ಕೇವಲ ಬಳೆಗಳಿಂದ ಕಟ್ಟಿದ ದೇವಾಲಯ, ನೂರು ವರ್ಷಗಳನ್ನೇ ದಾಟಿದೆ. ಇಲ್ಲಿದೆ ಅದರ ನಿಜವಾದ ಅಚ್ಚರಿ

ಇದು ನಮ್ಮ ಕರ್ನಾಟಕದ ಜಿಲ್ಲೆ. ಇಲ್ಲಿ ನಾವು ನೋಡುವಂತ ಹಲವು ಪ್ರವಾಸಿ ತಾಣಗಳಿವೆ. ಆದ್ರೆ ಕೆಲವೊಂದು ಕಾರಣಗಳಿಂದ ಈ ಜಿಲ್ಲೆ ಹಿನ್ನೆಡೆ ಕಂಡಿದೆ. ಅಂದ್ರೆ ಬೇರೆ ಜಿಲ್ಲೆಗಳ ತರ ಗುರುತಿಸಿಕೊಂಡಿಲ್ಲ. ಹಾಗಾಗಿ ಇಲ್ಲಿನ ಪ್ರವಾಸಿ ತಾಣಗಳ ಬಗ್ಗೆ ಹೆಚ್ಚಾಗಿ ಯಾರಿಗೂ ತಿಳಿದಿಲ್ಲ. ಆದ್ರೆ ಇಲ್ಲಿ ಕಣ್ಣುತುಂಬಿಕೊಳ್ಳುವಂತ ಹಲವು ವಿಶೇಷ ಸ್ಥಳಗಳಿವೆ.

ಚಾಮರಾಜನಗರ. ನಮ್ಮ ಕರ್ನಾಟಕದ ಒಂದು ಜಿಲ್ಲೆಯಾಗಿದೆ. ಇದು ನಮ್ಮಲ್ಲಿರುವ ಜಿಲ್ಲೆ ಅಂತ ಎಷ್ಟೋ ಜನಕ್ಕೆ ಗೊತ್ತಿಲ್ಲ. ಯಾಕಂದ್ರೆ ಇದನ್ನ ಇನ್ನು ಮೈಸೂರಿನಲ್ಲಿರುವ ಒಂದು ಸ್ಥಳ ಎಂದು ತಿಳಿದಿದ್ದಾರೆ. ಆದ್ರೆ ಚಾಮರಾಜನಗರವನ್ನ, ಮೈಸೂರಿನಿಂದ ಬೇರ್ಪಡಿಸಿ ಹಲವು ವರ್ಷಗಳಾಗಿವೆ. ಆದರೆ ಇದು ಒಂದು ಜಿಲ್ಲೆ ಅಂತ ಗುರುತಿಸಿಕೊಂಡಿರೋದು ಕಡಿಮೆ. ಹಾಗಾಗಿ ಇದರ ಬಗ್ಗೆ ಯಾರಿಗೂ ತಿಳಿದಿಲ್ಲ. ಜೊತೆಗೆ ಇಲ್ಲಿನ ಸ್ಥಳಗಳ ಬಗ್ಗೆಯೂ ಯಾರಿಗೂ ಹೆಚ್ಚಾಗಿ ತಿಳಿದಿಲ್ಲ. ಇಲ್ಲಿ ಗೌರೀಶ್ವರ ಎಂಬ ದೇವಾಲಯವಿದೆ. ಈ ದೇವಾಲಯ ನಿಜಕ್ಕೂ ಬಹಳ ಅಮೋಘವಾಗಿದೆ. ಇಲ್ಲಿನ ಜನರು ಈ ದೇವರನ್ನ ಅತೀ ಹೆಚ್ಚು ನಂಬಿದ್ದಾರೆ.

Advertisements

ಸೊಗಸಾದ ಗೌರೀಶ್ವರ ದೇವಾಲಯ

ಚಾಮರಾಜನಗರ ಜಿಲ್ಲೆಯಲ್ಲಿ ಯಳಂದೂರು ಎಂಬ ಊರಿದೆ. ಇದೆ ಊರಿನಲ್ಲಿ ಗೌರೀಶ್ವರ ದೇವಾಯವಿರೋದು. ಈ ದೇವಾಲಯ ಪುರಾತನ ಕಾಲದಲ್ಲಿ ನಿರ್ಮಾಣವಾಗಿದೆ.. ಈ ದೇವಾಲಯವನ್ನ ಕ್ರಿ.. 1450 ರಲ್ಲಿ ಪಡಿನಾಡಿನ ದೊರೆ ಸಿಂಗದೇವ ಭೂಪನು ಕಟ್ಟಿಸಿದ್ದು. ನೋಡೋಕೆ ಮಾತ್ರ ಈ ದೇವಾಲಯ ಬಹಳಷ್ಟು ಸುಂದರವಾಗಿದೆ. ಪುರಾತನ ಕಾಲದಲ್ಲಿ ನಿರ್ಮಿಸಿರೋ ದೇವಾಲಯವಾಗಿರೋದ್ರಿಂದ ಶಿಲ್ಪ ಕಲೆ ಬಹಳ ಸೊಗಸಾಗಿದೆ. ಈ ದೇವಾಲಯ ದ್ರಾವಿಡ ಶೈಲಿಯಲ್ಲಿದೆ. ಇದರ ಮಹಾದ್ವಾರ 12 ಅಡಿಗಳಷ್ಟು ಎತ್ತರವಿದೆ. ದೇವಾಲಯದಲ್ಲಿ ಸುಂದರವಾದ ಕಲ್ಲಿನ ಬಳೆಗಳು, ಬ್ರಹ್ಮ, ವಿಷ್ಣು, ಮಹೇಶ್ವರ, ದಕ್ಷಿಣಾಮೂರ್ತಿ, ಭೈರವ, ವೀರಭದ್ರ, ಗೋಪಾಲ, ದುರ್ಗೆ, ವೇಣುಗೋಪಾಲ, ಕಷ್ಣ ರಾಮನ ವಿಗ್ರಹಗಳನ್ನು ಮನೋಹರವಾಗಿ ಕೆತ್ತಲಾಗಿದೆ. ಈ ಗೌರೀಶ್ವರನು ಹಿಂದೆ ಕೃತಾಯುಗದಲ್ಲಿ ಜಮದಗ್ನಿ ಮಹಾರ್ಷಿಯಿಂದ “ತ್ರಿಪುರಾಂತಕ”ನೆಂದೂ ತ್ರೇತಾಯುಗದಲ್ಲಿ ಶ್ರೀರಾಮಚಂದ್ರನಿಂದ “ನೀಲಕಂಠ” ನೆಂದೂ, ದ್ವಾಪರಾಯುಗದಲ್ಲಿ ಪಾಂಡವರಿಂದ ಲೋಕೇಶ್ವರನೆಂದೂ ಕಲಿಯುಗದಲ್ಲಿ ಪಡಿನಾಡಿನ ರಾಜ ವಂಶಸ್ಥರು ಗೌರೀಶ್ವರನೆಂದೂ ಪೂಜಿಸುತ್ತಿದ್ದರು. ಈ ದೇವಾಲಯದ ಆವರಣದಲ್ಲಿರುವ ಎರಡು ಪಗಡೆ ಮರಗಳು ದೇವಾಲಯದ ಆವರಣವನ್ನು ಬೇಸಿಗೆಯಲ್ಲೂ ತಂಪಾಗಿಸುತ್ತಿದೆ.

ಬಳೆ ಮಂಟಪ

ಈ ದೇವಾಲಯದ ಮುಂದೆ ಬಳೆ ಮಂಟಪವಿದೆ. ಈ ಮಂಟಪವನ್ನ ಕ್ರಿ.. 1654ರಲ್ಲಿ ಮುದ್ದುರಾಜನು ಇದನ್ನ ಕಟಿಸಿದನು. ನಿಜಕ್ಕೂ ಈ ಮಂಟಪ ಬಹಳ ರಮ್ಯವಾಗಿದೆ. ಇದು ಬಹಳ ಸುಂದರವಾದ ಅತ್ಯಂತ ಪ್ರಾಚೀನ ಹಾಗೂ ಕಲಾಪೂರ್ಣ ಕಗ್ಗಲಿನ ಮಂಟಪವಾಗಿದೆ. ಈ ಮಂಟಪ ಹಂಪೆಯ 27 ಕಲ್ಲಿನ ರಥವನ್ನು ಹೋಲುತ್ತದೆ. ಜೊತೆಗೆ ಈ ಮಂಟಪ ಬೇಲೂರು ಮತ್ತು ಹಳೇ ಬೀಡಿನ ದೇವಾಲಯದ ಶಿಲ್ಪಕಲೆಯಂತೆ ಇದೆ. ಅಲ್ಲದೆ ಚತುರ್ಮುಖಗಳನ್ನ ಹೊಂದಿದ್ದು, ಸುಂದರವಾದ ಕಲ್ಲಿನ ಬಳೆಗಳಿಂದ ಕೂಡಿದ ಮಂಟಪವಾಗಿದೆ. ಶಿಲೆಯ ಗೋಡೆಯಲ್ಲಿ ಶೈವ ಪುರಾಣದ, ರಾಮಾಯಣದ ಹಾಗೂ ಮಹಾಭಾರತದ ಕೆಲವು ಘಟನೆಗನ್ನು ಅತ್ಯಂತ ಮನೋಹರವಾಗಿ ಕೆತ್ತಿರುವುದನ್ನ ನೋಡಬಹುದು. ಈ ಮಂಟಪದ ಮಧ್ಯ ಭಾಗದಲ್ಲಿ ಒಂದೇ ಕಲ್ಲಿನಿಂದ ಕಮಲದ ಮೊಗ್ಗನ್ನು ಬಿಡಿಸಿ ಮೇಲ್ಭಾಗದಲ್ಲಿ ಜೋಡಿಸಿರುವುದು ತುಂಬಾ ಸೊಗಸಾಗಿದೆ. ಈ ಮಂಟಪದ ಮೂಲೆಗಳಲ್ಲಿ ಬಳೆಗಳನ್ನು ಒಂದರೊಳಗೊಂದು ಜೋಡಿಸಿದಂತೆ ಒಂದೇ ಕಲ್ಲಿನಿಂದ ಮಾಡಿರುವುದು ಅದ್ಭುತವಾಗಿದೆ. ಈ ಬಳೆಗಳು ಇರುವುದರಿಂದಲೇ ಈ ಮಂಟಪವನ್ನ ಬಳೆ ಮಂಟಪ ಎಂದು ಕರೆಯುತ್ತಾರೆ.

100ವರ್ಷಗಳನ್ನೇ ದಾಟಿದ ದೇವಾಲಯ

1550 ರಲ್ಲಿ ನಿರ್ಮಾಣಗೊಂಡಿದ್ದ ಈ ದೇವಾಲಯ ಸುಮಾರು ನೂರು ವರ್ಷಗಳಷ್ಟು ಸದೃಢವಾಗಿತ್ತು. ನಂತರ ಸಾಕಷ್ಟು ಹಾನಿಗೊಳಗಾಯಿತು. ಅದರ ದಯನೀಯ ಸ್ಥಿತಿಕಂಡು ದೇವಭೂಪಾಲನ ಮಗ ಮುದ್ದಭೂಪನಿಗೆ ಬಹಳ ಬೇಸರವಾಗುತ್ತೆ. ಆಗ ಆಗ 1664ರಲ್ಲಿ ಇದರ ಜೀರ್ಣೋದ್ದಾರ ಕಾರ್ಯಕ್ಕೆ ಕೈ ಹಾಕುತ್ತಾನೆ. ಅಂದುಕೊಂಡಂತೆ ದೇವಾಲಯವನ್ನ ಸುಂದರವಾಗಿ ಮತ್ತೆ ಪುನರ್ ನಿರ್ಮಾಣ ಮಾಡುತ್ತಾನೆ.

Advertisements

ಗೋಪುರ ಹೊಂದಿರದ ಗೌರೀಶ್ವರ

ಈ ದೇವಾಲಯವನನ್ನ ಎತ್ತ ಕಡೆಯಿಂದ ನೋಡಿದರೂ, ಸುಂದರ ಶಿಲ್ಪ ಕಲೆಗಳು ಎದ್ದು ಕಾಣುತ್ತವೆ. ಆದ್ರೆ ವಿಶೇಷ ಅಂದ್ರೆ ಈ ದೇವಾಲಯಕ್ಕೆ ಗೋಪುರವಿಲ್ಲದಿರುವುದು. ಹೌದು. ಈ ದೇವಾಲಯಕ್ಕೆ ಗೋಪುರವಿಲ್ಲ. ಇದಕ್ಕೂ ಒಂದು ಕಾರಣವಿದೆ. ಚೋಳರ ಕಾಲದಲ್ಲಿ ನಿರ್ಮಾಣವಾದ ಈ ದೇವಾಲಯಕ್ಕೆ ಮೊದಲು ಮಂಟಪವನ್ನೇ ಕಟ್ಟಬಾರದು ಅಂತ ನಿರ್ಧರಿಸಿದ್ದರು. ಯಾಕಂದ್ರೆ ಇವರ ಪ್ರಕಾರ ದೇವರಿಗೆ ಯಾವಾಗಲು ಆಕಾಶ ಕಾಣಬೇಕು. ಜೊತೆಗೆ ಸೂರ್ಯನ ಕಿರಣ ವಿಗ್ರಹದ ಮೇಲೆ ಬೀಳಬೇಕು ಅನ್ನೋದಾಗಿತ್ತು. ಹಾಗಾಗಿ ಮಂಟಪವನ್ನೇ ಕಟ್ಟೋದು ಬೇಡ ಅಂತ ನಿರ್ಧರಿಸಿದ್ದರು. ಆದರೆ ಆ ಸಾಮ್ರಾಜ್ಯದಲ್ಲಿ ವಾಸವಿದ್ದ ಸನ್ಯಾಸಿಯೊಬ್ಬರು, ಆ ರೀತಿ ಇರಬಾರದು, ಶಿವನಿಗೆ ಸೂರ್ಯನ ಕಿರಣ ಬೀಳುವುದು, ಮುಖ ನೇರವಾಗಿ. ಅಂದ್ರೆ ಹೊರಗಿನಿಂದ ಬೀಳುವುದು, ಮೇಲಿಂದ ಅಲ್ಲ ಅಂತ ತಿಳಿಸುತ್ತಾರೆ. ಆದ್ರೆ ಅವರಿಗೆ ಮಂಟಪ ಕಟ್ಟೋದಕ್ಕೆ ಮನಸಾಗಲಿಲ್ಲ. ಆ ನಂತರ ಬಲವಂತದಿಂದ ಮಂಟಪ ಕಟ್ಟುತ್ತಾರೆ. ಆದ್ರೆ ಯಾವುದೇ ಕಾರಣಕ್ಕೂ ಇದಕ್ಕೆ ಎತ್ತರ ಗೋಪುರ ನಿರ್ಮಿಸೋಲ್ಲ ಅಂತ ತಿಳಿಸುತ್ತಾರೆ. ಅದರಂತೆ ಈಗಲೂ ಆ ದೇವಾಲಯಕ್ಕೆ ಗೋಪುರ ನಿರ್ಮಿಸಿಲ್ಲ.

ಜೀರ್ಣೋದ್ದಾರ ಕಾರ್ಯದಲ್ಲಿ ಮುಳುಗಿರುವ ಗ್ರಾಮಸ್ಥರು

ದೇವಾಲಯ ಕಟ್ಟಿ ಸುಮಾರು ನೂರು ವರ್ಷಗಳಿಗಿಂತ ಜಾಸ್ತಿಯಾಗಿದೆ. ಹಾಗಾಗಿ ದೇವಾಲಯದಲ್ಲಿ ಬಿರುಕುಗಳು ಕಾಣಿಸಿಕೊಳ್ಳುತ್ತಿವೆ. ಜೊತೆಗೆ ಅಷ್ಟು ಆಸೆಯಿಂದ ನಿರ್ಮಿಸಿದ್ದ ಬಳೆ ಮಂಟಪವಂತೂ ಪೂರ್ತಿ ಹಾಳಾಗಿದೆ. ಹಾಗಾಗಿ ಜನರು ತುಂಬಾ ಇಷ್ಟ ಪಟ್ಟು ಹೋಗುತ್ತಿದ್ದ ಸ್ಥಳಕ್ಕೆ ಇಂತ ದುಸ್ಥಿತಿ ಬಂದಿರೋದನ್ನ ಸಹಿಸೋಕೆ ಆಗುತ್ತಿಲ್ಲ. ಹಾಗಾಗಿ ಇಡೀ ಗ್ರಾಮಸ್ಥರು ದೇವಾಲಯದ ಜೀರ್ಣೋದ್ದಾರದ ಕಾರ್ಯದಲ್ಲಿ ಮುಳುಗಿದ್ದಾರೆ. ಆದರೆ ಚೋಳರ ಆಜ್ಞೆಯಂತೆ ಗೋಪುರದ ಸಹವಾಸಕ್ಕೆ ಯಾರು ಹೋಗ್ತಿಲ್ಲ.

ಒಟ್ಟಿನಲ್ಲಿ ಚಾಮರಾಜನಗದ ಯಳಂದೂರಿನಲ್ಲಿ ಬರೋ ಈ ಗೌರೀಶ್ವರ ದೇವಾಲಯ ಹಾಗೂ ಅದರ ಮುಂದಿರುವ ಬಳೆ ಮಂಟಪ ನಿಜಕ್ಕೂ ಬಹಳ ಅದ್ಭುತವಾಗಿದೆ. ಅಲ್ಲಿಗೆ ಹೋದರೆ, ಅಲ್ಲಿನ ಸೊಗಸದ ಶಿಲ್ಪಿ ಕಲೆಗಳನ್ನ ಕಣ್ತುಂಬಿಕೊಳ್ಳಬಹುದು.

Advertisements