ಹರನು ಮತ್ತು ಹರಿಯು ಸಮಾಗಮವಾಗಿರುವ ದೇವಸ್ಥಾನದ ಬಗ್ಗೆ ನಿಮಗೆ ಗೊತ್ತಿದೆಯೇ

0
10360
harihara temple

ನಮ್ಮ ಜನರಿಗೆ ಕೆಲವೊಂದು ವಿಚಿತ್ರ ಆಸೆಗಳಿರುತ್ತವೆ. ತುಂಬಾ ಕುತೂಹಲಕಾರಿ ಜಾಗಕ್ಕೆ ಹೋಗಬೇಕು. ಕುತೂಹಲಕಾರಿ ಹೊಂದಿರುವ ದೇವರನ್ನ ನೋಡಬೇಕು ಅಂತ. ಹಾಗಾಗಿ ರಾಜ್ಯ, ಹೊರರಾಜ್ಯಗಳಿಗೆ ಭೇಟಿ ನೀಡ್ತಾರೆ. ಅದ್ರಲ್ಲೂ ವಿಶೇಷತೆ ಹೊಂದಿರುವ ದೇವರು ಅಂದ್ರೆ, ಅದನ್ನ ನೋಡಲು ಅದೇನೋ ಒಂಥರಾ ಕುತೂಹಲ.

ಆ ರೀತಿಯ ದೇವಸ್ಥಾನಗಳು ನಮ್ಮಲ್ಲಿ ಬಹಳಷ್ಟಿವೆ. ದಿನ ಬೆಳಗಾದ್ರೆ ಅಂತ ದೇವಾಲಯಕ್ಕೆ ಸಾವಿರಾರು ಜನ ಭೇಟಿ ನೀಡ್ತಾರೆ. ಇನ್ನೂ ಕೆಲವರಿಗೆ ಅಂತ ದೇವಾಲಯಗಳ ಬಗ್ಗೆ ಗೊತ್ತಿರಲ್ಲ. ಹಾಗಾಗಿ ಗೊತ್ತಿರುವಂತ ಕೆಲವು ದೇವಸ್ಥಾನಗಳಿಗೆ ಭೇಟಿ ನೀಡಿ, ದೇವರ ದರ್ಶನ ಪಡೆಯುತ್ತಾರೆ. ಆದ್ರೆ ಇಲ್ಲಿ ಒಂದು ದೇವಾಲಯವಿದೆ. ಈ ದೇವಾಲಯದ ವಿಶೇಷತೆ ಬಗ್ಗೆ ಆದಷ್ಟು ಎಲ್ಲರಿಗೂ ಗೊತ್ತಿರುತ್ತೆ. ಆದ್ರೆ ಈ ದೇವಾಲಯ ಇಲ್ಲಿ ಇದೆ ಅನ್ನೋದು ಹೆಚ್ಚಾಗಿ ಯಾರಿಗೂ ಗೊತ್ತಿಲ್ಲ

ಹರಿಹರರ ಸಮಾಗಮ ದೇವಸ್ಥಾನ

ದಾವಣಗೆರೆ ಜಿಲ್ಲೆಯ ಹರಿಹರ ಸ್ಥಳ ಸಾಮಾನ್ಯವಾಗಿ ಎಲ್ಲರಿಗೂ ಗೊತ್ತು. ಆದ್ರೆ ಇಲ್ಲಿ ಒಂದು ವಿಶೇಷವಾದ ದೇವಸ್ಥಾನವಿದೆ ಅಂತ ಯಾರಿಗೂ ಗೊತ್ತಿಲ್ಲ. ಹೌದು. ಈ ದೇವಸ್ಥಾನ ತುಂಬಾ ವಿಶೇಷ ಪಡೆದಿರುವುದಾಗಿದೆ. ಹರಿಹರರ ಸಮಾಗಮ ದೇವಸ್ಥಾನ ಇಲ್ಲಿನ ಪ್ರಮುಖ ದೇವಾಲಯವಾಗಿದೆ. ಹೌದು. ಇಲ್ಲಿ ಶಿವ ಹಾಗೂ ವಿಷ್ಣು ಇಬ್ಬರು ನೆಲೆಸಿದ್ದಾರೆ. ಹಾಗಾಗಿ ಇದನ್ನ ಹರಿಹರ ಕ್ಷೇತ್ರವನ್ನಾಗಿ ಮಾಡಿದ್ದಾರೆ.

ಪುರಾಣ

ತುಂಗಭದ್ರಾ ನದಿ ದಂಡೆಯ ಮೇಲಿರುವ ಈ ಊರಿನಲ್ಲಿ ಹಿಂದೆ ಗುಹಾಸುರನೆಂಬ ರಾಕ್ಷಸನಿದ್ದ. ಆತ ತನ್ನದೇ ಆದ ರಾಜ್ಯ ಸ್ಥಾಪಿಸಿ ಈ ಪಟ್ಟಣವನ್ನ ತನ್ನ ರಾಜಧಾನಿಯನ್ನಾಗಿ ಮಾಡಿಕೊಂಡಿದ್ದ. ಗುಹಾಸುರ ಬ್ರಹ್ಮನನ್ನ ಕುರಿತು ದೀರ್ಘ ತಪವನ್ನಾಚರಿಸಿ ತನಗೆ ಸಾವೇ ಬರದಂತೆ ವರ ನೀಡೆಂದು ಬೇಡಿದ್ದ. ಆಗ ಬ್ರಹ್ಮ, ನರರಿಗೆ ಅಮರತ್ವವು ಸಲ್ಲ. ಹಾಗಾಗಿ ಬೇರೇನಾದರೂ ವರ ಕೇಳಿಕೊ ಎಂದು ಹೇಳುತ್ತಾನೆ. ಆಗ ಗುಹಾಸುರ ತನಗೆ ಪ್ರತ್ಯೇಕವಾಗಿ ಹರಿಯಿಂದಾಗಲಿ ಅಥವಾ ಹರನಿಂದಾಗಲಿ ಸಾವು ಬರದಂತೆ ವರ ನೀಡು ಎಂದು ಕೇಳಿದ. ಅದಕ್ಕೆ ಬ್ರಹ್ಮ ತಥಾಸ್ತು ಎಂದಿದ್ದ. ಹೀಗೆ ವರದ ಬಲದಿಂದ ಗುಹಾಸುರ, ದೇವಾನುದೇವತೆಗಳನ್ನ ಹಿಂಸಿಸ ತೊಡಗಿದ. ಆಗ ದೇವರುಗಳೆಲ್ಲಾ ಶಿವನ ಮೊರೆ ಹೋದಾಗ, ಶಿಷ್ಟ ರಕ್ಷಣೆ ಹಾಗು ದುಷ್ಟ ಶಿಕ್ಷಣೆಗಾಗಿ ಶಿವ ಮತ್ತು ವಿಷ್ಣು ಇಬ್ಬರೂ ಒಂದುಗೂಡಿ ಹರಿಹರ ರೂಪ ತಾಳಿ, ಗುಹಾಸರನನ್ನ ಕೊಲ್ಲುತ್ತಾರೆ. ಆಗ ಗುಹಾಸುರ ಶಂಕರಣರಾಯಣರ ಬಳಿ ಸಾಯುವ ಮುನ್ನ ಒಂದು ಮನವಿ ಮಾಡಿಕೊಳ್ಳುತ್ತಾನೆ. ನಾನು ಈ ಸ್ಥಳದಲ್ಲಿ ಸಾಯುತ್ತಿರೋದ್ರಿಂದ ಈ ಕ್ಷೇತ್ರಕ್ಕೆ ನನ್ನ ಹೆಸರಿಡಬೇಕು ಅಂತ. ಹಾಗಾಗಿ ಮೊದಲು ಈ ಕ್ಷೇತ್ರಕ್ಕೆ ಗುಹಾರಣ್ಯ ಕ್ಷೇತ್ರ ಎಂಬ ಹೆಸರಿಟ್ಟಿದ್ದರು. ನಂತರ ಇದು ಹರಿಹರರ ಸಮಾಗವಾದ ಸ್ಥಳ ಎಂದು ಹರಿಹರ ಎಂದು ಬದಲಾಯಿಸಿದ್ರು. ಈ ಘಟನೆ ಇಲ್ಲೇ ನಡೆದಿದ್ದರಿಂದ ಈ ಕ್ಷೇತ್ರಕ್ಕೆ ಅಂದಿನಿಂದ ಹರಿಹರ ದೇವಾಲಯ ಎಂದು ಹೆಸರಿಟ್ಟಿದ್ದಾರೆ.

ದೇವಾಲಯ

ಈ ದೇವಾಲಯದ ಗರ್ಭಗುಡಿಯಲ್ಲಿ ಹರಿಹರರ ಸುಂದರ ಮೂರ್ತಿಯಿದೆ. ಅರ್ಧ ಹರನ ರೂಪ, ಇನ್ನರ್ಧ ಹರಿಯ ರೂಪವಿರುವ ವಿಗ್ರಹವಿದೆ. ಮೂರ್ತಿಯ 4 ಕೈಗಳ ಪೈಕಿ ಎರಡರಲ್ಲಿ ತ್ರಿಶೂಲ ಹಾಗು ಚಕ್ರವಿದೆ. ಇನ್ನೆರಡು ಕೈಗಳ ಪೈಕಿ ಒಂದರಲ್ಲಿ ಶಂಖು ಹಾಗು ಇನ್ನೊಂದರಲ್ಲಿ ಅಭಯ ಮುದ್ರೆಯಿದೆ. ಇಲ್ಲಿನ ಕಲಾಶ್ರೀಮಂತಿಕೆ ನೋಡುಗರ ಮನ ಸೆಳೆಯುವಂತೆ ಮಾಡುತ್ತದೆ. ಗರ್ಭಗೃಹದ ಮುಂದಿರುವ ನುಣುಪಾದ ಕಂಬಗಳು ಮನಮೋಹಕವಾಗಿದೆ. ದೇವಾಲಯದ ಭಿತ್ತಿಗಳ ಪಟ್ಟಿಕೆಗಳಲ್ಲಿ ಸೂಕ್ಷ್ಮ ಕಲಾಕೆತ್ತನೆಯಿದೆ. ಗೋಪುರಗಳ ಸಾಲಿನಲ್ಲಿ ನೃತ್ಯಭಂಗಿಯಲ್ಲಿರುವ ಮದನಿಕೆಯರು ಹಾಗೂ ಹೂ ಬಳ್ಳಿಗಳಿವೆ.

 

ಈ ರೀತಿ ಬ್ರಹ್ಮನಿಂದ ವರ ಪಡೆದು, ದೇವರುಗಳನ್ನೇ ಹೆದರಿಸಲು ಶುರು ಮಾಡಿದ, ಗುಹಾಸುರನನ್ನ ಕೊಲ್ಲಲ್ಲು ಶಂಕರನಾರಾಯಣರು ಸಮಾಗಮವಾಗಿ ಅವನನ್ನ ಕೊಲ್ಲುತ್ತಾರೆ. ಅಂದಿನಿಂದ ಈ ದೇವಾಲಯಕ್ಕೆ ಹರಿಹರ ಎಂಬ ಹೆಸರಿಡಲಾಗಿದೆ. ನೋಡೋಕೆ ಬಲು ಸೊಗಸಾಗಿರುವ ಈ ದೇವಾಲಯಕ್ಕ್ಕೆ ಪ್ರತಿದಿನ ಸಾವಿರಾರು ಜನ ಭಕ್ತರು ಆಗಮಿಸುತ್ತಾರೆ.

Comments

comments

[jetpack_subscription_form]
SHARE
Previous article10 Hidden Gems Near Sringeri Of Karnataka You Might Not Have Explored
Next articleThe Permit Room: From Donne Biryani To Vodka-Based Chill Pill Maadi, This Gastropub Is Absolutely Bengalurian

LEAVE A REPLY

Please enter your comment!
Please enter your name here