ಬೀಡಿಗೆ ಲೇಬಲ್ ಹಚ್ಚುತ್ತಿದ್ದ ಹುಡುಗಿ, ದ್ವಿತೀಯ ಪಿಯುಸಿನಲ್ಲಿ ರಾಜ್ಯಕ್ಕೆ 6ನೇ ಟಾಪರ್. ಈ ಸ್ಟೋರಿ ನೋಡಿ.

0
2107
puc 6th topper

ಮನಸ್ಸಿದ್ದರೆ ಮಾರ್ಗ ಅನ್ನೋ ಮಾತನ್ನ ನಾವು ಚಿಕ್ಕಂದಿನಿಂದಲೂ ಕೇಳಿದ್ದೀವಿ. ಈ ಮಾತು ಎಲ್ಲರಿಗೂ ಸೇರುತ್ತೆ. ಯಾಕಂದ್ರೆ, ನಮ್ಮ ಏಳಿಗೆ ನಮ್ಮ ಕೈಯಲ್ಲೇ ಇರುತ್ತೆ. ನಾವೇ ಅದರ ಬಗ್ಗೆ ಗಮನ ಹರಿಸಬೇಕು. ನಮ್ಮಿಂದ ಆಗಲ್ಲ ಅಂತ ಎಂದಿಗೂ ಕೈ ಕಟ್ಟಿ ಕೂರಬಾರದು. ಯಾಕಂದ್ರೆ, ಕಾಲಿಲ್ಲದ ಕುಂಟ ಕೂಡ, ತೆವಳುತ್ತಾ ಆತ ಸೇರಬೇಕಾದ ಜಾಗ ಸೇರುತ್ತಾನೆ ಅಂದ್ರೆ, ನಾವ್ಯಾಕೆ ಮಾಡಬಾರದು. ಸಾಧನೆ ನಮ್ಮ ಕೈಯಲ್ಲಿದೆ. ಅದನ್ನ ಎಲ್ಲರಿಗೂ ತಿಳಿಯುವಂತೆ ಮಾಡಬೇಕು.

ಇದೆ ರೀತಿ ಒಬ್ಬ ಯುವತಿ, ತನಗೆ ಎಷ್ಟೇ ಕಷ್ಟಗಳಿದ್ದರೂ, ಅದನ್ನ ಮರೆತು ಈಗ ಎಲ್ಲರ ಮನೆ ಮಾತಾಗಿದ್ದಾಳೆ. ಹೌದು. ಇವಳ ಈ ಸಾಧನೆ ರಾಜ್ಯಕ್ಕೆ ತಲುಪಿದೆ. ತನ್ನ ಮನೆಯನ್ನ ನಡೆಸಿಕೊಂಡು, ತನ್ನ ಕೆಲಸವನ್ನೂ ಮಾಡಿಕೊಂಡು ಈಗ ಈ ಸಾಧನೆಯ ಹೆಸರಿಗೆ ಪಾತ್ರಳಾಗಿದ್ದಾಳೆ. ಹಾಗಾದ್ರೆ ಆಕೆ ಯಾರು? ಎಂಬುದರ ಬಗ್ಗೆ ತಿಳಿಸ್ತೀವಿ ನೀವೇ ನೋಡಿ.

ಬೀಡಿ ಲೇಬಲ್ ಅಂಟಿಸುತ್ತಿದ್ದ ಹುಡುಗಿ ರಾಜ್ಯಕ್ಕೆ 6ನೇ ಸ್ಥಾನ ಪಡೆದಿದ್ದಾಳೆ

ಈಕೆ ಹೆಸರು ಸ್ನೇಹ. ಇವರ ಊರು ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಉಪ್ಪಿನಂಗಡಿ ಬಳಿಯ ನಟ್ಟಿಬೈಲು. ಇವರದ್ದು ಒಂದು ಬಡಕುಟುಂಬ. ಮನೆಯಲ್ಲಿ ಎಲ್ಲರೂ ಕೂಲಿ ಕೆಲಸಕ್ಕೆ ಅಂತ ಹೋಗ್ತಾರೆ. ಇವರ ತಂದೆ ಬೀಡಿ ಫ್ಯಾಕ್ಟರಿ ಯಲ್ಲಿ ಕೂಲಿ ಕೆಲಸ ಮಾಡ್ತಾರೆ. ಮನೆಯಲ್ಲಿ ತುಂಬ ಬಡತನ ಇದ್ದಿದ್ದರಿಂದ, ಇವರ ತಂದೆಯ ಸಂಬಳ ಮನೆಗೆ ಸಾಕಾಗುತ್ತಿರಲಿಲ್ಲ. ಹಾಗಾಗಿ ಸ್ನೇಹ ಕೂಡ, ತನ್ನ ತಂದೆ ಕೆಲಸ ಮಾಡುತ್ತಿದ್ದ ಫ್ಯಾಕ್ಟರಿ ಅವರ ಜೊತೆ ಮಾತಾಡಿ, ಪ್ರತಿದಿನ ಲೇಬಲ್ ಅಂಟಿಸುವ ಕೆಲಸಕ್ಕೆ ಸೇರುತ್ತಾರೆ. ಪ್ರತಿದಿನ ಈ ಕೆಲಸವನ್ನ ಮಾಡುತ್ತ, ತನ್ನ ವಿದ್ಯಾಭ್ಯಾಸ ನೋಡಿಕೊಳ್ಳುತ್ತಿದ್ದರು.

ತನ್ನ ಓದಿನೊಂದಿಗೆ ಬೀಡಿ ಕೆಲಸ ಮಾಡುತ್ತಿದ್ದ ಸ್ನೇಹ

ಸ್ನೇಹ ಪ್ರತಿದಿನ ಕಾಲೇಜ್ ಗೆ ಹೋಗುವ ಮೊದಲು ಹಾಗೂ ಕಾಲೇಜ್ ನಿಂದ ಮನೆಗೆ ಬಂದಾಗ, ಯಾವಾಗಲು ಬೀಡಿ ಲೇಬಲ್ ಅಂಟಿಸುತ್ತಿದ್ದರು. ಬೆಳಿಗ್ಗೆ ಬೇಗನೆ ಎದ್ದು ಲೇಬಲ್ ಅಂಟಿಸಿ ಕಾಲೇಜ್ ಗೆ ಹೋಗುತ್ತಿದ್ದರು. ಹಾಗೆ ಸಂಜೆ ಮನೆಗೆ ಬಂದು, ಪಠ್ಯ ಸಂಬಂಧಿ ಕೆಲಸಗಳನ್ನು ಪೂರೈಸಿ ರಾತ್ರಿ 8.30ರಿಂದ 11ರ ವರೆಗೂ ಮತ್ತೆ ಲೇಬಲ್ ಅಂಟಿಸುತ್ತಿದ್ದರು. ಮತ್ತೆ ಬೆಳಗಿನ ಜಾವ ಬೇಗನೆ ಎದ್ದು ಓದಿ, ನಂತರ ಲೇಬಲ್ ಅಂಟಿಸಿ ಕಾಲೇಜ್ ಗೆ ಹೋಗುತ್ತಿದ್ದರು.

ನೋಡುಗರಿಗೆ ಆಶ್ಚರ್ಯವಾಗುವಂತೆ ಮಾಡಿದ ಸ್ನೇಹ

ಸ್ನೇಹ ಓದಿನಲ್ಲಿ ತುಂಬ ಮುಂದಿದ್ದ ಹುಡುಗಿ. ಮನೆಯಲ್ಲಿ ಯಾವುದೇ ಸೌಲಭ್ಯವಿಲ್ಲದ್ದಿದ್ದರೂ, ಚೆನ್ನಾಗೆ ಓದುತ್ತಿದ್ದರು. ಸ್ನೇಹ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲೂ,ಹೆಚ್ಚಿನ ಅಂಕ ಗಳಿಸಿ ಎಲ್ಲರ ಮನೆ ಮಾತಾಗಿದ್ದರು. ಆದ್ರೆ ಮುಂದೆ ಓದುವುದಕ್ಕೆ ಅವರಿಗೆ ಆಗುವುದಿಲ್ಲ ಅಂತ ತಿಳಿದಿದ್ದರು. ಯಾಕಂದ್ರೆ ಮನೆಯಲ್ಲಿ ಕಷ್ಟ ಇದ್ದಿದ್ದರಿಂದ, ವಿದ್ಯಾಭ್ಯಾಸವನ್ನ ನಿಲ್ಲಿಸಬೇಕು ಅಂತ ನಿರ್ಧಾರ ಮಾಡಿದ್ದರು. ಆದ್ರೆ ಅವರ ತಂದೆ, ಅವರಿಗೆ ಬೆನ್ನೆಲುಬಾಗಿ ನಿಂತು, ನೀನು ಮುಂದೆ ಓದಬೇಕು ಅಂತ ಅವರ ಆಸೆಗೆ ನೀರೆರೆದು ಪೋಷಿಸಿದರು. ಈಗ ದ್ವಿತೀಯ ಪಿಯುಸಿನಲ್ಲಿ ರಾಜ್ಯಕ್ಕೆ 6ನೇ ಸ್ಥಾನ ಪಡೆದಿರೋದು, ಅವರ ಸಂತೋಷಕ್ಕೆ ಪಾರವೇ ಇಲ್ಲದಂತಾಗಿದೆ.

ಮುಂದೆ ಮೆಡಿಕಲ್ ಓದುವ ಆಸೆ ಹೊಂದಿರುವ ಸ್ನೆಹ

ಪಿಯುಸಿಯಲ್ಲಿ 600 ಅಂಕಗಳಿಗೆ 589 ಅಂಕ ಗಳಿಸಿರುವ ಸ್ನೇಹ ಮುಂದೆ ಮೆಡಿಕಲ್ ಮಾಡುವ ಆಸೆ ಹೊತ್ತಿದ್ದಾರೆ. ಆದ್ರೆ ಆಸೆ ಪಟ್ಟ ತಕ್ಷಣ ಎಲ್ಲವೂ ಆಗೋದಿಲ್ಲ ಅನ್ನೋದು ಅವರ ಮಾತಾಗಿದೆ. ಹೌದು, ನೀಟ್ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದರೆ, ಮೆಡಿಕಲ್ ಓದುವ ಆಸೆಯನ್ನ ಹೊತ್ತಿದ್ದಾರೆ, ಇಲ್ಲವಾದ್ರೆ, ವೆಟರ್ನರಿ ಅಥವಾ ತೋಟಗಾರಿಕಾ ಕ್ಷೇತ್ರದತ್ತ ಗಮನ ಹರಿಸಲು ನಿರ್ಧಾರ ಮಾಡಿದ್ದಾರೆ.

ಬೆನ್ನುಲುಬಾಗಿ ನಿಂತಿರುವ ಸ್ನೇಹ ತಂದೆ

ಸ್ನೇಹ ಮನೆಯಲ್ಲಿ ಎಷ್ಟೇ ಬಡತನವಿದ್ದರೂ, ಸ್ನೇಹಾಳ ವಿದ್ಯಾಭ್ಯಾಸದ ವಿಚಾರದಲ್ಲಿ ಅವರ ತಂದೆ, ಸಂಪೂರ್ಣ ಪ್ರೋತ್ಸಾಹ ನೀಡುತ್ತಿದ್ದಾರೆ. ಯಾಕಂದ್ರೆ ಎಷ್ಟೋ ಜನಕ್ಕೆ ವಿದ್ಯಾಭ್ಯಾಸ ಸಿಗುವುದೇ ಇಲ್ಲ. ಹೀಗಿರುವಾಗ, ನನ್ನ ಮಗಳು ಇಷ್ಟು ಚೆನ್ನಾಗಿ ಓದಬೇಕಾದ್ರೆ, ನಾನೇಕೆ ಅವಳ ಆಸೆಯನ್ನ ಈಡೇರಿಸಬಾರದು ಅಂತ, ಅವರ ತಂದೆ ನಿರ್ಧರಿಸಿದ್ದಾರೆ. ಎಷ್ಟೇ ಕಷ್ಟ ಆದರೂ ಪರವಾಗಿಲ್ಲ, ನಾನು ನಿನಗೆ ಓದಿಸುತ್ತೇನೆ ಅಂತ ಅವರ ತಂದೆ ಸ್ನೇಹ ಗೆ ಭರವಸೆ ನೀಡಿದ್ದಾರೆ.

ಒಟ್ಟಿನಲ್ಲಿ ಮನಸ್ಸು ಮಾಡಿದ್ರೆ ಏನು ಬೇಕಾದ್ರು ಮಾಡಬಹುದು ಅಂತ, ಸ್ನೇಹ ಎಲ್ಲರಿಗೂ ತಿಳಿಸಿದ್ದಾರೆ. ಬೀಡಿ ಲೇಬಲ್ ಅಂಟಿಸುವ ಹುಡುಗಿ ಪಿಯುಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ 6ನೇ ಸ್ಥಾನ ಪಡೆದಿದ್ದಾರೆ ಅಂದ್ರೆ ಇದು ನಮ್ಮೆಲ್ಲರಿಗೂ ಹೆಮ್ಮೆಯ ವಿಷಯವಾಗಿದೆ. ಸ್ನೇಹ ಅವರ ಮುಂದಿನ ವಿದ್ಯಾಭ್ಯಾಸಕ್ಕೆ ನಮ್ಮ ಕಡೆಯಿಂದ ಆಲ್ ದಿ ಬೆಸ್ಟ್.

LEAVE A REPLY

Please enter your comment!
Please enter your name here