ಬ್ರೇಕಿಂಗ್: ಬಲ್ಲ ಮೂಲಗಳ ಪ್ರಕಾರ ಬಿಗ್ ಬಾಸ್ ಸೀಸನ್ 5 ರ ವಿನ್ನರ್ ಚಂದನ್ ಶೆಟ್ಟಿ ಎಂದು ಬಹುತೇಕ ಖಚಿತವಾಗಿದೆ.

0
11242
Chandan Shetty Big Boss Season 5 Kannada

ಬಿಗ್ ಬಾಸ್ ರಿಯಾಲಿಟಿ ಶೋ ಇಂದು ತನ್ನ ಫೈನಲ್ ಎಪಿಸೋಡ್ ಅನ್ನು ಪ್ರಸಾರ ಮಾಡಲಿದೆ. ಈಗಾಗಲೇ ನಿಮಗೆ ಗೊತ್ತಿರುವ ಹಾಗೆ ಟಾಪ್ 3 ಸ್ಪರ್ಧಿಗಳಲ್ಲಿ ಜೆ.ಕೆ, ಚಂದನ್ ಶೆಟ್ಟಿ ಮತ್ತು ದಿವಾಕರ್ ಉಳಿದು ಕೊಂಡಿದ್ದಾರೆ. ತುಂಬಾ ಕುತೂಹಲವನ್ನು ಕೆರಳಿಸಿದ ಈ ಫಿನಾಲೆ ಎಪಿಸೋಡ್ ಎಲ್ಲರ ಮನೆ ಮಾತಾಗಿ ಹೋಗಿದೆ. ನೆನ್ನೆಯ ಶನಿವಾರದ ಎಪಿಸೋಡ್ ನಲ್ಲಿ ಶ್ರುತಿ ಮತ್ತು ನಿವೇದಿತಾ ಗೌಡ ಅವರು ಊಹಿಸಿದಂತೆ ಎಲಿಮಿನೇಟ್ ಆಗಿದ್ದಾರೆ. ಇಂದು ಅಂದರೆ ಭಾನುವಾರದ ಫಿನಾಲೆ ಯಲ್ಲಿ ಗೆದ್ದು ಬೀಗುವ ಸ್ಪರ್ಧಿ ಯಾರು ಎಂಬ ಕುತೂಹಲಕ್ಕೆ ಈಗ ತೆರೆ ಬೀಳಲಿದೆ.

Chandan Shetty Big Boss Season 5 Kannada

ಬಲ್ಲ ಮೂಲಗಳ ಪ್ರಕಾರ ಚಂದನ್ ಶೆಟ್ಟಿ ಈಸ್ ದ ವಿನ್ನರ್

ಈ ಫೇಸ್ಬುಕ್ ಮತ್ತು ಇತರೆ ಸಾಮಾಜಿಕ ಜಾಲತಾಣಗಳಲ್ಲಿ ಕೇಳಿ ಬರುತ್ತಿರುವಂತೆ ಕೊನೆಯ ಕ್ಷಣದಲ್ಲಿ ಸ್ಪರ್ಧಿಸುವ ಸ್ಪರ್ಧಿಗಳು ಜೆ.ಕೆ ಮತ್ತು ಚಂದನ್ ಶೆಟ್ಟಿ. ಆಗಿರುತ್ತಾರೆ. ಇವತ್ತಿನ ಶೋ ನ ಮೊದಲಾರ್ಧದಲ್ಲಿ ದಿವಾಕರ್ ಎಲಿಮಿನೇಟ್ ಆಗುವುದು ಬಹುತೇಕ ಖಚಿತ ಅಂತ ನೇ ಹೇಳಬಹುದು.

Chandan Shetty Big Boss Season 5 Kannada

ಸಮೀಕ್ಷೆ, ಜನರ ಅಭಿಪ್ರಾಯ, ಯಾರು ಗೆಲ್ಲಬೇಕು ಮತ್ತು ಯಾರು ಗೆಲ್ಲಬಹುದು ಎಂಬ ಎಲ್ಲ ಪ್ರಶ್ನೆಗಳಿಗೆ ಒಂದೇ ಉತ್ತರ, ಏಕ ಧ್ವನಿ ಯಲ್ಲಿ ಕೇಳಿ ಬರುತ್ತಿರುವುದು – ಚಂದನ್ ಶೆಟ್ಟಿ ಎಂದು. ಹೌದು, ಚಂದನ್ ಶೆಟ್ಟಿ ಈ ಸೀಸನ್ ನ ವಿನ್ನರ್ ಎಂದು ಬಹುತೇಕ ಖಚಿತವಾಗಿದೆ. ಅವರ ಆಟ, ಮನರಂಜನೆ, ಜನಪ್ರಿಯತೆ, ಎಲ್ಲವನ್ನೂ ಗಮನಿಸುವುದಾದರೆ ಈ ಮಾತು ಸುಳ್ಳು ಎಂದು ತೋರುವುದಿಲ್ಲ. ಹಾಗೆ ನೋಡಿದರೆ ಜೆ.ಕೆ, ಚಂದನ್ ಶೆಟ್ಟಿ ಗೆ ಸೂಕ್ತ ಸ್ಪರ್ಧಿ ಅಲ್ಲ ಎಂದೂ ಬಹುಪಾಲು ಜನರು ಅಭಿಪ್ರಾಯ ಪಡುತ್ತಿದ್ದಾರೆ.

ಜೆ.ಕೆ v/S ಚಂದನ್ ಶೆಟ್ಟಿ

ಬಿಗ್ ಬಾಸ್ ಶುರುವಿನಿಂದ ನೀವು ನೋಡುತ್ತಾ ಬಂದಿದ್ದರೆ, ಇಲ್ಲಿ ಸೆಲೆಬ್ರಿಟಿ ಗಳಿಗೆ ಜನ ಮಣೆ ಹಾಕಿದ್ದು ಕಮ್ಮಿ ನೇ ಅಂತ ಹೇಳಬಹುದು. ಸಿಹಿ ಕಹಿ ಚಂದ್ರು ಆಗಲಿ, ಆಶಿತಾ ಗೌಡ ಆಗಲಿ, ಜಗನ್ ಆಗಲಿ ಅಥವಾ ಅನುಪಮಾ ಗೌಡ ಆಗಲಿ ಎಲ್ಲರೂ ಎಲಿಮಿನೇಟ್ ಆಡವರೇ. ಶೋ ನ ಟಾಪ್ 5 ಸ್ಪರ್ಧಿಗಳನ್ನು ತೆಗೆದು ಕೊಂಡರೆ, ಜೆ.ಕೆ ಹೊರತು ಪಡಿಸಿ ಎಲ್ಲರೂ ಕಾಮನ್ ಮ್ಯಾನ್ ಗಳ ಲಿಸ್ಟ್ ಗೆ ಸೇರುತ್ತಾರೆ. ಚಂದನ್ ಶೆಟ್ಟಿ ತನ್ನ ಆಲ್ಬಮ್ ಗಳಿಂದ ಒಂದು ಲೆವೆಲ್ ಗೆ ಜನಪ್ರಿಯತೆ ಗಳಿಸಿದ್ದರೂ, ಅವರು ಮನೆ ಮಾತಾಗಿದ್ದು ಬಿಗ್ ಬಾಸ್ ನ ವೇದಿಕೆಯಲ್ಲಿ.

Chandan Shetty Big Boss Season 5 Kannada

ಜೆ.ಕೆ ನ ಜನಪ್ರಿಯತೆ ಎಲ್ಲರಿಗೂ ಚಿರ ಪರಿಚಿತ. ಅವರು ಆಟದ ಎಲ್ಲ ಸವಾಲುಗಳನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ. ಎಲ್ಲಿಯೂ ತಮ್ಮ ತಾಳ್ಮೆಯನ್ನು ಕಳೆದುಕೊಂಡಿಲ್ಲ. ಚಂದನ್ ಶೆಟ್ಟಿ ಮತ್ತು ಜೆ.ಕೆ ನಡುವಿನ ಪೈಪೋಟಿ ನಿಜಕ್ಕೂ ತುಂಬಾ ಜನರ ಕುತೂಹಲಕ್ಕೆ ಕಿಚ್ಚು ಹಚ್ಚಿರುವುದು ನಿಜ.

ಸಮೀಕ್ಷೆ ಏನೇ ಇರಲಿ, ಅಭಿಪ್ರಾಯಗಳು ಏನೇ ಇರಲಿ, ಕೊನೆಯ ಕ್ಷಣದವರೆಗೂ ಏನೂ ನಿರ್ಧರಿಸಲು ಆಗುವುದಿಲ್ಲ ಎಂದೂ ನಾವೂ ಹಿಂದಿನ ಸೀಸನ್ ಗಳ ಫಿನಾಲೆ ಯಲ್ಲಿ ನೋಡಿದ್ದೇವೆ. ಸಧ್ಯದ ಮಟ್ಟಿಗೆ ಚಂದನ್ ಶೆಟ್ಟಿ ಸಂಭಾವಿತ ವಿನ್ನರ್ ಎಂದು ಎಲ್ಲರೂ ನಂಬಿದ್ದಾರೆ. ಇರಲಿ, ಕಾದು ನೋಡೋಣ.

Chandan Shetty Big Boss Season 5 Kannada

ಬಿಗ್ ಬಾಸ್ ರಿಯಾಲಿಟಿ ಶೋ ಇಷ್ಟು ದಿನ ಕೊಟ್ಟ ಮನರಂಜನೆಗೆ ನಮ್ಮ ಧನ್ಯವಾದಗಳನ್ನು ತಿಳಿಸುತ್ತಾ, ಯಾರೇ ವಿನ್ ಆಗಲಿ ಅರ್ಹರಿಗೆ ಜಯ ಸಿಗಲಿ ಎಂದು ಆಶಿಸುತ್ತೇವೆ.

Comments

comments

LEAVE A REPLY

Please enter your comment!
Please enter your name here