ಈ ಊರಿನಲ್ಲಿ ಯಾವುದೇ ಮನೆಗಳಿಗೆ ಬೀಗ ಹಾಕುವುದಿಲ್ಲ. ಶನಿ ಶಿಂಗಾಪುರ ಎಂಬ ಜಾಗ ತುಂಬಾ ವಿಸ್ಮಯಕಾರಿ

shani shingapur

ನಮ್ಮಲ್ಲಿ ದೇವರು, ವ್ರತ ಅಂದ್ರೆ ಅದೇನೋ ಒಂಥರಾ ಭಯ ಮತ್ತೆ ಭಕ್ತಿ ಎರಡು ಇದೆ. ನಮ್ಮ ದೇಶದಲ್ಲಿ ದೇವರಿಗೆ ಕೊಡೊ ಅಂತ ಪ್ರಾಮುಖ್ಯತೆಯನ್ನ ನಾವು ಬೇರೆಲ್ಲೂ ನೋಡೋಕೆ ಆಗಲ್ಲ ಎನಿಸುತ್ತೆ. ಯಾಕಂದ್ರೆ ನಮ್ಮಲ್ಲಿ ಒಂದು ಕಲ್ಲು ಅಥವಾ ಕಡ್ಡಿಯಲ್ಲಿಯೂ ನಾವು ದೇವರನ್ನ ಕಾಣುತ್ತೇವೆ. ಹಾಗಾಗಿ ನಮ್ಮ ಪುರಾತನದಿಂದಲೂ ದೇವರಿಗೆ ನೀಡೋ ಬೆಲೆಯೇ ಬೇರೆ.

ಹೌದು ಇದೆ ರೀತಿ ಕೆಲವರಂತೂ ದೇವರ ದರ್ಶನಕ್ಕೆ ಅಂತ ದೇಶ, ವಿದೇಶಗಳನ್ನ ಸುತ್ತುತ್ತಾರೆ. ಎಷ್ಟೇ ದೇವಾಲಯಗಳಿಗೆ ಭೇಟಿ ನೀಡಿದ್ರು, ಇನ್ನೂ ಬೇರೆ ದೇವರನ್ನ ನೋಡಬೇಕು ಅನ್ನೋದು ನಮ್ಮ ಜನರ ನಂಬಿಕೆ. ಈ ದೇವರ ಸನ್ನಿಧಿಯಲ್ಲಿ ಒಂದು ರೀತಿ ಪಾಪ ಪರಿಹಾರವಾದರೆ, ಇನ್ನೊಂದು ದೇವರ ಸನ್ನಿಧಿಯಲ್ಲಿ ಇನ್ನೊಂದು ರೀತಿ ಪಾಪ ಪರಿಹಾರವಾಗುತ್ತೆ ಅನ್ನೋದು ನಮ್ಮ ವಾಡಿಕೆ. ಇದೆ ರೀತಿ ಶನಿ ಮಹಾತ್ಮ ದೇವರ ಸ್ಥಳ ಒಂದಿದೆ. ಅದು ಬಹಳಷ್ಟು ಪ್ರಖ್ಯಾತಿಯಾಗಿದೆ.

Advertisements

ಸಿಂಗಾಪುರದಲ್ಲಿ ಕಾಣಬಹುದು ಶನಿ ದೇವರನ್ನ

ಶನಿ ಸಿಂಗ್ನಾಪುರ ಅಥವಾ ಶನಿ ಸಿಂಗಾಪುರ ಮಹಾರಾಷ್ಟ್ರದ ಒಂದು ಪ್ರಸಿದ್ಧವಾದ ಹಳ್ಳಿಯಾಗಿದೆ. ಮಹಾರಾಷ್ಟ್ರದ ಅಹಮಾದ್ ನಗರ ಜಿಲ್ಲೆಯ ನೆವಸಾ ತಾಲ್ಲೂಕಿನಲ್ಲಿರುವ ಒಂದು ಗ್ರಾಮದಲ್ಲಿ ಶ್ರೀ ಶನಿ ಮಹಾತ್ಮ ಸ್ವಾಮಿಯು ನೆಲೆಸಿದ್ದಾನೆ. ಇಲ್ಲಿನ ಜನರಿಗೆ ಇದೆ ಆರಾಧ್ಯ ದೇವರು. ಯಾಕಂದ್ರೆ ಈ ದೇವರನ್ನ ಇಲ್ಲಿನ ಜನರು ಬಹಳ ನಂಬಿದ್ದಾರೆ. ಇಲ್ಲಿ ನಡೆಯುವ ಪ್ರತಿ ಕೆಲಸಕ್ಕೂ ಈ ದೇವರೇ ಕಾರಣ ಎಂದು ಇಲ್ಲಿನ ಜನರು ತಮ್ಮ ಅನಿಸಿಕೆ ತಿಳಿಸುತ್ತಾರೆ.

ಪ್ರಸಿದ್ಧಿ

ಈ ಊರಲ್ಲಿ ಕೆಲವು ವಿಶೇಷತೆಗಳಿವೆ. ಈ ದೇವರನ್ನ ನಂಬಿರೋ ಜನರು, ಇಲ್ಲಿ ನಡೆಯುವುದೆಲ್ಲವೂ ದೇವರಿಂದ ಎಂದು ನಂಬಿದ್ದಾರೆ. ಹಾಗಾಗಿ ಇಲ್ಲಿ ಯಾವ ಮನೆಗೂ ಬಿಗ ಹಾಕುವುದಿಲ್ಲ. ಹೌದು. ಯಾರೇ ಆಗಲಿ ತಮ್ಮ ಮನೆ ಅಥವಾ ತಮಗೆ ಸಂಬಂಧ ಪಟ್ಟ ವಸ್ತುಗಳನ್ನ ಜೋಪಾನವಾಗಿ ನೋಡಿಕೊಳ್ಳುತ್ತಾರೆ. ಆದ್ರೆ ಇಲ್ಲಿ ಮನೆಗಳಿಗಾಗಲಿ ಅಥವಾ ಯಾವುದೇ ಅಂಗಡಿಗಳಿಗಾಗಲಿ ಬೀಗ ಹಾಕುವುದಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ಬ್ಯಾಂಕುಗಳಿಗೂ ಇಲ್ಲಿ ಬೀಗ ಹಾಕದೆ ಇರೋದು ನಿಜಕ್ಕೂ ನೋಡುಗರಿಗೆ ಆಶ್ಚರ್ಯವಾಗುತ್ತೆ. ಆದರೆ ಇದು ಸತ್ಯ. ಯಾಕಂದ್ರೆ ಇಲ್ಲಿ ಕಳ್ಳರ ಕಾಟ ಇಲ್ಲ. ಅಂದ್ರೆ ಇಲ್ಲಿ ಕಳ್ಳರೇ ಇಲ್ಲ ಅಂತಲ್ಲ. ಒಂದು ಕಾಲದಲ್ಲಿ ಇದ್ದರು. ಅವರು ಕಳ್ಳತನ ಮಾಡಿದಾಗ, ಈ ದೇವರು ಅವರಿಗೆ ನೀಡೋ ಶಾಪದಿಂದ ಯಾವ ಕಳ್ಳನು ಸಹ ಇಲ್ಲಿ ಕಳ್ಳತನ ಮಾಡುವುದಿಲ್ಲ. ಹಾಗಾಗಿ ತೆರೆದ ಬಾಗಿಲು ಇಲ್ಲಿ ತೆರೆದೇ ಇರುತ್ತದೆ.

ನಿಜಕ್ಕೂ ಈ ಶನಿ ದೇವರ ಪುರಾಣ ಶುರುವಾಗೋದಾದ್ರೂ ಹೇಗೆ, ಎಲ್ಲಿಂದ ಅನ್ನೋದು ನಿಜಕ್ಕೂ ಕೆಲವರಿಗೆ ಇನ್ನು ಗೊತ್ತಿಲ್ಲ. ಶನಿ ದೇವರು ಅಂದ್ರೆ ಎಂಥವರು ಭಯ ಪಡುತ್ತಾರೆ. ಯಾಕಂದ್ರೆ ದೇವರಿಗೆಲ್ಲಾ, ದೇವರು ಇದು ಎಂದು ನಂಬಿದ್ದಾರೆ. ಗ್ರಹಚಾರ ಕೆಟ್ಟರೆ, ಬೇರೆ ದೇವರನ್ನು ಸಹ ಇದು ಬಿಡುವುದಿಲ್ಲ ಅನ್ನೋದು ಪುರಾಣಗಳಿಂದಲೂ ನಾವು ತಿಳಿದಿದ್ದೇವೆ.

Advertisements

ಪುರಾಣ

ಈ ಊರಿನಲ್ಲಿ ಶನಿ ದೇವರ ಮಹಾತ್ಮೆ ಶುರುವಾಗಿದ್ದಾದ್ರೂ ಹೇಗೆ ಅನ್ನೋದನ್ನ ನಾವು ತಿಳಿಸ್ತೀವಿ ನೋಡಿ. ಇಲ್ಲಿ ಒಬ್ಬ ಕುರುಬನಿದ್ದ. ಪ್ರತಿದಿನ ಅವನು ತನ್ನ ಕುರಿಗಳನ್ನ ಮೇಯಿಸೋಕೆ ಅಂತ ಬೆಟ್ಟ, ಗುಡ್ಡ ಹಾಗೂ ನದಿ ತೀರಕ್ಕೆ ಅಂತ ಹೋಗುತ್ತಿದ್ದ. ಹೀಗಿರುವಾಗ ಒಂದು ದಿನ ಆ ಕುರುಬ ನದಿ ತೀರದಲ್ಲಿ ಇದ್ದಾಗ, ಅವನ ಜೊತೆ ಕೆಲವು ಸ್ನೇಹಿತರು ಇದ್ದರು. ಆ ಸಮಯದಲ್ಲಿ ನದಿ ಮೇಲೆ, ಯಾವುದೊ ಒಂದು ಕಪ್ಪು ಕಲ್ಲು ತೇಲಿ ಬಂತು. ಆಗ ಅವರಿಗೆ ಅದನ್ನ ನೋಡಿ ಆಶ್ಚರ್ಯವಾಯಿತು. ಯಾಕಂದ್ರೆ ಕಲ್ಲು ತೇಲಡೋದು ಅಂದ್ರೆ ಏನು? ಅನ್ನೋದು ಅವ್ರಿಗೆ ಒಂದು ರೀತಿ ಭಯ ಆಯಿತು. ತಕ್ಷಣವೇ ಅವರು ಆ ಕಲ್ಲನ್ನ ಎತ್ತಿಕ್ಕೊಂಡು ನದಿ ಹತ್ತಿರ ನಿಂತರು. ಆ ಕಲ್ಲನ್ನ ನೋಡಿದರೆ, ಯಾವುದೊ ದೇವರ ಮೂರ್ತಿಯಂತೆ ಕಾಣುತ್ತಿತ್ತು. ಆದ್ರೆ ಯಾವ ದೇವರು, ಏನು ಎಂಬುದು ತಿಳಿದಿರಲಿಲ್ಲ. ಆದ್ರೆ ಇವರು ನಿಜಕ್ಕೂ ಇದು ದೇವರೇ ಇರಬೇಕು ಅಂತ ಅದನ್ನ ಒಂದು ಜಾಗದಲ್ಲಿ ಇಟ್ಟು ಪೂಜೆ ಮಾಡಲು ಆರಂಭಿಸಿದರು.

ಕುರುಬನಿಗೆ ಕನಸಿನಲ್ಲಿ ಬಂದ ಶನ್ಯೆಶ್ಚರ

ಎಲ್ಲರ ಮಾತಿನಂತೆ ನದಿಯಲ್ಲಿ ಸಿಕ್ಕಿದ ಕಲ್ಲಿನ ಮೂರ್ತಿಯನ್ನ ತಂದು ಒಂದೆಡೆ ಇಟ್ಟು ಪೂಜೆ ಮಾಡಲು ಆರಂಭಿಸಿದರು. ಹಾಗೆ ದೇವರಿಗೆ ಒಂದು ದೇವಾಲಯ ಕಟ್ಟೋಣ ಅಂತ ಊರಿನ ಜನರೆಲ್ಲಾ ನಿರ್ಧಾರ ಮಾಡಿದ್ರು. ಆದರೆ ಯಾವ ದೇವರು, ಏನು ಎಂಬುದು ಮಾತ್ರ ಅವರಿಗೆ ಗೊತ್ತಿರಲಿಲ್ಲ. ಹೀಗಿರುವಾಗ ಮಾರನೇ ದಿನ ಆ ಕಲ್ಲಿನಲ್ಲಿ ರಕ್ತ ಸ್ರಾವವಾಗೋದು ಕಾಣುತ್ತೆ. ಕಲ್ಲಲ್ಲಿ ರಕ್ತ ಬರೋದು ಅಂದ್ರೆ ಏನು ಅಂತ ಊರಿನ ಜನರಿಗೆ ಭಯ ಆಗುತ್ತೆ. ಹೀಗಿರುವಾಗ ಆ ದಿನ ರಾತ್ರಿ ಆ ಕುರುಬನ ಕನಸಿನಲ್ಲಿ ಸ್ವಾಮಿ ಬರುತ್ತದೆ. ಬಂದು ನಾನು ಶನಿ ದೇವರು, ನಾನು ಈ ಊರಲ್ಲಿ ನೆಲೆಸಲು ಬಂದಿದ್ದೇನೆ. ನಂಗೊಂದು ದೇವಾಲಯ ನಿರ್ಮಿಸು ಎಂದು ಹೇಳುತ್ತದೆ. ಆದ್ರೆ ಆ ದೇವಾಲಯ ಯಾವುದೇ ಕಾರಣಕ್ಕೂ ಮೇಲ್ಚಾವಣಿಯನ್ನು ಹೊಂದಿರಬಾರದು. ನಾನು ತೆರೆದ ಆಕಾಶದಲ್ಲಿ ಇರಬೇಕು ಎಂದು ಹೇಳುತ್ತದೆ. ಅದರಂತೆ ಆ ಕುರುಬ ಊರಿನ ಜನರೊಂದಿಗೆ ಮಾತಾಡುತ್ತಾನೆ. ಕನಸಿನಲ್ಲಿ ಸ್ವಾಮಿ ಬಂದ ವಿಷಯವನ್ನ ತಿಳಿಸಿ, ದೇವಾಲಯ ನಿರ್ಮಾಣ ಮಾಡೋದಾಗಿ ಹೇಳುತ್ತಾನೆ. ಅದರಂತೆ ಜನರು ದೇವರಿಗೆ ಮೇಲ್ಚಾವಣಿ ಇಲ್ಲದಂತೆ ದೇವಾಲಯ ಕಟ್ಟುತ್ತಾರೆ.

ಈ ದೇವರಿಗೆ ತೈಲಾಭಿಷೇಕ ಎಂದ್ರೆ ಬಹಳ ಪ್ರಿಯ

ಹೌದು. ಶನಿ ದೇವರಿಗೆ ತೈಲದಿಂದ ಮಾಡೋ ಅಭಿಷೇಕ ಅಂದ್ರೆ ಬಹಳ ಇಷ್ಟ. ಅದು ಈ ಊರಿನಲ್ಲಿ ಮಾತ್ರವಲ್ಲ. ಎಲ್ಲಿಂದ, ಎಲ್ಲಿಗೋದರು ಈ ದೇವರಿಗೆ ಎಣ್ಣೆಯಿಂದ ಮಾಡೋ ಅಭಿಷೇಕ ಅಂದ್ರೆ ತುಂಬಾ ಪ್ರಿಯ. ಇಲ್ಲಿ ಈ ಕುರುಬನಿಗೆ ಹೇಳಿದ ರೀತಿ ದೇವಾಲಯ ನಿರ್ಮಾಣವಾಯಿತು. ಪ್ರತಿ ಶನಿವಾರ ಜನರು ಇಲ್ಲಿ ಬಂದು ಆ ಕಲ್ಲಿನ ಮೂರ್ತಿಗೆ ತೈಲಾಭಿಷೇಕ ಮಾಡಲು ಪ್ರಾರಂಭಿಸಿದರು. ಆ ದೇವರು ಕನಸಿನಲ್ಲಿ ಹೇಳಿದಂತೆ, ಮೇಲ್ಚಾವಣೆ ಈ ದೇವಾಲಯಕ್ಕೆ ಇಲ್ಲ. ಹಾಗಾಗಿ ಭಕ್ತಾಧಿಗಳು ಯಾವ ಸಮಯದಲ್ಲಿ ಆದರೂ ಬಂದು, ಅಭಿಷೇಕ ಮಾಡಬಹುದು.

Advertisements

ಈ ಊರಿನಲ್ಲಿ ಈ ದೇವರೇ ಒಂದು ಹುಲ್ಲುಕಡ್ಡಿಯನ್ನು ಕಾಪಾಡುತ್ತಿರೋದು ಎಂದು ನಂಬಿದ್ದಾರೆ. ಊರಿನಲ್ಲಿ ಏನಾದ್ರು, ಕೆಲವೊಂದು ಬೆಳೆವಣಿಗೆ ಆಗಬೇಕು ಅಂದ್ರೆ, ಅಥವಾ ಏನಾದ್ರು ತೊಂದಯೆಯಾಗುತ್ತದೆ ಅಂದ್ರೆ ಯಾವಾಗ್ಲೂ ಈ ಕುರುಬನ ಕನಸಿನಲ್ಲಿ ಬಂದು ಹೇಳುತ್ತಿತ್ತು. ಅದೇ ರೀತಿ ಇಲ್ಲಿ ಯಾವತ್ತಿಗೂ, ಎಂದಿಗೂ ಕಳ್ಳತನ ಅನ್ನೋದು ನಡೆಯೋದಿಲ್ಲ ಅನ್ನೋ ಮಾತನ್ನು ಸಹ ದೇವರೇ ಹೇಳಿತ್ತು. ಹಾಗಾಗಿ ಈ ಊರಿನಲ್ಲಿ ಯಾವುದೇ ಮನೆಗಳಿಗೆ ಅಥವಾ ಬ್ಯಾಂಕಿಗೆ ಬೀಗ ಹಾಕದಿರುವುದೇ ವಿಶೇಷ. ಈ ದೇವರೇ ಇಲ್ಲಿ ಎಲ್ಲವು ಆಗಿರೋದ್ರಿಂದ ಈ ಊರಿಗೆ ಶನಿ ಸಿಂಗಾಪುರ ಎಂದು ಕರೆಯುತ್ತಾರೆ. ಈ ದೇವರು ಇಲ್ಲಿ ನೆಲೆಸಿ, ಇಲ್ಲಿನ ಜನರನ್ನ ಕಾಪಾಡುತ್ತಿರೋದೇ ಈ ಸ್ಥಳದ ವಿಶೇಷವಾಗಿದೆ.