ಯಾರು ತಿಳಿಯರು ನಿನ್ನ ಭುಜ ಬಲದ ಪರಾಕ್ರಮ – ವಾಹ್ ರಾಜಕುಮಾರ್ ಅವರಿಗೆ ರಾಜಕುಮಾರ್ ಯೇ ಸಾಟಿ

babruvahana

ಆಹಾ ನೋಡಿದವರು ಒಮ್ಮೆಲೇ ಇವರ ನಟನೆಯನ್ನ ಮೆಚ್ಚಿ ಹೇಳುತ್ತಾರೆ. ಎಂಥ ಕಲಾವಿದನಯ್ಯ ಇವರು ಅಂತ. ಹೌದು. ನಾನು ಯಾವ ಪಾತ್ರಕ್ಕಾದ್ರೂ ಸೈ ಅಂತ ಮುಂದೆ ಬಂದು ನಿಂತು ನಟನೆ ಮಾಡ್ತಿದ್ದವರು ಬೇರೆ ಯಾರು ಅಲ್ಲ ಅದು ನಮ್ಮ ಅಣ್ಣಾವ್ರು. ಅವರು ನಮ್ಮಿಂದ ದೂರವಾಗಿ ಹಲವು ವರ್ಷಗಳು ಕಳೆದಿವೆ. ಆದರೂ ಅವರನ್ನ ಅಭಿಮಾನಿಗಳು ಇನ್ನು ಮರೆತಿಲ್ಲ. ಮುಂದೆಯೂ ಮರೆಯೋಲ್ಲ. ಯಾಕಂದ್ರೆ ಅವರ ಪಾತ್ರ ಅಭಿಮಾನಿಗಳ ಮನಸ್ಸಲ್ಲಿ ಹಚ್ಚೆ ಹಾಕಿದ ರೀತಿಯಲ್ಲಿ ಅಚ್ಚು ಹೊಡೆದಿದೆ.

ನಮ್ಮ ಪ್ರಪಂಚದಲ್ಲಿ ಮನುಷ್ಯನಾದವನು ಯಾವೆಲ್ಲ ಕೆಲಸವನ್ನ ಮಾಡಬಹುದೋ ಅದೆಲ್ಲವನ್ನು ಇವರು ತಮ್ಮ ನಟನೆಯಲ್ಲಿ ಮಾಡಿದ್ದಾರೆ. ಹೌದು, ರೈತ, ರಾಜ, ಕಳ್ಳ, ಪ್ರೊಫೆಸರ್, ಡಾಕ್ಟರ್, ಇನ್ನು ಮುಂತಾದ ರೀತಿ ಪಾತ್ರಗಳಲ್ಲಿ ಅಭಿನಯಿಸಿ ಜನರ ಮನಸ್ಸನ್ನ ಗೆದ್ದಿದ್ದಾರೆ.

Advertisements

ಮಹಾಭಾರತದಲ್ಲಿ ನಟಿಸಿದ ಡಾ. ರಾಜ್ ಕುಮಾರ್

ಇದೇನು ಮಹಾಭಾರತದಲ್ಲಿ ರಾಜ್ ಕುಮಾರ್ ನಟಿಸಿದ್ದಾರೆ ಅಂತ ಹೇಳ್ತಿದರಲಾ, ಆ ಸಮಯದಲ್ಲಿ ನಮ್ಮ ರಾಜಣ್ಣ ಇದ್ರ ಅಂತ ಯೋಚನೆ ಮಾಡ್ತಿದೀರಾ. ಯೋಚನೆ ಮಾಡ್ಬೇಡಿ. ಯಾಕಂದ್ರೆ ನಾವು ಹೇಳ್ತಿರೋದು ಮಹಾಭಾರತ ಕಥೆಯನ್ನ ಆಧರಿಸಿ ಮಾಡಿರೋ ಸಿನಿಮಾ ಬಗ್ಗೆ. ಹೌದು ಮಹಾಭಾರತ ಕಥೆಯನ್ನ ಆಧರಿಸಿ ಮಾಡಿದ ಸಿನಿಮಾ ಈ ಬಬ್ರುವಾಹನ. ಈ ಸಿನಿಮಾದಲ್ಲಿ ನಮ್ಮ ಅಣ್ಣಾವ್ರು ಬಹಳ ಅದ್ಭುತವಾಗಿ ನಟಿಸಿದ್ದಾರೆ. ಇವರ ಈ ನಟನೆಯನ್ನ ನಿಜಕ್ಕೂ ಯಾರಿಂದಲೂ ಮರೆಯೋಕ್ಕಾಗಲ್ಲ. ಇವರು ಹಲವು ಸಿನಿಮಾಗಳನ್ನ ನಟಿಸಿರಬಹುದು. ಆದರೆ ಈ ಸಿನಿಮಾದಲ್ಲಿ ಮಾಡಿರೋ ಪಾತ್ರವನ್ನ ಇಂದಿಗೂ, ಯಾರಿಂದಲೂ ಮರೆಯೋಕ್ಕಾಗಲ್ಲ.

ದ್ವಿಪಾತ್ರದಲ್ಲಿ ನಟಿಸಿದ ಅಣ್ಣಾವ್ರು

ಈ ಚಿತ್ರದಲ್ಲಿ ನಮ್ಮ ರಾಜಣ್ಣ ದ್ವಿಪಾತ್ರದಲ್ಲಿ ನಟಿಸಿದ್ದಾರೆ. ಅಂದ್ರೆ ತಂದೆ ಹಾಗೂ ಮಗನಾಗಿ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಅರ್ಜುನನ ಪಾತ್ರದಲ್ಲಿ ಒಂದು ನಟನೆಯನ್ನ ಮಾಡಿದ್ರೆ, ಬಬ್ರುವಾಹನ ಅನ್ನೋ ಹೆಸರಿನಲ್ಲಿ ಮತ್ತೊಂದು ಪಾತ್ರ ಮಾಡಿದ್ದಾರೆ. ಅರ್ಜುನ ತಂದೆಯಾದರೆ, ಬಬ್ರುವಾಹನ ಮಗನಾಗಿದ್ದಾನೆ. ಈ ಚಿತ್ರದಲ್ಲಿ ಇವರ ವೇಷ, ಭೂಷಣ ರಾಜರಂತೆ ಇದೆ. ಕತ್ತಿ ಹಿಡಿದು ಬರೋ ಇವರನ್ನ ನೋಡೋಕೆ ಎರಡು ಕಣ್ಣು ಸಾಲದು.

ತೀರ್ಥ ಯಾತ್ರೆಗೆ ಹೋದ ಸಮಯದಲ್ಲಿ ಸಿಕ್ಕಿದ್ಲು ನಾಗರಾಜನ ಮಗಳು

ಅರ್ಜುನ, ಯಾಕೋ ಸ್ವಲ್ಪ ಮನಸ್ಸಿಗೆ ಬೇಜಾರಾಗಿದೆ ಅಂತ ತೀರ್ಥ ಯಾತ್ರೆಗೆ ಹೋಗ್ತಾರೆ. ಆದ್ರೆ ಆ ಸಮಯದಲ್ಲಿ ಆ ದೇಶದಲ್ಲಿ ನಾಗ ವಂಶವಿರುತ್ತೆ. ಅವರ ಮಗಳು ಈ ಅರ್ಜುನನ ಮೇಲೆ ಮನಸೋತು, ಅವರನ್ನ ತನ್ನ ಅರಮನೆಗೆ ಕರೆದುಕೊಂಡು ಹೋಗುತ್ತಾಳೆ. ಆಗ ಅವರಿಬ್ಬರಿಗೂ ಪ್ರೇಮವಾಗಿ, ಒಬ್ಬೊರಿಗೊಬ್ಬರ ಪ್ರೇಮದಲ್ಲಿ ತಮ್ಮನ್ನ ತಾವು ಮರೆಯುತ್ತಾರೆ. ಆಗಲೇ ಇವರಿಗೆ ಒಂದು ಮಗು ಹುಟ್ಟುತ್ತೆ. ಆದ್ರೆ ಇತ್ತ ಶ್ರೀಕೃಷ್ಣ ಅರ್ಜುನನ ಬಗ್ಗೆ ಯೋಚಿಸುತ್ತಾನೆ. ಎಲ್ಲಿ ಇಷ್ಟು ದಿನವಾದರೂ ಬಂದಿಲ್ಲ ಎಂದು. ಆಗ ಕೃಷನಿಗೆ ಎಲ್ಲ ವಿಷಯ ತಿಳಿಯುತ್ತೆ. ತಕ್ಷಣವೇ ಅರ್ಜುನನನ್ನ ಕರೆದುಕೊಂಡು ಬಂದು, ಹಿಂದೆ ನಡೆದಂತ ಘಟನೆಯನ್ನೆಲ್ಲ ಮರೆಯುವಂತೆ ಮಾಡುತ್ತಾನೆ. ಆಗ ನಾಗರಾಜನ ಮಗಳು, ಹಾಗೂ ಅರ್ಜುನ ದೂರವಾಗುತ್ತಾರೆ. ಇತ್ತ ನಾಗರಾಜನ ಮಗಳು ತನ್ನ ಮಗುವಿಗೆ ಬಬ್ರುವಾಹನ ಎಂದು ಹೆಸರಿಡುತ್ತಾಳೆ.

Advertisements

ದೊಡ್ಡವನಾಗಿ ಬೆಳೆದ ಮಗ, ತಂದೆ ಬಗ್ಗೆ ಕೇಳೋಕೆ ಶುರು ಮಾಡ್ತಾನೆ.

ಒಂದು ಮಗುವಿಗೆ ತನ್ನ ತಂದೆ ಬಹಳ ಮುಖ್ಯವಾಗುತ್ತಾರೆ. ಯಾಕಂದ್ರೆ ಸಮಾಜ ಮೊದಲು ಕೇಳುವುದೇ ನಿಮ್ಮ ತಂದೆ ಯಾರು ಎಂದು. ಹಾಗಾಗಿ ಬಬ್ರುವಾಹನ ಬೆಳೆದು ದೊಡ್ಡವನಾಗುತ್ತಾನೆ. ಆದರೆ ಅವನಿಗೆ ತನ್ನ ತಂದೆ ಬಗ್ಗೆ ಯಾವ ಮಾಹಿತಿಯು ಇರುವುದಿಲ್ಲ. ಆಗ ತನ್ನ ತಾಯಿಯನ್ನ ಕೇಳುತ್ತಾನೆ. ಆಕೆ ಮೊದಲಿಗೆ ವಿಷಯವನ್ನ ಹೇಳಲು ನಿರಾಕರಿಸಿದರು, ನಂತರ ಹೇಳುತ್ತಾಳೆ. ಆಗ ತನ್ನ ತಾಯಿ ಮಾತನ್ನ ಕೇಳಿದ ಬಬ್ರುವಾಹನನಿಗೆ ಆಶ್ಚರ್ಯವಾಗುತ್ತೆ. ತಕ್ಷಣವೇ ತನ್ನ ತಂದೆಯನ್ನ ನೋಡೋಕೆ ಮುಂದಾಗ್ತಾನೆ.

ತಂದೆಯನ್ನ ನೋಡಲು ಹೋದ ಮಗನಿಗೆ, ತಂದೆಯಿಂದ ಬಂದ ಉತ್ತರ

ಬಬ್ರುವಾಹನ ತನ್ನ ತಾಯಿಯಿಂದ ವಿಷಯ ತಿಳಿದ ಮೇಲೆ, ತನ್ನ ತಂದೆಯನ್ನ ಕಾಣೋಕೆ ಅಂತ ಹೋಗ್ತಾನೆ. ಆದ್ರೆ ಅರ್ಜುನ, ಬಬ್ರುವಾಹನನ್ನ ಮಗ ಎಂದು ಒಪ್ಪಿಕೊಳ್ಳದೆ ಅವನನ್ನ ನಿರಾಕರಿಸುತ್ತಾನೆ. ಜೊತೆಗೆ ಅವನ ತಾಯಿ ಬಗ್ಗೆ ಕೀಳಾಗಿ ಮಾತಾಡುತ್ತಾನೆ. ಆಗ ಬಬ್ರುವಾಹನನಿಗೆ ತನ್ನ ತಂದೆ ಮೇಲೆ ಎಲ್ಲಿಲ್ಲದ ಆಕ್ರೋಶ ಉಂಟಾಗುತ್ತೆ. ಆಗಿಂದಲೇ ತಂದೆ, ಮಗನ ನಡುವೆ ವೈರತ್ವ ಶುರುವಾಗುತ್ತೆ.

ಯುದ್ಧ ಸಾರಿಯೇ ಬಿಟ್ರು ತಂದೆ, ಮಗ

ಅಪ್ಪನ ಮಾತನ್ನ ಕೇಳಿ ಆಕ್ರೋಶಗೊಂಡ ಬಬ್ರುವಾಹನ ಯುದ್ಧ ಮಾಡಿಯೇ ಗೆಲ್ಲೋಣ ಅಂತ ನಿಲ್ಲುತ್ತಾನೆ. ಆಗ ಇಬ್ಬರ ನಡುವೆ ಒಂದು ದೊಡ್ಡ ಯುದ್ಧವೇ ನಡೆಯುತ್ತೆ. ತಂದೆಗಿಂತ ಮಗ ಮುಂದೆ, ಮಗನಿಗಿಂತ ತಂದೆ ಮುಂದೆ ಅನ್ನೋ ಹಾಗೆ ಒಬ್ಬರ ಹಿಂದೆ, ಇನ್ನೊಬ್ಬರು ಬಿಲ್ಲು, ಬಾಣವನ್ನ ಬಿಡುತ್ತಾರೆ. ಒಬ್ಬರಿಗೊಬ್ಬರು ಖಡಕ್ ಮಾತುಗಳನ್ನ ಹೇಳುತ್ತಾ, ಯುದ್ಧವನ್ನ ಮಾಡ್ತಿರ್ತಾರೆ. ಎದುರಿಗೆ ಯಾರು ಬಂದರು ಬಿಡುವುದಿಲ್ಲ ಅನ್ನುವಷ್ಟು ಆಕ್ರೋಶಗೊಂಡಿರುತ್ತಾರೆ. ಅಷ್ಟೆಲ್ಲ ಆದ್ರೂ ಅರ್ಜುನ, ಬಬ್ರುವಾನನನ್ನ ಮಗ ಎಂದು ಒಪ್ಪಿಕೊಳಲ್ಲ. ಯಾಕಂದ್ರೆ ಅವನಿಗೆ ಯಾವುದರ ನೆನಪು ಇರೋದಿಲ್ಲ. ಹಾಗಾಗಿ ಬಬ್ರುವಾಹನ ಎಷ್ಟೇ ಯುದ್ಧ ಮಾಡಿದ್ರು, ಅದು ವ್ಯರ್ಥವಾಗುವಂತಿತ್ತು.

Advertisements

ನೆನಪಿನ ಶಕ್ತಿ ಮತ್ತೆ ಕೊಟ್ಟ ಕೃಷ್ಣ

ತಂದೆ, ಮಗನ ನಡುವಿನ ಯುದ್ಧ ಮಿತಿ ಮೀರುತ್ತಿದೆ ಎಂದು ತಳಿದ ತಕ್ಷಣ ಕೃಷ್ಣ ಅಲ್ಲಿಗೆ ಬರುತ್ತಾನೆ. ಬಂದು ಯುದ್ಧವನ್ನ ನಿಲ್ಲಿಸೋಕೆ ಮುಂದಾಗ್ತಾನೆ. ಆದ್ರೆ ಅವರಿಬ್ಬರ ಯುದ್ಧ ತಾರಕಕ್ಕೇರಿರುತ್ತದೆ. ಹಾಗಾಗಿ ಕೃಷ್ಣ ಎಷ್ಟೇ ಪ್ರಯತ್ನ ಪಟ್ಟರು ಯುದ್ಧ ನಿಲ್ಲಿಸೋಕೆ ಕಷ್ಟ ಆಗುತ್ತೆ. ಆಗ ಕೃಷ್ಣನಿಗೆ ಒಂದು ಉಪಾಯ ಒಳೆಯುತ್ತೆ. ನಾನೆ, ಅರ್ಜುನನ ಹಳೆ ಘಟನೆಯನ್ನ ಮರೆಯುವಂತೆ ಮಾಡಿರೋದು. ಅದನ್ನ ಮತ್ತೆ ಅರ್ಜುನನಿಗೆ ಕೊಟ್ಟರೆ ಎಲ್ಲವು ಸರಿಹೋಗುತ್ತದೆ ಎಂದು ಯೋಚಿಸುತ್ತಾನೆ. ತಕ್ಷಣವೇ ಕೃಷ್ಣ ಅರ್ಜುನನನಿಗೆ ಹಳೆ ನೆನಪು ಬರುವಂತೆ ಮಾಡುತ್ತಾನೆ. ಆಗ ಅರ್ಜುನನನಿಗೆ ಹಳೆಯ ನೆನಪುಗಳೆಲ್ಲವೂ ಮರಕಳಿಸುತ್ತವೆ. ಹೌದು. ನಾನು ತೀರ್ಥ ಯಾತ್ರೆಗೆ ಹೋದಾಗ ನಾಗರಾಜನ ಮಗಳು ಸಿಕ್ಕಿದ್ದಳು. ನನಗು, ಆಕೆಗೂ ಪ್ರೇಮವಾಗಿತ್ತು ಅನ್ನೋದು ನೆನಪಾಗುತ್ತೆ. ತಕ್ಷಣವೇ ಅವನು ಯುದ್ಧವನ್ನ ನಿಲ್ಲಿಸೋಕೆ ಹೇಳಿ, ಬಬ್ರುವಾಹನನನ್ನ ಮಗ ಎಂದು ಒಪ್ಪಿಕೊಳ್ಳುತ್ತಾನೆ.

ಏನೇ ಹೇಳಿ ಒಬ್ಬ ರಾಜನಾಗಿ ನಟಿಸಿರೋ ನಮ್ಮ ಅಣ್ಣಾವ್ರು ತುಂಬಾ ಸೂಪರ್. ನಿಜಕ್ಕೂ ಮಹಾಭಾರತದಲ್ಲಿ ಬಬ್ರುವಾಹನ ಅನ್ನೋ ಪಾತ್ರವೇ ಇಲ್ಲ ಅಂತ ಎಲ್ಲರು ಹೇಳ್ತಾರೆ. ಆದ್ರೆ ಇಲ್ಲಿ ಇದನ್ನ ಹೊಸದಾಗಿ ಸೃಷ್ಟಿ ಮಾಡಿ, ಆ ಪಾತ್ರಕ್ಕೆ ಜೀವ ತುಂಬಿದ್ದಾರೆ. ನಿಜಕ್ಕೂ ಈ ಚಿತ್ರ ನೋಡುಗರ ಮನಸ್ಸನ್ನ ಸೂರೆಗೊಂಡಿದೆ. ಇನ್ನು ಈ ಚಿತ್ರದಲ್ಲಿ ನಾಯಕಿಯಾಗಿ ನಟಿಸಿರೋ ಬಿ. ಸರೋಜಾದೇವಿ ಕೂಡ ಬಹಳ ಅದ್ಭುತವಾಗಿ ನಟಿಸಿದ್ದಾರೆ. ಗಂಡು ಮಕ್ಕಳು ಇಲ್ಲದ ರಾಜ್ಯಕ್ಕೆ, ಇವರನ್ನೇ ಇವರ ತಂದೆ ಗಂಡು ಮಗುವಾಗಿ ಬೆಳೆಸುತ್ತಾರೆ. ತಮ್ಮ ಪಾತ್ರವನ್ನ ಬಹಳಷ್ಟು ಅಚ್ಚುಕಟ್ಟಾಗಿ ಮಾಡಿದ್ದಾರೆ. ಈಗಲೂ ರಾಜಣ್ಣರ ಯಾವ ಸಿನಿಮಾವನ್ನ ಬೇಕಾದ್ರು ಮರೀಬಹುದು. ಆದ್ರೆ ಈ ಬಬ್ರುವಾಹನ ಸಿನಿಮಾವನ್ನ ಮಾತ್ರ ಮರೆಯೋಕ್ಕಾಗಲ್ಲ. ಇಂತ ಸಿನಿಮಾವನ್ನ ನಮಗೆ ನೀಡಿದ ರಾಜಣ್ಣನಿಗೆ ಅಭಿನಂದನೆ ಹೇಳಲೇ ಬೇಕು.