ದಚ್ಚು ಹಾಗೂ ಕಿಚ್ಚನ ಸ್ನೇಹ ಭಾಂದವ್ಯದ ಬಿರುಕಿಗೆ 2 ವರ್ಷ.

0
2989
darshan sudeep

ಚಂದನವನ ಅಂದ ಕೂಡಲೇ ಎಲ್ಲರ ಕಣ್ಮುಂದೆ ಬರೋದು ಅಂದ್ರೆ, ನಮ್ಮ ನೆಚ್ಚಿನ ನಟ ಹಾಗೂ ನಟಿಯರು.. ಯಾಕಂದ್ರೆ ನಮ್ಮಲ್ಲಿ ಸಿನಿಮಾ ನಮೋಸ್ತುತೇ ಅನ್ನೋರು ಹೆಚ್ಚಾಗಿ ಇದ್ದಾರೆ.. ಹಾಗಾಗಿ ಸಿನಿಮಾಗೆ, ಸಿನಿಮಾ ನಟ, ನಟಿಯರಿಗೆ ಬಹಳ ಬೆಲೆ ಕೊಡ್ತಾರೆ.. ಅದ್ರಲ್ಲೂ ತಮ್ಮ ನೆಚ್ಚಿನ ನಟರಿಗೋಸ್ಕರ ಏನು ಬೇಕಾದ್ರು ಮಾಡೋಕು ರೆಡಿ ಇರ್ತಾರೆ ನಮ್ಮ ಸ್ಯಾಂಡಲ್ ವುಡ್ ಅಭಿಮಾನಿಗಳುನಮ್ಮ ಅಭಿಮಾನಿಗಳಲ್ಲಿ ಇನ್ನೊಂದು ರೀತಿಯ ಆಸೆಯಿದೆ.. ಅದೇನಪ್ಪ ಅಂದ್ರೆ ಇಬ್ಬರು ಸ್ಟಾರ್ ನಟರನ್ನ ಒಟ್ಟಿಗೆ ನೋಡೋದು, ಅವರಿಬ್ಬರೂ ಒಟ್ಟಿಗೆ ನಟಿಸೋದು ಅಂದ್ರೆ ಅದೇನೋ ಬೆಲ್ಲ ತಿಂದಷ್ಟು ಖುಷಿಯಾಗುತ್ತೆ.. ಹೌದುಇದೇ ರೀತಿ ನಮ್ಮ ಅಭಿಮಾನಿಗಳು ಹೆಚ್ಚಾಗಿ ಇಷ್ಟ ಪಡ್ತಿದ್ದ ಜೋಡಿ ಅಂದ್ರೆ ನಮ್ಮ ಸಾಹಸ ಸಿಂಹ ವಿಷ್ಣುವರ್ಧನ್ ಹಾಗೂ ರೆಬಲ್ ಸ್ಟಾರ್ ಅಂಬರೀಶ್ ಅವ್ರನ್ನ.

ಈಗಿನ ನಮ್ಮ ನಟರಲ್ಲಿ ಒಟ್ಟಿಗೆ ನೋಡ್ಬೇಕು ಅಂತ ಇಷ್ಟ ಪಡೋ ಜೋಡಿ ಅಂದ್ರೆ, ಅದು ಬೇರೆ ಯಾರು ಅಲ್ಲ.. ನಮ್ಮ ನೆಚ್ಚಿನ ನಟರಾದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಕಿಚ್ಚ ಸುದೀಪ್ ಜೋಡಿಯನ್ನ.. ಹೌದು.. ನಮ್ಮ ಚಂದನವನವೇ ಮೂಗಿನ ತುದಿಯಲ್ಲಿ ಬೆರಳಿಟ್ಟು ನೋಡ ಬಯಸುವ ಸ್ನೇಹ ಅಂದ್ರೆ ಅದು ನಮ್ಮ ದಚ್ಚು ಹಾಗೂ ಕಿಚ್ಚನನ್ನ.. ಇವರಿಬ್ಬರು ಒಟ್ಟಿಗೆ ಯಾವಾಗ ನಟಿಸ್ತಾರೋ, ಯಾವಾಗ ಸ್ಕ್ರೀನ್ ಮೇಲೆ ಬರ್ತಾರೋ ಅಂತ ಅವರ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.. ಮೊದಮೊದಲು ಈ ಸ್ಟಾರ್ ನಟರು ಒಟ್ಟಿಗೆ ನಟಿಸಲಿ ಅಂತ ಅಭಿಮಾನಿಗಳು ಕಾಯ್ತಿದ್ರು.. ಆದ್ರೆ ಈಗ ಇವರಿಬ್ಬರು ಯಾವಾಗ ಒಂದಾಗ್ತಾರೆ ಅಂತ ಕಾಯ್ತಿದ್ದಾರೆ..

ದಚ್ಚು ಹಾಗೂ ಕಿಚ್ಚನ ಸ್ನೇಹದಲ್ಲಿ ಬಿರುಕು.

ಒಂದು ಕಾಲದಲ್ಲಿ ಇವರಿಬ್ಬರು ಜೀವದ ಗೆಳೆಯರು.. ಇವರ ಸ್ನೇಹಕ್ಕೆ ಸಾಟಿಯೇ ಇರಲಿಲ್ಲ.. ಆದ್ರೆ ಇಷ್ಟು ಚೆನ್ನಾಗಿದ್ದ ಸ್ನೇಹಕ್ಕೆ ಅದ್ಯಾರ ಕಣ್ಣು ಬಿತ್ತೋ ಗೊತ್ತಿಲ್ಲ.. ಕುಚುಕುಗಳಾಗಿದ್ದ ಇವರು ಇದ್ದಕ್ಕಿದ್ದಂತೆ ಅವರ ಸ್ನೇಹಕ್ಕೆ ನಾಂದಿ ಆಡುವ ಸ್ಥಿತಿಗೆ ಹೋಗ್ತಾರೆ.. ಹೌದು ಇವರಿಬ್ಬರು ಚಿತ್ರರಂಗಕ್ಕೆ ಒಟ್ಟಿಗೆ ಪದಾರ್ಪಣೆ ಮಾಡಿದವರು.. ಇವರಿಬ್ಬರು ಮೊದಲಿಗೆ ಮಾಡಿದ ಕೆಲವು ಸಿನಿಮಾಗಳು ಇವರ ಕೈ ಹಿಡಿದಿರಲಿಲ್ಲ. ಆದರೆ ಆನಂತರ ನಾಯಕಿ ರೇಖಾ ಅವರೊಂದಿಗೆ ಇಬ್ಬರು ಸಿನಿಮಾ ನಟಿಸ್ತಾರೆ.. ಅದೇನೂ ಅದೃಷ್ಟವೋ ಗೊತ್ತಿಲ್ಲ.. ಇಬ್ಬರ ಸಿನಿಮಾಗಳು ಅದ್ದೂರಿಯಾಗಿ ಪ್ರದರ್ಶನ ಕಾಣುತ್ತವೆ.. ದರ್ಶನ್ ಗೆ ಮೆಜೆಸ್ಟಿಕ್ ಸಿನಿಮಾ ಗೆಲುವು ತಂದುಕೊಟ್ಟರೆ, ಸುದೀಪ್ ಗೆ ಸ್ಪರ್ಶ ಸಿನಿಮಾ ಹೊಸ ಹಾದಿಯನ್ನೇ ಉಂಟುಮಾಡಿಕೊಡುತ್ತದೆ.. ಅಲ್ಲಿಂದ ಇವರಿಬ್ಬರ ಸ್ನೇಹ ಶುರುವಾಗುತ್ತೆ.. ಅಂದಿಂದ ಯಾವುದೇ ಕೌಂಟುಬಿಕ ಕಾರ್ಯಕ್ರಮಗಳಿದ್ದರೂ ಹಾಗೂ ಸಿನಿಮಾ ಸಮಾರಂಭಗಳಿದ್ದರೂ ಇವರಿಬ್ಬರು ಜೊತೆಯಾಗಿ ಕಾಣಿಸಿಕೊಳ್ಳುತ್ತಿದ್ದರು.. ಆದರೆ ಕೆಲ ಮನಸ್ತಾಪದಿಂದಾಗಿ ಇವರಿಬ್ಬರ ಸ್ನೇಹದಲ್ಲಿ ಬಿರುಕು ಮೂಡಿತು.. ಇದೀಗ ಇವರಿಬ್ಬರ ಈ ಬಿರುಕಿಗೆ ಎರಡು ವರ್ಷವಾಗಿದೆ..

ಸುದೀಪ್ ನೀಡಿದ ಹೇಳಿಕೆಯೇ ಕಾರಣವಾಯ್ತಾ ಬಿರುಕಿಗೆ?

ದಚ್ಚು ಹಾಗೂ ಕಿಚ್ಚನ ಸ್ನೇಹದ ಬಿರುಕಿಗೆ ಕಾರಣವಾಗಿದ್ದು, ಸುದೀಪ್ ಹೇಳಿದ ಆ ಒಂದು ಹೇಳಿಕೆ.. ಹೌದುಸಂದರ್ಶನವೊಂದರಲ್ಲಿ ಮಾತನಾಡಿದ ಸುದೀಪ್, ಮೆಜೆಸ್ಟಿಕ್ ಚಿತ್ರಕ್ಕೆ ಸಂಬಂಧಪಟ್ಟಂತೆ ಹೇಳಿಕೆಯೊಂದನ್ನ ನೀಡಿದ್ದರು.. ಈ ವಿಚಾರವಾಗಿ ಸುದೀಪ್ ಮೇಲೆ ದರ್ಶನ್ ಕೆಂಡಾಮಂಡಲವಾಗಿದ್ದರು.. ನನಗೆ ಮೆಜೆಸ್ಟಿಕ್ ಸಿನಿಮಾ ಸಿಗಲು ಕಾರಣರಾದವರು ಪಿ.ಎನ್ ಸತ್ಯ ಹಾಗೂ ನಿರ್ಮಾಪಕ ಎಂ.ಜೆ .ರಾಮಮೂರ್ತಿ ಮತ್ತು ರಮೇಶ್ ಅಷ್ಟೇ, ಅದನ್ನು ಬಿಟ್ಟು ಸುದೀಪ್ ಅಲ್ಲ ಅಂತ ಆಕ್ರೋಶ ವ್ಯಕ್ತಪಡಿಸಿದ್ದರು.. ಇಲ್ಲಿಂದಲೇ ಅವರ ಸ್ನೇಹದಲ್ಲಿ ಬಿರುಕು ಉಂಟಾಗಲು ಕಾರಣವಾಗಿತ್ತು.. ಆದ್ರೆ ಯಾವಾಗ ಸಾಮಾಜಿಕ ಜಾಲತಾಣದಲ್ಲಿ ದರ್ಶನ್, ನಾವಿಬ್ಬರು ಸ್ನೇಹಿತರಲ್ಲ, ಕೇವಲ ನಟರು ಎಂಬ ಹೇಳಿಕೆ ಕೊಟ್ಟರೋ ಅಂದಿನಿಂದ ಇವರ ಸ್ನೇಹ ಸಂಪೂರ್ಣ ಮಾಸಿಹೋಗಿತ್ತು..

ಅಂಬಿ ಹಾಗೂ ವಿಷ್ಣು ಸ್ನೇಹದಂತೆ ಬಯಸಿದ್ರು ಅಭಿಮಾನಿಗಳು…

ಸ್ಯಾಂಡಲ್ ವುಡ್ ನಲ್ಲಿ ಅಂಬಿ ಹಾಗೂ ವಿಷ್ಣು ಸ್ನೇಹ ಅಂದ್ರೆ ಅಜರಾಮರ.. ಇವರಿಬ್ಬರ ಸ್ನೇಹದಂತೆ ಇನ್ನೊಂದು ಸ್ನೇಹ ಹುಟ್ಟಿಕೊಳ್ಳಲು ಸಾಧ್ಯವಿಲ್ಲ ಅಂತ ಪ್ರತಿಯೊಬ್ಬರ ಮಾತಾಗಿತ್ತು.. ಆದ್ರೆ ಅವರ ಸ್ನೇಹಕ್ಕೆ ಸಮನಾಗಿ ಶುರುವಾಗಿದ್ದು ದಚ್ಚು ಹಾಗೂ ಕಿಚ್ಚನ ಸ್ನೇಹ.. ಅಭಿಮಾನಿಗಳು ದಚ್ಚು ಹಾಗೂ ಕಿಚ್ಚನಲ್ಲಿ, ವಿಷ್ಣು, ಅಂಬಿಯನ್ನ ಕಾಣ್ತಿದ್ರು.. ದರ್ಶನ್ ನಲ್ಲಿ ಅಂಬಿಯನ್ನ ಕಂಡರೆ, ಸುದೀಪ್ ನಲ್ಲಿ ವಿಷ್ಣುದಾದ ನನ್ನ ಕಾಣ್ತಿದ್ರು.. ಈ ಸ್ನೇಹ ಅವರಂತೆಯೇ ಅಜರಾಮರ ಅಂತ ಅಭಿಮಾನಿಗಳು ಭಾವಿಸಿದ್ರು.. ಅದರಂತೆಯೇ ಇವರಿಬ್ಬರು ಅಂಬಿ ಹಾಗು ವಿಷ್ಣುದಾದಾ ನ ಹೆಸರಿನಲ್ಲಿ ಸಿನಿಮಾಗಳನ್ನೂ ಕೂಡ ಮಾಡಿದ್ರು.. ದಚ್ಚು ಅಂಬರೀಶ ಅಂಥ ಸಿನಿಮಾ ಮಾಡಿದ್ರೆ, ಸುದೀಪ್ ವಿಷ್ಣುವರ್ಧನ ಅಂತ ಸಿನಿಮಾ ಮಾಡಿದ್ರು.. ಈ ಎರಡು ಸಿನಿಮಾಗಳು ಒಳ್ಳೆ ರೀತಿಯಲ್ಲಿ ಪ್ರದರ್ಶನ ಕಂಡವು.. ಆದ್ರೆ ಇಂಥ ಸ್ನೇಹಕ್ಕೆ ಈಗ ಎಳ್ಳು ನೀರು ಬಿಡುವಂತಾಗಿದೆ..

ಇವರ ಬಿರುಕಿನಿಂದಾಗಿ ಸ್ಯಾಂಡಲ್ ವುಡ್ ನಲ್ಲಿ ಉಂಟಾದ ಬೇಸರ.

ಹೌದು.. ದರ್ಶನ್, ಸುದೀಪ್ ಅಂದ್ರೆ ಅಭಿಮಾನಿಗಳು ಎಷ್ಟು ಇಷ್ಟ ಪಡುತ್ತಿದ್ದರೋ, ಚಂದನವನದ ರಂಗದವರು ಅಷ್ಟೇ ಇಷ್ಟ ಪಡುತ್ತಿದ್ದರು.. ಯಾವುದಾದ್ರೂ ಒಂದು ಕಾರ್ಯಕ್ರಮ ನಡೆದಾಗ, ಅಲ್ಲಿ ದಚ್ಚು ಹಾಗು ಕಿಚ್ಚ ಇದ್ರೆ ಸಂಭ್ರಮದ ಮನೆ ಮಾಡಿರುತ್ತಿತ್ತು.. ಇವರ ಸ್ನೇಹವನ್ನ ನೋಡಿ ಎಲ್ಲರು ಅಸೂಯೆ ಪಡುತ್ತಿದ್ದರು.. ನಮ್ಮ ದಿಗ್ಗಜ ನಟರನ್ನ ಇವರಲ್ಲೇ ನಾವು ಕಾಣುತ್ತಿದ್ದೇವೆ ಅನ್ನೋದು ಎಷ್ಟೋ ನಟ, ನಟಿಯರ ಮಾತಾಗಿತ್ತು.. ಆದ್ರೆ ಇವರ ಜಗಳ ಎಲ್ಲರಲ್ಲೂ ಬೇಸರವನ್ನುಂಟು ಮಾಡಿತ್ತು.. ಯಾವುದೊ ಒಂದು ಸಂದರ್ಶನದಲ್ಲಿ ಸುದೀಪ್ ನೀಡಿದ ಹೇಳಿಕೆ ಸ್ಯಾಂಡಲ್ ವುಡ್ ನಲ್ಲಿ ಒಂದು ರೀತಿ ಆಶ್ಚರ್ಯವನ್ನ ಉಂಟುಮಾಡಿತ್ತು.. ಆದ್ರೆ ಅದಕ್ಕೆ ವಿರುದ್ಧವಾಗಿ ಯಾವಾಗ ದರ್ಶನ್ ಉತ್ತರ ಕೊಟ್ಟರೋ ಆಗ ಎಲ್ಲರಿಗು ಬರಸಿಡಿಲು ಬಡಿದಂತಾಗಿತ್ತು.. ಯಾಕಂದ್ರೆ ನಿನ್ನೆ ವರೆಗೂ ಚೆನ್ನಾಗಿದ್ದ ಇವರು ಈಗ ಈ ರೀತಿ ಹೇಳಿಕೆಯನ್ನ ಯಾವ ಕಾರಣಕ್ಕೆ ನೀಡಿದ್ರು.. ಸುದೀಪ್ ಹೇಳಿಕೆಗೆ ದರ್ಶನ್ ಈ ರೀತಿ ರಿಯಾಕ್ಟ್ ಮಾಡಿದ್ದಾದ್ರೂ ಏಕೆ? ಅನ್ನೋದು ಈಗ್ಲೂ ಎಲ್ಲರಿಗೆ ಗೊಂದಲವಾಗಿದೆ.. ಕೆಲವರು ಇವರನ್ನ ಒಂದು ಮಾಡಲು ಪ್ರಯತ್ನ ಪಟ್ಟರೂ, ಯಾವ ಉಪಯೋಗ ಆಗಲಿಲ್ಲ

ಬಿರುಕು ಮುಂದುವರೆಯುತ್ತಾ ಅಥವಾ ಕೊನೆಯಾಗುತ್ತಾ?

ಇವರಿಬ್ಬರ ಮಧ್ಯೆ ಮೊದಲೊಂದು ಸಾರಿ ಬಿರುಕು ಉಂಟಾಗಿತ್ತು.. ಆದ್ರೆ ಅದು ಹೆಚ್ಚು ದಿನ ಅದು ಉಳಿಯಲಿಲ್ಲಎಲ್ಲರ ಜಗಳದಂತೆ ಅವರ ಜಗಳವೂ ಸರಿಯೋಗಿತ್ತು.. ಕೆಲವು ಹಿರಿಯ ನಟರು ಅವರನ್ನ ಒಂದಾಗುವಂತೆ ಮಾಡಿದ್ದರು.. ಆ ಕೀರ್ತಿ ಮೊದ್ಲಿಗೆ ರೆಬಲ್ ಸ್ಟಾರ್ ಗೆ ಸೇರುತ್ತೆ.. ಯಾಕಂದ್ರೆ ಇವರಿಬ್ಬರು ತುಂಬಾ ಇಷ್ಟ ಪಡುತ್ತಿದ್ದ ವ್ಯಕ್ತಿ ಅಂದ್ರೆ ಅದು ಅಂಬರೀಶ್ ಅವ್ರನ್ನ ಮಾತ್ರ.. ಹಾಗಾಗಿ ಇವರ ಮಾತಿಗೆ ಅವರು ಯಾವುದೇ ರೀತಿಯಲ್ಲಿ ಇಂದಿರುಗಿ ಮಾತಾಡುತ್ತಿರಲಿಲ್ಲ.. ಹಾಗಾಗಿ ಇವರನ್ನ ಒಂದುಮಾಡುವುದರಲ್ಲಿ ಅಂಬರೀಶ್ ಗೆದ್ದಿದ್ದರು.. ಆದ್ರೆ ಈಗ ಅವರಲ್ಲಿ ಉಂಟಾಗಿರೋ ಬಿರುಕಿಗೆ ಯಾರು ಬಂದರು ಸರಿಯಾಗುವ ರೀತಿ ಕಾಣುತ್ತಿಲ್ಲ.. ಆಗ ಒಂದಾಗಿದ್ದವರು ಈಗಲೂ ಒಂದಾಗಬಹುದು ಅಂತ ಅಭಿಮಾನಿಗಳಿಗೆ ನಿರೀಕ್ಷೆ ಇದೇ.. ಆದರೆ ಇವರಿಬ್ಬರು ಮೊದಲಿನಂತೆ ಒಂದಾಗ್ತಾರಾ ಅಥವಾ ಇದೆ ಬಿರುಕಿನ ವಾತಾವರಣವನ್ನ ಮುಂದುವರೆಸುತ್ತಾರ ಅಂತ ಕಾಡು ನೋಡಬೇಕಾಗಿದೆ..

ಇವರಿಬ್ಬರು ಒಂದಾದರೆ ಅದ್ರಿಂದ ಆಗುವಷ್ಟು ಸಂತೋಷ ನಮ್ಮ ಸ್ಯಾಂಡಲ್ ವುಡ್ ಅಭಿಮಾನಿಗಳಿಗೆ ಬೇರೆ ಯಾವುದರಿಂದಲೂ ಆಗೋಲ್ಲ.. ಮುಂದಿನ ದಿನಗಳಲ್ಲಿ ಒಂದಾಗ್ತಾರಾ ಅಥವಾ ಇಲ್ವಾ ಅಂಥ ಕಾದು ನೋಡಬೇಕಾಗಿದೆ.

ಈ ಪೋಸ್ಟ್ ನಿಮಗೆ ಇಷ್ಟ ವಾದಲ್ಲಿ ಲೈಕ್ ಅಂಡ್ ಫಾಲೋ MetroSaga – Kannada on Facebook 

Comments

comments

[jetpack_subscription_form]
SHARE
Previous articleMeet Purushottam P – A Bengalurian Who Keeps His Water Bill To Just 100 With Zero-Waste Management
Next articleMysuru Becomes The Third Cleanest City In India; Bengaluru Lags Far Behind

LEAVE A REPLY

Please enter your comment!
Please enter your name here