶನ ಮಾಡಿದ್ದರು, ಮಾತೊಮ್ಮೆ ಶಿವಣ್ಣ ಹಾಗೂ ಪಿ ವಾಸು ಅವರ ಕಾಂಬಿನೇಶನ್ ಕ್ಲಿಕ್ ಆಗುತ್ತಾ ಕಾದು ನೋಡಲೇಬೇಕು.

shivrajkumar

ಬಂದಾ ನೋಡು ಪೈಲ್ವಾನ್

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ಅಭಿಮಾನಿಗಳು ಪೈಲ್ವಾನ್ ಚಿತ್ರವೂ ಯಾವಾಗ ಬಿಡುಗಡೆ ಆಗುತ್ತದೆ ಅಂತಾ ತುದಿಗಾಲಿನಲ್ಲಿ ನಿಂತು ಕಾಯುತ್ತಿದ್ದಾರೆ. ಚಿತ್ರದ ಟೀಸರ್ ಇಂದಾನೆ ಈ ಚಿತ್ರವೂ ಪ್ರೇಕ್ಷಕರ ಗಮನ ಸೆಳೆದಿತ್ತು. ಸುದೀಪ್ ಅವರ ದೇಹಸಿರಿಯನ್ನು ವೀಕ್ಷಿಸಿದ ಅಭಿಮಾನಿಗಳು ಮಾರು ಹೋಗಿದ್ದರು. ಪೈಲ್ವಾನ್ ಚಿತ್ರವೂ ಆಗಸ್ಟ್ 9 ರಂದು ರಾಜ್ಯದಾಂತ ಬಿಡುಗಡೆ ಆಗಲಿದೆ. ಕೃಷ್ಣ ಅವರು ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಕನ್ನಡ ಭಾಷೆ ಅಲ್ಲದೆ ಹಿಂದಿ, ಭೋಜಪುರಿ, ಮರಾಠಿ ಇನ್ನಿತರ ಭಾಷೆಗಳಲ್ಲಿ ಸಿನೆಮಾ ತೆರೆಕಾಣಲಿದೆ. ಹೀರೋಯಿನ್ ಪಾತ್ರಕ್ಕೆ ನಟಿ ಆಕಾಂಕ್ಷ ಸಿಂಗ್ ಅವರು ಜೀವ ತುಂಬಿದ್ದಾರೆ.

pailwaan

ಶ್ರೀಮುರಲಿ ಅಭಿನಯಿಸಿದ ಭರಾಟೆ ಸಿನೆಮಾ ಬಿಡುಗಡೆ ಆಗಲು ಸಜ್ಜಾಗಿದೆ

ಉಗ್ರಾಮ್ ಖ್ಯಾತಿಯ ರೋರಿಂಗ್ ಸ್ಟಾರ್ ಎಂದೇ ಗುರುತಿಸಿಕೊಂಡ ನಟ ಶ್ರೀ ಮುರಳಿ ಅಭಿನಯಿಸಿದ ಭರಾಟೆ ಚಿತ್ರವೂ ಸಹ ಬಿಡುಗಡೆ ಆಗಲು ಸಜ್ಜಾಗಿದೆ. ಇತ್ತೀಚಿಗಷ್ಟೇ ಶ್ರೀ ಮುರಳಿ ಅವರು ಮುಫ್ತಿ ಸಿನೆಮಾದಲ್ಲಿ ಶಿವಣ್ಣನ ಜೊತೆ ಸ್ಕ್ರೀನ್ ಷೇರ್ ಮಾಡಿಕೊಂಡಿದ್ದರು. ಆನಂತರ ಇವರ ಸಿನೆಮಾಗಳು ಬಿಡುಗಡೆ ಆಗಲೇ ಇಲ್ಲ, ಈಗ ಭರಾಟೆ ಎನ್ನುತಿದ್ದಾರೆ ರೋರಿಂಗ್ ಸ್ಟಾರ್. ವರಮಹಾಲಕ್ಷ್ಮಿ ಹಬ್ಬದ ದಿನವೇ ಬಿಡುಗಡೆ ಆಗಲಿದೆ, ಇನ್ನೂ ಸ್ವಲ್ಪ ಚಿತ್ರದ ಕೆಲಸಗಳಲ್ಲಿ ಚಿತ್ರದ ತಂಡದವರು ನಿರುತರಾಗಿದ್ದಾರೆ. ರೀಸೆಂಟ್ ಆಗಿ ಚಿತ್ರದ ಹಾಡಿನ ಚಿತ್ರೀಕರಣದ ಶೂಟಿಂಗ್ ಪೂರ್ತಿಗೊಳಿಸಿದ್ದಾರೆ, ಯೂಟ್ಯೂಬ್ ಅಲ್ಲಿ ಬಿಡುಗಡೆ ಆಗಿದ್ದೆ ತಡ 6 ಲಕ್ಷಕ್ಕೂ ಹೆಚ್ಚಿನ ಜನರು ವೀಡಿಯೋ ನೋಡಿದ್ದಾರೆ. ಹಾಡಲ್ಲಿ ಮುರಳಿ ಜೊತೆಗೆ ರಚಿತರಾಮ್ ಕೂಡ ಡ್ಯಾನ್ಸ್ ಮಾಡಿದ್ದಾರೆ. ಅರ್ಜುನ್ ಜನ್ಯ ಅವರು ಚಿತ್ರಕ್ಕೆ ಮ್ಯೂಜಿಕ್ ಕಾಂಪೋಸ್ ಮಾಡಿದ್ದಾರೆ.

bharaate

ಯಾವ ಚಿತ್ರಕ್ಕೆ ಸಿನಿ ಪ್ರೇಕ್ಷಕರು ಮೆಚ್ಚಿಕೊಳ್ಳುತ್ತಾರೋ? ಸಿನೆಮಾ ಬಿಡುಗಡೆ ಆಗೋ ವರಿಗೂ ಕಾಯಲೇಬೇಕು. ತಮ್ಮ ನೆಚ್ಚಿನ ಸ್ಟಾರ್ ನಟರ ಸಿನೆಮಾ ನೋಡಲೆಂದು ಜನ ಚಿತ್ರಮಂದಿರಕ್ಕಂತು ಆಗಮಿಸುತ್ತಾರೆ. ಯಾವ ಫಿಲ್ಮ್ ಗೆ ಫುಲ್ ಮಾರ್ಕ್ಸ್ ಸಿಗಲಿದೆ ಎನ್ನುವುದು ಅತಿ ಶೀಘ್ರದಲ್ಲೇ ಗೊತ್ತಾಗಲಿದೆ.

LEAVE A REPLY

Please enter your comment!
Please enter your name here