ಅಗ್ನಿಯ ಅನಾಹುತಕ್ಕೆ ಬಂಡೀಪುರ ಕಾಡು ಸುಟ್ಟು ಭಸ್ಮವಾಗಿದೆ. ಸುಮಾರು 2೦೦0 ಎಕರೆಯ ಭೂಮಿ ನೆಲ ಸಮಾಧಿಯಾಗಿದೆ, ನೂರಾರು ಪ್ರಾಣಿಗಳು ಸತ್ತು ಹೋಗಿದ್ದಾವೆ. ಬೆಂಕಿ ಇದ್ದಕ್ಕೆ ಇದ್ದ ಹಾಗೆ ಹತ್ತಿಕೊಂಡಿದೆ. ಇದರಲ್ಲಿ ಯಾರ ಕೈವಾಡ ಇಲ್ಲ ಎಂದು ಅರಣ್ಯದ ಅಧಿಕಾರಿಗಳು ಅಭಿಪ್ರಾಯ ಪಟ್ಟಿದ್ದಾರೆ. ಒಣ ಹುಲ್ಲು ಹಾಗೂ ಲಾಂಟಾನಾ ಕಳೆ ಕಾಡಿನ ಸುತ್ತ ಮುತ್ತ ಇದ್ದವು, ಇವುಗಳ ಪರಿಣಾಮದಿಂದ ಕೆಲವೇ ಕ್ಷಣಗಳಲ್ಲಿ ಬೆಂಕಿ ಬಹಳ ವೇಗವಾಗಿ ಹರಡಿ ಕಾಡಿನ ಪ್ರದೇಶಗಳಲ್ಲಿ ನುಗ್ಗಿದೆ.
ಅರಣ್ಯದ ಕಾರ್ಯಕರ್ತರು ಹಾಗೂ ಅಗ್ನಿಶಾಮಕರು ಕೊಂಚ ಮಟ್ಟದವರೆಗೆ ಅಗ್ನಿಯನ್ನು ಸಂಬಾಳಿಸಿದರು. ಬೆಂಕಿ ಮೊದಲು ಕಾಣಿಸಿಕೊಂಡಿದ್ದು ಮಂಗಳ, ಶಿವಪುರ ಮತ್ತು ಹಂದಿಪುರ ಎಂಬ ಊರುಗಳಲ್ಲಿ. ಅರಣ್ಯದ ಕಾರ್ಯ ನಿರ್ವಾಹಕರು ಬಂಡೀಪುರದ ಮುಖ್ಯ ಪ್ರವೇಶದ ದ್ವಾರವನ್ನು ಮುಚ್ಚಿದ್ದಾರೆ. ಪ್ರಾಯಾಣಿಕರು ತಮ್ಮ ತಮ್ಮ ಊರಿಗೆ ತೆರೆಲಿದ್ದಾರೆ. ಬಿರುಗಾಳಿ, ಒಣಗಿದ ಗಾಜಿನ ಚೂರಿನ ಪ್ರಭಾವದಿಂದ ಬೆಂಕಿಯ ಜ್ವಾಲೆ ಇಂದಾಗಿ ಇನ್ನಷ್ಟು ಹರಡಲು ಶುರುವಾಗುತ್ತದೆ.
ಎನ್‌ಎಚ್೬೭ ದಾರಿಯನ್ನು ಸ್ಥಗಿತಗೊಳಿಸಲಾಗಿದೆ, ಈ ದಾರಿಯೂ ಊಟಿ ಇಂದ ಮೈಸೂರ್ ವರೆಗೂ ಸಂಪರ್ಕ ಹೊಂದಿರುತ್ತದೆ. ಅರಣ್ಯದ ಮಂತ್ರಿ ಸತೀಶ್ ಜರ್ಕಿಹೊಲಿ ನಾಶವಾದ ಜಾಗಕ್ಕೆ ಭೇಟಿ ನೀಡಿದ್ದಾರೆ. ಹನುಮಂತ ಕುಮಾರ್ ಬೆಂಕಿಯ ಇಳಾಕೆಯ ಮೇಲ್ವಿಚಾರಕ, ಮಾಧ್ಯಮದಲ್ಲಿ ಮಾತನಾಡುತ್ತಾ ಅಗ್ನಿ ಹರಡಲಿಕ್ಕೆ ನಿಜವಾದ ಕಾರಣ ಕೇವಲ ಬಿರುಗಾಳಿಯಾ? ಎಂದು ಸಂಶಯ ಪಟ್ಟಿದ್ದಾರೆ.
ಬಂಡೀಪುರ ಕರ್ನಾಟಕದ ಹುಲಿಗಳ ತಾಣವಾಗಿದೆ. ಬಹುಶ ೮೭,೪೦೦ ಎಕರೆ ಅಷ್ಟು ಜಾಗ ಹೊಂದಿರುವ ಪ್ರದೇಶ, ವಯನಂದ್ ಅಭಯಾರಣ್ಯ ಹಾಗೂ ನಾಗರಹೊಳೆ ಪಾರ್ಕ್ ಕೂಡ ಈ ಅರಣ್ಯಕ್ಕೆ ಸೇರ್ಪಡೆ ಆಗುತ್ತದೆ. ಕಾಡು ಪ್ರಾಣಿಗಳಾದ ಹುಲಿ, ಆನೆ ಹಾವು, ಇನ್ನೂ ಅನೇಕ ಪ್ರಾಣಿಗಳಿಗೆ ಬಂಡೀಪುರ ಅರಣ್ಯ ಆಶ್ರಯ ನೀಡುತ್ತಿದೆ.
ಕರ್ನಾಟಕ ಹಾಗು ಬೆಂಗಳೂರಿನ ಸುದ್ದಿಗಾಗಿ ನಮ್ಮ ಫೇಸ್ಬುಕ್ ಪೇಜ್ MetroSaga – Kannada ವನ್ನು ಲೈಕ್ ಮಾಡಿ.