ನಿಖಿಲ್ ಎಲ್ಲಿದಿಯಪ್ಪ ಅನ್ನೋ ಶೀರ್ಷಿಕೆಗೆ ಭಾರಿ ಬೇಡಿಕೆ ಏನಿದು ಸ್ಟೋರಿ?

0
1666

ಲೋಕಸಭ ಚುನಾವಣೆಯಲ್ಲಿ ನಿಖಿಲ್ ಕುಮಾರ್ ಸ್ವಾಮಿ ಭಾಗವಹಿಸುತ್ತಿರೋದು ನಿಮಗೆಲ್ಲಾ ಗೊತ್ತಿರೋ ವಿಚಾರ. ಚುನಾವಣೆಗೆ ನಿಖಿಲ್ ನಿಲ್ಲುತ್ತಿದ್ದಾನೆ ಎನ್ನುವುದರ ಬಗ್ಗೆ ಪಕ್ಕ ಮಾಹಿತಿ ಸಿಕ್ಕ ತಕ್ಷಣವೇ, ಸಾಮಾಜಿಕ ಜಾಲ ತಾಣಗಳಲ್ಲಿ ನಿಖಿಲ್ ಎಲ್ಲಿದಿಯಪ್ಪ ಅನ್ನೋ ಘೋಷಣೆ ಎಲ್ಲಾ ಕಡೆ ಹರಡಿತ್ತು. ಜಾಗ್ವರ್ ಚಿತ್ರದ ಸಮಾರಂಭಕ್ಕೆ ಒಂದು ವೇದಿಕೆ ಸಿದ್ದವಾಗಿತ್ತು. ಜಾಗ್ವರ್ ಚಿತ್ರತಂಡದವರು ಕಾರ್ಯಕ್ರಮವನ್ನು ಹಮ್ಮಿ ಕೊಂಡಿದ್ದರು. ಕುಮಾರ್ ಸ್ವಾಮಿ ಅವರು ತನ್ನ ಮಗನನ್ನು ವೇದಿಕೆಗೆ ಕರೆಯಲು ನಿಖಿಲ್ ಎಲ್ಲಿದಿಯಪ್ಪ ಅಂತಾ ಜೋರಾಗಿ ಮೈಕ್ ಅಲ್ಲಿ ಕೂಗಿದ್ದರು, ಅದಕ್ಕೆ ನಿಖಿಲ್ ನೀವು ಪ್ರೀತಿಸೊ ಜನರ ಮಧ್ಯೆ ಇದಿನಪ್ಪ ಅಂತಾ ಪ್ರತಿಕ್ರಿಯಿಸಿದ್ದರು.

ಸಿನಿರಂಗದಲ್ಲಿ ನಿಖಿಲ್ ಎಲ್ಲಿದಿಯಪ್ಪ ಅನ್ನೋ ಶೀರ್ಷಿಕೆಗೆ ಭಾರಿ ಬೇಡಿಕೆ

ನಿಕಿಲ್ ಎಲ್ಲಿದಿಯಪ್ಪ ಅನ್ನೋ ಘೋಷಣೆ ಸಾಕಷ್ಟು ಟ್ರೆಂಡ್ ಆಗಿತ್ತು. ಇದನ್ನೇ ಆದಾರವಾಗಿ ಇಟ್ಟುಕೊಂಡು ಸಾಕಷ್ಟು ಜನ ಹಾಸ್ಯಮಯವಾಗಿ ಟ್ರೋಲ್ ಮಾಡಲು ಶುರು ಮಾಡಿದ್ದರು. ನಿಖಿಲ್ ನಾ ಚುನಾವಣೆಯ ನಡತೆಯ ಅನುಸಾರವಾಗಿ ನಿಖಿಲ್ ಎಲ್ಲಿದಿಯಪ್ಪ ಅನ್ನೋ ಸಾಲುಗಳನ್ನು ಬಳಸಿಕೊಳ್ಳುತ್ತಿದ್ದರು. ಯವಾಗೋ ತೆಗೆದ ವೀಡಿಯೋ ಒಂದರಲ್ಲಿ ಹೇಳಿದ ಮಾತುಗಳು ಈಗ ಇಷ್ಟೊಂದು ಜನಪ್ರಿಯವಾಗಿದೆ. ಸಿನಿಮಾದ ನಿರ್ಮಾಪಕರು ಹಾಗೂ ನಿರ್ದೇಶಕರೂ ನಿಖಿಲ್ ಎಲ್ಲಿದಿಯಪ್ಪ ಅನ್ನೋ ಶೀರ್ಷಿಕೆಯನ್ನು ಇಟ್ಟುಕೊಂಡು ಸಿನೆಮಾ ಮಾಡಲು ಮುಂದಾಗಿದ್ದಾರೆ,ಶೀರ್ಷಿಕೆಗೆ ಭಾರಿ ಬೇಡಿಕೆ ಬಂದಿದೆ.

nikhhil ellidiyappa

ಟೈಟಿಲ್ ಗಾಗಿ ನಿರ್ಮಾಪಕರು ಫಿಲ್ಮ್ ಚೇಂಬರ್ ಮುಖ್ಯಸ್ಥರಲ್ಲಿ ಮನವಿ ಮಾಡಿಕೊಂಡಿದ್ದಾರೆ

ಈ ಟೈಟಿಲ್ ನಮ್ಮಗೆ ಬೇಕು ಅಂತಾ ಸಿನಿರಂಗದ ನಿರ್ಮಾಪಕರು ಫಿಲ್ಮ್ ಚೇಂಬರ್ ಮುಖ್ಯಸ್ಥರಲ್ಲಿ ಮನವಿ ಮಾಡಿ ಮಾಡಿಕೊಂಡಿದ್ದಾರೆ. ಮಂಡ್ಯ ಚುನಾವಣೆಯ ಪ್ರಚಾರದ ಸಮಯದಲ್ಲಿ ಕೇಳಿ ಬಂದಾ ಮತ್ತಷ್ಟು ಪದಗಳಿಗೆ ಈಗ ಡಿಮ್ಯಾಂಡ್ ಬಂದಿದೆ. ಮಂಡ್ಯ ಚುನಾವಣೆ ಸಿನಿಮಾ ವಿಷಯದಲ್ಲೂ ಸದ್ದು ಮಾಡುತ್ತಿದೆ. ಟೈಟಿಲ್ ಗಾಗಿ ನಿರ್ಮಾಪಕರ ಪೈ ಪೋಟಿ ಹೆಚ್ಚಾಗುತ್ತಿದೆ. ಹಾಗಾದರೆ ಈ ಶೀರ್ಷಿಕೆ ಯಾರ ಪಾಲಾಗುತ್ತದೆ? ಫಿಲ್ಮ್ ಚೇಂಬರ್ ಅವರು ಟೈಟಿಲ್ ನೀಡಲು ಒಪ್ಪಿಕೊಳ್ಳುತಾರಾ? ಹಾಗಾದರೆ ಯಾವ ಒಂದು ಕಥೆಯ ಆಧಾರಿತದ ಮೇಲೆ ಸಿನೆಮಾ ತೆರೆಕಾಣುತ್ತದೆ? ಮುಂದೆ ಓದಿ

ಜೋಡೆತ್ತು ಹಾಗೂ ಕಳ್ಳೆತ್ತು ಅನ್ನೋ ಪದಗಳು ಸಹ ವೈರಲ್ ಆಗಿದೆ

ಹೌದೂ ನಿಖಿಲ್ ಎಲ್ಲಿದಿಯಪ್ಪ ಅನ್ನೋ ಟೈಟಿಲ್ ಕೊಡಿ ಅಂತಾ ಕೇಳಿಕೊಂಡವರಿಗೆ, ಟೈಟಿಲ್ ಸಿಗುವ ಸಂಭವ ಕಮ್ಮಿ. ಏಕೆಂದರೆ ಇದೂ ರಾಜಕೀಯದ ವಿಷಯ ಆಗಿದೆ. ನಿಖಿಲ್ ಕೂಡ ಸಿನಿರಂಗದಲ್ಲಿ ಇದ್ದಾರೆ, ಕುಮಾರ್ ಸ್ವಾಮಿ ಅವರು ಸಹ ಚಿತ್ರ ನಿರ್ಮಾಪಕರೆಂದೇ ಗುರುತಿಸಿಕೊಂಡಿದ್ದಾರೆ. ಇವುಗಳನೆಲ್ಲ ಸೂಕ್ಷಮವಾಗಿ ಗಮನಿಸಿದ ಚಲನಚಿತ್ರ ವಾಣಿಜ್ಯ ಮಂಡಳಿಯವರು ಟೈಟಿಲ್ ಕೊಡಬಾರದೆಂದು ನಿರ್ಧರಿಸಿದ್ದಾರೆ. ಜೋಡೆತ್ತು ಹಾಗೂ ಕಳ್ಳೆತ್ತು ಅನ್ನೋ ಪದಗಳನ್ನು ಸಿನಿಮಾದ ನಿರ್ಮಾಪಕರು ಬಳಸಿಕೊಳ್ಳಲು ತಯಾರಾಗಿದ್ದಾರಂತೆ. ನಿಖಿಲ್ ಎಲ್ಲಿದಿಯಪ್ಪ ಹೊರತು ಪಡಿಸಿ ಈಗ ಜೋಡೆತ್ತು ಮತ್ತು ಕಳೆತ್ತು ಶೀರ್ಷಿಕೆಯನ್ನು ಪಡೆಯಬೇಕೆಂದು ಸಿನಿಮಾವಾಣಿಜ್ಯ ಮಂಡಳಿ ಅವರ ಹತ್ತಿರ ಮನವಿ ಮಾಡಿಕೊಂಡಿದ್ದಾರೆ.

ಯಶ್ ಹಾಗೂ ದರ್ಶನ್ ಸುಮಲತಾ ಅವರ ಪ್ರಚಾರಕ್ಕೆಂದು ಆಗಮಿಸಿದ್ದರು, ಚುನಾವಣೆಯ ಮೊದಲನೇ ಹಂತದಲ್ಲಿ ನಟ ದರ್ಶನ್ ನಾನು ಮತ್ತು ಯಶ್ ಜೋಡೆತ್ತುಗಳು ಅಂತಾ ಹೇಳಿಕೆ ನೀಡಿದ್ದರು. ಇದಕ್ಕೆ ಕುಮಾರ್ ಸ್ವಾಮಿ ಅವರು ನಾನು ಮತ್ತು ಡಿಕೆಶಿ ಜೋಡೆತ್ತು ಇವರು ಕಲೆತ್ತು ಅಂತಾ ಪ್ರತ್ಯುತ್ತರ ನೀಡಿದ್ದರು. ಈ ಎರಡು ಪದಗಳು ಸಿಕ್ಕ ಪಟ್ಟೆ ವೈರಲ್ ಆಗಿತ್ತು, ಆದ್ದರಿಂದ ಸಿನೆಮಾದವರು ಜೋಡೆತ್ತು, ಕಲ್ಲೆತ್ತು ಶೀರ್ಷಿಕೆಯನ್ನು ತಮ್ಮ ಸಿನೆಮಾಕ್ಕೆ ಬಳಸಿಕೊಳ್ಳಬೇಕೆಂದು ತೀರ್ಮಾನಿಸಿದ್ದರು.

yash and darshan with sumalata madam

ಮಂಡ್ಯದ ಗಂಡು ಆಯಿತು ಈಗ ಮಂಡ್ಯದ ಹೆಣ್ಣು

ಮಂಡ್ಯದ ಗಂಡು ಸಿನೆಮಾದಲ್ಲಿ ಅಂಬರೀಷ್ ಅವರು ಅಭಿನಯಿಸಿದ್ದರು, ಈಗ ಚುನಾವಣೆಗೆಂದೆ ಅವರ ಪತ್ನಿ ಸುಮಲತಾ ಅವರು ಮಂಡ್ಯ ಕ್ಷೇತ್ರದಲ್ಲಿ ಅಖಾಡಕ್ಕೆ ಇಳಿದಿದ್ದಾರೆ, ಆದ್ದರಿಂದ ಮಂಡ್ಯದ ಹೆಣ್ಣು ಅನ್ನೋ ವಿಭಿನ್ನವಾದ ಟೈಟಿಲ್ ಇಟ್ಟುಕೊಂಡು ಸಿನೆಮಾ ನಿರ್ದೇಶಿಸುವ ಲೆಕ್ಕಾಚಾರ ನಿರ್ದೇಶಕರದ್ದು. ಒಂದಲ್ಲ ಒಂದು ರೀತಿಯಲ್ಲಿ ಮಂಡ್ಯ ಚುನಾವಣೆ ದಿನದಿಂದ ದಿನಕ್ಕೆ ಸುದ್ದಿ ಮಾಡುತ್ತಲೇ ಬಂದಿದೆ. ಸ್ವಲ್ಪ ವರ್ಷಗಳ ಕೆಳಗೆ ಖ್ಯಾತ ಬರಹಗಾರ ರವಿ ಬೆಳೆಗೆರೆ ಅವರು ರಾಧಿಕಾ ಹಾಗೂ ಕುಮಾರ್ ಸ್ವಾಮಿ ಅವರ ಪ್ರೇಮ ಕಥೆಯನ್ನು ಸಿನೆಮಾ ರೂಪದಲ್ಲಿ ಜನರಿಗೆ ತೋರಿಸಬೇಕೆಂದು, ಆ ಚಿತ್ರಕ್ಕೆ ಇ ಲವ್ ಯು ಮುಖ್ಯಮಂತ್ರಿ ಅನ್ನೋ ಶೀರ್ಷಿಕೆ ಇಟ್ಟಿದರು. ದೇವೇಗೌಡರು ಕೋರ್ಟ್ ಮೆಟ್ಟಿಲನ್ನು ಹತ್ತಿ ಸ್ಟೇ ಆರ್ಡರ್ ತಂದಿದ್ದರು, ಟೈಟಿಲ್ ಅಕ್ಷರ ಮಾಂತ್ರಿಕನ ಕೈ ಚೆಲ್ಲಿ ಹೋಗಿತ್ತು.

sumalata

ಎಲ್ಲಾ ಶೀರ್ಷಿಕೆಗಳಿಗೆ ಚಲನಚಿತ್ರ ವಾಣಿಜ್ಯ ಮಂಡಳಿ ಅವರು ಕಡಿವಾಣ ಹಾಕಿದ್ದಾರೆ

ಸುಮಲತಾ, ಕುಮಾರ್ ಸ್ವಾಮಿ ಪರಿವಾರಕ್ಕು ಚಲನಚಿತ್ರ ವಾಣಿಜ್ಯ ಮಂಡಳಿಗೂ ಒಂದು ವಿಶೇಷವಾದ ಬಾಂಧವ್ಯ ಇದೆ. ಸಿನೆಮಾ ವಾಣಿಜ್ಯ ಮಂಡಳಿ ಅವರು ನಿಖಿಲ್ ಎಲ್ಲಿದಿಯಪ್ಪ, ಜೋಡೆತ್ತು ಕಳ್ಳೆತ್ತು, ಮಂಡ್ಯದ ಹೆಣ್ಣು ಇವೆಲ್ಲ ಟೈಟಿಲ್ ಯಾರಿಗೂ ಕೊಡಬಾರದೆಂದು ಕಡಿವಾಣ ಹಾಕಿದ್ದಾರೆ. ಕೊಟ್ಟರೆ ಸುಮ್ಮನೆ ಇಲ್ಲದೆ ಇರುವ ಆರೋಪವು ನಮ್ಮ ಮೇಲೆ ಬರುತ್ತದೆ, ಟೈಟಿಲ್ ಗಳಿಂದಾಗಿ ಹೆಚ್ಚಿನ ಸಂಖೆಯಲ್ಲಿ ವಿವಾದ ಆಗುವ ಎಲ್ಲ ಲಕ್ಷಣ ಇದೆ ಅಂತಾ ಆಲೋಚಿಸಿ ಇಂತಹ ಒಂದು ನಿರ್ಧಾರವನ್ನು ತೆಗೆದುಕೊಂಡಿದ್ದಾರಂತೆ.

LEAVE A REPLY

Please enter your comment!
Please enter your name here