ಬೆಂಗಳೂರು ಅಂತಾರಾಷ್ಟ್ರೀಯ ಸಿನಿ ಫೆಸ್ಟಿವಲ್ ನಲ್ಲಿ ಕನ್ನಡ ಚಿತ್ರಗಳ ಕಮಾಲ್

0
4347

2018 ರಲ್ಲಿ ಸಾಕಷ್ಟು ಕನ್ನಡ ಚಲನಚಿತ್ರಗಳು ತೆರೆಕಂಡಿವೆ. ಕೆಲವು ಚಿತ್ರಗಳು ಹಿಟ್ ಲಿಸ್ಟ್ ಅಲ್ಲಿ ಸೇರಿಕೊಂಡರೆ, ಉಳಿದ ಸಿನೆಮಾಗಳು ನುಚ್ಚು ನೂರಾಗಿವೆ. ಹಿಂದಿನ ವರ್ಷದಲ್ಲಿ ಬಿಡುಗಡೆ ಆದ ಚಲನಚಿತ್ರಗಳಲ್ಲಿ ಶೇಖಡ 80 ಪರ್ಸೆಂಟೇಜ್ ಅಷ್ಟು ಹಿಟ್ ಆಗಿವೆ, ಮತ್ತು ಪ್ರೇಕ್ಷಕರ ಮನವನ್ನು ಗೆದ್ದಿವೆ. ಹೊಸ ಪ್ರತಿಭಾವಂತ ಕಲಾವಿದರಿಗೆ ಅವಕಾಶ ಸಿಕ್ಕಿದೆ, ಕನ್ನಡ ಭಾಷೆಯ ಸಿನೆಮಾಗಳ ಮಾರ್ಕೆಟ್, ಇತ್ತೀಚಿಗೆ ವಿಸ್ತಾರವಾಗಿ ದೊಡ್ಡ ಪ್ರಮಾಣದಲ್ಲಿ ಬೆಳೆದು ನಿಂತಿದೆ ಇದಕ್ಕೆ ಕೆ‌ಜಿ‌ಎಫ್ ಚಿತ್ರಾನೆ ಸಾಕ್ಷಿ.

ಕೆ.ಜಿ. ಎಫ್ ಕಮಾಲ್

ಕೆ‌ಜಿ‌ಎಫ್ ಭಾಗ 1 ಚಿತ್ರವೂ ಇಡೀ ದೇಶವೇ ಮೆಚ್ಚಿ ಹೊಗಳಿದ ಚಿತ್ರ. ಪ್ರಶಾಂತ್ ನೀಲ್ ಅವರ ವಿಭಿನ್ನವಾದ ಪ್ರಯತ್ನಕ್ಕೆ ಎಲ್ಲಡೆ ಪ್ರಶಂಸೆ ವ್ಯಕ್ತವಾಗುತ್ತಿದೆ. ಈಗ ಚಿತ್ರತಂಡ ಕೆ‌ಜಿ‌ಎಫ್ ಭಾಗ 2 ಚಿತ್ರೀಕರಣದಲ್ಲಿ ತೊಡಗಿಕೊಂಡಿದೆ. ಅಂತಾರಾಷ್ಟ್ರೀಯ ಸಿನೆಮಾ ಪ್ರಶಸ್ತಿಯ ಸಮಾರಂಭವು ಅದ್ದೂರಿಯಾಗಿ ಸಮಾಪ್ತಿಯಾಗಿದೆ. ಯಾವ ಯಾವ ಚಲನಚಿತ್ರಗಳು ಎಷ್ಟನೆ ಸ್ಥಾನದಲ್ಲಿ ನಿಂತಿದೆ ಅಂತಾ ಚಿತ್ರಮಂಡಳಿಯವರು ಸಮಾರಂಭದಲ್ಲಿ ಘೋಷಿಸಿದ್ದಾರೆ. ಬೆಂಗಳೂರು 11 ನೇ ಸಿನಿಮೋತ್ಸವದಲ್ಲಿ ಮೂಕಜ್ಜಿಯ ಕನಸು ಎಂಬ ಚಿತ್ರಕ್ಕೆ ಅಮೋಘವಾದ ಕನ್ನಡ ಚಿತ್ರ ಎಂದು ಪರಿಗಣಿಸಿ ಪ್ರಶಸ್ತಿ ನೀಡಲಾಗಿದೆ.

kgf release

ಟಗರು ಅಂಡ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ

ಕೆ‌ಜಿ‌ಎಫ್ ಭಾಗ 1 ಎಲ್ಲಾ ಕಡೆ ಸಂಚಲನ ಸೃಷ್ಟಿಸಿ ದಾಖಲೆ ಬರೆದ ಚಿತ್ರ. ಮನೋರಂಜನೆ ದೃಷ್ಟಿ ಇಟ್ಟುಕೊಂಡು ತೀರ್ಪುಗಾರರು ಈ ಸಿನೆಮಾಕ್ಕೆ  ಪ್ರಶಸ್ತಿ ನೀಡಿದ್ದಾರೆ. ಎರಡನೇ ಉತ್ತಮ ಪ್ರಶಸ್ತಿ ಸಾವಿತ್ರಬಾ ಪುಳೆಗೆ ಸಿಕ್ಕರೆ, ತೃತೀಯ ಪ್ರಶಸ್ತಿ ರಾಮನ ಸವಾರಿ ಅನ್ನೋ ಚಿತ್ರಕ್ಕೆ ಸಿಕ್ಕಿದೆ. ಮನೋರಂಜನೆ ಭಾಗಕ್ಕೆ ಬಂದರೆ ಸುಕ್ಕಾ ಸೂರಿ ನಿರ್ದೇಶಿಸಿದ್ದ  ಶಿವರಾಜ್ ಕುಮಾರ್ ಅಭಿನಯದ ಟಗರು ಚಿತ್ರ ಮೂರನೇ ಸ್ಥಾನದಲ್ಲಿ ಇದ್ದರೆ, ರಿಷಬ್ ಶೆಟ್ಟಿ ನಿರ್ದೇಶನದಲ್ಲಿ ಮೂಡಿ ಬಂದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಎರಡನೇ ಸ್ಥಾನ ಪಡೆದುಕೊಂಡಿದೆ.

SHPSK kannada movie

ನಾತಿಚರಾಮಿ ಸಿನೆಮಾವು ತೀರ್ಪೂಗಾರರು ಆಯ್ಕೆ ಮಾಡಿದ ವಿಶೇಷ ವಿಭಾಗದ ಪ್ರಶಸ್ತಿಗೆ ಭಾಜನವಾಗುತ್ತದೆ. ಭಾರತೀಯ ಚಲನಚಿತ್ರದ ವಿಭಾಗದಲ್ಲಿ ಗೋಡೆಕೋ ಜಿಲೇಬಿ ಕಿಲಾನೆ ಲೆ ಜಾ ರಹ ಹೂಂ ಅನ್ನೋ ಚಿತ್ರವೂ ಉತ್ತಮ ಚಿತ್ರದ ಸಾಲಿನ ಪ್ರಶಸ್ತಿಯ ಸರದಿಯಲ್ಲಿ ನಿಲ್ಲುತ್ತದೆ. ಭಾರತದ ಸಿನಿರಂಗದ ತೀರ್ಪುಗಾರರೂ ಆಮೃತ್ಯು ಅನ್ನೋ ಚಲನಚಿತ್ರಕ್ಕೆ ವಿಭಿನ್ನವಾದ ಪ್ರಶಸ್ತಿ ಕೊಟ್ಟಿದ್ದಾರೆ. ಏಷ್ಯನ್ ಚಿತ್ರಗಳ ಸಂಕಲನದಲ್ಲಿ ಇನ್ನುಮ್ ಸಿಲಾ ಪೆಂಗುಳುಂ ಚಿತ್ರ ಬೆಸ್ಟ್ ಸಿನೆಮಾ ಆಗಿ ಹೊರ ಬಂದಿದೆ. ಮುಂದಿನ ವರ್ಷದಲ್ಲಿ ತುಂಬಾ ಕನ್ನಡ ಚಿತ್ರಗಳು ಇದೇ ರೀತಿ ಪ್ರಶಸ್ತಿಗಳನ್ನು ತನ್ನ ಮುಡಿಗೆ ಏರಿಸಿಕೊಳ್ಳಲಿ ಎಂದು ಆಶಿಸೋಣ.

ಈ ಪೋಸ್ಟ್ ನಿಮಗೆ ಇಷ್ಟ ವಾದಲ್ಲಿ ಲೈಕ್ ಅಂಡ್ ಫಾಲೋ MetroSaga – Kannada on Facebook 

Comments

comments

[jetpack_subscription_form]
SHARE
Previous article9 Reasons That Forced Pakistan To Release Abhinandan In Such A Short Time, Not At All A Gesture Of Peace
Next articleHere Are The Reasons Why Malleswaram Is The Most Loved Locality Of The City

LEAVE A REPLY

Please enter your comment!
Please enter your name here