ಬರೋಬ್ಬರಿ 25 ವಾರ ಭರ್ಜರಿಯಾಗಿ ಓಡಿದ್ದ ದಾರಿ ತಪ್ಪಿದ ಮಗ ಎನ್ನೋ ಸಿನೆಮಾ ಬಗ್ಗೆ ನಿಮಗೆ ಎಷ್ಟು ಗೊತ್ತು

daari tappida maga

ನಿನ್ನೆ ನಮಗೆ ಯಾರೋ ಒಬ್ರು ಪರಿಚಯಸ್ಥರು ಸಿಕ್ಕಿದ್ರು. ನಾವು ಅವರ ಜೊತೆ ಮಾತಾಡಿ, ಕಾಫಿ ಟೀ ಕುಡಿದು, ಜೊತೆಗೆ ನಾಳೆ ಸಿಗೋಣ ಬೈ ಅಂತ ಹೇಳಿ ಬಂದಿರುತ್ತೀವಿ. ಆದ್ರೆ ನಾಳೆ ಬೆಳಿಗ್ಗೆ ಅದೇ ವ್ಯಕ್ತಿ ನಮಗೆ ಮತ್ತೆ ಸಿಕ್ಕಿದಾಗ ನಮಗೆ ಕೇವಲ ಆ ವ್ಯಕ್ತಿ ಮಾತ್ರ ನೆನಪಾಗುತ್ತಾನೆ. ನಿನ್ನೆ ಅವರ ಜೊತೆ ಕಳೆದ ಕ್ಷಣಗಳು ನೆನಪಾಗಲ್ಲ. ಇದಕ್ಕೆ ಸಾಮಾನ್ಯವಾಗಿ ಮರೆವು ಅಂತ ಕರೀತೀವಿ. ಈ ಮರೆವಿನ ಕಾಯಿಲೆಯನ್ನ ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ತೆಗೆದುಕೊಳ್ಳುತ್ತಾರೆ. ಕೆಲವರು ಶಾಪ ಅಂತ ತೆಗೆದುಕೊಂಡರೆ, ಇನ್ನೂ ಕೆಲವರು ವರ ಎಂದು ಭಾವಿಸುತ್ತಾರೆ. ಯಾಕಂದ್ರೆ ಮರೆವು ಮನುಷ್ಯನಿಗೆ ಇದ್ರೇನೆ ಒಳ್ಳೇದು ಎಂದು ಇವರ ಅನಿಸಿಕೆ.

ಹಾಗಾದ್ರೆ ಇದೆ ತರ ನಮ್ಮ ಅಣ್ಣಾವ್ರು ಒಂದು ಮರೆವಿನ ಮನುಷ್ಯನಾಗಿ ಒಂದು ಚಿತ್ರದಲ್ಲಿ ನಟಿಸಿದ್ದಾರೆ. ನಿಜಕ್ಕೂ ಅದೊಂದು ಅದ್ಬುತ ಸಿನಿಮಾ. ಈ ಸಿನಿಮಾದಲ್ಲಿ ಇವರಿಗೆ ಸಂಪೂರ್ಣ ಮರೆವಿನ ಕಾಯಿಲೆ ಇರುತ್ತೆ. ಮೊದಲಿಗೆ ಅದು ಅವರಿಗೆ ಶಾಪ ಅಂತ ಅನಿಸಿದರೂ, ಮುಂದೆ ಅದು ವರವಾಗಿ ಪರಿಣಮಿಸುತ್ತೆ. ಹಾಗಾದ್ರೆ ಆ ಸಿನಿಮಾ ಬಗ್ಗೆ ತಿಳಿಸ್ತೀವಿ ನೀವೇ ನೋಡಿ.

Advertisements

ಮರೆವಿನ ಮನೆಯಲ್ಲಿದ್ದರು ದಾರಿ ತಪ್ಪಿದ ಮಗ

ಹೌದು. ಡಾ. ರಾಜ್ ಕುಮಾರ್ ಅವರ ಈ ದಾರಿ ತಪ್ಪಿದ ಸಿನಿಮಾ ಯಾರಿಗೆ ಗೊತ್ತಿಲ್ಲ ಹೇಳಿ. ಪ್ರತಿಯೊಬ್ಬರಿಗೂ ಗೊತ್ತು. ಆ ಕಾಲಕ್ಕೆ ಇದೊಂದು ಅದ್ಭುತ ಸಿನಿಮಾ. ಈಗಲೂ ಅದನ್ನ ಅಷ್ಟೇ ಆಸೆಯಿಂದ ಅಭಿಮಾನಿಗಳು ನೋಡುತ್ತಾರೆ. ಈ ಸಿನಿಮಾದಲ್ಲಿ ನಮ್ಮ ಅಣ್ಣಾವ್ರು ಕಾಲೇಜ್ ಪ್ರೊಫೆಸರ್ ಆಗಿ ನಟಿಸಿದ್ದಾರೆ. ಅವರ ನಟನೆ ನಿಜಕ್ಕೂ ನೋಡುಗರ ಮನ ಸೂರೆಯಾಗುವಂತೆ ಮಾಡುತ್ತೆ. ಈ ಸಿನಿಮಾದಲ್ಲಿ ಇವರಿಗೆ ಮರೆವಿನ ಕಾಯಿಲೆ ಇದ್ದರೂ, ಒಬ್ಬ ಪ್ರೊಫೆಸರ್ ಆಗಿ ನಟಿಸಿದ್ದಾರೆ. ಅಂದ್ರೆ ತನ್ನ ಕಾಯಿಲೆ ಬಗ್ಗೆ ಅವರಿಗೆ ಮೊದಲು ಹೆಚ್ಚಿನ ಅರಿವಿರುವುದಿಲ್ಲ. ನಂತರ ಯಾರಾದ್ರೂ ಒಬ್ಬರು, ಅದನ್ನ ನೆನಪಾಗುವಂತೆ ಮಾಡಿದಾಗ ಮಾತ್ರ, ಅವರಿಗಿದ್ದ ಮರೆವು ಅವರಿಗೆ ನೆನಪಾಗುತ್ತಿತ್ತು.

೧೯೭೫ರಲ್ಲಿ ಬಿಡುಗಡೆಯಾದ ಈ ಸಿನಿಮಾ ಈಗಲೂ ಎಲ್ಲರ ಕಣ್ಮುಂದಿದೆ. ಅಣ್ಣಾವ್ರ ಜೊತೆ ಈ ಸಿನಿಮಾದಲ್ಲಿ ನಮ್ಮ ನಾಯಕಿಯರ ಹಿಂಡೇ ಹರಿದಿದೆ. ಕಲ್ಪನಾ, ಆರತಿ, ಮಂಜುಳಾ, ಜಯಮಾಲಾ ಇಂತ ದೊಡ್ಡ ದೊಡ್ಡ ನಟಿಯರೇ, ನಟಿಸಿದ್ದಾರೆ. ಇನ್ನೂ ಸಿನಿಮಾದಲ್ಲಿ ಅಣ್ಣಾವ್ರು ದ್ವಿಪಾತ್ರದಲ್ಲಿ ಅಭಿನಯಿಸಿದ್ದಾರೆ.

ಕಳ್ಳನ ಪಾತ್ರದಲ್ಲಿ ಅಭಿನಯಿಸಿದ ಅಣ್ಣಾವ್ರು

ಈ ಸಿನಿಮಾದಲ್ಲಿ ಇವರು ದ್ವಿಪಾತ್ರದಲ್ಲಿ ನಟಿಸಿರೋದ್ರಿಂದ ಒಂದು ಕಳ್ಳನ ಪಾತ್ರದಲ್ಲಿ ನಟಿಸಿದ್ದಾರೆ. ಹೌದು. ದಾರಿ ತಪ್ಪಿದ ಮಗ ಅನ್ನೋ ಟೈಟಲ್ ಇವರಿಗೆ ಹೆಚ್ಚಾಗಿ ಹೋಲಿಕೆಯಾಗುತ್ತೆ. ಯಾಕಂದ್ರೆ ಒಬ್ಬ ಮಗ ಕೈ ಹಿಡಿದಿದ್ದರೆ, ಇನ್ನೊಬ್ಬ ಮಗ ಅಂದ್ರೆ ಕಳ್ಳನ ಪಾತ್ರದಲ್ಲಿ ನಟಿಸಿರೋರು, ದಾರಿ ತಪ್ಪಿರುತ್ತಾರೆ. ಈ ರೀತಿ ಸಿಕ್ಕ ಸಿಕ್ಕ ಕಡೆ ಕಳ್ಳತನ ಮಾಡಿಕೊಂಡು ಜೀವನ ಮಾಡ್ತಿದ್ದ ಇವರಿಗೆ, ತನ್ನ ತಾಯಿ ಬೇರೊಬ್ಬರಿದ್ದಾರೆ, ನನಗೊಬ್ಬ ಅಣ್ಣನಿದ್ದಾನೆ ಅನ್ನೋದು ಮೊದಲಿಗೆ ತಿಳಿದಿರುವುದಿಲ್ಲ. ನಂತರ ಸಿನಿಮಾದಲ್ಲಿ ಪಾತ್ರಕ್ಕೆ ತಕ್ಕಂತೆ, ಕಥೆಗೆ ತಕ್ಕಂತೆ ಇವರಿಗೆ ತಿಳಿಯುತ್ತೆ. ಆದರೆ ಇವರು ಕಳ್ಳನ ಪಾತ್ರದಲ್ಲಿ ಅಭಿನಯ ಮಾಡಿದ್ದೇನು ಕಡಿಮೆ ಇಲ್ಲ. ಯಾವುದೇ ಪಾತ್ರವಾದ್ರೂ ಇವರಿಗೆ ಸರಿ ಹೊಂದುತ್ತದೆ. ಹಾಗಾಗಿ ಕಳ್ಳನ ಪಾತ್ರದಲ್ಲೂ ಸೈ ಎನಿಸಿಕೊಂಡಿದ್ದಾರೆ.

Advertisements

ಪ್ರೊಫೆಸರ್ ಆಗಿ ನಟಿಸಿದ ಡಾ. ರಾಜ್ ಕುಮಾರ್

ಒಬ್ಬ ಮಗ ಕಳ್ಳನಾಗಿ ನಟಿಸಿದರೆ, ಇನ್ನೊಬ್ಬರು ಕಾಲೇಜು ಪ್ರೊಫೆಸರ್ ಆಗಿ ಅಭಿನಯಿಸಿದ್ದಾರೆ. ಈ ಚಿತ್ರದಲ್ಲಿ ಇವರ ಪಾತ್ರವೇ ಬಹಳ ಮುಖ್ಯವಾಗಿರುತ್ತೆ. ಅಂದ್ರೆ ಈ ಚಿತ್ರದಲ್ಲಿ ಇವರಿಗೆ ಮರೆವಿನ ಕಾಯಿಲೆ ಇರೋದೇ ವಿಶೇಷ. ತಾನು ಕಾಲೇಜಿಗೆ ಹೋದಾಗ, ಪಾಠವನ್ನ ಎಲ್ಲಿಗೆ ನಿಲ್ಲಿಸಿದ್ದೆ ಅನ್ನೋದು ನೆನಪಾಗದಿರೋದು. ಅದನ್ನ ವಿದ್ಯಾರ್ಥಿಗಳ ಬಳಿ ಕೇಳಿದಾಗ ಅವರು ನಗುವುದು, ನಂತರ ಅದಕ್ಕೆ ಉತ್ತರ ಕೊಡೋದು ಈ ರೀತಿ ಜಾಸ್ತಿ ನಡೆಯುತ್ತಿರುತ್ತೆ. ಇನ್ನೂ ಒಂದು ದಿನವಂತೂ ತನ್ನ ಹೆಂಡತಿ ಜೊತೆ ಹೊರಗಡೆ ಹೋಗಿರ್ತಾರೆ. ಆ ಸಮಯದಲ್ಲಿ ಆಕೆ ನೀಲಿ ಬಣ್ಣದ ಸೀರೆಯನ್ನ ಹುಟ್ಟಿರುತ್ತಾರೆ. ನಂತರ ಆಕೆ ಏನನ್ನೋ ತರಬೇಕು ಅಂತ ಅಂಗಡಿಗೆ ಹೋದಾಗ, ರಾಜ್ ಕುಮಾರ್ ಅವರ ಕಣ್ಣು ಮುಂದೆ, ಇನ್ನೊಬ್ಬ ನೀಲಿ ಸಿರಿಯನ್ನುಟ್ಟಿದ ಹೆಂಗಸು ಪಕ್ಕದಲ್ಲಿ ಹೋಗ್ತಾರೆ. ಆಗ ಅವರನ್ನ ನೋಡಿದ ರಾಜ್ ಕುಮಾರ್ ಅವರು ಒಂದು ಡೈಲಾಗ್ ಹೊಡೀತಾರೆ. ಅದಂತೂ ಅದ್ಭುತವಾಗಿದೆ. ಏನ್ರಿ ಶ್ರೀಮತಿ ಯವರೇ ಯಾವಾಗ್ಲೂ ನನಗೆ ಮರೆವಿನ ಕಾಯಿಲೆ ಅಂತ ಹೇಳ್ತಿದ್ದ ನೀವು, ಈಗ ನಿಮಗೂ ಬಂದಿದಿಯಾ? ಅದಕ್ಕೋಸ್ಕರ ಗಂಡನನ್ನೇ ಮರೆತು ಹೋಗ್ತಿದ್ದೀರಲ್ಲಾ ಅಂದಾಗ ಆ ಹೆಂಗಸು ತಿರುಗಿ ಅವರನ್ನ ನೋಡ್ತಾರೆ. ಆಗ ರಾಜ್ ಕುಮಾರ್ ಅವರಿಗೆ ಒಂದು ರೀತಿ ನಾಚಿಕೆಯಾಗಿ ತಲೆ ತಗ್ಗಿಸುತ್ತಾರೆ. ಮತ್ತೊಮ್ಮೆ ಅವರಿಗೆ ಮರೆವು ಇದೆ ಅನ್ನೋದು ಇನ್ನೊಂದು ಸಾರಿ ನೆನಪಾಗುತ್ತೆ. ಈ ಸಿನಿಮಾದಲ್ಲಿ ಈ ಘಟನೆ ಬಹಳಷ್ಟು ನಗು ತರಿಸುತ್ತೆ. ಈ ಘಟನೆಯಲ್ಲಿ ಇವರ ನಟನೆ, ನಿಜಕ್ಕೂ ಸಂತಸದ ಕಡೆಗೆ ಮನೆ ಮಾಡುವಂತೆ ಮಾಡುತ್ತೆ.

ನಾರಿಯ ಸೀರೆ ಕದ್ದ, ರಾಧೆಯ ಮನವ ಗೆದ್ದ

ಇನ್ನೂ ಸಿನಿಮಾದಲ್ಲಿ ಹಾಡುಗಳು ಸಹ ಬಹಳ ಅದ್ಭುತವಾಗಿವೆ. ಕಳ್ಳನಾಗಿ ನಟಿಸಿರೋ ರಾಜ್ ಕುಮಾರ್ ಅವರದ್ದು ಒಂದು ಸಾಂಗ್ ಅಂತೂ ಈಗಲೂ ಪಡ್ಡೆ ಹುಡುಗರು ಕೇಳುತ್ತಲೇ ಇರುತ್ತಾರೆ. ನಾರಿಯ ಸೀರೆ ಕದ್ದ, ರಾಧೆಯ ಮನವ ಗೆದ್ದ ಸಾಂಗ್ ಕೇಳೋಕೆ ಈಗಲೂ ಒಂಥರಾ ಖುಷಿಯಾಗುತ್ತೆ. ಕಳ್ಳನಾಗಿದ್ದುಕೊಂಡು, ಒಬ್ಬ ಸನ್ಯಾಸಿ ವೇಷ ಧರಿಸಿ ನಟನೆ ಮಾಡಿದ್ದಾರೆ. ಆ ಸಮಯದಲ್ಲಿ ಈ ಹಾಡು ಹೇಳೋದು ಅತ್ಯಾದ್ಭುತ. ಇನ್ನೂ ನಾಯಕಿಯರ ಬಗ್ಗೆ ಅಂತೂ ಹೇಳೋದೇ ಬೇಡ. ಒಬ್ಬರಿಗಿಂತ ಒಬ್ಬರು ಚೆನ್ನಾಗಿ ನಟಿಸಿದ್ದಾರೆ. ಮೈ ನವಿರೇಳಿಸುವಂತೆ ಇರುವ, ಇವರ ನಟನೆ ನೋಡುಗರಿಗೆ ಮೂಗಿನ ಮೇಲೆ ಬೆರಳಿಡುವಂತೆ ಮಾಡಿದ್ದಾರೆ. ಯಾಕಂದ್ರೆ ಈ ಸಿನಿಮಾದಲ್ಲಿ ಒಬ್ಬರು, ಇಬ್ಬರು ನಾಯಕಿಯರಿಲ್ಲ, 4 ಜನ ನಾಯಕಿಯರಿದ್ದಾರೆ. ಅದ್ರಲ್ಲೂ ಸ್ಯಾಂಡಲ್ ವುಡ್ ನಲ್ಲಿ ಮೇರು ಹೆಸರು ಪಡೆದಿರೋ ನಟಿಯರಾಗಿರೋದ್ರಿಂದ, ಇವರ ನಟನೆ ಬಗ್ಗೆ ಒಂದು ಕೊಂಕು ಮಾತು ಹೇಳೋ ಆಗಿಲ್ಲ. ಅಷ್ಟು ಸುಂದರವಾಗಿ ನಟಿಸಿದ್ದಾರೆ.

ಒಟ್ಟಾರೆ ಈ ದಾರಿ ತಪ್ಪಿದ ಮಗ ಅಂತ ಸಿನಿಮಾ ನಿರ್ದೇಶನ ಮಾಡಿದ ಪಕೇಟಿ ಶಿವರಾಂ ಅವರು ಒಂದು ಒಳ್ಳೆ ಕಥೆಯನ್ನ ನೀಡಿದ್ದಾರೆ. ಕಳ್ಳನಾಗಿದ್ದುಕೊಂಡು ಹೇಗೆ ಜೀವನ ನಡೆಸಬಹುದು ಅನ್ನೋದು ಒಂದು ಪಾತ್ರವಾದ್ರೆ, ಒಬ್ಬ ಮರೆವಿನ ಮನುಷ್ಯನಾಗಿದ್ದುಕೊಂಡು ಹೇಗೆ ವ್ಯಾವಹಾರಿಕ ಜ್ಞಾನ ಪಡೆಯಬಹುದು ಅನ್ನೋದನ್ನ ತಿಳಿಸಿದ್ದಾರೆ. ಇದರ ಪ್ರಕಾರವೇ ನೋಡೋದಾದ್ರೆ, ಮನುಷ್ಯನಿಗೆ ಮರೆವು ಅನ್ನೋದು ಒಂದು ರೀತಿಯಲ್ಲಿ ಒಳ್ಳೇದು ಹೌದು. ಕೆಟ್ಟದ್ದು ಹೌದು. ಒಳ್ಳೇದು ಯಾಕೆ ಅಂದ್ರೆ, ನಮ್ಮ ಜೀವನದಲ್ಲಿ ನಡೆದಿರೋ ಕೆಟ್ಟ ಘಟನೆಯನ್ನ ಹಾಗು ನಮ್ಮ ಜೀವನದಲ್ಲಿ ಎಂಟ್ರಿ ಕೊಟ್ಟಿದ್ದ ಕೆಟ್ಟ ವ್ಯಕ್ತಿಯನ್ನ ಮರೆಯೋಕೆ ಒಂದು ಒಳ್ಳೆ ದಾರಿಯಾಗಿರುತ್ತೆ. ಇನ್ನ ಮರೆವಿನಿಂದ ಆಗೋ ನಷ್ಟ ಅಂದ್ರೆ, ನಮ್ಮ ಪ್ರೀತಿ ಪಾತ್ರರನ್ನ ಹಾಗೂ ನೆಚ್ಚಿನ ಘಟನೆಗಳನ್ನ ಬೇಗ ಮರೆತುಬಿಡುತ್ತೀವಿ ಇದು ಅತೀ ಮನ ನೋಯುವ ವಿಷಯವಾಗಿದೆ..

Advertisements

ಏನೇ ಆಗಲಿ ಇಂತ ಅದ್ಭುತ ಸಿನಿಮಾವನ್ನು ನೀಡಿದ ನಿರ್ದೇಶಕ ಪೆಕೇಟಿ ಅವರಿಗೆ ಒಂದು ಗೌರವ ಸಿಕ್ಕಿದರೆ, ಅಷ್ಟು ಅದ್ಭುತವಾಗಿ ನಟಿಸಿದ ನಮ್ಮ ಅಣ್ಣಾವ್ರಿಗೂ ಒಂದು ಸಲಾಂ.

ಈ ಪೋಸ್ಟ್ ನಿಮಗೆ ಇಷ್ಟ ವಾದಲ್ಲಿ ಲೈಕ್ ಅಂಡ್ ಫಾಲೋ MetroSaga – Kannada on Facebook