ಕೆಲವು ಸಾಮಾನ್ಯ ಜನರು, ಕೆಲವರಲ್ಲಿ ದೇವರನ್ನ ಕಾಣ್ತಾರೆ ಅಂತ ಹೇಳ್ತಾರೆ. ಆ ರೀತಿ ಮನುಷ್ಯರಲ್ಲಿ ದೇವರನ್ನ ಕಾಣೋದು ಅಂದ್ರೆ ಬಲು ಅಪರೂಪ. ಅದ್ರಲ್ಲೂ ಆತನನ್ನ ನಮಗೋಸ್ಕರನೇ ಅಂತಾನೆ ದೇವರು ಭೂಮಿ ಮೇಲೆ ಕಳಿಸಿದ್ದಾನೆ ಅಂತ ಅಂದುಕೊಳ್ಳೋ ಕೆಲಸವನ್ನ ಆ ವ್ಯಕ್ತಿ ಮಾಡಿದರೆ, ಆತನನ್ನ ಎಂದಿಗೂ ಅವರು ಮರೆಯೋದಿಲ್ಲ. ಹೌದು. ನಾವು ಈಗಲೂ ಉಡುಪಿ ಜಿಲ್ಲೆಗೋಗಿ ನಿಮಗೆ ದೇವರಂತೆ ಕಣೋ ಇಷ್ಟವಾದ ವ್ಯಕ್ತಿ ಯಾರು ಅಂದ್ರೆ, ಅವರು ಹೇಳೋದು ಒಂದೇ ಹೆಸರು. ಅದು ಅಣ್ಣಾಮಲೈ ಅಂತ.
ಹೌದು. ಈ ಹೆಸರಿಗೇನೋ ಒಂದು ರೀತಿ ಪವರ್ ಇದೆ. ಇವರು ನೋಡೋಕೆ ಒಬ್ಬ ಸಾಮಾನ್ಯ ವ್ಯಕ್ತಿ. ಎತ್ತ ಕಡೆ ಇಂದ ನೋಡಿದರೂ, ಯಾವುದೇ ಒಂದು ಸಣ್ಣ ರೀತಿಯ ಹೊಮ್ಮಿಲ್ಲ. ಸಾಮಾನ್ಯರಲ್ಲಿ ಒಂದುಗೂಡಿ, ನಾನು ಸಹ ಅವರಲ್ಲಿ ಒಬ್ಬ ಎಂದು ಭಾವಿಸುತ್ತಾರೆ. ಕಣ್ಣೀರು ಹಾಕೋರಿಗೆ, ಯಾವಾಗಲು ಹಿಂದೆ ನಿಂತು ರಕ್ಷಣೆ ಮಾಡಿದರೆ, ಕಣ್ಣೀರು ಹಾಕಿಸೋರಿಗೆ ಮುಂದೆ ಬಂದು ಅವರ ಹುಟ್ಟು ಅಡಗಿಸುತ್ತಾರೆ.
ಇವರಿಗೆ ಇವರೇ ಸಾಟಿ. ಇವರಂತಿರುವ ವ್ಯಕ್ತಿ, ಇನ್ನೊಬ್ಬ ಸಿಗಲಿಕ್ಕಿಲ್ಲ. ವೃತ್ತಿಯಿಂದಲೂ ಸೈ, ವೈಯಕ್ತಿಕವಾಗಿಯೂ ಸೈ. ಇವರಿಗೆ ಪೊಲೀಸ್ ಕೆಲಸ ಅನ್ನೋದು ಎಷ್ಟರ ಮಟ್ಟಿಗೆ ಸರಿ ಹೊಂದುತ್ತೆ ಅಂದ್ರೆ, ಆ ಕೆಲಸಕ್ಕೆ ಇವರು ಹೇಳಿ, ಮಾಡಿಸಿದಂತಿದ್ದಾರೆ. ಇವರ ಭಾಗದಲ್ಲಿ ಇವರನ್ನ ಸಿಂಗಂ ಅಂತ ಕರೀತಾರೆ. ಸಿನಿಮಾದಲ್ಲಿ ಪೊಲೀಸ್ ಅಂದ್ರೆ ಹೇಗಿರಬೇಕು ಅಂತ ಶಂಕರ್ ನಾಗ್ ಅವ್ರನ್ನ ನೋಡಿ, ತಿಳ್ಕೊಂಡಿದ್ವಿ. ಆದ್ರೆ ಇವ್ರು ನಮ್ಮ ಪಾಲಿಗೆ ಇಲ್ಲಿ ಶಂಕರ್ ನಾಗ್ ಆಗಿದ್ದಾರೆ ಅಂತ ಉಡುಪಿ ಜಿಲ್ಲೆ ಜನ ಸಾರಿ, ಸಾರಿ ಹೇಳ್ತಾರೆ.
ಜೀವನ
ಅಣ್ಣಾಮಲೈ ಅವರು ತಮಿಳುನಾಡಿನ ಕರೂರ್ ಜಿಲ್ಲೆಯ ಸ್ಥಳೀಯರಾಗಿದ್ದು, ಕೊಯಮತ್ತೂರಿನಲ್ಲಿ ತನ್ನ ವಿದ್ಯಾಭ್ಯಾಸವನ್ನ ಪೂರ್ಣಗೊಳಿಸಿದರು. ಅವರು ಮೊದಲು ಮೆಕ್ಯಾನಿಕಲ್ ಇಂಜಿನಿಯರಿಂಗ್ ಮಾಡಿದರು. ನಂತರ ಲಕ್ನೌದಲ್ಲಿ ತಮ್ಮ ಎಂಬಿಎ ಪೂರ್ಣಗೊಳಿಸಿದರು. ಅಲ್ಲಿಂದ ಅವರಿಗಿದ್ದ ಬಡತನ ಅವರನ್ನ ಅಸಮಾನತೆಗೆ ಒಳಪಡಿಸಿತು. ಆಗ ಅವರು ಸರ್ಕಾರಿ ಸೇವಕರಾಗಲು ನಿರ್ಧರಿಸಿದರು. ಅದಕ್ಕೋಸ್ಕರ ಅವರು ಐಪಿಎಸ್ ಮಾಡಿದ್ರು.
ವೃತ್ತಿ ಜೀವನ
ಮೊದಲಿಗೆ 2011ರ ಸೆಪ್ಟೆಂಬರ್ 4ರಂದು ಅಣ್ಣಾಮಲೈ ಅವರನ್ನ ಕಾರ್ಕಳ ಉಪ ವಿಭಾಗದ ಎಎಸ್ಪಿ ಆಗಿ ಪೋಸ್ಟ್ ಮಾಡಲಾಗಿತ್ತು. ನಂತರ ಅಲ್ಲಿಂದ ಉಡುಪಿ, ಚಿಕ್ಕಮಗಳೂರು, ಬೆಂಗಳೂರು ಈ ರೀತಿ ಊರೂರಿಗೆ ವರ್ಗಾವಣೆಯಾಯಿತು. ಇವರ ವರ್ಗಾವಣೆ ಆಗುತ್ತೆ ಅಂದ್ರೆ ಸಾಕು, ಕೆಟ್ಟವರಿಗೆಲ್ಲ ಖುಷಿ ಆದರೆ, ಮುಗ್ದರಿಗೆ ಏನನ್ನೋ ಕಳೆದುಕೊಳ್ಳುವಂತಾಗಿತ್ತು. ಇವರ ವರ್ಗಾವಣೆಯನ್ನ ಇವರು ನಿರಾಕರಿಸುತ್ತಿರಲಿಲ್ಲ. ಆದ್ರೆ ಇವರನ್ನ ನಂಬಿದ ಜನರು ನಿರಾಕರಿಸುತ್ತಿದ್ದರು. ಯಾಕಂದ್ರೆ ಒಬ್ಬ ನಿಷ್ಠಾವಂತ ಅಧಿಕಾರಿಯನ್ನ ಯಾರಿಂದಲೂ ಕೆಳೆದುಕೊಳ್ಳೋಕೆ ಇಷ್ಟ ಇರುವುದಿಲ್ಲ. ಹಾಗಾಗಿ ಇವರಿಗೋಸ್ಕರ ಉಡುಪಿಯಲ್ಲಿ ದೊಡ್ಡ ದೊಡ್ಡ ಗಲಾಟೆಗಳೇ ಆಗಿದ್ದವು.
ಸಿನಿಮಾ ಸ್ಟೈಲ್ ನಲ್ಲಿ ಹಿಡಿತಿದ್ರು ರೌಡಿಗಳನ್ನ ಹಾಗೂ ಕಳ್ಳರನ್ನ
ಹೌದು. ಒಬ್ಬ ಕಳ್ಳನನ್ನ ಹಾಗೂ ರೌಡಿಯನ್ನ ಹೇಗೆ ಪ್ಲಾನ್ ಮಾಡಿ ಹಿಡಿತಾರೆ ಅಂತ ಸಿನಿಮಾದಲ್ಲಿ ನೋಡಿದ್ವಿ. ಆದ್ರೆ ನಮ್ಮ ಅಣ್ಣಾಮಲೈ ಅವರು ವಾಸ್ತವದಲ್ಲೂ ಈ ರೀತಿ ಮಾಡ್ತಿದ್ದಾರೆ ಅಂತ ಗೊತ್ತಿರ್ಲಿಲ್ಲ. ಅವರ ಕೆಲವೊಂದು ಸ್ಟೈಲ್ ನೋಡಿದ್ಮೇಲೆ ಗೊತ್ತಾಗಿದ್ದು, ಅವ್ರು ಯೋಚನೆ ಮಾಡೋ ರೀತಿಗಳು. ಉದಾ. ಅವರು ಬೆಂಗಳೂರಿಗೆ ವರ್ಗಾವಣೆಯಾಗಿ ಬಂದಾಗ ಅವರ ಲಿಮಿಟ್ಸ್ ನಲ್ಲಿ ಒಂದು ಘಟನೆ ಸಂಭವಿಸಿತ್ತು. ಅದೇನಪ್ಪ ಅಂದ್ರೆ, ಪ್ರತಿದಿನ ರಾತ್ರಿ ಸಮಯದಲ್ಲಿ ಅಕ್ರಮ ವ್ಯವಹಾರಗಳು ನಡೆಯುತ್ತಿದ್ವು. ಅದಕ್ಕೊಸಕರ ಲಾರಿ ಡ್ರೈವರ್ ಗಳನ್ನ ಬಳಸಿಕೊಳ್ತಿದ್ರು. ಈ ವಿಚಾರವಾಗಿ ಅವರ ಬಳಿ ಸಾಕಷ್ಟು ದೂರು ಬಂದಿದ್ವು.. ಒಂದು ದಿನ ಇವರು ಪ್ಲಾನ್ ಮಾಡಿ, ಬೇರೆ ಲಾರಿ ಡ್ರೈವರ್ ಅಂತೇ ಒಂದು ಲಾರಿಯಲ್ಲಿ ಹತ್ತಿ ಕೂತ್ಕೊಂಡಿದ್ರು. ಆಗ ಅಲ್ಲಿಗೆ ಬಂದಂತಹ ಕಿರಾತಕರು, ಅವರನ್ನ ಹಣ ಕೇಳ್ತಾರೆ. ಆಗ ಅಣ್ಣಾಮಲೈ ಅವರು ತಮ್ಮ ನಿಜ ರೂಪವನ್ನ ಅವ್ರಿಗೆ ತೋರಿಸ್ತಾರೆ.
ಯುವಕರಿಗೆ ಹುಮ್ಮಸ್ಸು ತುಂಬುತ್ತಿದ್ದ ಸಿಂಗಂ
ಅಣ್ಣಾಮಲೈ ಅವರಿಗೆ ಯುವಕರು ಅಂದ್ರೆ ಅದೇನೋ ತುಂಬಾ ಇಷ್ಟ. ಯುವಕರಿಗೂ ಅಷ್ಟೇ, ಇವರು ಅಂದ್ರೆ ಅದೇನೋ ಒಂಥರಾ ಹುಚ್ಚು. ನಾವು ಸಹ ಇವರಂತೆ ಆಗಬೇಕು ಅಂತ ಇಷ್ಟ ಪಡ್ತಾರೆ. ಎಷ್ಟೋ ಜನಕ್ಕೆ ಇವರು ಮಾರ್ಗದರ್ಶಕರಾಗಿದ್ದಾರೆ. ಈಗಲೂ ಎಷ್ಟೋ ಬಡ ವಿದ್ಯಾರ್ಥಿಗಳ ಜವಾಬ್ದಾರಿಯನ್ನ ಇವರೇ ಹೊತ್ತಿದ್ದಾರೆ. ಇವರು ಕೆಲಸ ಮಾಡಿರೋ ಅಷ್ಟು ಜಿಲ್ಲೆಗೆಳಲ್ಲೂ ಇವರು ತಮ್ಮದೇ ಆದ ವ್ಯಕ್ತಿತ್ವವನ್ನ ಹೊರ ಹಾಕಿದ್ದಾರೆ. ಈಗಲೂ ಎಷ್ಟೋ ಶಾಲಾ ಕಾಲೇಜುಗಳಲ್ಲಿ, ಕಾರ್ಯಕ್ರಮವನ್ನ ಮಾಡಿದ್ರೆ, ಇವರನ್ನೇ ಅತಿಥಿಯಾಗಿ ಆಹ್ವಾನಿಸುತ್ತಾರೆ. ಅದು ಇವರು ಘಳಿಸಿರೋ ಆಸ್ತಿ.
ವರ್ಗಾವಣೆ ಪಟ್ಟಿಯಲ್ಲಿ, ಇದ್ದೆ ಇರುತ್ತೆ ಇವರ ಹೆಸರು
ಪೊಲೀಸರು ಆಗಾಗ ವರ್ಗಾವಣೆ ಪಟ್ಟಿ ಬಿಡುಗಡೆ ಮಾಡುತ್ತಲೇ ಇರುತ್ತಾರೆ. ಅದ್ರಲ್ಲಿ ಇವರ ಹೆಸರು ಇದ್ದೆ ಇರುತ್ತೆ. ಯಾಕಂದ್ರೆ ನಿಷ್ಠೆಯಿಂದ ಕೆಲಸ ಮಾಡೋ ವ್ಯಕ್ತಿಗಳನ್ನ ಕಂಡ್ರೆ ಕೆಲವರಿಗೆ ಆಗೋಲ್ಲ. ಹಾಗಾಗಿ ತಮ್ಮ ಬೆಲೆ ಬೇಯಿಸಿಕೊಳ್ಳೋ ಉದ್ದೇಶದಿಂದ ಈ ರೀತಿ ಕೆಲಸವನ್ನ ಮಾಡ್ತಾರೆ ಅನ್ನೋದು ಸಾಮಾನ್ಯರ ದೂರಾಗಿದೆ. ಇವರನ್ನ ಉಡುಪಿಯಿಂದ ವರ್ಗಾವಣೆ ಮಾಡೋ ಟೈಮ್ ಬಂದಾಗ, ಅಲ್ಲಿ ಒಂದು ಯುದ್ಧವೇ ನಡೆದಿತ್ತು. ಅಧಿಕಾರಿಗಳು ಅವರನ್ನ ಕಲಿಸಬೇಕು ಅಂತ. ಆದ್ರೆ ಅದಕ್ಕೆ ಇಡೀ ಜಿಲ್ಲೆಯ ಜನರೇ ವಿರೋಧ ವ್ಯಕ್ತಪಡಿಸಿದ್ರು. ತನ್ನ ನಿಷ್ಠೆಯ ಕಾರ್ಯಕ್ಕೆ, ಅವರಿಗೆ ಬಹಳಷ್ಟು ಅಡೆತಡೆಗಳಾಗುತ್ತಿದ್ದವು. ಆದರೆ ಅವರು ಈ ರೀತಿಯ ವರ್ಗಾವಣೆಗೆಲ್ಲಾ ತಲೆ ಕೆಡಿಸಿಕೊಂಡೋರಲ್ಲ. ಯಾವಾಗಲು ಎಲ್ಲದ್ದಕ್ಕೂ ಸಿದ್ಧರಾಗಿದ್ರು.
ರಾಜಧಾನಿಗೆ ವರ್ಗಾವಣೆಯಾಗಿ ಬಂದ ಅಣ್ಣಾಮಲೈ
ಅಣ್ಣಾಮಲೈ ಅವರನ್ನ ಕಳೆದ 4-5 ತಿಂಗಳ ಹಿಂದೆ ಬೆಂಗಳೂರಿಗೆ ವರ್ಗಾವಣೆ ಮಾಡಿದ್ದಾರೆ. ಅವರು ಬೆಂಗಳೂರಿಗೆ ಬರುತ್ತಾರೆ ಅನ್ನೋ ವಿಷಯ ತಿಳಿದ ಕೂಡಲೇ ಯುವಕರಿಗೆ ಅದೇನೋ ಒಂತರ ಖುಷಿಯಾಗಿತ್ತು. ನಮ್ಮ ರಾಜಧಾನಿಗೆ ಈಗ ಒಳ್ಳೊಳ್ಳೆ ಅಧಿಕಾರಿಗಳು ಬರ್ತಿದ್ದಾರೆ ಅಂತ. ಹೌದು, ಅಲೋಕ್ ಕುಮಾರ್ ಬಂದಾಯ್ತು, ರವಿ ಡಿ.ಚನ್ನಣ್ಣನವರ್ ಬಂದಾಯ್ತು. ಈಗ ಇವರು ಬರ್ತಿದ್ದಾರೆ ಅಂದ್ರೆ, ನಮ್ಮ ರಾಜಧಾನಿಗೆ ಮತ್ತೊಂದು ಗರಿ ಸೇರ್ಪಡೆಯಾಗುತ್ತಿದೆ ಅಂತ ಸಂತಸ ವ್ಯಕ್ತಪಡಿಸಿದರು.
ಅವರು ಬೆಂಗಳೂರಿನಲ್ಲಿ ದಕ್ಷಿಣ ವಿಭಾಗದ ಡಿಸಿಪಿ ಯಾಗಿ ಅಧಿಕಾರ ಸ್ವೀಕರಿಸಿದರು. ಅವರು ಬಂದಮೇಲೆ ಸುಮಾರು ಕೇಸ್ ಗಳನ್ನ ನಿಭಾಯಿಸಿದ್ರು. ತಾನು ಡಿಸಿಪಿ ಅನ್ನೋದನ್ನ ಮರೆತು, ಒಬ್ಬ ಇನ್ಸ್ಪೆಕ್ಟರ್ ರೀತಿ, ಘಟನಾ ಸ್ಥಳಗಳಿಗೆಲ್ಲಾ ಭೇಟಿ ಕೊಟ್ಟು ಅದರ ವಿಚಾರವನ್ನ ತಿಳಿದುಕೊಳ್ತಿದ್ರು. ಎಂದಿಗೂ ಅವರು ಸ್ಟೇಷನ್ ಅಲ್ಲೇ ಇದ್ದು, ವಿಚಾರಗಳನ್ನ ತಿಳಿದವರಲ್ಲ. ಯಾರಾದ್ರೂ ಕಷ್ಟ ಅಂತ ಬಂದರೆ, ಅವರ ಮನೆಯವರೆಗೂ ಹೋಗಿ, ಅವರ ಕಷ್ಟವನ್ನ ಕೇಳುತ್ತಿದ್ದಾರೆ. ಪೊಲೀಸ್ ಸ್ಟೇಷನ್ ಗಳಿಗೆ ದೂರು ನೀಡೋಕೆ ಅಂತ ಬಂದ ಸಾರ್ವಜನಿಕರ ಜೊತೆ, ಯಾರಾದರೂ ಸರಿಯಾಗಿ ನಡೆದುಕೊಂಡಿಲ್ಲ ಅನ್ನೋ ವಿಚಾರ ತಿಳಿದರೆ, ಅವರ ಮೇಲೆ ಯಾವ ರೀತಿ ಬೇಕಾದ್ರು ಕ್ರಮ ಕೈ ಗೊಳ್ಳುತ್ತಿದ್ರು. ಈಗಲೂ ಅದರ ಅನುಸಾರವಾಗೇ ನಡೆಯುತ್ತಿದ್ದಾರೆ.
ನಮ್ಮ ರಾಜಧಾನಿ ಜನತೆ ಈಗ ಸ್ವಲ್ಪ ಮಟ್ಟಿಗೆ ಸಮಾಧಾನದಿಂದ ಜೀವನ ನಡೆಸುತ್ತಿದ್ದಾರೆ. ಯಾಕಂದ್ರೆ ಅಣ್ಣಾಮಲೈ ಅಂತ ದಕ್ಷ ಅಧಿಕಾರಿಗಳು ಇದ್ದಾಗ ಯಾವ ಭಯ ಅನ್ನೋ ರೀತಿ ಬದುಕ್ತಿದ್ದಾರೆ. ಮುಂದಿನ ದಿನಗಳಲ್ಲೂ ಇವರು ಇಲ್ಲಿಯೇ ಇದ್ದು, ಸಿಟಿಯನ್ನ ಸಂಪೂರ್ಣ ಹತೋಟಿಗೆ ತರಬೇಕು ಅನ್ನೋದು ಎಲ್ಲರ ಆಸೆ. ಕರ್ನಾಟಕಕ್ಕೆ ಅಣ್ಣಾಮಲೈ ಸಿಂಗಂ ಅಂತವರ ಅವಶ್ಯಕೆತೆ ಬಹಳಷ್ಟಿದೆ.
ಈ ಪೋಸ್ಟ್ ನಿಮಗೆ ಇಷ್ಟ ವಾದಲ್ಲಿ ಲೈಕ್ ಅಂಡ್ ಫಾಲೋ MetroSaga – Kannada on Facebook