ಕಾರ್ಮಿಕರ ದಿನಾಚರಣೆ ಜಾರಿಗೆ ಬಂದಿದ್ದಾದರು ಹೇಗೆ?

0
1358
labour day

ಕಾರ್ಮಿಕರು ಸತತವಾಗಿ ಕಷ್ಟ ಪಟ್ಟು ದುಡಿಯುತ್ತಾರೆ, ಆದರೆ ಭಾನುವಾರ ದಿನ ಬಿಟ್ಟು ವೆರೆ ಯಾವ ದಿನವೂ ಕಾರ್ಮಿಕರಿಗೆ ರಜ ಸಿಗುವುದಿಲ್ಲ. ಮೇ 1 ರಂದು ಅಂತಾರಾಷ್ಟ್ರೀಯ ಕಾರ್ಮಿಕರ ದಿನಾಚರಣೆ ಆಗಿದ್ದು, ಈ ದಿನವನ್ನು ನಾವು ಲೇಬರ್ಸ್ ಡೇ, ವರ್ಕರ್ಸ್ ಡೇ ಅಂತಾ ಬೇರೆ ಬೇರೆ ರೀತಿಯಲ್ಲಿ ಕರೆಯುತ್ತೇವೆ. ಭಾರತ ದೇಶವಲ್ಲದೆ ಬೇರೆ ದೇಶಗಳಲ್ಲು ಕಾರ್ಮಿಕರ ದಿನಾಚರಣೆ ಆಚರಿಸಿಕೊಂಡು ಬರುತ್ತಿದ್ದಾರೆ. ಹತ್ತು ಹಲವಾರು ಕ್ಷೇತ್ರಗಳಲ್ಲಿ ಕಾರ್ಮಿಕರು ಶ್ರಮ ಮತ್ತು ಆಸಕ್ತಿ ಇಂದ ಕೆಲಸ ಮಾಡುತ್ತಿದ್ದಾರೆ. ಕಾರ್ಮಿಕರ ದಿನದ ಹಿಂದೆ ಇರುವ ಕಥೆ ಏನು? ಮುಂದೆ ಓದಿ.

ದೇಶದ ಆರ್ಥಿಕ ದೃಷ್ಟಿಯಲ್ಲಿ ಕಾರ್ಮಿಕರ ಪಾತ್ರ ಬಹಳ ಮುಖ್ಯವಾಗುತ್ತದೆ

ದೇಶದ ಆರ್ಥಿಕ ದೃಷ್ಟಿಯಲ್ಲಿ ಕಾರ್ಮಿಕರ ಪಾತ್ರ ಬಹಳ ಮುಖ್ಯವಾಗುತ್ತದೆ, ಇವರು ದುಡಿದ ಹಣದಿಂದ ಅಥವಾ ಸಂಪಾದನೆ ಇಂದ ಒಂದು ಕುಟುಂಬ ಸಂತೃಪ್ತವಾಗಿ ಜೀವನವನ್ನು ನಡೆಸಬಹುದು. ದೇಶ ಬೆಳೆಯಬೇಕೆಂದರೆ ಕಾರ್ಮಿಕರು ನಮ್ಮಗೆ ಆತ್ಯಾವಶ್ಯಕ, ಇವರು ಮಾಡುವ ಕೆಲಸದಿಂದ ಕಂಪನಿಗೂ ಒಳ್ಳೆಯ ಆದಾಯ ಬರುತ್ತದೆ, ಇವರಿಗೆ ದುಡ್ಡಿನ ಜೊತೆಗೆ ಕೆಲಸದ ಅನುಭವ ಕೂಡ ಆಗುತ್ತದೆ. ಸಮಾಜದಲ್ಲಿ ಕಾರ್ಮಿಕರಿಗೆ ಒಂದು ಗೌರಾವಾತ್ಮಿಕ ಸ್ಥಾನ ಮಾನ ಇದೆ, ಆದ್ದರಿಂದ ಕಾರ್ಮಿಕರು ಯಾವುದೇ ಕೆಲಸ ಮಾಡಲಿ ಅವರನ್ನು ಕೀಳು ಮಟ್ಟದಲ್ಲಿ ನೋಡಬೇಡಿ ಅವರನ್ನು ಗೌರವಿಸಿ ಮಾತನಾಡಿಸಿ ನಿಮ್ಮ ಮಾತುಗಳನ್ನು ಕೇಳಿ ಅವರು ಸಹ ಖುಷಿ ಆಗುತ್ತಾರೆ.

labour

ಟೆಕ್ನಾಲಜಿ ಎಷ್ಟೇ ಅಭಿವೃದ್ದಿ ಆದರೂ ಮನುಷ್ಯನ ದೇಹದ ಶಕ್ತಿ ಅನಿವಾರ್ಯ ಆಗುತ್ತದೆ

ಪ್ರತಿ ಒಂದು ನಗರ, ಜಿಲ್ಲೆ, ರಾಜ್ಯ, ಹಾಗೂ ದೇಶದ ಬೆಳವಣಿಗೆ ಆಗಬೇಕೆಂದರೆ ಕಾರ್ಮಿಕರು ಬೇಕೇ ಬೇಕು. ಟೆಕ್ನಾಲಜಿ ಎಷ್ಟೇ ಅಭಿವೃದ್ದಿ ಆದರೂ ಮನುಷ್ಯನ ದೇಹದ ಶಕ್ತಿ ಅನಿವಾರ್ಯ ಆಗುತ್ತದೆ, ಉದಾಹರಣೆಗೆ ನೀವು ಒಂದು ಹೊಸದಾದ ಕಟ್ಟಡ ಕಟ್ಟಿಸಬೇಕೆಂದರೂ ಕಾರ್ಮಿಕರು ಮಣ್ಣನ್ನು ಹೊತ್ತು ತರಬೇಕಾಗುತ್ತದೆ. ಇವರ ಕಠಿಣ ಪರಿಶ್ರಮದಿಂದ ಇಂದು ನಗರದಲ್ಲಿ ದೊಡ್ಡ ದೊಡ್ಡ ಕಟ್ಟಡಗಳು ನಿರ್ಮಾಣವಾಗುತ್ತಿದೆ, ಕಾರ್ಖಾನೆಗಳನ್ನು ಉನ್ನತವಾದ ಮಟ್ಟಕ್ಕೆ ಕರೆದುಕೊಂಡು ಹೋಗುವಲ್ಲಿ ಪ್ರತಿ ಒಬ್ಬ ಕಾರ್ಮಿಕರ ಬೆವರ ಹನಿಯು ಲೆಕ್ಕಕ್ಕೆ ಬರುತ್ತದೆ.

labour day

ಮೊದಲು ಬಂಡವಾಳ ಹಾಕಿದವರು ಕಾರ್ಮಿಕರನ್ನು ಅವಧಿಯ ಮಿತಿ ಮೀರಿ ದುಡಿಸಿಕೊಳ್ಳುತ್ತಿದ್ದರು

ಬುದ್ದಿ ಶಕ್ತಿ ಅಥವಾ ದೈಹಿಕ ಶಕ್ತಿಯನ್ನು ಉಪಯೋಗಿಸಿ ಕೆಲಸ ಮಾಡುವವರನ್ನು ನಾವು ಕಾರ್ಮಿಕರು ಅಂತಾ ಕರೆಯಬಹುದು, ಈ ಎರಡು ಶಕ್ತಿಗಳನ್ನು ಬಳಸುವ ಮೂಲಕ ಕಾರ್ಮಿಕರು ತಮ್ಮ ಹೊಟ್ಟೆಯನ್ನು ತುಂಬಿಸಿಕೊಳ್ಳುತ್ತಿದ್ದಾರೆ. ಪ್ರತಿ ದೇಶದಲ್ಲೂ 60-65% ಅಷ್ಟು ಜನ ಕಾರ್ಮಿಕ ವರ್ಗದಲ್ಲಿ ಕಂಡು ಬರುತ್ತಾರೆ. ಮೊದಲು ಬಂಡವಾಳ ಹಾಕಿದವರು ಕಾರ್ಮಿಕರನ್ನು ಅವಧಿಯ ಮಿತಿ ಮೀರಿ ದುಡಿಸಿಕೊಳ್ಳುತ್ತಿದ್ದರು ಕೆಲಸ ಮಾಡುವವರು ಇದನ್ನು ಖಂಡಿಸುತ್ತಾರೆ, ದಿನದ 24 ಗಂಟೆಗಳಲ್ಲಿ 8 ಗಂಟೆ ದಿನ ನಿತ್ಯದ ಚಟುವಟಿಕೆಗಾಗಿ, 8 ಗಂಟೆ ಕೆಲಸ ಮಾಡುವುದಕ್ಕಾಗಿ, ಇನ್ನುಳಿದ 8 ಗಂಟೆಗಳು ವಿಶ್ರಾಂತಿಗಾಗಿ ಕೊಡಬೇಕೆಂದು ಬೇಡಿಕೆ ಇಡುತ್ತಾರೆ.

labour

ಮೇ 1 ನೇ ತಾರೀಖು ಅಂತಾರಾಷ್ಟ್ರೀಯ ಕಾರ್ಮಿಕರ ದಿನ ಎಂದು ಘೋಷಿಸುತ್ತಾರೆ

ಇದಕ್ಕು ಮುಂಚೆ ಅಮೇರಿಕಾದಲ್ಲಿ ಇರುವ ಚಿಕಾಗೋ ನಗರದಲ್ಲಿ ಕಾರ್ಮಿಕರು ಇದೇ ವಿಷಯಕ್ಕಾಗಿ ಬೀದಿಗಿಳಿದು ಪ್ರತಿಭಟನೆ ಮಾಡಿದ್ದರು, ಮೇ 1 1886 ರಂದು ಘಟನೆ ನಡೆದಿದ್ದು, ಹೆಚ್ಚಿನ ಸಂಖೆಯಲ್ಲಿ ಜನರು ಈ ಹೋರಾಟದಲ್ಲಿ ಪಾಲ್ಗೊಂಡಿದ್ದರು. ಹೋರಾಟ ತೀವ್ರಗೊಂಡ ಕಾರಣದಿಂದ ಅಂತಿಮವಾಗಿ 8 ತಾಸು ಕಾರ್ಮಿಕರು ದುಡಿಯಬೇಕೆಂದು ತೀರ್ಮಾನವಾಗುತ್ತದೆ. ಇದರ ನೆನಪಿಗಾಗಿ ಮೇ 1 ನೇ ತಾರೀಖು ಅಂತಾರಾಷ್ಟ್ರೀಯ ಕಾರ್ಮಿಕ ದಿನ ಎಂದು ಘೋಷಿಸುತ್ತಾರೆ, ಆದ್ದರಿಂದ ಈ ದಿನವನ್ನು ಕಾರ್ಮಿಕರ ದಿನ ಎಂದು ನಾವು ಆಚರಿಸುತ್ತಾ ಬರುತ್ತಿದ್ದೇವೆ.

ಹೆಚ್ಚಾದ ಪ್ರಾಮುಖ್ಯತೆ ಸಮಾಜದಲ್ಲಿ ಸಿಗಲಿಲ್ಲ

ಭಾರತದಲ್ಲಿ ಕಾರ್ಮಿಕರನ್ನು ಸಂಘಟಿತ ಹಾಗೂ ಅಸಂಘಟಿತ ಕಾರ್ಮಿಕರನ್ನಾಗಿ ವಿಂಗಡಿಸಲಾಗಿತ್ತು, ಕೇಂದ್ರ ಸರ್ಕಾರ ಹಾಗು ರಾಜ್ಯ ಸರ್ಕಾರದ ಪರವಾಗಿ ದುಡಿಯುವರು ಬಹುತೇಕ ಸಂಘಟಿತ ಕಾರ್ಮಿಕರಾಗಿದ್ದು. ಗ್ರಾಮೀಣ ನಗರದಲ್ಲಿ ದುಡಿಯುವ ಮಹಿಳೆಯರು, ಹೊಟೇಲ್ ಅಲ್ಲಿ ಕೆಲಸ ಮಾಡುವ ಕೆಲಸಗಾರರು, ಗಾರ್ಮೆಂಟ್ಸ್ ಇನ್ನಿತರ ಕ್ಷೇತ್ರಗಳಲ್ಲಿ ಕೆಲಸ ಮಾಡುವವರನ್ನು ಅಸಂಘಟಿತ ಕಾರ್ಮಿಕರೆಂದು ಕರೆಯಲಾಗುತಿತ್ತು. ಇವರಿಗೆ ಹೆಚ್ಚಾದ ಪ್ರಾಮುಖ್ಯತೆ ಸಮಾಜದಲ್ಲಿ ಸಿಗಲಿಲ್ಲ, ಇವರನ್ನು ಗಮನದಲ್ಲಿ ಇಟ್ಟುಕೊಂಡು 1949 ರಲ್ಲಿ ಸರ್ಕಾರ ಕನಿಷ್ಠ ಕೂಲಿ ಎಂಬ ಯೋಜನೆ ಜಾರಿಗೆ ತಂದಿದ್ದರು, ಆದರೆ ಇದರಿಂದ ಯಾರಿಗೂ ಸಹ ಸಹಾಯವಾಗಲಿಲ್ಲ ಅದೂ ಬರೀ ಯೋಜನೆ ಹಾಗೆ ಉಳಿಯಿತು.

ಹೀಗೆ ಕಾರ್ಮಿಕರು ಒಂದಲ್ಲ ಒಂದು ತೊಂದರೆಯನ್ನು ಅನುಭವಿಸುತ್ತಿದ್ದಾರೆ, ಸರ್ಕಾರ ಕಣ್ಣು ಮೂಚಿ ಕುಳಿತುಕೊಂಡಿದೆ ಎಲ್ಲಾರು ಒಟ್ಟಾಗಿ ಹೋರಾಟ ಮಾಡಿದರೆ ಇದಕ್ಕೆ ಶಾಶ್ವತವಾದ ಪರಿಹಾರ ಸಿಗಬಹುದು. ನಾಡಿನ ಸಮಸ್ತ ಜನತೆಗೆ ಕಾರ್ಮಿಕ ದಿನಾಚರಣೆಯ ಶುಭಾಷಯಗಳು.

LEAVE A REPLY

Please enter your comment!
Please enter your name here